ಅಧಿಕ ಮೈಲೇಜ್, ಅತ್ಯಾಧುನಿಕ ಫೀಚರ್ಸ್, ಕೈಗೆಟುಕುವ ಬೆಲೆಗೆ ಗರಿಷ್ಟ ಮೌಲ್ಯದ 7-ಸೀಟರ್ ಕಾರುಗಳು!

ಅತ್ಯಾಧುನಿಕ ವೈಶಿಷ್ಟ್ಯಗಳು, ಹೊಸ ವಿನ್ಯಾಸ ಮತ್ತು ಸುರಕ್ಷತೆಯ ಜೊತೆಗೆ ಹಣಕ್ಕೆ ಗರಿಷ್ಠ ಮೌಲ್ಯವಿರುವ ಕಾರನ್ನು ಭಾರತದಲ್ಲಿ ಗ್ರಾಹಕರು ಹೆಚ್ಚಾಗಿ ಹುಡುಕುತ್ತಾರೆ. ಅಂಥವರಿಗಾಗಿ ಇಂದು ಮಾರುಕಟ್ಟೆಯಲ್ಲಿ ಹಣಕ್ಕೆ ಹೆಚ್ಚು ಮೌಲ್ಯವಿರುವ ಐದು ಮೂರು-ಸಾಲಿನ (7-Seater) ವಾಹನಗಳನ್ನು ಪಟ್ಟಿ ಮಾಡಿದ್ದು, ಈ ಕಾರುಗಳು ಮೇಲೆ ತಿಳಿಸಿದ ಅಂಶಗಳಲ್ಲಿ ಯಾವುದರಲ್ಲೂ ರಾಜಿಯಾಗುವುದಿಲ್ಲ.

ಕಿಯಾ ಕಾರೆನ್ಸ್: ಸಾಕಷ್ಟು ಕ್ಯಾಬಿನ್ ನೀಡುವುದರ ಹೊರತಾಗಿ kia carens ಉತ್ತಮ ಸುರಕ್ಷತೆಯನ್ನು ಕೂಡ ಒದಗಿಸುತ್ತದೆ. ಆರು ಏರ್‌ಬ್ಯಾಗ್‌ಗಳು, ಡೌನ್‌ಹಿಲ್ ಬ್ರೇಕ್ ಕಂಟ್ರೋಲ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಶರ್ ಮಾನಿಟರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಬಿಎಸ್ ಮತ್ತು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಉತ್ತಮ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ.

affordable-7-seater-cars-maruti-ertiga-kia-carens-renault-triber

ಕಾರೆನ್ಸ್ ಬಹು ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುವ ಏಕೈಕ ಕೈಗೆಟುಕುವ MPV ಆಗಿದೆ. ಇದು 113bhp ಪವರ್ 1.5-ಲೀಟರ್ NA ಮತ್ತು 1.5-ಲೀಟರ್ ಟರ್ಬೊ ಜೊತೆಗೆ 158bhp ಪವರ್ ಮತ್ತು 253Nm ಟಾರ್ಕ್ ಹೊರ ಹಾಕುವ ಎರಡು ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯವಿದೆ.

ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದ್ದರೆ, ಟರ್ಬೊ 6-ಸ್ಪೀಡ್ iMT ಕ್ಲಚ್‌ಲೆಸ್ ಟ್ರಾನ್ಸ್‌ಮಿಷನ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್‌ನೊಂದಿಗೆ ಬರುತ್ತದೆ. ಕಾರೆನ್ಸ್ 113bhp ಪವರ್ ಮತ್ತು 250Nm ಟಾರ್ಕ್‌ನೊಂದಿಗೆ 1.5-ಲೀಟರ್ ಡೀಸೆಲ್‌ನೊಂದಿಗೂ ಬರುತ್ತದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಕ್ಲಚ್‌ಲೆಸ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ಗೆ ಸಂಯೋಜಿಸಲ್ಪಟ್ಟಿದೆ.

affordable-7-seater-cars-maruti-ertiga-kia-carens-renault-triber

ರೆನಾಲ್ಟ್ ಟ್ರೈಬರ್: renault triber ಮಾರುಕಟ್ಟೆಯಲ್ಲಿ ಹೆಚ್ಚು ಕೈಗೆಟುಕುವ MPV ಮಾತ್ರವಲ್ಲ, ಇದು ಭಾರತದಲ್ಲಿ ರೆನಾಲ್ಟ್‌ನ ಹೆಚ್ಚು ಮಾರಾಟವಾಗುವ ವಾಹನವಾಗಿದೆ. ಟ್ರೈಬರ್ 96Nm ಟಾರ್ಕ್ ಜೊತೆಗೆ 71bhp ಪವರ್ 1-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಗೆ ಜೋಡಿಸಲಾಗಿದೆ.

ಟ್ರೈಬರ್ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ 4 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿರುವುದರಿಂದ ಉತ್ತಮವಾಗಿ ನಿರ್ಮಿಸಲಾದ ಸುರಕ್ಷಿತ ವಾಹನವಾಗಿ ಗುರ್ತಿಸಿಕೊಂಡಿದೆ. ರೆನಾಲ್ಟ್ MPV 8 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್, ಕೂಲ್ಡ್ ಗ್ಲೋವ್ ಬಾಕ್ಸ್ ಮತ್ತು ಸೆಂಟರ್ ಕನ್ಸೋಲ್‌ನೊಂದಿಗೆ ಬರುತ್ತದೆ.

affordable-7-seater-cars-maruti-ertiga-kia-carens-renault-triber

ಮಾರುತಿ ಸುಜುಕಿ ಎರ್ಟಿಗಾ/ ಟೊಯೋಟಾ ರೂಮಿಯಾನ್: ಮಾರುತಿ ಎರ್ಟಿಗಾ (maruti ertiga) ಮೂರು-ಸಾಲಿನ ವಾಹನ ಮತ್ತು ಟೊಯೋಟಾ ರೂಮಿಯಾನ್ ಎರಡೂ ಒಂದೇ ಪ್ಲಾಟ್‌ನಿಂದ ಹುಟ್ಟಿಕೊಂಡಿವೆ. 1.5-ಲೀಟರ್ ಪೆಟ್ರೋಲ್ ಪವರ್‌ಟ್ರೇನ್‌ನೊಂದಿಗೆ 102bhp ಪವರ್ ಮತ್ತು 136.8Nm ಟಾರ್ಕ್ ಉತ್ಪಾದನೆಯೊಂದಿಗೆ ಬರುತ್ತವೆ.

ಎರಡೂ MPVಗಳು ಎರಡು ಗೇರ್‌ಬಾಕ್ಸ್ ಆಯ್ಕೆಗಳನ್ನು ಪಡೆಯುತ್ತವೆ - 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಬರುತ್ತವೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್‌ನೊಂದಿಗೆ ಎಬಿಎಸ್, ಎರಡನೇ ಸಾಲಿನಲ್ಲಿ ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿವೆ.

affordable-7-seater-cars-maruti-ertiga-kia-carens-renault-triber

ಮಹೀಂದ್ರಾ ಬೊಲೆರೊ ನಿಯೋ: ಬೊಲೆರೊ ನಿಯೋ ನಮ್ಮ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಡೀಸೆಲ್ ವಾಹನವಾಗಿದೆ. ಇದು ಒರಟಾದ SUV ಆಗಿದ್ದು, ಬಾಡಿ-ಆನ್-ಫ್ರೇಮ್ ನಿರ್ಮಾಣವನ್ನು ಆಧರಿಸಿದೆ. ಒಂದೇ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ. 1.5-ಲೀಟರ್ ಡೀಸೆಲ್ ಎಂಜಿನ್ 99bhp ಪವರ್ ಮತ್ತು 260Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಸಂಯೋಜಿಸಲಾಗಿದೆ.

ಸಿಟ್ರನ್ C3 ಏರ್‌ಕ್ರಾಸ್: ಸಿಟ್ರನ್ ಪ್ರಸ್ತುತ ಮಧ್ಯಮ ಗಾತ್ರದ SUV ಅನ್ನು ನೀಡುತ್ತಿರುವ ಏಕೈಕ ತಯಾರಕರಾಗಿದ್ದು ಇದು 5-ಸೀಟರ್ ಮತ್ತು 5+2 ಆಸನಗಳೆರಡರಲ್ಲೂ ಲಭ್ಯವಿದೆ. C3 ಏರ್‌ಕ್ರಾಸ್ ಒಂದೇ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 109bhp ಪವರ್ ಮತ್ತು 190Nm ಟಾರ್ಕ್ ಉತ್ಪಾದನೆಯನ್ನು ಹೊಂದಿದೆ.

ಸಿಟ್ರನ್ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡುತ್ತಿದೆ. ARAI ಪ್ರಕಾರ, ಇದು 18.5 kmpl ಅನ್ನು ನೀಡುತ್ತದೆ. ಇದು 10-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತದೆ, ಆದರೂ ಇದು ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಮ್ಯಾನುಯಲ್ ಎಸಿ, ಟ್ವಿನ್ ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರ್ ಅನ್ನು ಮಾತ್ರ ಒಳಗೊಂಡಿದೆ.

More from DriveSpark

Article Published On: Tuesday, December 5, 2023, 11:57 [IST]
English summary
Affordable 7 seater cars maruti ertiga kia carens renault triber
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+