ಕಿಯಾ ಸೋನೆಟ್ ಭಾರತದಲ್ಲಿ ಬಿಡುಗಡೆ: ಟಾಟಾ, ಮಾರುತಿ ಸುಜುಕಿ ಕಾರುಗಳಿಗೆ ದೊಡ್ಡ ಪ್ರತಿಸ್ಪರ್ಧಿ!

'ಕಿಯಾ ಇಂಡಿಯಾ' 2023ರ ನವೀಕರಿಸಿದ ಸೋನೆಟ್ (Sonet) ಕಾರನ್ನು ರೂ.7.79 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರ ಎಂಜಿನ್ ಅಪ್ಡೇಟ್ ಮಾಡಲಾಗಿದ್ದು, ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಮೊದಲಿಗೆ ಈ ಕಿಯಾ ಸೋನೆಟ್ ಎಸ್‌ಯುವಿ ಪವರ್‌ಟ್ರೇನ್‌ ಆಯ್ಕೆ ಬಗ್ಗೆ ಮಾತನಾಡುವುದಾದರೆ, ಎಂಜಿನ್ ಅನ್ನು ಮುಂಬರಲಿರುವ (ಏಪ್ರಿಲ್) BS6 ಹಂತ 2 ಎಮಿಷನ್ ನಿಯಮಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. E20 (ಎಥೆನಲ್ ಮತ್ತು ಪೆಟ್ರೋಲ್) ಇಂಧನದಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎರಡು ಪೆಟ್ರೋಲ್ ಹಾಗೂ ಒಂದು ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಸಿಗಲಿದೆ.

ಕಿಯಾ ಸೋನೆಟ್ ಭಾರತದಲ್ಲಿ ಬಿಡುಗಡೆ: ಟಾಟಾ, ಮಾರುತಿ ಸುಜುಕಿ ಕಾರುಗಳಿಗೆ ದೊಡ್ಡ ಪ್ರತಿಸ್ಪರ್ಧಿ!

1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಸೋನೆಟ್ ಎಸ್‌ಯುವಿ, 81.8 bhp ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5-ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯನ್ನು ಒಳಗೊಂಡಿದೆ. ಮತ್ತೊಂದು 1.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿರುವ ಕಾರು, 118.4 bhp ಪವರ್, 172 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6-ಸ್ವೀಡ್ iMT ಅಥವಾ 7-ಸ್ವೀಡ್ DCT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಬಹುತೇಕ ವಾಹನ ತಯಾರಕ ಡೀಸೆಲ್ ಎಂಜಿನ್ ಚಾಲಿತ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಆದರೆ, 'ಕಿಯಾ' ಮಾತ್ರ ನವೀಕರಿಸಿದ 1.5-ಲೀಟರ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ನೊಂದಿಗೆ ಸೋನೆಟ್ ಎಸ್‌ಯುವಿಯನ್ನು ಲಾಂಚ್ ಮಾಡಿದೆ. ಇದು 115 bhp ಗರಿಷ್ಠ ಪವರ್, 250 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 6-ಸ್ಪೀಡ್ ಮ್ಯಾನ್ಯುವಲ್ ಟ್ರಾಸ್ಮಿಷನ್, 6-ಸ್ಪೀಡ್ iMT ಹಾಗೂ ಹಿಂದಿನ ಮಾದರಿಯಂತೆ 6-ಸ್ಪೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಕಿಯಾ ಸೋನೆಟ್ ಭಾರತದಲ್ಲಿ ಬಿಡುಗಡೆ: ಟಾಟಾ, ಮಾರುತಿ ಸುಜುಕಿ ಕಾರುಗಳಿಗೆ ದೊಡ್ಡ ಪ್ರತಿಸ್ಪರ್ಧಿ!

ನವೀಕರಿಸಿದ ಕಿಯಾ ಸೋನೆಟ್ ಎಸ್‌ಯುವಿ, ಭರಪೂರ ವೈಶಿಷ್ಟ್ಯದೊಂದಿಗೆ ಖರೀದಿಗೆ ದೊರೆಯಲಿದೆ. 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪವರ್ ಅಡ್ಜಸ್ಟಬಲ್ ರೇರ್ ವ್ಯೂ ಮಿರರ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್‌, ಕ್ರೂಸ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ.

ಇವತ್ತಿನ ದಿನ ಪ್ರತಿಯೊಬ್ಬರು ಸೇಫ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದರಂತೆ ಈ ಕಾರು, ಸುರಕ್ಷತೆಯ ದೃಷ್ಟಿಯಿಂದ ಡ್ಯೂಯಲ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBS (ಎಲೆಕ್ಟ್ರಾನಿಕ್ ಬ್ರೇಕ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಆಟೋ ಹೆಡ್‌ಲ್ಯಾಂಪ್ಸ್, ಬ್ರೇಕ್ ಅಸಿಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಕಿಯಾ ಸೋನೆಟ್ ಭಾರತದಲ್ಲಿ ಬಿಡುಗಡೆ: ಟಾಟಾ, ಮಾರುತಿ ಸುಜುಕಿ ಕಾರುಗಳಿಗೆ ದೊಡ್ಡ ಪ್ರತಿಸ್ಪರ್ಧಿ!

ಕಿಯಾ ಸೋನೆಟ್ ಎಸ್‌ಯುವಿಯ ಬೆಲೆ ವಿಚಾರಕ್ಕೆ ಬಂದರೆ, ಹಿಂದಿನ ಮಾದರಿಗೆ ಹೋಲಿಸಿದರೆ ಇದರ ಎಲ್ಲ ರೂಪಾಂತರಗಳ ದರವನ್ನು ರೂ.50,000 ಬೆಲೆ ಏರಿಕೆಯನ್ನು ಮಾಡಲಾಗಿದ್ದು, ಎಂಟ್ರಿ ಲೆವೆಲ್ ಮಾದರಿ ಬೆಲೆ ರೂ.7.79 ಲಕ್ಷ ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ. 14.89 ಲಕ್ಷ (ಎಕ್ಸ್ ಶೋರೂಂ) ಇರಲಿದೆ. ಇದು ಟಾಟಾ ಹಾಗೂ ಮಾರುತಿ ಸುಜುಕಿಯ ವಿವಿಧ ಮಾದರಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಒಟ್ಟಾರೆ, ಕಿಯಾ ಕಂಪನಿ ಸೋನೆಟ್ ಎಸ್‌ಯುವಿಯನ್ನು ಮುಂಬರಲಿರುವ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿದ್ದು, ಗ್ರಾಹಕರನ್ನು ಆಕರ್ಷಿಸುವ ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದಿದೆ. ಬೆಲೆಯು ಕೈಗೆಟುವಂತ್ತಿದ್ದು, ಹೆಚ್ಚಿನ ಖರೀದಿದಾರರು ಇಷ್ಟಪಟ್ಟು ಕೊಂಡುಕೊಳ್ಳಬಹುದು. ಭಾರತದ ಮಾರುಕಟ್ಟೆಯಲ್ಲಿ ವಿತರಣೆಗಳು ಆರಂಭವಾದ ಮೇಲೆ ಇದರ ಕಾರ್ಯಕ್ಷಮತೆ ಕುರಿತು ಎಲ್ಲ ಮಾಹಿತಿ ದೊರೆಯಲಿದೆ.

More from DriveSpark

Article Published On: Monday, March 20, 2023, 16:05 [IST]
English summary
2023 kia sonet launched india details kannada
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+