ಭಾರತದಲ್ಲಿ ಅಬ್ಬರಿಸಲಿವೆ ದೊಡ್ಡ ಕಂಪನಿಯ ಎಲೆಕ್ಟ್ರಿಕ್ ವಾಹನಗಳು: ಬರಲಿವೆ 7 ಕಾರುಗಳು.. ಹೇಗಿವೆ?

ದೇಶದ ಪ್ರಮುಖ ವಾಹನ ತಯಾರಕ ಕಂಪನಿಗಳು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯತ್ತ ವಾಲುತ್ತಿವೆ. ಈಗಾಗಲೇ ಟಾಟಾ ಟಿಯಾಗೊ ಇವಿ ಮಾರುಕಟ್ಟೆಯಲ್ಲಿ ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದೆ. ಮಹೀಂದ್ರಾ ತನ್ನ ಮೊದಲ ಎಲೆಕ್ಟ್ರಿಕ್ ಕಾರದ XUV400ನ್ನು ಲಾಂಚ್ ಮಾಡಿದೆ. ಮುಂಬರುವ ದಿನಗಲ್ಲಿ ಅಬ್ಬರಿಸಲಿರುವ 7 ಮಿಡ್-ಸೈಜ್ ಎಲೆಕ್ಟ್ರಿಕ್ ಎಸ್‌ಯುವಿಗಳು ಯಾವುದೆಂದು ತಿಳಿಯೋಣ.

ಹುಂಡೈ ಕ್ರೆಟಾ ಇವಿ: ದಕ್ಷಿಣ ಕೊರಿಯಾದ ದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹುಂಡೈ, 2028ರ ಹೊತ್ತಿಗೆ ಭಾರತದ ಮಾರುಕಟ್ಟೆಯಲ್ಲಿ ಎಂಟು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತದೆ. ಗ್ರಾಹಕರು ಇಷ್ಟಪಟ್ಟು ಖರೀದಿಸುವ ಮಿಡ್-ಸೈಜ್ ಎಸ್‌ಯುವಿ ಕ್ರೆಟಾದ ಎಲೆಕ್ಟ್ರಿಕ್ ಆವೃತ್ತಿಯನ್ನು 2024ರ ಹೊತ್ತಿಗೆ ಲಾಂಚ್ ಮಾಡಲು ಚಿಂತನೆ ನಡೆಸಿದೆ. ಈ ಕಾರು, E-GMP ಪ್ಲಾಟ್‌ಫಾರ್ಮ್‌ ಆಧರಿಸಿರಲಿದ್ದು, 2025ರಲ್ಲಿ ದೇಶದಲ್ಲಿ ಲಾಂಚ್ ಆಗಲಿರುವ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ನಡೆಯಲಿದೆ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ: ಬರಲಿವೆ 7 ಕಾರುಗಳು.. ಇದರೆಡೆಗೆ ಎಲ್ಲರ ಚಿತ್ತ!

ಮಹೀಂದ್ರಾ XUV800 ಇವಿ: ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ತನ್ನ ಮೊದಲ ಎಲೆಕ್ಟ್ರಿಕ್ ಕಾರದ XUV400ನ್ನು ಕಳೆದ ತಿಂಗಳು ಅದ್ದೂರಿಯಾಗಿ ಬಿಡುಗಡೆ ಮಾಡಿತ್ತು. ಇದು ರೂ.15.99 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದೀಗ, ಮುಂಬರಲಿರುವ XUV800 ಇವಿ ತಯಾರಿಕೆಯಲ್ಲಿ ಕಂಪನಿ ನಿರತವಾಗಿದೆ ಎಂದು ವರದಿಯಾಗಿದೆ. ಇದು ಮಹೀಂದ್ರಾ ಹೊಚ್ಚ ಹೊಸ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್‌ ಆಧಾರಿತವಾಗಿದೆ. ಸದ್ಯ, ಭಾರತದಲ್ಲಿ ಖರೀದಿಗೆ ದೊರೆಯುವ XUV700 ಹೋಲಿಕೆಯಾಗುತ್ತದೆ ಎಂದು ಹೇಳಬಹುದು.

ಮಾರುತಿ ಸುಜುಕಿ ಇವಿಎಕ್ಸ್: ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿ, 2030ರೊಳಗೆ ತನ್ನ ಒಟ್ಟು ಮಾರಾಟ ಪ್ರಮಾಣದಲ್ಲಿ ಶೇಕಡ 15% ಎಲೆಕ್ಟ್ರಿಕ್ ಕಾರುಗಳು ಹೊಂದಿರಲಿದೆ. ಇದಕ್ಕಾಗಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು 2025ರ ಹೊತ್ತಿಗೆ ಲಾಂಚ್ ಮಾಡಲು ತಯಾರಿ ನಡೆಸಿದ್ದು, ಕಳೆದ ತಿಂಗಳು ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ಕಾರಿನ ಮಾದರಿಯನ್ನು (eVX concept) ಪ್ರದರ್ಶಿಸಿತ್ತು. ಮುಂಬರಲಿರುವ ಕಾರು ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಭಾರತದಲ್ಲಿ ನಡೆಯಲಿದೆ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ: ಬರಲಿವೆ 7 ಕಾರುಗಳು.. ಇದರೆಡೆಗೆ ಎಲ್ಲರ ಚಿತ್ತ!

ಟೊಯೊಟಾ ಎಲೆಕ್ಟ್ರಿಕ್ ಎಸ್‌ಯುವಿ: ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗಳು, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳುವ ಒಪ್ಪಂದವನ್ನು ಮಾಡಿಕೊಂಡಿವೆ. ಕೆಲವೇ ವರ್ಷಗಳಲ್ಲಿ ಟೊಯೊಟಾದಿಂದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ನೂತನ ಎಲೆಕ್ಟ್ರಿಕ್ ಎಸ್‌ಯುವಿ 2025ಕ್ಕೆ ಲಾಂಚ್ ಆಗಲಿರುವ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರಿಗೆ ಬಹುತೇಕ ಹೋಲಿಕೆಯಾಗಲಿದೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹೊಸ ಟೊಯೊಟಾ ಎಲೆಕ್ಟ್ರಿಕ್ ಎಸ್‌ಯುವಿ, ಸಂಪೂರ್ಣ ಚಾರ್ಜಿನಲ್ಲಿ 500 km ರೇಂಜ್ ನೀಡಲಿದೆಯಂತೆ.

ಟಾಟಾ ಹ್ಯಾರಿಯರ್ ಇವಿ: ಭಾರತದ ಮಾರುಕಟ್ಟೆಯಲ್ಲಿ ಟಾಟಾ ಈಗಾಗಲೇ ಟಿಯಾಗೊ ಹಾಗೂ ನೆಕ್ಸನ್ ಇವಿಗಳು ಮಾರಾಟ ಮಾಡುವ ಮೂಲಕ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ. ಇದೀಗ, ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಲಾಂಚ್ ಮಾಡಲು ಸಿದ್ದತೆ ನಡೆಸಿತ್ತಿದ್ದು, ಇದು 4WD (ಫೋರ್ ವೀಲ್ ಡ್ರೈವ್) ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ನೂತನ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ.

ಟಾಟಾ Curvv & ಕಿಯಾ ಸೆಲ್ಟೋಸ್ ಇವಿ: ಟಾಟಾ ಮೋಟಾರ್ಸ್ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ICE ಆಧಾರಿತ Curvv ಕಾರಿನ ಮಾದರಿ (concept)ಯನ್ನು ಅನಾವರಣ ಮಾಡಿತ್ತು. ಇದು ಮೊದಲಿಗೆ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿದೆ ಮಾರುಕಟ್ಟೆಗೆ ಬರಲಿದ್ದು, ಬಳಿಕ ಎಲೆಕ್ಕ್ಟ್ರಿಕ್ ಆವೃತ್ತಿಯಾಗಿ ಲಾಂಚ್ ಆಗಲಿದೆ. ಕಿಯಾ ಕೂಡ ಸೆಲ್ಟೋಸ್ ಇವಿಯನ್ನು ಮುಂಬರುವ ದಿನಗಳಲ್ಲಿ ಖರೀದಿಗೆ ನೀಡಲಿದ್ದು, ಹುಂಡೈ ಕ್ರೆಟಾ ಇವಿಗೆ ಪ್ರತಿಸ್ಪರ್ದಿಯಾಗಲಿದೆ.

ಟಾಟಾ, ಮಹೀಂದ್ರಾ ಹಾಗೂ ಮಾರುತಿ ಸುಜುಕಿ ಸೇರಿದಂತೆ ವಿವಿಧ ಕಂಪನಿಗಳು ಎಲೆಕ್ಟ್ರಿಕ್ ಎಸ್‌ಯುವಿಗಳ ತಯಾರಿಕೆಯಲ್ಲಿ ನಿರತವಾಗಿದ್ದು, ಇವು ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತವೆ ಎಂದು ಅಂದಾಜಿಸಲಾಗಿದೆ. ನವೀನ ವೈಶಿಷ್ಟ್ಯಗಳೊಂದಿಗೆ ಬರಲಿರುವ ಈ ಕಾರುಗಳು ಕಡಿಮೆ ಬೆಲೆಗೆ ಖರೀದಿಗೆ ದೊರೆಯಬಹುದು. ಅಂದುಕೊಂಡಂತೆ ನಡೆದರೇ ಕೆಲವೇ ವರ್ಷಗಳಲ್ಲಿ ಭಾರತದ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಕಾರಿಗಳೇ ಅಬ್ಬರಿಸಲಿದ್ದು, ಮುಂಬರುವ ದಿನಗಳಲ್ಲಿ ಯಾವ ಎಲೆಕ್ಟ್ರಿಕ್ ಕಾರು ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಮೂಲಕ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Article Published On: Wednesday, February 22, 2023, 13:19 [IST]
English summary
7 upcoming midsize electric suvs details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+