FASTER Awards 2023: ಟೈಟಲ್ ಸ್ಪಾನ್ಸರ್ ಆಗಿ ಏಸರ್ ಆಯ್ಕೆ: ಸಹ ಪ್ರಾಯೋಜಕರಾಗಿ GoPro ಮತ್ತು WD40
ಭಾರತದ ವಾಹನ ಪ್ರೇಮಿಗಳು ಕಾಯುತ್ತಿರುವ 'ಫಾಸ್ಟರ್ ಅವಾರ್ಡ್' ಎರಡನೇ ಆವೃತ್ತಿಯ ಕಾರ್ಯಕ್ರಮದ ದಿನಾಂಕ ಘೋಷಣೆಯಾಗಿದೆ. ಫಾಸ್ಟರ್ ಪ್ರಮುಖ ಆಟೋಮೋಟಿವ್ ವೆಬ್‌ಸೈಟ್‌ಗಳ ಸಂಘವಾಗಿದ್ದು, ಇದರ ವಿಸ್ತೃತ ರೂಪ 'ಫೆಡರೇಶನ್ ಆಟೋ ಸ್ಕ್ರಿಬ್ಸ್ ಆಫ್ ದಿ ರಿಯಾಲಂ' (Federation of Auto Scribes of the Electronic Realm) ಎಂದು.
2023ರ FASTER ಪ್ರಶಸ್ತಿ ಟೈಟಲ್ ಪ್ರಾಯೋಜಕರಾಗಿ ಏಸರ್ ಆಯ್ಕೆಯಾಗಿದ್ದು, ಆಟೋಮೋಟಿವ್ ಡೇಟಾ ಪರೀಕ್ಷೆಯಲ್ಲಿ ದೇಶದ ಪ್ರಮುಖ ತಜ್ಞರಲ್ಲೊಬ್ಬರಾದ ಝೆನ್ ಮೈಕ್ರೋಸಿಸ್ಟಮ್ಸ್, 'ಏಸರ್ ಫಾಸ್ಟರ್ ಅವಾರ್ಡ್ಸ್' 2023ರಲ್ಲಿ ಡೇಟಾ ಮತ್ತು ಟೆಸ್ಟಿಂಗ್ ಪಾಲುದಾರರಾಗಿ ಸೇರ್ಪಡೆಯಾಗಿದ್ದಾರೆ. ಪ್ರಶಸ್ತಿಯ ಸಹ ಪ್ರಾಯೋಜಕರಾಗಿ GoPro ಮತ್ತು WD40 ಕೈಜೋಡಿಸಿವೆ. ಅದ್ದೂರಿ ಸಮಾರಂಭಕ್ಕೆ ಎಲ್ಲ ರೀತಿಯ ಸಿದ್ದತೆಗಳು ನಡೆದಿವೆ.

'FASTER' ಭಾರತೀಯ ವಾಹನೋದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡುತ್ತದೆ. ಇದರ ಮೊದಲ ಆವೃತ್ತಿ ಸಮಾರಂಭವನ್ನು ಫೆಬ್ರವರಿ 2022ರಲ್ಲಿ ಮುಂಬೈನಲ್ಲಿ ನಡೆಸಲಾಗಿತ್ತು. ಈ ವರ್ಷ, 'ಫಾಸ್ಟರ್ ಅವಾರ್ಡ್' ಕಾರ್ಯಕ್ರಮ ಏಪ್ರಿಲ್ 12 ಮತ್ತು 13ರಂದು ನವಿ ಮುಂಬೈನಲ್ಲಿ ಖಾರ್ಘರ್‌ನಲ್ಲಿರುವ ಪಾರ್ಕ್ ನಡೆಯಲಿದೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಿಷ್ಪಕ್ಷಪಾತವಾಗಿ ನಡೆಯಲಿದೆ.
ಪ್ರಶಸ್ತಿಗೆ ಆಯ್ಕೆ ಸುತ್ತಿಗೆ ಸ್ಪರ್ಧಿಸುವ ಎಲ್ಲಾ ಬೈಕ್ ಹಾಗೂ ಕಾರುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರತಿಷ್ಠಿತ ವಾಹನ ತಯಾರಕರಿಂದ ಪ್ರತಿಯೊಂದು ಹೊಸ ಜನರೇಷನ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಪ್ರಮುಖವಾಗಿ 2022ರ ಆರ್ಥಿಕ ವರ್ಷದಲ್ಲಿ ಬಿಡುಗಡೆಗೊಳಿಸಲಾಗಿರುವ ಮಾದರಿಗಳು ಪ್ರಶಸ್ತಿಗೆ ಅರ್ಹತೆ ಪಡೆಯಲಿದ್ದು, ಆಯ್ಕೆ ಪ್ರಕ್ರಿಯೆ ಬಹಳ ಕಠಿಣ ಹಾಗೂ ನ್ಯಾಯೋಜಿತವಾಗಿ ಇರುತ್ತದೆ.

ವಾಹನಗಳ ಆಯ್ಕೆ ಪ್ರಕ್ರಿಯೆ ಎರಡು ದಿನಗಳವರೆಗೆ ನಡೆಯುತ್ತದೆ. ಭಾಗವಹಿಸುವ ತೀರ್ಪುಗಾರ ತಂಡದ ಸದಸ್ಯರು, ಗುರುವಾರ (ಏ.13)ರಂದು ದ್ವಿಚಕ್ರ ಹಾಗೂ ಕಾರುಗಳನ್ನು ಸಮಗ್ರವಾಗಿ ಪರೀಕ್ಷಿಸುತ್ತಾರೆ. ಏಸರ್ ಫಾಸ್ಟರ್ ಪ್ರಶಸ್ತಿಗಳ ತೀರ್ಪುಗಾರರಾಜಿ ಆಟೋಮೊಬೈಲ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಅನುಭವಿ ಪತ್ರಕರ್ತರಾಗಿದ್ದು, ಅವರೆಲ್ಲೂ ಅರ್ಹ ಹಾಗೂ ಉತ್ತಮ ವಾಹನವನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.
ತೀರ್ಪುಗಾರರಾಗಿ ಡ್ರೈವ್ ಸ್ಪಾರ್ಕ್ ಸಂಪಾದಕ ಜೋಬೋ ಕುರುವಿಲ್ಲ, ಮೋಟೋರಾಯ್ಡ್ಸ್ ಸಂಪಾದಕ ಅಮಿತ್ ಚಂಗನಿ, ಇಂಡಿಯಾನ್ ಟಾರ್ಕ್ ಸಂಪಾದಕ ಆಯುಷ್ ಜೈನ್, ಗಾಡಿವಾಡಿ ಸಂಪಾದಕ ಗೌರವ್ ಯಾದವ್, Gearfliq ಸಂಪಾದಕ ನರೇಂದ್ರ ಶರ್ಮಾ. ಕಾರ್ ಬ್ಲಾಗ್ ಇಂಡಿಯಾ ಸಂಪಾದಕ ರೋಹಿತ್ ಖುರಾನಾ, ಪೈಲಟ್ ಆನ್ ವ್ಹೀಲ್ಸ್ ಸಂಪಾದಕ ರೋಶನ್ ಜೋಸೆಫ್ ಆಯ್ಕೆಯಾಗಿದ್ದಾರೆ.

ಅನಿವಾರ್ಯ ಕಾರಣಗಳಿಂದ ಹಿರಿಯ ಪತ್ರಕರ್ತ ಬೈಜು ಎನ್ ನಾಯರ್ ಅವರು, ಈ ಬಾರಿ ತೀರ್ಪುಗಾರರಾಗಿ ಭಾಗವಹಿಸದಿರುವುದು ಬೇಸರದ ಸಂಗತಿಯಾಗಿದೆ. ಏಸರ್ ಫಾಸ್ಟರ್ ಪ್ರಶಸ್ತಿಯನ್ನು ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತದೆ. ಮೊದಲಿಗೆ ಪ್ರೊಡ್ಕಟ್ ಅವಾರ್ಡ್ ವಿಭಾಗದಲ್ಲಿ ಕಾರ್ ಆಫ್ ದಿ ಇಯರ್, ಬೈಕ್ ಆಫ್ ದಿ ಇಯರ್, ಸ್ಕೂಟರ್ ಆಫ್ ದಿ ಇಯರ್ ಮತ್ತು ಇವಿ ಆಫ್ ದಿ ಇಯರ್ 4-ವೀಲರ್ ಪ್ರಶಸ್ತಿಗಳು ಒಳಗೊಂಡಿವೆ.
ಇದರೊಂದಿಗೆ ಇವಿ ಆಫ್ ದಿ ಇಯರ್ 2-ವೀಲರ್, ಪ್ರೀಮಿಯಂ ಕಾರ್ ಆಫ್ ದಿ ಇಯರ್ ಮತ್ತು ಪ್ರೀಮಿಯಂ ಕಾರ್ ಆಫ್ ದಿ ಇಯರ್ ಒಳಗೊಂಡಿದೆ. ಎರಡನೇ ವಿಭಾಗದಲ್ಲಿ ವೈಯಕ್ತಿಕ ಮತ್ತು ತಂಡದ ಪ್ರಶಸ್ತಿಗಳು ಸೇರಿದ್ದು, ಮೋಟೋಸ್ಪೋರ್ಟ್ ಪರ್ಸನಾಲಿಟಿ ಆಫ್ ದಿ ಇಯರ್, ಆಟೋಮೋಟಿವ್ ಪರ್ಸನಾಲಿಟಿ ಆಫ್ ದಿ ಇಯರ್, ಕಾರ್ಪ್ ಕಾಮ್ ಟೀಮ್ ಆಫ್ ದಿ ಇಯರ್ ಮತ್ತು PR ಟೀಮ್ ಆಫ್ ದಿ ಇಯರ್ ಪ್ರಶಸ್ತಿ ಒಳಗೊಂಡಿದೆ.

ಮೂರನೇ ವಿಭಾಗವು ಟೆಕ್ ಅವಾರ್ಡ್ ಒಳಗೊಂಡಿದ್ದು, ಇದರಲ್ಲಿ Automotive Tech of the Year ಪ್ರಶಸ್ತಿ ಸೇರಿದೆ. ಇನ್ನು, Ad ಕ್ಯಾಂಪನ್ ಅವಾರ್ಡ್ ವಿಭಾಗದಲ್ಲಿ Automotive Ad Campaign of the Year ಪ್ರಶಸ್ತಿ ಒಳಗೊಂಡಿದೆ. ಆಟೋಮೊಬೈಲ್ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವವರೂ ಹೆಚ್ಚಿನ ನಿರೀಕ್ಷೆಗಳೊಂದಿಗೆ ಈ ಪ್ರಶಸ್ತಿಗೆ ಸಮಾರಂಭವನ್ನು ಎದುರುನೋಡುತ್ತಿದ್ದಾರೆ.


Click it and Unblock the Notifications