Acer Faster Awards 2023 ಪ್ರಕಟ: ವರ್ಷದ ಅತ್ಯುತ್ತಮ ಕಾರು, ಬೈಕ್ ಯಾವುದು ಗೊತ್ತಾ?
ಫಾಸ್ಟರ್ ಅವಾರ್ಡ್ಸ್‌ನ ಎರಡನೇ ಆವೃತ್ತಿಯು ಕಳೆದ ಬುಧವಾರ (ಮೇ 3, 2023) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಗುರುಗ್ರಾಮ್‌ನಲ್ಲಿ ನಡೆದ ಈ ಪ್ರಶಸ್ತಿ ಪ್ರಕಟ ಸಮಾರಂಭವನ್ನು ಟಿವಿ ಹೋಸ್ಟ್ ಎಮ್‌ಸೀ ರವಿನ್ ಕುಂದು ಅವರು ನಡೆಸಿಕೊಟ್ಟರು. ಹಲವು ವಿಭಾಗಗಳಲ್ಲಿ ವರ್ಷದ ಉತ್ತಮ ಬೈಕ್, ಕಾರು ಸೇರಿದಂತೆ ಉತ್ತಮ ಪಿಆರ್ ತಂಡಗಳಿಗೂ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.
ಈ ಸಮಾರಂಭದಲ್ಲಿ ನಮ್ಮ ಡ್ರೈವ್‌ಸ್ಪಾರ್ಕ್ ಸಂಪಾದಕರಾದ ಜೋಬೋ ಕುರಿವಿಲ್ಲಾ ಅವರು ಪ್ರಮುಖ ತೀರ್ಪುಗಾರರಾಗಿ ಭಾಗವಹಿಸಿರುವುದು ನಮ್ಮ ಇಡೀ ತಂಡಕ್ಕೆ ಹೆಮ್ಮೆಯನ್ನು ತಂದುಕೊಟ್ಟಿದೆ. ಅಭಿನಂದನಾ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆಯಾಗಿ ಟಿವಿಎಸ್ ರೋನಿನ್ ವರ್ಷದ ಉತ್ತಮ ಬೈಕ್ ಹಾಗೂ ಹ್ಯುಂಡೈ ಟಕ್ಸನ್‌ಗೆ ವರ್ಷದ ಉತ್ತಮ ಕಾರ್ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ವಿವರವಾದ ಮಾಹಿತಿಯನ್ನು ಕೆಳಗೆ ನೋಡೋಣ.

ಏಸರ್ ಫಾಸ್ಟರ್ ಅವಾರ್ಡ್ಸ್ 2023 ರ ವಿಜೇತರ ಪಟ್ಟಿ:
● ವರ್ಷದ ಕಾರು: ಹ್ಯುಂಡೈ ಟಕ್ಸನ್
● ವರ್ಷದ ಬೈಕ್: ಟಿವಿಎಸ್ ರೋನಿನ್
● ವರ್ಷದ ಪ್ರೀಮಿಯಂ ಕಾರು: Mercedes-Benz EQS
● ವರ್ಷದ EV: Kia EV6
● ವರ್ಷದ ಆಟೋ ಟೆಕ್: ಹೋಂಡಾ ಸಿಟಿ e:HEV ನ ಪ್ರಬಲ ಹೈಬ್ರಿಡ್ ಪವರ್‌ಟ್ರೇನ್
● ಇಂಡಸ್ಟ್ರಿ ಪರ್ಸನಾಲಿಟಿ ಆಫ್ ದಿ ಇಯರ್: ರಾಜೇಶ್ ಜೆಜುರಿಕರ್, ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ (ಆಟೋ ಮತ್ತು ಫಾರ್ಮ್ ಸೆಕ್ಟರ್), ಮಹೀಂದ್ರಾ ಗ್ರೂಪ್
● ವರ್ಷದ ಮೋಟಾರ್ ಸ್ಪೋರ್ಟ್ ಪರ್ಸನಾಲಿಟಿ: ಜಹಾನ್ ದಾರುವಾಲಾ (ಎಫ್2 ಡ್ರೈವರ್ ಮತ್ತು ರಿಸರ್ವ್ ಡ್ರೈವರ್ - ಮಹೀಂದ್ರಾ ರೇಸಿಂಗ್ ಫಾರ್ಮುಲಾ ಇ ಟೀಮ್)
● ವರ್ಷದ CSR ಉಪಕ್ರಮಗಳು: ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್
● ವರ್ಷದ ಕಾರ್ಪೊರೇಟ್ ಸಂವಹನ ತಂಡ: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್
● ವರ್ಷದ PR ತಂಡ: ಫರ್ಸ್ಟ್ ಪಾರ್ಟನರ್ಸ್
● ವರ್ಷದ ಆಟೋ ಜಾಹೀರಾತು ಪ್ರಚಾರ: ಟಾಟಾ ಕಾಜಿರಂಗ ಆವೃತ್ತಿ
ಏಸರ್ ಫಾಸ್ಟರ್ ಅವಾರ್ಡ್ಸ್ 2023 ತೀರ್ಪುಗಾರರ ತಂಡವು ಮುಂಬೈನಲ್ಲಿ ಏಪ್ರಿಲ್ 12 ಮತ್ತು 13 ರಂದು ಎಲ್ಲಾ ಸ್ಪರ್ಧಿಗಳನ್ನು ಪರೀಕ್ಷೆ ಮಾಡಿದ್ದರು. ಇದಾದ ಕೇವಲ ಹದಿನೈದು ದಿನಗಳಲ್ಲಿ ಗುರುಗ್ರಾಮ್‌ನಲ್ಲಿ ವಿಜೇತರನ್ನು ಘೋಷಿಸಲಾಯಿತು. ಏಸರ್ ಫಾಸ್ಟರ್ ಅವಾರ್ಡ್ಸ್ 2023ರ ತೀರ್ಪುಗಾರರು ಆನ್‌ಲೈನ್ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ಅನುಭವವನ್ನು ಪಡೆದಿರುವ ಪತ್ರಕರ್ತರಾಗಿದ್ದಾರೆ.

ಏಸರ್ ಫಾಸ್ಟರ್ ಪ್ರಶಸ್ತಿಗಳ ತೀರ್ಪುಗಾರರು:
● ಅಮಿತ್ ಚಂಗನಿ - ಸಂಪಾದಕ, ಮೋಟೋರಾಯ್ಡ್ಸ್
● ಆಯುಷ್ ಜೈನ್ - ಸಂಪಾದಕ, ಇಂಡಿಯನ್ ಟಾರ್ಕ್
● ಗೌರವ್ ಯಾದವ್ - ಸಂಪಾದಕ, ಗಾಡಿವಾಡಿ
● ಜೋಬೋ ಕುರುವಿಲ್ಲಾ - ಸಂಪಾದಕ, ಡ್ರೈವ್ ಸ್ಪಾರ್ಕ್
● ನರೇಂದ್ರ ಶರ್ಮಾ - ಸಂಪಾದಕ, ಗೇರ್‌ಫ್ಲಿಕ್
● ರೋಹಿತ್ ಖುರಾನಾ - ಸಂಪಾದಕ, ಕಾರ್‌ಬ್ಲಾಗ್ ಇಂಡಿಯಾ
● ರೋಶನ್ ಜೋಸೆಫ್ - ಸಂಪಾದಕ, ಪೈಲಟ್ ಆನ್ ವೀಲ್ಸ್
ಮೋಟೋರಾಯ್ಡ್ಸ್ ಸಂಪಾದಕ ಮತ್ತು ಫಾಸ್ಟರ್‌ನ ಅಧ್ಯಕ್ಷ ಅಮಿತ್ ಚಂಗಾನಿ ಏಸರ್ ಫಾಸ್ಟರ್ ಅವಾರ್ಡ್ಸ್ 2023 ರ ಕುರಿತು ಮಾತನಾಡಿ, "ಫಾಸ್ಟರ್‌ನಲ್ಲಿ ಅಧಿಕೃತ ಹಾಗೂ ಉತ್ತಮವಾಗಿ ಸಂಶೋಧಿಸಲಾದ ವಿಷಯವನ್ನು ನಂಬುವ ಆನ್‌ಲೈನ್ ಆಟೋಮೋಟಿವ್ ಮಾಧ್ಯಮದ ಜನರನ್ನು ಒಟ್ಟಿಗೆ ಸೇರಿಸುವುದು ಮುಖ್ಯ ಎಂದು ನಾವು ನಂಬುತ್ತೇವೆ. ನಾವು ಗುಣಮಟ್ಟದ ಆನ್‌ಲೈನ್ ಆಟೋಮೋಟಿವ್ ಪ್ರಕಟಣೆಗಳನ್ನು ನಮ್ಮ ಮಡಿಲಿಗೆ ತರಲು ಬಯಸುತ್ತೇವೆ.

ಭಾರತದಲ್ಲಿ ಸದ್ಯ ಮೇಲೆ ತಿಳಿಸಲಾದ ನಮ್ಮ ಮಾಧ್ಯಮ ತಂಡಗಳು ಅತ್ಯುತ್ತಮ ಆಟೋ ಸುದ್ದಿಗಳನ್ನು ಒದಗಿಸುತ್ತಿವೆ. ನಮ್ಮ ಓದುಗರಿಗೆ ನಂಬಬಹುದಾದ ಪರಿಶೀಲನಾಶೀಲ, ವಿಶ್ವಾಸಾರ್ಹ ಮಾಹಿತಿಯನ್ನು ನೀಡುವಲ್ಲಿ ನಮ್ಮ ಕೈಲಾದಷ್ಟು ಕೆಲಸ ಮಾಡುತ್ತಲೇ ಇರುತ್ತೇವೆ. ಇಂಟರ್ನೆಟ್ ಅನ್ನು ಸುರಕ್ಷಿತ, ಉತ್ಪಾದಕ ಮತ್ತು ಉತ್ತಮ ಸ್ಥಳವನ್ನಾಗಿ ಮಾಡಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
"ಡ್ರೈವ್‌ಸ್ಪಾರ್ಕ್ ಸಂಪಾದಕ ಮತ್ತು ಫಾಸ್ಟರ್ ಜ್ಯೂರಿ ಸದಸ್ಯ ಜೋಬೋ ಕುರುವಿಲ್ಲಾ ಮಾತನಾಡಿ, "ಭಾರತೀಯ ವಾಹನ ಉದ್ಯಮದಲ್ಲಿನ ಶ್ರೇಷ್ಠತೆಯ ನಿಜವಾದ ಆಚರಣೆಯಾದ ಏಸರ್ ಫಾಸ್ಟರ್ ಅವಾರ್ಡ್ಸ್ 2023ರ ವಿಜೇತರನ್ನು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಕಠಿಣ ಪರೀಕ್ಷೆ ಮತ್ತು ವ್ಯಾಪಕ ಡೇಟಾ ಸಂಗ್ರಹಣೆ ಪ್ರಕ್ರಿಯೆ ಅತ್ಯುತ್ತಮ ವಾಹನಗಳು ಮಾತ್ರ ಉನ್ನತ ಸ್ಥಾನಕ್ಕೆ ಬಂದಿವೆ ಎಂದು ಖಚಿತಪಡಿಸಿದೆ.
ನಮ್ಮ ಗೌರವಾನ್ವಿತ ತೀರ್ಪುಗಾರರ ಸದಸ್ಯರಾಗಿ ಆನ್‌ಲೈನ್ ಆಟೋ ಮಾಧ್ಯಮದ ಜಾಗದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಭಾವಶಾಲಿ ಹೆಸರುಗಳನ್ನು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಏಸರ್ ಫಾಸ್ಟರ್ ಅವಾರ್ಡ್ಸ್ 2023 ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಆಚರಣೆಯಾಗಿದೆ. ಭಾರತೀಯ ಆಟೋಮೊಬೈಲ್ ಕ್ಷೇತ್ರದ ಉದ್ಯಮವು ವಿಕಸನಗೊಳ್ಳುತ್ತಿದ್ದು, ಮುಂಬರುವ ವರ್ಷಗಳಲ್ಲಿ ನಾವೀನ್ಯತೆ ಮತ್ತು ಉತ್ಕೃಷ್ಟತೆಯನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಎಂದರು."
ಏಸರ್ ಫಾಸ್ಟರ್ ಅವಾರ್ಡ್ಸ್ ಕುರಿತು ನಮ್ಮ ಅಭಿಪ್ರಾಯ: ಏಸರ್ ಫಾಸ್ಟರ್ ಅವಾರ್ಡ್ಸ್ 2023 ಅನ್ನು ಕಠಿಣ ಪರೀಕ್ಷೆ ಮತ್ತು ಡೇಟಾ ಸಂಗ್ರಹಣೆಯಿಂದ ನಡೆಸಲಾಯಿತು. ಭಾಗವಹಿಸುವ ಪ್ರತಿಯೊಬ್ಬರಿಗೂ ನ್ಯಾಯಯುತವಾದ ತೀರ್ಪು ಸಿಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸ್ವತಂತ್ರವಾಗಿ ಮೌಲ್ಯೀಕರಿಸಲಾಗಿದೆ. ಮುಖ್ಯವಾಗಿ ಈ ಪ್ರಶಸ್ತಿಗಳನ್ನು ನಿರ್ಣಯಿಸಲು ನಮ್ಮ ಸಂಪಾದಕ ಜೋಬೋ ಕುರುವಿಲ್ಲಾ ಅವರನ್ನು ಸ್ವಾಗತಿಸಿರುವುದು ನಮಗೆ ಹೆಮ್ಮೆಯಾಗಿದೆ. ನಮ್ಮ ತಂಡವು ಭವಿಷ್ಯದಲ್ಲಿ ಆಟೋ ವಲಯದಲ್ಲಿ ಇನ್ನೂ ಹೆಚ್ಚಿನ ಕೊಡುಗೆಯನ್ನು ನೀಡಲಿದೆ.


Click it and Unblock the Notifications








