ನವೀಕರಣಕ್ಕೆ ಸಜ್ಜಾಗಿವೆ ಹೆಚ್ಚು ಮಾರಾಟವಾಗುವ ಮಾರುತಿ, ಟಾಟಾ, ಮಹೀಂದ್ರಾ, ಹುಂಡೈ ಕಾರುಗಳು
ಭಾರತೀಯ ಆಟೋ ಉದ್ಯಮದಲ್ಲಿ ಪ್ರತಿಯೊಂದು ಕಂಪನಿಯು ತನ್ನ ಉತ್ಪನ್ನಗಳಲ್ಲಿ ಒಂದು ಅಥವಾ ಎರಡು ಪ್ರಮುಖ ಕಾರು ಮಾದರಿಗಳನ್ನು ಹೊಂದಿರುತ್ತವೆ. ಇವು ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದರಿಂದ ಕಾಲ ಕಾಲಕ್ಕೆ ನವೀಕರಣಗೊಳಿಸಿ ಗ್ರಾಹಕರಲ್ಲಿ ಬೇಡಿಕೆಯನ್ನು ಉಳಿಸಿಕೊಳ್ಳುತ್ತವೆ. ಇದೀಗ ಪ್ರಮುಖ ನವೀಕರಣ ಪಡೆಯಲು ಕೆಲವು ಕಾರುಗಳು ಸಿದ್ಧವಾಗಿವೆ.
ಮಾರುತಿ ಸುಜುಕಿ, ಹೋಂಡಾ, ಹುಂಡೈ, ಮಹೀಂದ್ರಾ ಮತ್ತು ಟಾಟಾ ಭಾರತದಲ್ಲಿ ಈಗಾಗಲೇ ಹೆಚ್ಚು ಮಾರಾಟವಾಗುತ್ತಿರುವ ತಮ್ಮ ಮಾದರಿಗಳಿಗೆ ನವೀಕರಣಗಳನ್ನು ನೀಡಲು ತಯಾರಿ ನಡೆಸುತ್ತಿವೆ. ಬೆಳೆಯುತ್ತಿರುವ ಸ್ಪರ್ಧೆಗೆ ಪ್ರತಿಕ್ರಿಯೆಯಾಗಿ, ಕಾರು ತಯಾರಕರು ಈಗಾಗಲೇ ಹೆಚ್ಚು ಮಾರಾಟವಾಗುವ ಮಾದರಿಗಳಿಗೆ ನಿಯಮಿತ ನವೀಕರಣಗಳನ್ನು ತರಲು ಸಜ್ಜಾಗುತ್ತಿದ್ದಾರೆ. ಇಲ್ಲಿ ನಾವು ಅಪ್‌ಗ್ರೇಡ್ ಪಡೆಯಲು ಕಾಯುತ್ತಿರುವ ಆಯಾ ವಿಭಾಗಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಆರು ಕಾರುಗಳನ್ನು ನೋಡೋಣ.

1. 5-ಬಾಗಿಲಿನ ಮಹೀಂದ್ರಾ ಥಾರ್:
ಐದು-ಬಾಗಿಲಿನ ಮಹೀಂದ್ರಾ ಥಾರ್ ಅಸ್ತಿತ್ವದಲ್ಲಿರುವ ಮೂರು ಬಾಗಿಲಿನ ಥಾರ್ ಮಾದರಿಗಿಂತ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿರುತ್ತದೆ. ಇದನ್ನು ಮಲ್ಟಿ ಸೀಟ್ ಡಿಸೈನ್‌ನಲ್ಲಿ ಮತ್ತು RWD ಕಾನ್ಫಿಗರೇಶನ್‌ನಲ್ಲಿಯೂ ನೀಡಲಾಗುವುದು. 2024 ರ ಆರಂಭದಲ್ಲಿ ಶೋರೂಂಗಳನ್ನು ತಲುಪುವ ಮೊದಲೇ ಇದರ ಜಾಗತಿಕ ಪ್ರವೇಶವನ್ನು ಮುಂದಿನ ವರ್ಷ ಆಯೋಜಿಸಬಹುದು. ಇದು ಮಾರುತಿ ಸುಜುಕಿ ಜಿಮ್ನಿ ಮತ್ತು ಮುಂಬರುವ ಐದು-ಬಾಗಿಲಿನ ಫೋರ್ಸ್ ಗೂರ್ಖಾಗೆ ಪ್ರತಿಸ್ಪರ್ಧಿಯಾಗಿದೆ.
2. 2023 ಹೋಂಡಾ ಸಿಟಿ ಫೇಸ್‌ಲಿಫ್ಟ್:
ಇಲ್ಲಿ ಕಾಣಿಸಿಕೊಂಡಿರುವ ಇತರ ಮಾದರಿಗಳಿಗೆ ಹೋಲಿಸಿದರೆ ಚಿಕ್ಕದಾಗಿದ್ದರೂ, 2023 ಹೋಂಡಾ ಸಿಟಿಯು ಐದನೇ ತಲೆಮಾರಿನ ಮಧ್ಯಮ ಗಾತ್ರದ ಈ ಸೆಡಾನ್‌ಗೆ ಕೆಲ ವರ್ಷಗಳಿಂದಲೂ ನವೀಕರಣವನ್ನು ತರಲು ನೋಡುತ್ತಿದೆ. ಇದು ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಕಾಸ್ಮೆಟಿಕ್ ಟ್ವೀಕ್‌ಗಳ ಹೊರತಾಗಿ, ಸಾಮಾನ್ಯ ಪೆಟ್ರೋಲ್ ಮತ್ತು e:HEV ಆವೃತ್ತಿಗಳ ನಡುವಿನ ಬೆಲೆಯ ಅಂತರವನ್ನು ಕಡಿಮೆ ಮಾಡಲು ಬಲವಾದ ಹೈಬ್ರಿಡ್ ಶ್ರೇಣಿಯನ್ನು ತರಲಾಗುವುದು ಎನ್ನಲಾಗಿದೆ.

3. ಹುಂಡೈ ಕ್ರೆಟಾ ಫೇಸ್‌ಲಿಫ್ಟ್:
ಮಧ್ಯಮ ಗಾತ್ರದ SUV ವಿಭಾಗದ ಲೀಡರ್ ಎಂದೇ ಜನಪ್ರಿಯವಾಗಿರುವ ಹ್ಯುಂಡೈ ಕ್ರೆಟಾ ಮುಂದಿನ ವರ್ಷ ದೊಡ್ಡ ಅಪ್‌ಗ್ರೇಡ್ ಅನ್ನು ಪಡೆಯಲಿದೆ. ಏಕೆಂದರೆ ಇದು ಸೆನ್ಸೌಸ್ ಸ್ಪೋರ್ಟಿನೆಸ್ ವಿನ್ಯಾಸವನ್ನು ಹೊಂದಿದೆ. ಇದು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಹೊಚ್ಚ ಹೊಸ ಮುಂಭಾಗದ ಗ್ರಿಲ್ ಮತ್ತು ನವೀಕರಿಸಿದ ಹಿಂಭಾಗದೊಂದಿಗೆ ಭಾರತಕ್ಕೆ ಎಂಟ್ರಿ ಕೊಡಲಿದೆ. ಒಳಭಾಗವು ADAS ಸೇರಿದಂತೆ ಹೊಸ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನಗಳೊಂದಿಗೆ ಬರಲಿದೆ.
4. ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್:
ನೆಕ್ಸಾನ್ ಪ್ರಸ್ತುತ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ SUV ಆಗಿದ್ದು, ಮುಂದಿನ ವರ್ಷ ಇದು ದೊಡ್ಡ ಪರಿಷ್ಕರಣೆಗಳಿಗೆ ಒಳಪಡಲಿದೆ. 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ Curvv ನಿಂದ ಇದು ವಿನ್ಯಾಸ ಸ್ಫೂರ್ತಿಯನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಇದು ಕೂಪ್ ತರಹದ ರೂಫ್‌ಲೈನ್ ಅನ್ನು ಉಳಿಸಿಕೊಂಡು ಸಂಪೂರ್ಣವಾಗಿ ವಿಭಿನ್ನ ಮುಂಭಾಗ ಮತ್ತು ಹಿಂಭಾಗವನ್ನು ಪಡೆಯಲಿದೆ. ಒಳಾಂಗಣವು ಹೊಸ ವೈಶಿಷ್ಟ್ಯಗಳನ್ನು ಮತ್ತು ದೊಡ್ಡ ಟಚ್‌ಸ್ಕ್ರೀನ್ ಅನ್ನು ಸಹ ಪಡೆಯಬಹುದು ಎಂದು ಮೂಲಗಳು ಹೇಳುತ್ತಿವೆ.

5. ಹೊಸ ಮಾರುತಿ ಸ್ವಿಫ್ಟ್:
ಹೊಸ ತಲೆಮಾರಿನ ಸ್ವಿಫ್ಟ್ ಈಗಾಗಲೇ ವಿದೇಶಿ ನೆಲದಲ್ಲಿ ಕಾಸ್ಮೆಟಿಕ್ ಪರಿಷ್ಕರಣೆಗಳೊಂದಿಗೆ ಹಲವಾರು ಬಾರಿ ಪರೀಕ್ಷೆಗೆ ಒಳಗಾಗಿದೆ. ಮುಂದಿನ ವರ್ಷದ ಮೊದಲಾರ್ಧದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಹೊಸ-ಜನ್ ಡಿಜೈರ್‌ನೊಂದಿಗೆ ವೈಶಿಷ್ಟ್ಯಗಳ ಪಟ್ಟಿ ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಹಂಚಿಕೊಳ್ಳುತ್ತದೆ. ಈ ಮೂಲಕ ಸುಮಾರು 35-40 kmpl ಮೈಲೇಜ್ ಹಿಂದಿರುಗಿಸಲಿದೆ ಎಂದು ಮೂಲಗಳು ಹೇಳುತ್ತಿವೆ.
6. ಹೊಸ ಮಾರುತಿ ಡಿಜೈರ್:
ಜನಪ್ರಿಯ ಕಾರು ತಯಾರಕ ಹಾಗೂ ಭಾರತದಲ್ಲಿ ಹೆಚ್ಚು ಮಾರಾಟ ಹೊಂದಿರುವ ಕಾರು ಕಂಪನಿಯಾದ ಮಾರುತಿ ಸುಜುಕಿಯ ಜನಪ್ರಿಯ ಮೂರನೇ ತಲೆಮಾರಿನ ಮಾರುತಿ ಡಿಜೈರ್ 2024 ರಲ್ಲಿ ಮಾರುಕಟ್ಟೆಗೆ ಬರಲಿದೆ. ಇದು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಹೊರಭಾಗವನ್ನು ಪಡೆಯಲಿದ್ದು, ಹೊಸ 1.2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನಿಂದ ಅದರ ಇತರ ಸೋದರ ಮಾದರಿ ಹ್ಯಾಚ್‌ಬ್ಯಾಕ್‌ಗಳಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ.


Click it and Unblock the Notifications