ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಚೀನಾ ಮೂಲದ BYD (ಬಿಲ್ಡ್ ಯುವರ್ ಡ್ರೀಮ್ಸ್), ಮುಂಬರುವ ಹಬ್ಬದ ವೇಳೆಗೆ ತನ್ನ ಎಲೆಕ್ಟ್ರಿಕ್ SUV ಯೊಂದಿಗೆ ಭಾರತೀಯ EV ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ.

Recommended Video

Alto K10 vs Renault Kwid | Detailed Comparison | Specs Features And Design

ಈ ವರ್ಷ ಟೆಸ್ಲಾವನ್ನು ಹಿಂದಿಕ್ಕಿದ ಈ ಚೀನಾ ಎಲೆಕ್ಟ್ರಿಕ್ ವಾಹನ ತಯಾರಕರು ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿ ತಮ್ಮ ವಾಹನಗಳ ಜೋಡಣೆಗೆ ಸಜ್ಜಾಗುತ್ತಿದ್ದಾರೆ. ಕಂಪನಿಯು 2023 ರಲ್ಲಿ ಮುಂಬರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ತನ್ನ ಮುಂಬರಲಿರುವ ಹ್ಯಾಚ್‌ಬ್ಯಾಕ್‌ಗಳು, ಸೆಡಾನ್‌ಗಳು ಮತ್ತು SUV ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶಿಸಲಿದೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

ಕಂಪನಿಯ ಕಾರುಗಳು ಪ್ರಸಿದ್ಧ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇವು 450-500 ಕಿ.ಮೀ ವ್ಯಾಪ್ತಿಯನ್ನು ಹೊಂದಿರಲಿವೆ ಎಂದು ತಿಳಿದುಬಂದಿದೆ. ಕಂಪನಿಯು ಭಾರತದಲ್ಲಿ ತನ್ನ ನೆಲೆಯನ್ನು ಧೃಡವಾಗಿಸಿಕೊಳ್ಳಲು ಮಾರುಕಟ್ಟೆಯ ಸವಾಲುಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ 10,000 ವಾಹನಗಳನ್ನು ಮಾರಾಟ ಮಾಡಲು ಯೋಜಿಸಿದ್ದು, ಸ್ಥಳೀಯ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಅನ್ವೇಷಿಸುತ್ತಿದೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

BYD ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಸಂಜಯ್ ಗೋಪಾಲಕೃಷ್ಣನ್ ಅವರು ಮಾತನಾಡಿ, ಕಂಪನಿಯು ತನ್ನ E6 MPV ಗೆ ಬಲವಾದ ಪ್ರತಿಕ್ರಿಯೆಯನ್ನು ಪಡೆಯುವ ಮೂಲಕ ಮುಂಬರುವ ಹಬ್ಬದ ವೇಳೆಗೆ ತನ್ನ Atto3 SUV ಯೊಂದಿಗೆ EV ಮಾರುಕಟ್ಟೆಯನ್ನು ಪ್ರವೇಶಿಸಲು ಯೋಜಿಸಲಾಗಿದೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

ನಾವು ಕಾರ್ಪೊರೇಟ್ ಗ್ರಾಹಕರಿಂದ ಭಾರತದಲ್ಲಿ ನಮ್ಮ ವಾಹನಗಳಿಗೆ ಗಮನಾರ್ಹ ಬೇಡಿಕೆ ಪಡೆಯುತ್ತಿದ್ದೇವೆ, ನಮ್ಮ SUV ಗಳೊಂದಿಗೆ ವೈಯಕ್ತಿಕ ಖರೀದಿದಾರರನ್ನು ಮತ್ತಷ್ಟು ವಿಸ್ತರಿಸಲು ಬಯಸಿದ್ದೇವೆ. ಮುಂಬರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ನಮ್ಮ ವಾಹನದ ಡಿಸೈನ್ ಮತ್ತು ಬ್ಯಾಟರಿ ತಂತ್ರಜ್ಞಾನವನ್ನು ಪ್ರದರ್ಶಿಸಲು ನಾವು ಯೋಜಿಸುತ್ತಿದ್ದೇವೆ. ಭಾರತದಲ್ಲಿ ಬೆಳೆಯುತ್ತಿರುವ EV ವ್ಯಾಪಾರದಲ್ಲಿ ಭಾಗವಹಿಸುವ ದೀರ್ಘಾವಧಿಯ ದೃಷ್ಟಿಯನ್ನು ಹೊಂದಿದ್ದೇವೆ" ಎಂದು ಗೋಪಾಲಕೃಷ್ಣನ್ ಹೇಳಿದರು.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

Atto3 ವೇಗವಾಗಿ ಬೆಳೆಯುತ್ತಿರುವ EV ಮಾರುಕಟ್ಟೆಯಲ್ಲಿ ಹುಂಡೈ ಕೋನಾ EV ಮತ್ತು MG ಮೋಟಾರ್‌ನ ZS EV ಯೊಂದಿಗೆ ಸ್ಪರ್ಧಿಸಲಿದೆ. ಈ ಮಾಡಲ್ ಮಾರುಕಟ್ಟೆಯಲ್ಲಿ ಸುಮಾರು 25 ಲಕ್ಷ ರೂಪಾಯಿ ಇರಲಿದ್ದು, ಒಂದೇ ಚಾರ್ಜ್‌ನಲ್ಲಿ 450-500 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿರಲಿದೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

ದೇಶದಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಲು ಭಾರತ ಸರ್ಕಾರದಿಂದ ಕ್ಲಿಯರೆನ್ಸ್ ಪಡೆಯುವ ಬಗ್ಗೆ ನಿರ್ದಿಷ್ಟ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋಪಾಲಕೃಷ್ಣನ್, ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಮೂಲಸೌಕರ್ಯಕ್ಕೆ ಯಾವುದೇ ಕ್ಲಿಯರೆನ್ಸ್ ಅಗತ್ಯವಿಲ್ಲ ಎಂದು ಹೇಳಿದರು. ಸ್ಥಳೀಯ ಉತ್ಪಾದನೆಯು ಹಂತ 2ರ ಭಾಗವಾಗಿದೆ ಎಂದು ಅವರು ಹೇಳಿದರು.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

"ನಮ್ಮ ದೀರ್ಘಾವಧಿಯ ದೃಷ್ಟಿಯು 2030ರ ವೇಳೆಗೆ ಪ್ರಯಾಣಿಕರ ಎಲೆಕ್ಟ್ರಿಕ್ ವಾಹನದ ಜಾಗದಲ್ಲಿ ಶೇ 10-15 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುವುದಾಗಿದೆ. ಆದರೆ ನಾವು ಅದನ್ನು ಹೇಗೆ ತಲುಪುತ್ತೇವೆ ಎಂಬುದನ್ನು ಇನ್ನೂ ವ್ಯಾಖ್ಯಾನಿಸಲಾಗಿಲ್ಲ. 10,000 ಇವಿಗಳನ್ನು ಮಾರಾಟ ಮಾಡುವುದು ಆರಂಭಿಕ ಗುರಿಯಾಗಿದೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

ಇದಕ್ಕಾಗಿ ನಾವು ಸ್ಥಳೀಯ ಉತ್ಪಾದನೆಗೆ ಮುಂದಿನ ಸೆಟ್ ಅನ್ನು ಮುಂದಿನ ವರ್ಷ ಅನ್ವೇಷಿಸಲಾಗುವುದು ಎಂದು ಹೇಳಿದರು. ಕಳೆದ ವರ್ಷದಲ್ಲಿ ಕಾರ್ಪೊರೇಟ್ ಮತ್ತು ಫ್ಲೀಟ್ ಗ್ರಾಹಕರಿಗೆ ತನ್ನ E6 MPV ಅನ್ನು ಪರಿಚಯಿಸಿದ ನಂತರ, BYD ಈಗಾಗಲೇ 450 ಘಟಕಗಳನ್ನು ಮಾರಾಟ ಮಾಡಿದೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

ವರ್ಷಾಂತ್ಯದ ವೇಳೆಗೆ 1000 ಕ್ಕಿಂತ ಹೆಚ್ಚು ಮಾರಾಟ ಮಾಡಲು ಕಂಪನಿಯು ನಿರೀಕ್ಷಿಸುತ್ತಿದೆ. ಕಾರ್ಪೊರೇಟ್ ಫ್ಲೀಟ್‌ಗಳು ICE ನಿಂದ EV ಗೆ ಪರಿವರ್ತನೆಯಾಗುವುದರೊಂದಿಗೆ ESG ಗುರಿಗಳು ಶ್ರೇಷ್ಠವಾಗುತ್ತಿವೆ, ಈ ಮೂಲಕ BYDನ ವಾಹನಗಳು ಗಮನಾರ್ಹ ಆಸಕ್ತಿಯನ್ನು ಹುಟ್ಟುಹಾಕಿವೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

BYDನ ಸುಸ್ಥಾಪಿತ ಬ್ಲೇಡ್ ಬ್ಯಾಟರಿ ತಂತ್ರಜ್ಞಾನದಿಂದಾಗಿ, ಅದರ ಎಲೆಕ್ಟ್ರಿಕ್ ವಾಹನಗಳು 450-500 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿವೆ. BYD ಈಗಾಗಲೇ ಅದೇ EV ಪವರ್‌ಟ್ರೇನ್‌ಗಾಗಿ ಟೊಯೋಟಾ ಮೋಟಾರ್ ಕಾರ್ಪೊರೇಶನ್‌ನೊಂದಿಗೆ ಜಂಟಿ ಉದ್ಯಮವನ್ನು ಹೊಂದಿದೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

2007 ರಲ್ಲಿ, BYD ಓರಗಡಂನಲ್ಲಿ ಎಲೆಕ್ಟ್ರಾನಿಕ್ ಬಿಡಿ ಭಾಗಗಳು, ಬ್ಯಾಟರಿಗಳು ಮತ್ತು ಮೊಬೈಲ್ ಫೋನ್‌ಗಳ ಉತ್ಪಾದನೆಗಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. 2016 ರ ಹೊತ್ತಿಗೆ, ಇದು ತನ್ನ ಶ್ರೀಪೆರಂಬದೂರ್ ಅಸೆಂಬ್ಲಿ ಸ್ಥಾವರದಿಂದ ಒಲೆಕ್ಟ್ರಾಗೆ ಬ್ಯಾಟರಿಗಳು ಮತ್ತು ಬಸ್ ಚಾಸಿಸ್ ಅನ್ನು ಪೂರೈಸುತ್ತಿದೆ. ಅದೇ ಸೌಲಭ್ಯದಲ್ಲಿ, BYD ತನ್ನ ಪ್ರಯಾಣಿಕ ವಾಹನಗಳನ್ನು ಜೋಡಿಸುತ್ತದೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

ವರ್ಷದ ಅಂತ್ಯದ ವೇಳೆಗೆ, ಕಂಪನಿಯು 100 ಜನರನ್ನು ನೇಮಿಸಿಕೊಳ್ಳಲಿದ್ದು, 10,000 ಎಲೆಕ್ಟ್ರಿಕ್ ವಾಹನಗಳಿಗೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಪ್ರಸ್ತುತ 12 ನಗರಗಳಲ್ಲಿ 12 ಡೀಲರ್‌ಶಿಪ್‌ಗಳಿದ್ದು, ಇವು 6 ತಿಂಗಳೊಳಗೆ 24 ಔಟ್‌ಲೆಟ್‌ಗಳೊಂದಿಗೆ 18 ನಗರಗಳಿಗೆ ವಿಸ್ತರಿಸಲಿದೆ. ಇದರ EVಗಳ ಬೇಡಿಕೆಯನ್ನು ಅವಲಂಬಿಸಿ, BYD ಇಂಡಿಯಾ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ವಿಸ್ತರಿಸಲು ನೋಡುತ್ತಿದೆ.

ಟೆಸ್ಲಾವನ್ನು ಹಿಂದಿಕ್ಕಿ ಈಗ ಭಾರತೀಯ EV ಮಾರುಕಟ್ಟೆ ಪ್ರವೇಶಿಸಲು ಸಜ್ಜಾದ ದೈತ್ಯ ಇವಿ ತಯಾರಕ BYD

ಡ್ರೈವ್‌ಸ್ಪಾರ್ಕ್ ಆಭಿಪ್ರಾಯ

ಚೀನಾ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ BYD (ಬಿಲ್ಡ್ ಯುವರ್ ಡ್ರೀಮ್ಸ್) 2022ರ ಮೊದಲಾರ್ಧದ ಮಾರಾಟದಲ್ಲಿ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾವನ್ನು ಹಿಂದಿಕ್ಕಿದೆ. ಷೆಂಗೆನ್-ಆಧಾರಿತ ವಾಹನ ತಯಾರಕ BYD 2022ರ ಮೊದಲ ಆರು ತಿಂಗಳಲ್ಲಿ 6.41 ಮಿಲಿಯನ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿ ಅಗ್ರಸ್ಥಾನಕ್ಕೇರಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಯಾವ ಮಟ್ಟಿಗೆ ಹೆಸರು ಮಾಡಲಿದೆ ಕಾದುನೋಡಬೇಕು.

Article Published On: Thursday, August 25, 2022, 13:15 [IST]
English summary
Worlds largest electric vehicle maker BYD is gearing up to overtake Indian EVs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+