Citroen C3 ಕಾರಿಗೆ "2023 ವರ್ಲ್ಡ್ ಅರ್ಬನ್ ಕಾರ್" ಪ್ರಶಸ್ತಿ
ಸಿಟ್ರನ್ C3 ಕಾರಿಗೆ 19 ನೇ ವಿಶ್ವ ಕಾರ್ ಪ್ರಶಸ್ತಿಗಳಲ್ಲಿ ಪ್ರತಿಷ್ಠಿತವಾದ "2023 ವರ್ಲ್ಡ್ ಅರ್ಬನ್ ಕಾರ್" ಪ್ರಶಸ್ತಿಯನ್ನು ನೀಡಲಾಗಿದೆ. ಏಪ್ರಿಲ್ 5 ರಂದು ನ್ಯೂಯಾರ್ಕ್ ಆಟೋ ಶೋನಲ್ಲಿ 32 ದೇಶಗಳ 100 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪತ್ರಕರ್ತರಿಂದ ಒಮ್ಮತ ಪಡೆದು ಸಿಟ್ರನ್ Citroen C3 ಈ ಪ್ರಶಸ್ತಿಯನ್ನು ಧಕ್ಕಿಸಿಕೊಂಡಿದೆ.
ಪ್ರತಿಷ್ಠಿತ ವರ್ಲ್ಡ್ ಕಾರ್ ಅವಾರ್ಡ್ಸ್‌ನಲ್ಲಿ ಭಾರತದಲ್ಲಿ ತಯಾರಿಸಿದ ವಾಹನವೊಂದು ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲು. ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ C3, ORA ಫಂಕಿ ಕ್ಯಾಟ್ / Haomao ಮತ್ತು ವೋಕ್ಸ್‌ವ್ಯಾಗನ್ ಟೈಗೂನ್/ನಿವಸ್‌ಗಿಂತ ಮುಂದಿದೆ. 32 ದೇಶಗಳ 100 ಪ್ರತಿಷ್ಠಿತ ಅಂತರರಾಷ್ಟ್ರೀಯ ಆಟೋಮೋಟಿವ್ ಪತ್ರಕರ್ತರ ತೀರ್ಪುಗಾರರ ತಂಡವು ಅರ್ಹ ವಾಹನದ ಮೌಲ್ಯಮಾಪನವನ್ನು ಆಧರಿಸಿ ರಹಸ್ಯ ಮತದಾನದ ಮೂಲಕ ವಿಜೇತರನ್ನು ಆಯ್ಕೆ ಮಾಡಿದೆ.

"C3 ಗಾಗಿ ಈ "2023 ವರ್ಲ್ಡ್ ಅರ್ಬನ್ ಕಾರ್" ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ವಿಶೇಷ ಗೌರವವಾಗಿ ಭಾವಿಸುತ್ತೇವೆ. ಈ ಮಾದರಿಯ ವಾಣಿಜ್ಯ ಯಶಸ್ಸಿನ ಜೊತೆಗೆ, ಇದು ಭಾರತ, ಏಷ್ಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ನಮ್ಮ ಬೆಳವಣಿಗೆಯ ಕಾರ್ಯತಂತ್ರದ ಪ್ರಸ್ತುತತೆಯನ್ನು ಗುರುತಿಸುತ್ತದೆ. ಜೊತೆಗೆ ನಮ್ಮ್ ಬ್ರಾಂಡ್‌ನ ಸಿಟ್ರನ್ C3 ಬಲವಾದ ಆಧುನಿಕ ಶೈಲಿಯನ್ನು ಉನ್ನತ ಮಟ್ಟದ ಸೌಕರ್ಯದೊಂದಿಗೆ ಸಂಯೋಜಿಸುತ್ತದೆ ಎಂದು ಸಿಟ್ರನ್ CEO ಥಿಯೆರಿ ಕೊಸ್ಕಾಸ್ ಹೇಳಿದರು.
2022 ರ ಬೇಸಿಗೆಯಲ್ಲಿ ಪ್ರಾರಂಭವಾದಾಗಿನಿಂದ ಸುಮಾರು 7000 ಯುನಿಟ್‌ಗಳು ಮಾರಾಟವಾಗಿದ್ದು, ಕಳೆದ ವರ್ಷ ಶೇ 880 ರಷ್ಟು ಮಾರಾಟವನ್ನು ಹೆಚ್ಚಿಸಲು C3 ಮಾದರಿ ಬ್ರ್ಯಾಂಡ್‌ಗೆ ಸಹಾಯ ಮಾಡಿದೆ. ಭಾರತದಲ್ಲಿ ಉತ್ಪಾದಿಸಲಾದ C3 ನ ಎಲೆಕ್ಟ್ರಿಕ್ ಆವೃತ್ತಿಯಾದ ë-C3 ಗೆ ಈಗ ಪಡೆದಿರುವ ಪ್ರಶಸ್ತಿಯು ಇನ್ನಷ್ಟು ಯಶಸ್ಸು ಕಾಣಲು ಸಹಕಾರಿಯಾಗಲಿದೆ. ಇನ್ನು ದಕ್ಷಿಣ ಅಮೆರಿಕಾದಲ್ಲಿ ಅಕ್ಟೋಬರ್ 2022 ರಿಂದ ಈವರೆಗೆ C3ಯ ಬರೋಬ್ಬರಿ 14,000 ಯುನಿಟ್‌ಗಳು ಈಗಾಗಲೇ ಮಾರಾಟವಾಗಿವೆ.

ಹಾಗೆಯೇ ಬ್ರೆಜಿಲ್‌ನಲ್ಲಿ ತನ್ನ ವಿಭಾಗದಲ್ಲಿ 6ನೇ ಸ್ಥಾನದಲ್ಲಿದೆ. 2022 ರಲ್ಲಿ ಬ್ರೆಜಿಲ್‌ನಲ್ಲಿ ಸಿಟ್ರನ್ ಶೇ 37 ರಷ್ಟು ಬೆಳವಣಿಗೆಯನ್ನು ಕಂಡಿದೆ. ಹೊಸ ಗ್ರಾಹಕರನ್ನು ಆಕರ್ಷಿಸುವ ಮೂಲಕ C3 ತನ್ನ ವೇಗವನ್ನು ಇನ್ನೂ ಹೆಚ್ಚಿಸಿಕೊಂಡಿದೆ. ಈ ಎರಡು ದೇಶಗಳಲ್ಲಿ C3 ನ ಯಶಸ್ಸು ಸಿಟ್ರನ್ ಬ್ರಾಂಡ್ ಬೆಳವಣಿಗೆಗೆ ನಿಜವಾದ ಉತ್ತೇಜನವಾಗಿದೆ. ಉಳಿದಂತೆ 2022 ರಲ್ಲಿ, ಭಾರತ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶವು ಶೇ 57ರಷ್ಟು ಹಾಗೂ ದಕ್ಷಿಣ ಅಮೆರಿಕಾವು ಶೇ 21.2 ರಷ್ಟು ಮಾರಾಟ ಹೆಚ್ಚಳವನ್ನು ದಾಖಲಿಸಿದೆ.
C3 ಗೆ ಈಗಾಗಲೇ ಹಲವು ಪ್ರಶಸ್ತಿಗಳು:
ಭಾರತದಲ್ಲಿ ಟಾಪ್ ಗೇರ್ ಇಂಡಿಯಾ, ಕಾರ್ ಇಂಡಿಯಾ, ಇಂಡಿಯನ್ ವೆಹಿಕಲ್ ಅವಾರ್ಡ್‌ಗಳು ಮತ್ತು ಮೋಟಾರ್‌ಸ್ಕ್ರೈಬ್‌ಗಳಂತಹ ಪ್ರತಿಷ್ಠಿತ ಪ್ರಕಟಣೆಗಳಿಂದ "2023 ವರ್ಷದ ಹ್ಯಾಚ್‌ಬ್ಯಾಕ್" ಸೇರಿದಂತೆ, ಹೊಸ C3 ತನ್ನ ವಾಣಿಜ್ಯ ಬಿಡುಗಡೆಯ ನಂತರ 12 ಪ್ರಶಸ್ತಿಗಳವರೆಗೆ ಪಡೆದುಕೊಂಡಿದೆ. ಅದರ ನೋಟ ಮತ್ತು ಕಾರ್ಯಕ್ಷಮತೆ ಸೇರಿದಂತೆ ವಿಶೇಷವಾಗಿ ಟ್ಯೂನ್ ಮಾಡಲಾದ ಸಸ್ಪೆನ್ಷನ್ ವ್ಯವಸ್ಥೆಯು ಅವಾರ್ಡ್‌ಗಳನ್ನು ಧಕ್ಕಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಇನ್ನು ಈ ಅವಾರ್ಡ್‌ಗಳನ್ನು ನೀಡಲು ಕಾರಣಕರ್ತರಾದ ಪತ್ರಕರ್ತರು, ಅದರ ವಿನ್ಯಾಸ, ವಿಶಿಷ್ಟ ಡ್ಯಾಶ್‌ಬೋರ್ಡ್, 10 ಇಂಚಿನ ಟಚ್ ಸ್ಕ್ರೀನ್, 200mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಮೆಚ್ಚಿದ್ದಾರೆ. ಈ ಬೆಲೆಯಲ್ಲಿ ಉತ್ತಮ ಇನ್-ಕ್ಲಾಸ್ ಸೌಕರ್ಯ ಮತ್ತು ಎಸ್‌ಯುವಿ ತರಹದ ಡ್ರೈವಿಂಗ್ ಸ್ಥಾನದೊಂದಿಗೆ ಅದರ ಅತ್ಯುತ್ತಮ ಒಳಾಂಗಣವನ್ನು ಹೊಗಳಿದ್ದಾರೆ. ಈ ಮಾದರಿಯು ದಕ್ಷಿಣ ಅಮೆರಿಕಾ ಹಾಗೂ ಬ್ರೆಜಿಲ್‌ನಲ್ಲಿ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. 8 ನವೆಂಬರ್ 2022 ರಂದು "ಅತ್ಯುತ್ತಮ ರಾಷ್ಟ್ರೀಯ ಕಾರು" ಎಂದು ಕೂಡ ಹೆಸರಿಸಲಾಯಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








