2024 ಕಿಯಾ ಕಾರ್ನಿವಲ್ ಬಹಿರಂಗ... ಮುಂದಿನ ತಿಂಗಳು ಪಾದಾರ್ಪಣೆ ಸಾಧ್ಯತೆ!

ಫೇಸ್‌ಲಿಫ್ಟೆಡ್ ಕಿಯಾ ಕಾರ್ನಿವಲ್ ಜಾಗತಿಕ ಪ್ರಥಮ ಪ್ರದರ್ಶನವನ್ನು ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ಆಯೋಜಿಸಲಾಗುವುದು ಎಂದು ವರದಿಯಾಗಿದೆ. ಈಗಾಗಲೇ ಆನ್‌ಲೈನ್ ವೈರಲ್ ಆಗಿರುವ ಕಿಯಾ ಕಾರ್ನಿವಲ್ ಪತ್ತೆದಾರಿ (ಟೆಸ್ಟಿಂಗ್ ಮಾಡ್ಯುಲ್) ಚಿತ್ರಗಳನ್ನು ನಾವೆಲ್ಲಾ ನೋಡಿದ್ದೇವೆ. ಆದ್ರೆ ಇದೀಗ ಪ್ರೀಮಿಯಂ MPV ಯ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಕಿಯಾ ಕಾರ್ನಿವಲ್ ಬಗ್ಗೆ ಒಂದಷ್ಟು ಮಾಹಿತಿ ಕುಡ ಹೊರಬಿದ್ದಿದೆ. ಈ ಪ್ರಿಮಿಯಂ ಎಸ್‌ಯುವಿ ಕಿಯಾ EV9 ಪ್ರಮುಖ ಏಳು ಆಸನಗಳ ಎಲೆಕ್ಟ್ರಿಕ್ SUV ಯಿಂದ ಕೆಲವು ಅಂಶಗಳನ್ನು ಅಳವಡಿಸಿಕೊಂಡಿದೆ. ಅಂದರೆ ಈಗ ಬಿಡುಗಡೆಯಾಗಿರುವ ಚಿತ್ರಗಳು ಕೂಡ ಇದನ್ನು ಸ್ಪಷ್ಟಪಡಿಸಿವೆ. ಚಿತ್ರಗಳು ಎರಡು ವಿಭಿನ್ನ ವಿನ್ಯಾಸಗಳನ್ನು ತೋರಿಸುತ್ತಿದ್ದು, ವಿಭಿನ್ನ ಗ್ರಿಲ್ ಇಂಟೇಕ್‌ಗಳು ಮತ್ತು ಆಲ್-ಬ್ಲಾಕ್ ಅಲಾಯ್ ವೀಲ್‌ಗಳೊಂದಿಗೆ ಸ್ಪೋರ್ಟಿಯಾಗಿ ಕಾಣುತ್ತಿವೆ.

2024-kia-carnival-revealed-debut-next-month

ಮುಂಭಾದಲ್ಲಿ ಆಕರ್ಷಕ ಡಿಸೈನ್‌ನೊಂದಿಗೆ ಪರಿಷ್ಕೃತ ಮುಂಭಾಗವು ಹೊಸ ಗ್ರಿಲ್ ವಿಭಾಗವನ್ನು ಹೊಂದಿದೆ, ತಲೆಕೆಳಗಾದ L-ಆಕಾರದ LED DRL ಗಳು ಮತ್ತು ನಾಲ್ಕು ವರ್ಟಿಕಲ್ ಮೌಂಟೆಡ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇದು ವಿಶಾಲವಾದ ಕಡಿಮೆ ಏರ್‌ ಇಂಟೇಕ್ ಮತ್ತು ಸ್ವಲ್ಪ ನವೀಕರಿಸಿದ ಬಾನೆಟ್‌ನೊಂದಿಗೆ ಮರುವಿನ್ಯಾಸಗೊಳಿಸಲಾದ ಬಂಪರ್ ಅನ್ನು ಸಹ ನೋಡಬಹುದು.

ಉಳಿದಂತೆ ಆಸನಗಳ ವಿಷಯಕ್ಕೆ ಬಂದರೆ 2024 ರ ಕಿಯಾ ಕಾರ್ನಿವಲ್ ಅನ್ನು ಬಹು ಆಸನಗಳ ವಿನ್ಯಾಸದಲ್ಲಿ ನೀಡಲಾಗುವುದು. ಹಿಂಭಾಗವು ಫೇಸ್‌ಲಿಫ್ಟೆಡ್ ಸೆಲ್ಟೋಸ್ ಅನ್ನು ಅನುಕರಿಸುವ ತಲೆಕೆಳಗಾದ ಎಲ್-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ. ಟ್ವೀಕ್ ಮಾಡಿದ ಬೂಟ್‌ಲಿಡ್, ಮರುಸ್ಥಾನಗೊಳಿಸಲಾದ ನಂಬರ್ ಪ್ಲೇಟ್ ಮತ್ತು ಪರಿಷ್ಕೃತ ಹಿಂಭಾಗದ ಬಂಪರ್‌ನೊಂದಿಗೆ ಬರಲಿದೆ. ಹಾಗೆಯೇ ಒಳಾಂಗಣವು ಹೆಚ್ಚು ಸುಧಾರಿತ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಗಳೊಂದಿಗೆ ಬರಲಿದೆ.

2024-kia-carnival-revealed-debut-next-month

2024 ಕಿಯಾ ಕಾರ್ನಿವಲ್ 1.6L ಟರ್ಬೋಚಾರ್ಜ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಆದರೆ 2.2L ಡೀಸೆಲ್ ಮತ್ತು 3.5L ಪೆಟ್ರೋಲ್ ಮಿಲ್‌ಗಳನ್ನು ಉಳಿಸಿಕೊಳ್ಳಲಾಗುತ್ತದೆ. ಭಾರತಕ್ಕೆ ಬಂದ ನಂತರ, ಇದು ಪರಿಚಿತ 2.2L ಟರ್ಬೊ ನಾಲ್ಕು ಸಿಲಿಂಡರ್ ಡೀಸೆಲ್ ಘಟಕವನ್ನು ಪಡೆಯುತ್ತದೆ. ಇದು 200 PS ಪವರ್ ಮತ್ತು 400 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

ಇದು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಪರ್ಕ ಹೊಂದಿದ್ದು, ಮುಂದಿನ ಚಕ್ರಗಳಿಗೆ ಶಕ್ತಿಯನ್ನು ಕಳುಹಿಸುತ್ತದೆ. ಮೂರನೇ ತಲೆಮಾರಿನ ಕಿಯಾ ಕಾರ್ನಿವಲ್ ಅನ್ನು ಭಾರತದಲ್ಲಿ ಕೆಲವೇ ತಿಂಗಳುಗಳ ಹಿಂದೆ ಸ್ಥಗಿತಗೊಳಿಸಲಾಯಿತು. ಏಕೆಂದರೆ ಇದು ಇತ್ತೀಚಿನ ಹೊರಸೂಸುವಿಕೆ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ.

2024-kia-carnival-revealed-debut-next-month

ನಾಲ್ಕನೇ ತಲೆಮಾರಿನ ಜಾಗತಿಕ ಫೇಸ್‌ಲಿಫ್ಟ್‌ನ ಸೌಜನ್ಯದಿಂದ ಮುಂದಿನ ವರ್ಷ ಸ್ಥಳೀಯವಾಗಿ ತನ್ನ ಮೊದಲ ಪ್ರದರ್ಶನವನ್ನು ನೀಡಲಿದೆ. ಈ ಹಿಂದೆ ಭಾರತದಲ್ಲಿ ಕಾರ್ನಿವಲ್‌ಗೆ ಉತ್ತಮ ಬೇಡಿಕೆಯಿತ್ತು, ಸ್ಥಗಿತದ ಬಳಿಕ ಕಂಪನಿ ಕೂಡ ಹೊಸ ಮಾನದಂಡಗಳಿಗೆ ಅನಿಗುಣವಾಗಿ ಹೊಸ ಕಾರ್ನಿವಲ್ ಅನ್ನು ಪರಿಚಯಿಸಲು ಮುಂದಾಗಿತ್ತು. ಇದೀಗ ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುವ ನಿರೀಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, October 29, 2023, 16:54 [IST]
English summary
2024 kia carnival revealed debut next month
Read more on ಕಿಯಾ kia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+