ವರ್ಷಾಂತ್ಯಕ್ಕೆ ಒಂದೇ ತಿಂಗಳು ಬಾಕಿ: ಸಂದೇಹವೇ ಇಲ್ಲ, 2024 ಅನ್ನು ಆಳಲಿವೆ ಈ 5 ಹೊಸ ಎಸ್‌ಯುವಿಗಳು!
ಆಟೋಮೊಬೈಲ್ ಮಾರುಕಟ್ಟೆಯು ಭಾರತದಲ್ಲಿ ಸಾಕಷ್ಟು ವೇಗವಾಗಿ ವಿಸ್ತರಿಸುತ್ತಿದೆ, ಹೆಚ್ಚಿನ ಬೇಡಿಕೆಯನ್ನು ಪೂರೈಸಲು ವಾಹನ ತಯಾರಕರು ಸಹ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಬಜೆಟ್ ಬೆಲೆಯ ಕಾರುಗಳು ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಕಾರಣ ಹಲವು ಬ್ರಾಂಡ್‌ಗಳು 2024 ರಲ್ಲಿ ವಾಹನ ರಂಗಕ್ಕೆ ಹಲವು ಬಜೆಟ್ ಕಾರುಗಳನ್ನು ಪರಿಚಯಿಸಲು ಸಜ್ಜಾಗುತ್ತಿವೆ.
ಆಟೋ ಮಾರುಕಟ್ಟೆಯ ಅಗತ್ಯತೆಗಳನ್ನು ಪೂರೈಸಲು ಟಾಟಾ ಮೋಟಾರ್ಸ್, ಹ್ಯುಂಡೈ, ಮಹೀಂದ್ರಾ, ಮಾರುತಿ ಸುಜುಕಿಯಿಂದ ಭಾರತದಲ್ಲಿ ಆಕರ್ಷಕ ಬೆಲೆಯಲ್ಲಿ ಕಾರುಗಳು ಬಿಡುಗಡೆಯಾಗಲಿವೆ. ಮಾರುತಿಯಿಂದ 2024 ಮಾರುತಿ ಸುಜುಕಿ ಸ್ವಿಫ್ಟ್, ಟಾಟಾದಿಂದ ಟಾಟಾ ಪಂಚ್ ಇವಿ ಹಾಗೂ ಕರ್ವ್ ಇವಿ, ಹ್ಯುಂಡೈನಿಂದ ಕ್ರೆಟಾ ಫೇಸ್‌ಲಿಫ್ಟ್, ಮಹೀಂದ್ರಾದಿಂದ ಥಾರ್ 5-ಡೋರ್ ಮಾದರಿಗಳು 2024 ರಲ್ಲಿ ಸದ್ದು ಮಾಡಲಿವೆ.

ಟಾಟಾ ಪಂಚ್ ಇವಿ: Tata Punch EV ಮಾದರಿಯನ್ನು ಈಗಾಗಲೇ ಭಾರತದಲ್ಲಿ ಸಾಕಷ್ಟು ಬಾರಿ ಪರೀಕ್ಷಿಸಲಾಗಿದೆ. ಈ ಮುಂಬರುವ ಎಲೆಕ್ಟ್ರಿಕ್ SUV ವಾಹನ ತಯಾರಕರ ಇತ್ತೀಚಿನ Gen 2 ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ. ಸಂಗ್ರಹಿಸಿದ ವಿವರಗಳ ಪ್ರಕಾರ, ಪಂಚ್ EV ಸುಮಾರು 300 ರಿಂದ 350 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು.
2024 ಮಾರುತಿ ಸುಜುಕಿ ಸ್ವಿಫ್ಟ್: 2024 Maruti Suzuki Swift ಭಾರತದಲ್ಲಿ ಸಂಭಾವ್ಯ ಕಾರು ಖರೀದಿದಾರರಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಈ ಹೊಸ ಸ್ವಿಫ್ಟ್ ಅನ್ನು 2024 ರ ಮೊದಲಾರ್ಧದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ. ಹೊಸ ಸ್ವಿಫ್ಟ್ ಹೊಸ Z12 ಎಂಜಿನ್ ಮತ್ತು ಹೆಚ್ಚು ಪ್ರಬುದ್ಧ ಶೈಲಿಯನ್ನು ಒಳಗೊಂಡಿದ್ದು, ಬರೋಬ್ಬರಿ 40 ಕಿ.ಮೀ ಮೈಲೇಜ್ ನೀಡಲಿದೆ ಎಂದು ಹೇಳಲಾಗುತ್ತಿದೆ.

ಮಹೀಂದ್ರ ಥಾರ್ 5-ಡೋರ್: Mahindra Thar 5-Door ಈ ಪಟ್ಟಿಯಲ್ಲಿ ಬಹು ನಿರೀಕ್ಷಿತ SUV. ಮಹೀಂದ್ರ ಥಾರ್ 5-ಬಾಗಿಲಿನ SUV ಭಾರತದಲ್ಲಿ ಹಲವಾರು ಬಾರಿ ಪರೀಕ್ಷಿಸಲ್ಪಟ್ಟಿದೆ. ಅಲ್ಲದೆ, ಸದ್ಯ ಮಾರಾಟದಲ್ಲಿರುವ ಥಾರ್ ಎಸ್‌ಯುವಿಗೆ ಹೋಲಿಸಿದರೆ ಥಾರ್ 5-ಡೋರ್ ಎಸ್‌ಯುವಿ ಹೆಚ್ಚುವರಿ ತಂತ್ರಜ್ಞಾನ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ. ಇದನ್ನು ಮುಂಬರುವ ವರ್ಷದ ದ್ವಿತೀರ್ಧದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಟಾಟಾ ಕರ್ವ್ ಇವಿ: Tata Curvv EV ಮುಂಬರುವ ಎಲೆಕ್ಟ್ರಿಕ್ SUV ಆಗಿದೆ. ಇದು ವಾಹನ ತಯಾರಕರ Gen2 EV ಆರ್ಕಿಟೆಕ್ಚರ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಮಾದರಿಯು ಸಂಪೂರ್ಣ ಚಾರ್ಜ್‌ನಲ್ಲಿ 400 ರಿಂದ 500 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದುವ ನಿರೀಕ್ಷೆಯಿದೆ. Curvv EV 2024 ರ ಅಂತ್ಯದ ಮೊದಲು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್: Hyundai Creta SUV ಫೇಸ್‌ಲಿಫ್ಟೆಡ್ ಆವೃತ್ತಿಯು ಈಗಿರುವ ಮಾದರಿಗಿಂತ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡುವ ನಿರೀಕ್ಷೆಯಿದೆ. ಇದು ADAS ತಂತ್ರಜ್ಞಾನದಂತಹವುಗಳನ್ನು ಒಳಗೊಂಡಿರಲಿದೆ. ಮುಂಬರುವ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ SUV ಅನ್ನು 2024ರ ಮೊದಲಾರ್ಧದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications