Actor Mohanlal ಮನೆ ಸೇರಿದ ಅಂಬಾನಿಯಾವರ ವಿಂಟೇಜ್ ಕ್ಯಾಡಿಲಾಕ್ ಐಷಾರಾಮಿ ಸೆಡಾನ್
ಮಲಯಾಳಂ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾದ ಮೋಹನ್ ಲಾಲ್ ಅವರು ವಿಂಟೇಜ್ ಕ್ಯಾಡಿಲಾಕ್ ಕಾರನ್ನು ಖರೀದಿಸಿ ವೈರಲ್ ಆಗಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ, ಆ ಕಾರು ಸದ್ಯ ಎಲ್ಲಿದೆ, ನಿಖರವಾಗಿ ಖರೀದಿಸಿದ್ದು ಯಾರು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಮೋಹನ್ ಲಾಲ್ ದುಬಾರಿ ಕಾರುಗಳು ಮತ್ತು SUV ಗಳಲ್ಲಿ ಉತ್ತಮ ಅಭಿರುಚಿಯನ್ನು ಹೊಂದಿದ್ದಾರೆ. ಮೋಹನ್ ಲಾಲ್ ಅವರಿಗೆ ಕ್ಲಾಸಿಕ್ ಕಾರುಗಳೆಂದರೆ ಬಹಳ ಇಷ್ಟ. ಈಗಲೂ ತಮ್ಮ ಮೊದಲ ಕಾರಾದ ಹಿಂದೂಸ್ತಾನ್ ಅಂಬಾಸಿಡರ್ ಮಾರ್ಕ್ 4 ಅನ್ನು ಹೊಂದಿದ್ದಾರೆ. ಅವರ ಸಂಗ್ರಹದಲ್ಲಿರುವ ಮತ್ತೊಂದು ಕ್ಲಾಸಿಕ್ ಎಂದರೆ ವಿಂಟೇಜ್ ಕಾರಾದ ಕ್ಯಾಡಿಲಾಕ್. ಈ ಕಾರಿನ ಹಿಂದೆ ಕುತೂಹಲಕಾರಿ ಕಥೆಯಿದೆ.

ಈ ವಿಂಟೇಜ್ ಕ್ಯಾಡಿಲಾಕ್ ಒಂದು ಕಾಲದಲ್ಲಿ ರಿಲಯನ್ಸ್ ಗ್ರೂಪ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಒಡೆತನದಲ್ಲಿತ್ತು ಎಂದು ತಿಳಿದು ಬಂದಿದೆ. ಈ ಕುರಿತ ಪೋಸ್ಟ್ ಅನ್ನು eisk007 Instagram ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಮೋಹನ್‌ಲಾಲ್ ಅವರ ಹೊಚ್ಚ ಹೊಸ ರೇಂಜ್ ರೋವರ್ ಮುಂದೆ ನಿಲ್ಲಿಸಲಾದ ಅಮೇರಿಕನ್ ಐಷಾರಾಮಿ ಕಾರನ್ನು ನೋಡಬಹುದು.
ಖರೀದಿಸಿದ್ದು ಮೋಹನ್ ಲಾಲ್ ಅವರ ಮಾವ:
ಮೋಹನ್ ಲಾಲ್ ಅವರ ಮಾವ ಕೆ.ಬಾಲಾಜಿ ಮಲಯಾಳಂ ಇಂಡಸ್ಟ್ರಿಯ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ಕೆ.ಬಾಲಾಜಿ ಅವರು ಕ್ಯಾಡಿಲಾಕ್ ಕಾರನ್ನು ಅಂಬಾನಿ ಅವರಿಂದ ಖರೀದಿಸಿರುವುದಾಗಿ eisk007 Instagram ಪುಟದಲ್ಲಿ ತಿಳಿಸಲಾಗಿದೆ. ಅವರು ನಿರ್ಮಿಸಿದ ಹಲವು ಸಿನಿಮಾಗಳಲ್ಲಿ ಇದೇ ಕಾರನ್ನು ಬಳಸಿದ್ದಾರೆ ಎಂದು ತಿಳದುಬಂದಿದೆ.

ಚಿತ್ರದಲ್ಲಿ ಕಂಡುಬರುವ ಎಡಗೈ ಡ್ರೈವ್ ಕ್ಯಾಡಿಲಾಕ್ ಸೆಡಾನ್ ಕಾರು ವಾಸ್ತವವಾಗಿ 1958ರ ಮಾದರಿಯಾಗಿದೆ ಎಂದು ಹೇಳಲಾಗಿದೆ. ಹಳೆಯ ಈ ಸೆಡಾನ್ ಅನ್ನು ಕೆ.ಬಾಲಾಜಿ ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ. ಕೆಲ ವರ್ಷಗಳ ಹಿಂದೆಯಷ್ಟೇ ಚೆನ್ನೈನಲ್ಲಿದ್ದ ಈ ಐಷಾರಾಮಿ ಸೆಡಾನ್ ಅನ್ನು ಮಾಡಿಫೈಗೊಳಿಸಲು ಮೋಹನ್ ಲಾಲ್ ಅವರು ಕೊಚ್ಚಿಗೆ ತಂದು ಮರುಸ್ಥಾಪನೆ ಕಾರ್ಯವನ್ನು ಪ್ರಾರಂಭಿಸಿದ್ದರು.
ಈ ಸೆಡಾನ್‌ನ ಮೊದಲು ಡೀಪ್ ರೆಡ್ ಅಥವಾ ಮೆರೂನ್ ಬಣ್ಣದಲ್ಲಿತ್ತು. ಮಾಡಿಫೈ ಭಾಗವಾಗಿ ಈಗ ಕಾರಿಗೆ ಪುನಃ ಬಣ್ಣ ಬಳಿಯಲಾಗಿದೆ. ಕೊಚ್ಚಿಯಲ್ಲಿರುವ ಫ್ಲೆಮಿಂಗೊ ಗ್ಯಾರೇಜ್ ಅವರು ಕಾರಿಗೆ ಹೊಸ ಲುಕ್ ನೀಡಿದ್ದಾರೆ. ಕೆ.ಬಾಲಾಜಿ ಅವರು ಈ ಐಷಾರಾಮಿ ಸೆಡಾನ್ ಅನ್ನು ಅಂಬಾನಿಯಿಂದ ಯಾವಾಗ ಖರೀದಿಸಿದ್ದರು ಎಂಬುದನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಿಲ್ಲ, ಆದರೆ ಸೆಡಾನ್ MAS 2100 ನ ನೋಂದಣಿ ಸಂಖ್ಯೆಯನ್ನು ಹೊಂದಿದೆ.
ಕಾರಿನ ಕುರಿತು ಮುಖ್ಯಾಂಶಗಳನ್ನು ಹೇಳುವುದಾದರೆ, ಫೋಟೋದಲ್ಲಿ ಕಾಣುವ ಮಾದರಿಯು ಕ್ಯಾಡಿಲಾಕ್ ಫ್ಲೀಟ್‌ವುಡ್ ಬ್ರೋಮ್ 4-ಡೋರ್ ಸೆಡಾನ್‌ನಂತೆ ಕಾಣುತ್ತದೆ. ಇದು ಸೆಡಾನ್ ಕೂಪೆ ಮತ್ತು ಸೆಡಾನ್ ಎರಡರಲ್ಲೂ ಲಭ್ಯವಿತ್ತು. ಕಾರು ವಿವಿಧ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿತ್ತು. ಕಾರಿನ ಎಂಜಿನ್ ಕುರಿತ ನಿಖರ ಮಾಹಿತಿಯಿಲ್ಲ. ಒಟ್ಟಾರೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ ಎಂದು ಹೇಳಲಾಗಿದೆ.
ಮೊದಲೇ ಹೇಳಿದಂತೆ ಮೋಹನ್ ಲಾಲ್ ಅವರು ಕ್ಲಾಸಿಕ್ ಕಾರುಗಳ ಪ್ರೇಮಿ, ಅವರು 1986 ರ ಹಿಂದೂಸ್ತಾನ್ ಅಂಬಾಸಿಡರ್ Mk4 ಅನ್ನು ಸಹ ಹೊಂದಿದ್ದಾರೆ. ಹಾಗೆಯೇ ಇವರು ಟೊಯೋಟಾ ಅಭಿಮಾನಿಯಾಗಿದ್ದು, ಲ್ಯಾಂಡ್ ಕ್ರೂಸರ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾ ಸೇರಿದಂತೆ ಹಲವು ಮಾದರಿಗಳನ್ನು ಹೊಂದಿದ್ದಾರೆ. ಹಾಗೆಯೇ ಟೊಯೊಟಾ ವೆಲ್‌ಫೈರ್ ಐಷಾರಾಮಿ MPV ಅನ್ನು ಖರೀದಿಸಿದ ಕೇರಳದ ಮೊದಲ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.


Click it and Unblock the Notifications








