ಅತ್ಯಂತ ಕೈಗೆಟುಕುವ ಬೆಲೆಗೆ ಸಿಗುವ 7 ಇವಿ ಸ್ಕೂಟರ್‌ಗಳು... ಬೆಲೆ ಕೇವಲ 25,000 ರೂ.ನಿಂದ ಆರಂಭ
ಎಲೆಕ್ಟ್ರಿಕ್ ಸ್ಕೂಟರ್‌ಗಳು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿವೆ. ಸಿಂಗಲ್ ಚಾರ್ಜ್‌ನಲ್ಲಿ ಇಂಧನ ಚಾಲಿತ ಸ್ಕೂಟರ್‌ಗಳಿಗಿಂತ ಹೆಚ್ಚಿನ ರೇಂಜ್ ನೀಡುತ್ತಿರುವ ಕಾರಣ ಸಾರ್ವಜನಿಕರು ಇವಿಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಇವಿ ಕಂಪನಿಗಳಿರುವುದರಿಂದ ಖರೀದಿಯ ಗೊಂದಲವಿದೆ. ಹಾಗಾಗಿ ಟಾಪ್ 7 ಅಗ್ಗದ ಕಡಿಮೆ-ವೇಗದ ಇವಿ ಸ್ಕೂಟರ್‌ಗಳನ್ನು ಇಲ್ಲಿ ನೋಡೋಣ.
1. ಏವನ್ ಇ ಪ್ಲಸ್
ಕೇವಲ 25,000 ರೂ.ಗಳ ಬೆಲೆಯಲ್ಲಿ ಏವನ್ ಇ ಪ್ಲಸ್ ಬೆಲೆ ಆರಂಭವಾಗುತ್ತದೆ. ಇ ಪ್ಲಸ್ ಪೂರ್ಣ ಚಾರ್ಜ್‌ನಲ್ಲಿ 50 ಕಿ.ಮೀ ರೇಂಜ್ ನೀಡುತ್ತದೆ. ಈ ಸ್ಕೂಟರ್‌ನ ಬ್ಯಾಟರಿ ಸಾಮರ್ಥ್ಯವು 48 v/12 Ah ಇದ್ದು, ಇದು ಗರಿಷ್ಠ 24 km/ph ವೇಗವನ್ನು ತಲುಪಬಲ್ಲದು. ಸುಮಾರು 6.5 ರಿಂದ 8 ಗಂಟೆಗಳವರೆಗೆ ಸ್ಕೂಟರ್ ಅನ್ನು ಚಾರ್ಜ್ ಮಾಡಬೇಕಾಗುತ್ತದೆ. ಅಗ್ಗದ ಕಡಿಮೆ-ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿಯಲ್ಲಿ ಇದು ನಂಬರ್ 1 ಸ್ಥಾನದಲ್ಲಿದೆ.

2. ಡಿಟೆಲ್ ಈಸಿ ಪ್ಲಸ್
Detel Easy Plus ನಮ್ಮ ಅಗ್ಗದ ಕಡಿಮೆ-ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿಯಲ್ಲಿ 2 ನೇ ಸ್ಥಾನವನ್ನು ಹೊಂದಿದೆ. ಇದರ ಬೆಲೆಯು ರೂ. 40,000 ಇದೆ. ವಿನ್ಯಾಸದ ವಿಷಯದಲ್ಲಿ, ಇದು ಅತ್ಯಂತ ಆಕರ್ಷಕವಾದ ಆಯ್ಕೆಯಾಗಿಲ್ಲವಾದರೂ ಕಡಿಮೆ ಬೆಲೆಯನ್ನು ಪರಿಗಣಿಸಿ ಇದರ ವೈಶಿಷ್ಟ್ಯಗಳು ಹಣಕ್ಕೆ ಮೌಲ್ಯವನ್ನು ಪಡೆಯುತ್ತವೆ. ಇದು ಫುಲ್ ಚಾರ್ಜ್‌ನಲ್ಲಿ 60 ಕಿ.ಮೀ ರೇಂಜ್ ನೀಡುತ್ತದೆ. ಇದರ ಟಾಪ್ ಸ್ಪೀಡ್ 25 km/ph ಇದ್ದು, ಬ್ಯಾಟರಿ ಮೇಲೆ ಮೂರು ವರ್ಷಗಳ ವಾರೆಂಟಿ ಇದೆ.
3. ಆಂಪಿಯರ್ ರಿಯೊ ಎಲೈಟ್
ಆಂಪಿಯರ್ ರಿಯೊ ಎಲೈಟ್ ಆರಂಭಿಕ ಬೆಲೆಯು ರೂ. 44, 500 ಇದೆ. ವಿನ್ಯಾಸದ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ಈ ಪಟ್ಟಿಯಲ್ಲಿರುವ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. ಇದು ಸಾಮಾನ್ಯವಾಗಿ ಕಾಣುವ ಸ್ಕೂಟರ್ ಆಗಿದ್ದು, ಕಡಿಮೆ ಶಕ್ತಿಯನ್ನು ಹೊಂದಿದೆ. ಟಾಪ್ ಸ್ಪೀಡ್ 25 km /ph ಇದ್ದು, 60 ಕಿ.ಮೀ ರೇಂಜ್ ಹಾಗೂ 8 ಗಂಟೆಗಳ ಚಾರ್ಜಿಂಗ್ ಸಮಯವನ್ನು ಹೊಂದಿದೆ.
4. ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ E2
ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ E2 ಬೆಲೆಯು ರೂ. 52,500 ಇದೆ. ಈ ಸ್ಕೂಟರ್ ಸ್ಲಿಮ್ ಮತ್ತು ಹಗುರವಾದ ದೇಹದ ವಿನ್ಯಾಸದೊಂದಿಗೆ ಬರುತ್ತದೆ. ಇದು ಹಗುರವಾಗಿರುವ ಕಾರಣ ಸ್ಕೂಟರ್ ಪ್ರಭಾವಶಾಲಿ ಕಾರ್ಯಕ್ಷಮತೆಯನ್ನು ತೋರುತ್ತದೆ. ಈ ಸ್ಕೂಟರ್‌ನ ಗಮನಾರ್ಹ ವಿಶೇಷಣಗಳನ್ನು ನೋಡುವುದಾದರೆ, ಫುಲ್ ಚಾರ್ಜ್‌ನಲ್ಲಿ 65 ಕಿ.ಮೀ ರೇಂಜ್ ನೀಡುತ್ತದೆ. ಇದರ ಟಾಪ್ ಸ್ಪೀಡ್ 25 ಕಿ.ಮೀ ಇದೆ. ನಾಲ್ಕರಿಂದ ಐದು ಗಂಟೆಗಳಲ್ಲಿ ಫುಲ್ ಚಾರ್ಜ್ ಮಾಡಬಹುದು.

5. ಲೋಹಿಯಾ ಓಮಾ ಸ್ಟಾರ್ ಲಿ
ಲೋಹಿಯಾ ಓಮಾ ಸ್ಟಾರ್ ಲಿ ಬೆಲೆಯು ರೂ. 41,444 ರಿಂದ ಆರಂಭವಾಗುತ್ತದೆ. ಕಂಪನಿಯು ಇತರರಂತೆ ಪ್ರಸಿದ್ಧವಾಗಿಲ್ಲದಿದ್ದರೂ, ಈ ಸ್ಕೂಟರ್ ಅದರ ಬೆಲೆಯನ್ನು ಪರಿಗಣಿಸಿ ಯೋಗ್ಯವಾದ ವೈಶಿಷ್ಟ್ಯಗಳನ್ನು ನೀಡುತ್ತದೆ. ಸಿಂಗಲ್ ಚಾರ್ಜ್‌ನಲ್ಲಿ 60 ಕಿ.ಮೀ ಮೈಲೇಜ್, 25 km /ph ಟಾಪ್ ಸ್ಪೀಡ್, 6-8 ಗಂಟೆಗಳಲ್ಲಿ ಫುಲ್ ಚಾರ್ಜ್ ಮಾಡಬಹುದು. ಈ ಸ್ಕೂಟರ್ ಬಗ್ಗೆ ಅರಿವಿರುವ ಪ್ರದೇಶಗಳಲ್ಲಿ ಹೆಚ್ಚಿನ ಮಾರಾಟವನ್ನು ದಾಖಲಿಸುತ್ತಿದೆ.
6. ಓಕಿನಾವಾ
ಕೊನೆಯ ಎರಡು ಸ್ಥಾನಗಳನ್ನು ಓಕಿನಾವಾ ಕಂಪನಿ ತೆಗೆದುಕೊಂಡಿದೆ. ನಮ್ಮ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಲು ಕಾರಣವೆಂದರೆ ಅವುಗಳ ಬೆಲೆ. ಕಂಪನಿಯು ಉತ್ತಮ ವೈಶಿಷ್ಟ್ಯಗಳನ್ನು ಒದಗಿಸುತ್ತಿವೆಯಾದರೂ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅವುಗಳು ಹೆಚ್ಚು ಬೆಲೆಯನ್ನು ಹೊಂದಿವೆ. ಇದರ ಬೆಲಯು 67,000 ದಿಂದ ಆರಂಭವಾಗುತ್ತದೆ. 60 ಕಿ.ಮೀ ಮೈಲೇಜ್ ಹೊಂದಿದ್ದು, 25 km /ph ಟಾಪ್ ಸ್ಪೀಡ್ ಹಾಗೂ ಫುಲ್ ಚಾರ್ಜ್ ಆಗಲು 6-7 ಗಂಟೆಯ ಸಮಯ ತೆಗೆದುಕೊಳ್ಳುತ್ತದೆ.

7. ಓಕಿನಾವಾ R30
ರೂ. 62,500 ಬೆಲೆಯಲ್ಲಿ ಪ್ರಾರಂಭವಾಗುವ ಓಕಿನಾವಾ R- 30 ಸ್ಕೂಟರ್ ಪಟ್ಟಿಯ ಕೊನೆಯಲ್ಲಿದ್ದು, ಡಿಟ್ಯಾಚೇಬಲ್ ಬ್ಯಾಟರಿ ಸೇರಿದಂತೆ ಈ ಬೆಲೆಯಲ್ಲಿ ನೀವು ನಿರೀಕ್ಷಿಸಬಹುದಾದ ಎಲ್ಲಾ ಅಗತ್ಯ ವೈಶಿಷ್ಟ್ಯಗಳನ್ನು ಈ ಸ್ಕೂಟರ್ ಹೊಂದಿದೆ. ಫುಲ್ ಚಾರ್ಜ್‌ನಲ್ಲಿ 65 ಕಿ.ಮೀ ರೇಂಜ್ ನೀಡಲಿದ್ದು, ಚಾರ್ಜ್ ಮಾಡಲು 4-5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದರ ಟಾಪ್ ಸ್ಪೀಡ್ 25 km /ph ಇದೆ.


Click it and Unblock the Notifications