ಹೆಚ್ಚಿನ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2023ರ ಹ್ಯುಂಡೈ ಕ್ರೆಟಾ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ 2023ರ ಕ್ರೆಟಾ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಆರಂಭಿಕ ಬೆಲೆಯು ರೂ.10.84 ಲಕ್ಷವಾಗಿದೆ. 2023ರ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ಪವರ್‌ಟ್ರೇನ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹ್ಯುಂಡೈ ಕಂಪನಿಯು ಕ್ರೆಟಾ ಎಸ್‍ಯುವಿಯ ಫೇಸ್‌ಲಿಫ್ಟೆಡ್ ಮಾಡೆಲ್ ಅನ್ನು ಬಿಡುಗಡೆ ಮಾಡಿಲ್ಲ. ಹ್ಯುಂಡೈ ಕ್ರೆಟಾ ಎಸ್‍ಯುವಿಯ ಫೇಸ್‌ಲಿಫ್ಟೆಡ್ ಮಾದರಿಯನ್ನು 2024 ರಲ್ಲಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ. 2023ರ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಬೆಲೆಯು ರೂ.45,000 ವರೆಗೆ ಏರಿಕೆಯನ್ನು ಪಡೆದುಕೊಂಡಿದೆ. ನವೀಕರಿಸಿದ ಕ್ರೆಟಾ ಎಸ್‍ಯುವಿಯ ಎಲ್ಲಾ ರೂಪಾಂತರಗಲು ಸ್ಟ್ಯಾಂಡರ್ಡ್ ಆಗಿ ಹೊಸ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ನಿಯಂತ್ರಣ (ESC), ವಾಹನ ಸ್ಟೆಬಿಲಿಟಿ ನಿರ್ವಹಣೆ (VSM), ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ಅನ್ನು ಪಡೆಯುತ್ತದೆ.

ಹೆಚ್ಚಿನ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2023ರ ಹ್ಯುಂಡೈ ಕ್ರೆಟಾ

ಈ ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿಯಲ್ಲಿ ಎಲ್ಲಾ ಟ್ರಿಮ್‌ಗಳಲ್ಲಿ 4 ಡಿಸ್ಕ್ ಬ್ರೇಕ್‌ಗಳು, ISOFIX ಆಂಕಾರೇಜ್‌ಗಳು ಮತ್ತು ಎತ್ತರ-ಹೊಂದಾಣಿಕೆ ಸೀಟ್ ಬೆಲ್ಟ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಇದಲ್ಲದೆ, ಎಲ್ಲಾ ರೂಪಾಂತರಗಳಲ್ಲಿ 60:40 ಸ್ಪ್ಲಿಟ್ ಹಿಂಭಾಗದ ಸೀಟುಗಳನ್ನು ನೀಡಲಾಗುತ್ತದೆ. ಹ್ಯುಂಡೈ ಕ್ರೆಟಾ ಎಸ್‍ಯುವಿಯಲ್ಲಿ 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ. ರಿಯಲ್ ಟೈಮ್ ಎಮಿಷನ್ ಅಥವಾ RDE ಮಾನದಂಡಗಳನ್ನು ಪೂರೈಸಲು ಅದನ್ನು ನವೀಕರಿಸಲಾಗುವುದಿಲ್ಲ.

ಇನ್ನು ಹೊಸ 2023ರ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಕೇವಲ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತಿದೆ. ಇದು 1.5 ಲೀಟರ್ NA ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಗಿದೆ. ಈ ಎರಡೂ ಎಂಜಿನ್ ಆಯ್ಕೆಗಳನ್ನು ಈಗ ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನದೊಂದಿಗೆ ನೀಡಲಾಗುತ್ತದೆ.ಈ ಎಸ್‍ಯುವಿಯಲ್ಲಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ 115 bhp ಮತ್ತು 144 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಸ್ಟ್ಯಾಂಡರ್ಡ್, 6-ಸ್ಪೀಡ್ iMT ಜೊತೆಗೆ ಪೆಟ್ರೋಲ್ ಮತ್ತು CVT, ಮತ್ತು ಡೀಸೆಲ್‌ನೊಂದಿಗೆ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಸೇರಿವೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೆರಡೂ ಈಗ ರಿಯಲ್ ಡ್ರೈವಿನ್ ಎಮಿಷನ್ಸ್ ಅಥವಾ RDE ನಾರ್ಮ್‌ಗಳಿಗೆ ಅನುಗುಣವಾಗಿವೆ ಮತ್ತು E20 ಇಂಧನದಲ್ಲಿ ಚಲಿಸಬಹುದು. ಇನ್ನು RDE ಅಥವಾ BS6 ಹಂತ 2 ಮಾನದಂಡಗಳು ಈ ವರ್ಷದ ಏಪ್ರಿಲ್ 1 ರಿಂದ ಜಾರಿಯಾಗಲಿದೆ.

2023ರ ಹ್ಯುಂಡೈ ಕ್ರೆಟಾದ ಪೆಟ್ರೋಲ್ ಆವೃತ್ತಿಯು ಈಗ ರೂ. 10.84 ಲಕ್ಷದಿಂದ ರೂ. 18.34 ರ ದರದಲ್ಲಿ ಲಭ್ಯವಿದೆ. ಡೀಸೆಲ್ ಸರಣಿಗೆ ರೂ. 11.89 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಎಂಡ್ ರೂಪಾಂತರದ ಬೆಲೆಯು ರೂ 19.13 ಲಕ್ಷದವರೆಗೆ ಇದೆ. ಪೆಟ್ರೋಲ್ ಆವೃತ್ತಿಯು 20,000 ರೂ.ಗಳ ಏಕರೂಪದ ಬೆಲೆ ಏರಿಕೆಯನ್ನು ಪಡೆದರೆ, ಡೀಸೆಲ್ ಕ್ರೆಟಾ ಈಗ 45,000 ರೂ.ಗಳಷ್ಟು ದುಬಾರಿಯಾಗಿದೆ. ಆದರೂ ಈ ಎಸ್‍ಯುವಿಯ ಮಾರಾಟದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಕಡಿಮೆಯಾಗಿದೆ.

ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಹುಂಡೈ ಕಂಪನಿಯು ನವೀಕರಿಸಿದ ಕ್ರೆಟಾ ಫೇಸ್‌ಲಿಫ್ಟೆಡ್ ಎಸ್‌ಯುವಿಯನ್ನು 2024 ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಪ್ರಕಾರ, ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಮತ್ತು ಈ ವಿಳಂಬಕ್ಕೆ ಕಾರಣವನ್ನು ಬಹಿರಂಗಪಡಿಸಿದೆ.

ಈ ವಿಳಂಬಕ್ಕೆ ಕಾರಣ, ಹ್ಯುಂಡೈ ಕಂಪನಿಯು ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ವಾಹನಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ವಾಹನವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ದೀರ್ಘಕಾಲದವರೆಗೆ, ಹ್ಯುಂಡೈ ಈಗಾಗಲೇ ಪ್ರಾರಂಭಿಸಲಾದ ಇಂಡೋನೇಷಿಯನ್ ಫೇಸ್‌ಲಿಫ್ಟೆಡ್ ಮಾದರಿಯನ್ನು ಭಾರತಕ್ಕೆ ತರಲಿದೆ ಎಂದು ಹೇಳಲಾಗುತ್ತಿತ್ತು. ಬ್ರ್ಯಾಂಡ್ ಈಗ ಇದನ್ನು ನಿರಾಕರಿಸಿದ್ದು, ಭಾರತೀಯ ಮಾರುಕಟ್ಟೆಗೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಮಾದರಿಯನ್ನು ಬಿಡುಗಡೆ ಮಾಡುತ್ತದೆ.ಈ ಮುಂಬರುವ ಮಾದರಿಯು ತನ್ನದೇ ಆದ ವಿಶಿಷ್ಟ ಶೈಲಿಯನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.

Article Published On: Friday, February 3, 2023, 11:00 [IST]
English summary
2023 hyundai creta suv launched in india price engines details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+