2023 ವರ್ಲ್ಡ್ ಕಾರ್ ಆಫ್ ದಿ ಇಯರ್ ಅಂತಿಮ ಪಟ್ಟಿ ಬಿಡುಗಡೆ... ಏಪ್ರಿಲ್‌ನಲ್ಲಿ ಪ್ರಶಸ್ತಿ
ವಿಶ್ವದ ಎಲ್ಲಾ ಕಾರ್ ಬ್ರಾಂಡ್‌ಗಳು ಕಾತುರದಿಂದ ಕಾಯುವ ವರ್ಲ್ಡ್ ಕಾರ್ ಅವಾರ್ಡ್ಸ್ (ಡಬ್ಲ್ಯುಸಿಎ) ಇದೀಗ ಮುನ್ನಲೆಗೆ ಬಂದಿದೆ. ಇದರಲ್ಲಿ ನೀಡಲಾಗುವ ವರ್ಲ್ಡ್ ಕಾರ್ ಆಫ್ ದಿ ಇಯರ್ (ಡಬ್ಲ್ಯುಸಿಒಟಿವೈ) ಪ್ರಶಸ್ತಿಗಳು ಮತ್ತು ಇತರ ಐದು ವಿಭಾಗಗಳ ಅಂತಿಮ ಸ್ಪರ್ಧಿಗಳ ವಿವರಗಳನ್ನು ಇತ್ತಿಚೆಗೆ ಬಿಡುಗಡೆ ಮಾಡಲಾಗಿದೆ. ಈ ಕುರಿತ ವಿವರವಾದ ಮಾಹಿತಿ ಇಲ್ಲಿದೆ.
ವರ್ಲ್ಡ್ ಕಾರ್ ಅವಾರ್ಡ್ಸ್ ಕುರಿತು ಮಾತನಾಡುವುದಾದರೆ, ತೀರ್ಪುಗಾರರ ತಂಡವು 30 ದೇಶಗಳಲ್ಲಿ 100 ವಿಶಿಷ್ಟ ಆಟೋಮೋಟಿವ್ ಪತ್ರಕರ್ತರನ್ನು ಒಳಗೊಂಡಿದೆ. ಎಲ್ಲಾ ವಿಭಾಗಗಳ ಫಲಿತಾಂಶಗಳನ್ನು ಏಪ್ರಿಲ್ 5, 2023 ರಿಂದ ನಡೆಯಲಿರುವ ನ್ಯೂಯಾರ್ಕ್ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ ಅನಾವರಣಗೊಳಿಸಲಾಗುವುದು. ಇದರಲ್ಲಿ ವಿಶ್ವದ ಹಲವು ಬ್ರಾಂಡ್‌ಗಳು ಭಾಗವಹಿಸಲಿದ್ದು, ತೀರ್ಪುಗಾರರ ತಂಡವು ತಮ್ಮ ಮಾನದಂಡಗಳು ಹಾಗೂ ನಿಯಮಗಳ ಅನುಸಾರವಾಗಿ ಕಾರುಗಳನ್ನು ಆಯ್ಕೆ ಮಾಡುತ್ತಾರೆ.

ವಿವಿಧ ಆಟೋಮೋಟಿವ್ ತಯಾರಕರು ವರ್ಷದಲ್ಲಿ ಅನೇಕ ಹೊಸ ಕಾರುಗಳನ್ನು ಬಿಡುಗಡೆ ಮಾಡುವುದರಿಂದ, ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಕ್ಕೆ ಅರ್ಹತೆ ಪಡೆಯಲು ಪ್ರತಿ ಕಾರು ಕೆಲವು ಮಾರ್ಗಸೂಚಿಗಳನ್ನು ಪೂರೈಸಬೇಕಾಗಿರುತ್ತದೆ. ಇದಲ್ಲದೆ, ಈ ಪ್ರಶಸ್ತಿಯನ್ನು ಕಾರು ತಯಾರಕರಿಗೆ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಕ್ಕೆ ಅರ್ಹತೆ ಪಡೆಯಲು ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಇಲ್ಲಿ ನೋಡೋಣ.
ವಾಹನವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿರಬೇಕು ಮತ್ತು ಅದರ ಪ್ರಾಥಮಿಕ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರು ಮಟ್ಟಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರಬೇಕು. ವಾಸ್ತವವಾಗಿ, ಕಾರು ತಯಾರಕರು ವರ್ಷಕ್ಕೆ ಕನಿಷ್ಠ 10,000 ಯೂನಿಟ್ ಮಾದರಿಯನ್ನು ಉತ್ಪಾದಿಸಿರಬೇಕು. ಇದು ಕೇವಲ ಒಂದು ವಿಭಾಗದ ಮಾರ್ಗ ಸೂಚಿಗಳು ಹಾಗೂ ನಿಯಮಗಳಾಗಿವೆ. ಇದರಂತೆಯೇ ಉಳಿದ 5 ವಿಭಾಗಗಳಿಗೆ ಸಂಬಂಧಪಟ್ಟಂತೆ ಕೆಲವು ಮಾರ್ಗಸೂಚಿಗಳು ಹಾಗೂ ನಿಯಮಗಳಿಗೆ ಒಳಪಟ್ಟಿರಬೇಕು. ಸದ್ಯ 6 ವಿಭಾಗಗಳಲ್ಲಿ ಸ್ಥಾನಪಡೆದುಕೊಂಡಿರುವ ಕಾರುಗಳನ್ನು ಕೆಳಗೆ ನೋಡೋಣ.
2023 ರ ವರ್ಲ್ಡ್ ಕಾರ್ ಆಫ್ ದಿ ಇಯರ್
1. ಆಲ್ಫಾ ರೋಮಿಯೋ ಟೋನಾಲೆ
2. BMW 2 ಸರಣಿ ಕೂಪೆ
3. ನಿಸ್ಸಾನ್ ಏರಿಯಾ
4. ನಿಸ್ಸಾನ್ Z
5. ಕಿಯಾ ನಿರೋ
6. ಮಜ್ದಾ CX-60
7. Mercedes-Benz C-Class
8. BMW X1 / iX1
9. ಹೋಂಡಾ HR-V / ZRV
10. ಹ್ಯುಂಡೈ ಅಯೋನಿಕ್ 6
2023 ವರ್ಷದ ವಿಶ್ವ ಐಷಾರಾಮಿ ಕಾರು
1. ಜೆನೆಸಿಸ್ G90
2. BMW 7 ಸರಣಿ / i7
3. ಲ್ಯಾಂಡ್ ರೋವರ್ ರೇಂಜ್ ರೋವರ್
4. ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್
5. ಲುಸಿಡ್ ಏರ್
2023 ರ ವರ್ಲ್ಡ್ ಪರ್ಫಾರ್ಮೆನ್ಸ್ ಕಾರ್ ಆಫ್ ದಿ ಇಯರ್
1. ಕಿಯಾ EV6 GT
2. ನಿಸ್ಸಾನ್ Z
3. ಟೊಯೋಟಾ ಜಿಆರ್ ಕೊರೊಲ್ಲಾ
4. BMW M4 CSL
5. ಪೋರ್ಷೆ 911 GT3 RS
2023 ರ ವರ್ಲ್ಡ್ ಅರ್ಬನ್ ಕಾರ್ ಆಫ್ ದಿ ಇಯರ್
1. ಸಿಟ್ರನ್ C3
2. ಓರಾ ಫಂಕಿ ಕ್ಯಾಟ್ / ಹಾಮಾವೋ
3. ವೋಕ್ಸ್‌ವ್ಯಾಗನ್ ಟೈಗೊನ್ / ನಿವಸ್
2023 ವರ್ಷದ ವಿಶ್ವ ಕಾರ್ ವಿನ್ಯಾಸ
1. ಕ್ಯಾಡಿಲಾಕ್ ಲಿರಿಕ್
2. ಹುಂಡೈ ಅಯೋನಿಕ್ 6
3. ಲ್ಯಾಂಡ್ ರೋವರ್ ರೇಂಜ್ ರೋವರ್
4. ಲುಸಿಡ್ ಏರ್
5. ನಿಸ್ಸಾನ್ Z
2023 ವರ್ಷದ ವಿಶ್ವ ಎಲೆಕ್ಟ್ರಿಕ್ ವಾಹನ
1. BMW i7
2. ಜೆನೆಸಿಸ್ GV60
3. ಹುಂಡೈ ಅಯೋನಿಕ್ 6
4. ಕಿಯಾ ನಿರೋ ಇವಿ
5. ಲುಸಿಡ್ ಏರ್
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ವಿಶ್ವ ಕಾರು ಪ್ರಶಸ್ತಿಗಳನ್ನು ಕಾರು ತಯಾರಕರಿಗೆ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಅದರ ಹೊರತಾಗಿ, ಮೇಲಿನ ಪಟ್ಟಿ ಮಾಡಲಾದ ಮಾದರಿಗಳಲ್ಲಿ ಪ್ರತಿ ತಯಾರಕರು ನಿಜವಾಗಿಯೂ ಉತ್ತಮ ಕಾರುಗಳನ್ನು ಮಾಡಿರುವುದರಿಂದಲೇ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷದ ಈ ಪೈಪೋಟಿಯಲ್ಲಿ ಭಾರೀ ನಿರೀಕ್ಷೆಗಳಿದ್ದು, ಯಾವ ವಿಭಾಗದಲ್ಲಿ ಯಾವ ಬ್ರಾಂಡ್‌ನ ಕಾರು ಪ್ರಶಸ್ತಿ ಗೆದ್ದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications