ಟಾಟಾ, ಮಾರುತಿ, ಹೋಂಡಾದಿಂದ ಅಬ್ಬರಿಸಲು ಬರಲಿವೆ 7-ಆಸನಗಳ SUVಗಳು: ಸಖತ್ ಇವೆ ರೀ..!

ಇತ್ತೀಚಿನ ದಿನದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಿಡ್ - ಸೈಜ್ ಎಸ್‌ಯುವಿಗಳು ಸಾಕಷ್ಟು ಖ್ಯಾತಿಗಳಿಸುತ್ತಿವೆ. ಮುಂಬರುವ ಎರಡು - ಮೂರು ವರ್ಷಗಳಲ್ಲಿ 7-ಆಸನಗಳ ನೂತನ ಎಸ್‌ಯುವಿಗಳು ಬಿಡುಗಡೆಯಾಗಲಿವೆ. ಇವು ಹತ್ತಾರು ನವೀನ ವೈಶಿಷ್ಟ್ಯದೊಂದಿಗೆ ಖರೀದಿಗೆ ಸಿಗಬಹುದು. ಇಲ್ಲಿ ಹೆಚ್ಚಿನ ವಿವರ ತಿಳಿಯೋಣ.

ಟಾಟಾ ಸಫಾರಿ ಫೇಸ್‌ಲಿಫ್ಟ್:
ಪ್ರತಿಯೊಬ್ಬ ಭಾರತೀಯ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುವ ಟಾಟಾ ಮೋಟಾರ್ಸ್ ಕಾರಿನ ಬಗ್ಗೆ ಮಾತನಾಡೋಣ. ಟಾಟಾ ಸಫಾರಿ ಫೇಸ್‌ಲಿಫ್ಟ್ ಶೀಘ್ರದಲ್ಲೇ ಮಿಡ್ - ಸೈಜ್ ಎಸ್‌ಯುವಿಯಾಗಿ ದೊರೆಯಲಿದೆ ಎಂದು ವರದಿಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಬಹುನೀರಿಕ್ಷಿತ ರೆಡ್ ಡಾರ್ಕ್ ಎಡಿಷನ್ ಕಾರನ್ನು ಅನಾವರಣ ಮಾಡಿತ್ತು. ಇದು ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಸೇರಿದಂತೆ ಹಲವು ನೂತನ ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ, ಮಾರುತಿ, ಹೋಂಡಾದಿಂದ ಅಬ್ಬರಿಸಲು ಬರಲಿವೆ 7-ಆಸನಗಳ SUVಗಳು: ಸಖತ್ ಇವೆ ರೀ..!

7-ಆಸನಗಳ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ:
ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ತನ್ನದೇ ಆದ ಖರೀದಿದಾರರನ್ನು ಹೊಂದಿದೆ. ಶೀಘ್ರದಲ್ಲೇ ಆರು ಅಥವಾ ಏಳು ಆಸನಗಳ ಆಯ್ಕೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ವರದಿಯಾಗಿದೆ ಸದ್ಯ ಖರೀದಿಗೆ ಲಭ್ಯವಿರುವ ಮಾದರಿಯಂತೆಯೇ ಎಂಜಿನ್ ಕಾರ್ಯಕ್ಷಮತೆಯನ್ನು ಹೊಂದಿರಲಿದೆ. ಐದು ಆಸನಗಳ ಮಾರುತಿ ಸುಜುಕಿ ಗ್ರಾಂಡ್ ವಿಟಾರಾಗೆ ಹೋಲಿಸಿದರೆ, ಇದರ ಹೊರಭಾಗದಲ್ಲಿ ಕೊಂಚ ಮಟ್ಟಿನ ಬದಲಾವಣೆ ಆಗಲಿವೆಯಂತೆ. ಸದ್ಯ ಈಗಿರುವ ಮಾದರಿ ರೂ.10.45 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ

ಸಿಟ್ರಸ್ C3 ಏರ್‌ಕ್ರಾಸ್:
ವಿದೇಶಿಯ ವಾಹನ ತಯಾರಕ ಕಂಪನಿಯಾಗಿ ಗುರಿತಿಸಿಕೊಂಡಿರುವ ಸಿಟ್ರಸ್ ಕೆಲದಿನಗಳ ಹಿಂದೆಯಷ್ಟೇ ಸಿಟ್ರಸ್ ಇಸಿ3 ಎಲೆಕ್ಟ್ರಿಕ್ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮೂಲಕ ಸಖತ್ ಸುದ್ದಿಯಾಗಿತ್ತು ಸಿಟ್ರಸ್ ಕೂಡ ಏಳು ಆಸನಗಳ ಮಿಡ್ - ಸೈಜ್ ಎಸ್‌ಯುವಿ ತಯಾರಿಕೆಯಲ್ಲಿ ನಿರತವಾಗಿದ್ದು, ಈಗಾಗಲೇ ದೇಶದ ರಸ್ತೆಯಲ್ಲಿ ಹಲವು ಬಾರಿ ಪರೀಕ್ಷೆಯನ್ನು ನಡೆಸಲಾಗಿದೆ. ಈ ಹೊಚ್ಚ ಹೊಸ ಕಾರು ಸಿಟ್ರಸ್ C3 ಏರ್‌ಕ್ರಾಸ್ ಎಂಬ ಹೆಸರನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿಯೇ ಖರೀದಿಗೆ ದೊರೆಯಲಿದೆ. ಆ ಬಳಿಕ, ಎಲೆಕ್ಟ್ರಿಕ್ ಆವೃತ್ತಿಯಾಗಿ ಮಾರುಕಟ್ಟೆಗೆ ಬರಲಿದೆ.

7-ಆಸನಗಳ ಹೋಂಡಾ ಮಿಡ್ - ಸೈಜ್ ಎಸ್‌ಯುವಿ:
ಜಪಾನ್ ಮೂಲದ ಹೋಂಡಾ ಕಂಪನಿ, ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ತನ್ನ ಬಹುನೀರಿಕ್ಷಿತ ಐದು ಆಸನಗಳ ಮಿಡ್ - ಸೈಜ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಿದೆ. ಆ ಬಳಿಕ, ಏಳು ಆಸನಗಳ ಎಸ್‌ಯುವಿಯನ್ನು ಲಾಂಚ್ ಮಾಡಲಿದೆ ಎಂದು ವರದಿಯಾಗಿದೆ. ಇದರ ಎಂಜಿನ್ ಕಾರ್ಯಕ್ಷಮತೆ ಬಹುತೇಕ ಐದು ಆಸನಗಳ ಎಸ್‌ಯುವಿಗೆ ಹೋಲಿಕೆಯಾಗಲಿದ್ದು, ಇದು 1.5 ಲೀಟರ್ ಪೆಟ್ರೋಲ್ ಅಥವಾ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಸಿಗಬಹುದು.

ರೆನಾಲ್ಟ್ ಡಸ್ಟರ್:
ವಿಶ್ವಾದ್ಯಂತ ಮೆಚ್ಚುಗೆ ಪಡೆದಿರುವ CMF-B ಪ್ಲಾಟ್‌ಫಾರ್ಮ್ ಆಧರಿಸಿ, ನೆಕ್ಸ್ಟ್ ಜನರೇಷನ್ 'ರೆನಾಲ್ಟ್ ಡಸ್ಟರ್' 2024 ಅಥವಾ 2025ರ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಅಲ್ಲದೆ, ಇದು ಏಳು ಆಸನಗಳ ಆಯ್ಕೆಯಲ್ಲೂ ದೊರೆಯುವ ಸಾಧ್ಯತೆ ಇದ್ದು, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಡಸ್ಟರ್, ರೂ.8.59 - ರೂ.14.25 ಲಕ್ಷ ಬೆಲೆಯಲ್ಲಿ ಲಭ್ಯವಿವೆ. 13.9 - 19.87 kmpl ಇಂಧನ ದಕ್ಷತೆಯನ್ನು ಹೊಂದಿದೆ.

ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್:
ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಏಳು ಆಸನದೊಂದಿಗೆ ಬಿಡುಗಡೆ ಮಾಡಬಹುದು. ಹೊರಭಾಗದಲ್ಲಿ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿರಲಿದ್ದು, ಹೆಚ್ಚಿನ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಒಟ್ಟಾರೆಯಾಗಿ ಈ ಭಾರತದ ಗ್ರಾಹಕನ ಮನಸ್ಥಿತಿಗೆ ಅನುಗುಣವಾಗಿ ಕಂಪನಿಗಳು ತಯಾರಿಸುತ್ತಿರುವ ಏಳು ಆಸನಗಳ ಕಾರು ನವೀನ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, February 8, 2023, 15:11 [IST]
English summary
6 upcoming 7 seater midsize suvs in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+