Acer FASTER Awards 2023: ಇಂದು ವಾಹನ ಪ್ರೇಮಿಗಳು ಕಾಯುತ್ತಿರುವ ಫಾಸ್ಟರ್ ಪ್ರಶಸ್ತಿ ಪ್ರಕಟ
ಭಾರತದ ವಾಹನ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿರುವ 'ಫಾಸ್ಟರ್ ಅವಾರ್ಡ್' ಎರಡನೇ ಆವೃತ್ತಿಯ ವಿಜೇತರನ್ನು ಇಂದು (ಮೇ 3) ರಾತ್ರಿ ಗುರುಗ್ರಾಮ್‌ನಲ್ಲಿ ಪ್ರಕಟಿಸಲಾಗುತ್ತದೆ. ನವಿ ಮುಂಬೈನಲ್ಲಿ ನಡೆದ ತೀರ್ಪುಗಾರರ ಸುತ್ತಿನ ಫಲಿತಾಂಶಗಳ ಆಧಾರದ ಮೇಲೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 'ಫಾಸ್ಟರ್ ಅವಾರ್ಡ್ 2023' ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲಿದೆ.
ಫಾಸ್ಟರ್ (FASTER) ಪ್ರಮುಖ ಆಟೋಮೋಟಿವ್ ವೆಬ್‌ಸೈಟ್‌ಗಳ ಸಂಘವಾಗಿದ್ದು, ಇದರ ವಿಸ್ತೃತ ರೂಪ 'ಫೆಡರೇಶನ್ ಆಟೋ ಸ್ಕ್ರಿಬ್ಸ್ ಆಫ್ ದಿ ರಿಯಾಲಂ' (Federation of Auto Scribes of the Electronic Realm) ಎಂದು. ಈ ವರ್ಷದ ಪ್ರಶಸ್ತಿಯಲ್ಲಿ 2022ರಲ್ಲಿ ಪರಿಚಯಿಸಲಾದ ಕಾರು ಮತ್ತು ಬೈಕ್ ಗಳಲ್ಲಿ ಉತ್ತಮವಾದವುಗಳನ್ನು ಆಯ್ಕೆ ಮಾಡಿ ಪ್ರಶಸ್ತಿಗಳನ್ನು ನೀಡಲಾಗುವುದು. ಇದಕ್ಕಾಗಿ ಏಪ್ರಿಲ್ 12 ಮತ್ತು 13 ರಂದು ನವಿ ಮುಂಬೈನಲ್ಲಿ ಜ್ಯೂರಿ ರೌಂಡ್ ನಡೆಯಿತು.

ಏಸರ್ ಫಾಸ್ಟರ್ ಪ್ರಶಸ್ತಿಗಳ ತೀರ್ಪುಗಾರರಾಜಿ ಆಟೋಮೊಬೈಲ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಅನುಭವಿ ಪತ್ರಕರ್ತರಾಗಿದ್ದು, ಅವರೆಲ್ಲೂ ಅರ್ಹ ಹಾಗೂ ಉತ್ತಮ ವಾಹನವನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಈ ತೀರ್ಪುಗಾರರ ಹೆಸರು:
1. ಅಮಿತ್ ಚಂಗನಿ - ಸಂಪಾದಕ, ಮೋಟೋರಾಯ್ಡ್ಸ್
2. ಆಯುಷ್ ಜೈನ್ - ಸಂಪಾದಕ, ಭಾರತೀಯ ಟಾರ್ಕ್
3. ಗೌರವ್ ಯಾದವ್ - ಸಂಪಾದಕ, ಗಾಡಿವಾಡಿ
4. ಜೊಬೊ ಕುರುವಿಲ್ಲಾ - ಸಂಪಾದಕ, ಡ್ರೈವ್‌ಸ್ಪಾರ್ಕ್
5. ನರೇಂದ್ರ ಶರ್ಮಾ - ಸಂಪಾದಕ, Gearfliq
6. ರೋಹಿತ್ ಖುರಾನಾ - ಸಂಪಾದಕ, ಕಾರ್‌ಬ್ಲಾಗ್ ಇಂಡಿಯಾ
7. ರೋಶನ್ ಜೋಸೆಫ್ - ಸಂಪಾದಕ, ಪೈಲಟ್ ಆನ್ ವೀಲ್ಸ್
ನವಿ ಮುಂಬೈನ ಖಾರ್ಘರ್‌ನಲ್ಲಿ ಏಪ್ರಿಲ್ 12 ಮತ್ತು 13 ರಂದು ನಡೆದ ಜ್ಯೂರಿ ಸುತ್ತಿನಲ್ಲಿ ಅಂತಿಮ ತೀರ್ಪುಗಾರರ ಸದಸ್ಯ, ಸ್ಮಾರ್ಟ್ ಡ್ರೈವ್‌ನ ಸಂಪಾದಕ ಬೈಜು ಎಂ. ನಾಯರ್ ಭಾಗವಹಿಸಲು ಸಾಧ್ಯವಾಗಲಿಲ್ಲ. ಪ್ರಮುಖ PC ಮತ್ತು ಲ್ಯಾಪ್‌ಟಾಪ್ ತಯಾರಕರಲ್ಲಿ ಒಂದಾದ ಏಸರ್ (Acer), 2023ರ FASTER ಅವಾರ್ಡ್ಸ್ ಟೈಟಲ್ ಪ್ರಾಯೋಜಕರಾಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯ ಸಹ ಪ್ರಾಯೋಜಕರಾಗಿ GoPro ಮತ್ತು WD40 ಕೈಜೋಡಿಸಿವೆ.

ಆಟೋಮೋಟಿವ್ ಡೇಟಾ ಪರೀಕ್ಷೆಯಲ್ಲಿ ದೇಶದ ಪ್ರಮುಖ ತಜ್ಞರಲ್ಲೊಬ್ಬರಾದ ಝೆನ್ ಮೈಕ್ರೋಸಿಸ್ಟಮ್ಸ್, 'ಏಸರ್ ಫಾಸ್ಟರ್ ಅವಾರ್ಡ್ಸ್' 2023ರಲ್ಲಿ ಡೇಟಾ ಮತ್ತು ಟೆಸ್ಟಿಂಗ್ ಪಾಲುದಾರರಾಗಿ ಸೇರ್ಪಡೆಯಾಗಿದ್ದಾರೆ. 'FASTER' ಭಾರತೀಯ ವಾಹನೋದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡುತ್ತದೆ. ಇದರ ಮೊದಲ ಆವೃತ್ತಿ ಸಮಾರಂಭವನ್ನು ಫೆಬ್ರವರಿ 2022ರಲ್ಲಿ ಮುಂಬೈನಲ್ಲಿ ನಡೆಸಲಾಗಿತ್ತು.
ಈ ವರ್ಷ, 'ಫಾಸ್ಟರ್ ಅವಾರ್ಡ್' ಕಾರ್ಯಕ್ರಮ ಏಪ್ರಿಲ್ 12 ಮತ್ತು 13ರಂದು ನವಿ ಮುಂಬೈನಲ್ಲಿ ಖಾರ್ಘರ್‌ನಲ್ಲಿರುವ ಪಾರ್ಕ್ ನಡೆಯಿತು. ಪ್ರಶಸ್ತಿಗೆ ಆಯ್ಕೆ ಸುತ್ತಿಗೆ ಸ್ಪರ್ಧಿಸುವ ಎಲ್ಲಾ ಬೈಕ್ ಹಾಗೂ ಕಾರುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರತಿಷ್ಠಿತ ವಾಹನ ತಯಾರಕರಿಂದ ಪ್ರತಿಯೊಂದು ಹೊಸ ಜನರೇಷನ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಪ್ರಮುಖವಾಗಿ 2022ರ ಆರ್ಥಿಕ ವರ್ಷದಲ್ಲಿ ಬಿಡುಗಡೆಗೊಳಿಸಲಾಗಿರುವ ಮಾದರಿಗಳು ಪ್ರಶಸ್ತಿಗೆ ಅರ್ಹತೆ ಪಡೆಯಲಿದ್ದು, ಆಯ್ಕೆ ಪ್ರಕ್ರಿಯೆ ಬಹಳ ಕಠಿಣ ಹಾಗೂ ನ್ಯಾಯೋಜಿತವಾಗಿ ಇರುತ್ತದೆ.

ಏಸರ್ ಫಾಸ್ಟರ್ ಅವಾರ್ಡ್ಸ್ 2023 ಅನ್ನು ಒಟ್ಟು 13 ವಿಭಿನ್ನ ಪ್ರಶಸ್ತಿಗಳನ್ನು ಒಳಗೊಂಡಿರುವ 4 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಮೊದಲಿಗೆ ಪ್ರೊಡ್ಕಟ್ ಅವಾರ್ಡ್ ವಿಭಾಗದಲ್ಲಿ ಕಾರ್ ಆಫ್ ದಿ ಇಯರ್, ಬೈಕ್ ಆಫ್ ದಿ ಇಯರ್, ಸ್ಕೂಟರ್ ಆಫ್ ದಿ ಇಯರ್ ಮತ್ತು ಇವಿ ಆಫ್ ದಿ ಇಯರ್ 4-ವೀಲರ್ ಪ್ರಶಸ್ತಿಗಳು ಒಳಗೊಂಡಿವೆ.
ಇದರೊಂದಿಗೆ ಇವಿ ಆಫ್ ದಿ ಇಯರ್ 2-ವೀಲರ್, ಪ್ರೀಮಿಯಂ ಕಾರ್ ಆಫ್ ದಿ ಇಯರ್ ಮತ್ತು ಪ್ರೀಮಿಯಂ ಕಾರ್ ಆಫ್ ದಿ ಇಯರ್ ಒಳಗೊಂಡಿದೆ. ಇನ್ನು ಎರಡನೇ ವಿಭಾಗದಲ್ಲಿ ವೈಯಕ್ತಿಕ ಮತ್ತು ತಂಡದ ಪ್ರಶಸ್ತಿಗಳು ಸೇರಿದ್ದು, ಮೋಟೋಸ್ಪೋರ್ಟ್ ಪರ್ಸನಾಲಿಟಿ ಆಫ್ ದಿ ಇಯರ್, ಆಟೋಮೋಟಿವ್ ಪರ್ಸನಾಲಿಟಿ ಆಫ್ ದಿ ಇಯರ್, ಕಾರ್ಪ್ ಕಾಮ್ ಟೀಮ್ ಆಫ್ ದಿ ಇಯರ್ ಮತ್ತು PR ಟೀಮ್ ಆಫ್ ದಿ ಇಯರ್ ಪ್ರಶಸ್ತಿ ಒಳಗೊಂಡಿದೆ.
ಇನ್ನು ಮೂರನೇ ವಿಭಾಗವು ಟೆಕ್ ಅವಾರ್ಡ್ ಒಳಗೊಂಡಿದ್ದು, ಇದರಲ್ಲಿ Automotive Tech of the Year ಪ್ರಶಸ್ತಿ ಸೇರಿದೆ. ಇನ್ನು ನಾಲ್ಕನೇ ವಿಭಾಗವು Ad ಕ್ಯಾಂಪನ್ ಅವಾರ್ಡ್ ವಿಭಾಗದಲ್ಲಿ Automotive Ad Campaign of the Year ಪ್ರಶಸ್ತಿ ಒಳಗೊಂಡಿದೆ. ಆಟೋಮೊಬೈಲ್ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವವರೂ ಹೆಚ್ಚಿನ ನಿರೀಕ್ಷೆಗಳೊಂದಿಗೆ ಈ ಪ್ರಶಸ್ತಿಗೆ ಸಮಾರಂಭವನ್ನು ಎದುರುನೋಡುತ್ತಿದ್ದಾರೆ.


Click it and Unblock the Notifications