ಮಾರುತಿ ಜಿಮ್ನಿ ಎಸ್‌ಯುವಿಯನ್ನು ಎಲೆಕ್ಟ್ರಿಕ್ ಕಾರಾಗಿ ನಕಲಿಸಿದ ಚೀನಾ ಕಂಪನಿ
ಚೀನಾ ದೇಶವು ವಿಶ್ವಾದ್ಯಂತ ಇರುವ ಪ್ರಸಿದ್ಧ ವಸ್ತುಗಳನ್ನು ನಕಲಿ ಮಾಡುವುದರಲ್ಲಿ ಹಾಗೂ ಪ್ರಮಾಣಿತವಲ್ಲದ ಉತ್ಪನ್ನಗಳ ತಯಾರಿಯಲ್ಲಿ ಮೊದಲ ಸ್ಥಾನಲ್ಲಿದೆ. ಇಲ್ಲಿನ ಜನರಿಗೆ ಸ್ವಂತ ಆಲೋಚನೆಯ ಬದಲಿಗೆ ಇತರರ ಆಲೋಚನೆಯನ್ನು ಕಾಪಿ ಮಾಡಿ ಶೀಘ್ರವಾಗಿ ಹೆಸರು ಮಾಡುವುದು ಅಭ್ಯಾಸ. ಎಲ್ಲಾ ಕ್ಷೇತ್ರಗಳಂತೆ ಆಟೋ ಉದ್ಯಮದಲ್ಲು ಚೀನಿಯರು ತಮ್ಮ ಕೈಚಳಕ ತೋರುತ್ತಿರುತ್ತಾರೆ.
ಚೀನೀ ಆಟೋಮೊಬೈಲ್ ಮಾರುಕಟ್ಟೆಯು ಸಾಕಷ್ಟು ನಿರ್ಬಂಧಿತವಾಗಿರುತ್ತದೆ. ಜೊತೆಗೆ ವಿದೇಶಿ ತಯಾರಕರಿಗೆ ಸುಲಭವಾಗಿ ಪ್ರವೇಶವನ್ನು ನೀಡುವುದಿಲ್ಲ. ಚೀನಾದಲ್ಲಿ ಸ್ವದೇಶಿ ತಯಾರಕರು ಯಾವಾಗಲೂ ವಿದೇಶಗಳಲ್ಲಿ ಜನಪ್ರಿಯತೆ ಪಡೆಯುವ ಮಾದರಿಗಳನ್ನು ನಕಲು ಮಾಡಿ ಅಲ್ಲಿನ ವಿನ್ಯಾಸಗಳಿಗೆ ತಕ್ಕಂತೆ ಬದಲಿಸಿಕೊಳ್ಳುತ್ತಾರೆ. ಚೀನೀ ತಯಾರಕರ ಕಣ್ಣಿಗೆ ಈಗ ಸುಜುಕಿ ಜಿಮ್ನಿ ಅಥವಾ ಸುಜುಕಿ ಹಸ್ಟ್ಲರ್ ಬಿದ್ದಿದೆ. ಈ ಮಾದರಿಯನ್ನು ಈಗಾಗಲೇ ಸಂಪೂರ್ಣ ಕಾಪಿ ಹೊಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಚೀನಾದ SIAC ಮಾಲೀಕತ್ವದ ಬೌಜನ್ ಎಂಬ ಕಂಪನಿಯಿಂದ ಕಾರನ್ನು ನಕಲು ಮಾಡಲಾಗಿದೆ. ಡಿಸೈನ್ ವಿಷಯದಲ್ಲಿ ಜಿಮ್ನಿಯಿಂದ ಬೌಜನ್ ಜಾಯ್ ಹೆಚ್ಚು ಸ್ಫೂರ್ತಿ ಪಡೆದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿರುವ ಸುಜುಕಿ ಜಿಮ್ನಿ ಕೇವಲ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರಲಿದೆ. ಆದರೆ ಬೌಜನ್ ಜಾಯ್ ಸಂಪೂರ್ಣ ಎಲೆಕ್ಟ್ರಿಕ್ ವಾಹನವಾಗಿದೆ. ವಾಹನದಲ್ಲಿ ಯಾವುದೇ ಆಂತರಿಕ ದಹನಕಾರಿ ಎಂಜಿನ್ ಇಲ್ಲ.
ಇದು ಸಂಪೂರ್ಣ ಚಾರ್ಜ್‌ನಲ್ಲಿ 303 ಕಿ.ಮೀಗಳ ಪ್ರಮಾಣೀಕೃತ ಶ್ರೇಣಿಯನ್ನು ನೀಡುತ್ತದೆ. ಕಾರಿನ ತಾಂತ್ರಿಕ ವಿಶೇಷಣಗಳು ಸಾರ್ವಜನಿಕ ವೆಬ್‌ಸೈಟ್‌ಗಳಲ್ಲಿ ಇನ್ನೂ ಲಭ್ಯವಿಲ್ಲ. 2019 ರಲ್ಲಿ ಬ್ರ್ಯಾಂಡ್ ಪ್ರದರ್ಶಿಸಿದ ಸುಜುಕಿ ಹಸ್ಲರ್ ಪರಿಕಲ್ಪನೆಗೆ Baojan ಜಾಯ್ ಸಾಕಷ್ಟು ಹೋಲುತ್ತದೆ. ಇನ್ನು ಇದಕ್ಕೂ ಮುಂಚೆ ಹಲವು ಜನಪ್ರಿಯ ಕಾರುಗಳನ್ನು ನಕಲು ಮಾಡಿರುವ ಇತಿಹಾಸ ಚೀನಾಗಿದೆ. ರೋಲ್ಸ್ ರಾಯ್ಸ್‌ನಿಂದ ಹಿಡಿದು ಬೆಂಜ್, ಬಿಎಂಡಬ್ಲ್ಯೂ ವರೆಗೂ ಕಾಪಿ ಮಾಡಿದ್ದಾರೆ.

ಜೆಎಸಿ ಎ6 - ಆಡಿ ಎ6
ಜೆಎಸಿ ಕೇವಲ ಆಡಿ ಎ6 ಕಾರಿನ ವಿನ್ಯಾಸವನ್ನು ನಕಲು ಮಾಡುವುದಲ್ಲದೇ ಕಾರಿನ ಹೆಸರನ್ನು ಸಹ ಕಾಪಿ ಮಾಡಿದ್ದಾರೆ. ಈ ಹೆಸರು ಎ ಹೆಸರಿಗೆ ತಕ್ಕ ಹಾಗೆ ಆಡಿ ಸಂಸ್ಥೆಯಲ್ಲಿನ ಐಷಾರಾಮಿ ಮಿಡ್-ಸೈಜ್ ಸೆಡಾನ್ ಕಾರಾದ ಎ6 ಕಾರಿನಿಂದ ಸ್ಪೂರ್ತಿ ಪಡೆದಿದ್ದಾರೆ ಎಂದು ಹೇಳಲಾಗಿದ್ದು, ಚೀನಾ ಮೂಲದ ಸಂಸ್ಥೆಯು ಅಸಲಿ ಆಡಿ ಎ6 ಕಾರಿನ ಹೊರ ವಿನ್ಯಾಸ ಮತ್ತು ಒಳ ವಿನ್ಯಾಸವನ್ನು ಸಹ ಕಾಪಿ ಮಾಡಲಾಗಿದೆ.
ವಿನ್ಯಾಸದ ಬಗ್ಗೆ ಹೇಳುವುದಾದ್ರೆ ಆಡಿ ಎ6 ಕಾರಿನಲ್ಲಿ ಕಾಣಬಹುದಾದ ರೆಡಾನ್ ಕ್ಸೆನಾನ್ ಹೆಡ್‍ಲೈಟ್ಸ್ ಮತ್ತು ಹೆಕ್ಸಾಗನಲ್ ಫ್ರಂಟ್ ಕ್ರೋಮ್ ಗ್ರಿಲ್ ಅನ್ನು ಜೆಎಸಿ ಎ6 ಕಾರಿನಲ್ಲಿ ಕಾಣಬಹುದಾಗಿದೆ. ಇನ್ನು ಕಾರಿನ ಒಳಭಾಗದಲ್ಲಿ 2000ರ ದಶಕದಲ್ಲಿನ ಎ6 ಕಾರಿನಲ್ಲಿ ಕಾಣಬಹುದಾದ ವಿನ್ಯಾಸವನ್ನು ಮಾಡಲಾಗಿದೆ. ಚೀನಾ ಮಾದರಿಯ ಎ6 ಕಾರು 1.5 ಟರ್ಬೋ ಪೆಟ್ರೋಲ್ ಎಂಜಿನ್ ಸಹಾಯದಿಂದ 170 ಬಿಹೆಚ್‍ಪಿ ಮತ್ತು 250ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಸುಝೌ ಈಗಲ್ ಕರ್ರೀ - ಫೆರಾರಿ ಕ್ಯಾಲಿಫೋರ್ನಿಯಾ ಟಿ ಮತ್ತು ಪೊರ್ಷೆ 718 ಕೆಯ್‍ಮನ್
ನೀವು ಎಂದಾದರು ಹೆಸರಾಂತ ವಾಹನ ತಯಾಕರಾದ ಫೆರಾರಿ ಮತ್ತು ಪೊರ್ಷೆ ಸಂಸ್ಥೆಗಳ ಕಾರಿನಲ್ಲಿ ಪ್ರಯಾಣಿಸಲು ಬಯಸಿದ್ದೀರಾ.? ಈ ಅವಕಾಶವನ್ನು ಚೀನಾದ ಗ್ರಾಹಕರಿಗೆ ಸುಝೌ ತಮ್ಮ ಈಗಲ್ ಕಾರ್ರೀ ಎಂಬ ಕಾರಿನಲ್ಲಿ ನೀಡಲಾಗಿದೆ. ಏಕೆಂದರೆ ಸುಝೌ ಈಗರ್ ಕಾರ್ರೀ ಎಂಬ ಕಾರು ಫೆರಾರಿ ಕ್ಯಾಲಿಫೋರ್ನಿಯಾ ಟಿ ಮತ್ತು ಪೊರ್ಷೆ 718 ಕೆಯ್‍ಮನ್ ಎಂಬ ಎರಡೂ ಕಾರುಗಳ ವಿನ್ಯಾಸವನ್ನು ಹೋಲುತ್ತದೆ.
ಸುಝೌ ಈಗರ್ ಕಾರ್ರೀ ಕಾರಿನ ಸೈಡ್ ಪ್ರೊಫೈಲ್ ಸಂಪೂರ್ಣವಾಗಿ ಪೊರ್ಷೆ 718 ಕೆಯ್‍ಮನ್ ಕಾರಿನ ವಿನ್ಯಾಸವನ್ನು ಕಾಪಿ ಮಾಡಲಾಗಿದ್ದು, ಮುಂಭಾಗದಲ್ಲಿ ಫೆರಾರಿ ಕ್ಯಾಲಿಫೋರ್ನಿಯಾ ಟಿ ಕಾರಿನ ವಿನ್ಯಾಸವನ್ನು ನಕಲು ಮಾಡಲಾಗಿದೆ. ಇಷ್ಟೆ ಅಲ್ಲದೆಯೆ ಸುಝೌ ಸಂಸ್ಥೆಯು ಲೋಗೊವನ್ನು ಸಹ ಪೊರ್ಷೆ ಸಂಸ್ಥೆಯ ಲೋಗೊವನ್ನು ಕಾಪಿ ಮಾಡಲಾಗಿದೆ. ಈ ಕಾರು ಒಂದು ಸ್ಪೋರ್ಟ್ಸ್ ಕಾರು ಮಾದರಿಯಾಗಿದ್ದು, ಇದು 4.2 ಸೆಕೆಂಡಿನಲ್ಲಿ 0 ಇಂದ 100 ಕಿಲೋಮೀಟರ್‍ನಷ್ಟು ಆಕ್ಸಿಲರೇಷನ್ ಅನ್ನು ಸಹ ನೀಡುತ್ತದೆ ಎಂದು ಹೇಳಲಾಗಿದೆ.


Click it and Unblock the Notifications