Affordable Electric Cars: ತಿಂಗಳೊಳಗೆ ಸಿಗುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳು

ಭಾರತದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಕಾರುಗಳು (Electric Cars) ಜನಪ್ರಿಯವಾಗುತ್ತಿವೆ. ಬಹುತೇಕರು ಇವುಗಳ ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸಕ್ಕೆ ಮನಸೋಲುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಕೇವಲ ಒಂದರಿಂದ ಎರಡು ತಿಂಗಳಲ್ಲಿ ಸಿಗುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿಯೋಣ ಬನ್ನಿ.

ಮೊದಲಿಗೆ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿರುವ ಟಾಟಾ ಟಿಯೊಗೊ ಇವಿ ಬಗ್ಗೆ ಮಾತನಾಡೋಣ. ಇದು, ರೂ.8.69 ರಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಎರಡರಿಂದ ಮೂರು ವಾರಗಳಲ್ಲಿ ವಿತರಣೆಯಾಗಲಿದೆ. 19.2 kWh ಹಾಗೂ 24 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಸಿಗಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 250 km ರಿಂದ 315 km ರೇಂಜ್ ನೀಡುತ್ತದೆ.

Affordable Electric Cars: ತಿಂಗಳೊಳಗೆ ಸಿಗುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳು

ಈ ಕಾರು, ವಿವಿಧ ಚಾರ್ಜಿಂಗ್ ಆಯ್ಕೆಯಲ್ಲಿ ದೊರೆಯುತ್ತದೆ. ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಟಿಯೊಗೊ ಇವಿ ಬ್ಯಾಟರಿ ಪ್ಯಾಕ್ 10-80% ಚಾರ್ಜ್ ಆಗಲು 57 ನಿಮಿಷ ತೆಗೆದುಕೊಳ್ಳುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4 ಸ್ಪೀಕರ್ ಹರ್ಮನ್ ಸೌಂಡ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಭಾರತದಲ್ಲಿ ಭಾರೀ ಬದಲಾವಣೆ ತರಲು ಎಂಜಿ ಕಂಪನಿ 2 ಡೋರ್ 'ಕಾಮೆಟ್' ಇವಿಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದು ರೂಪಾಂತರಗಳಿಗೆ ಅನುಗುಣವಾಗಿ ರೂ.7.98 ಲಕ್ಷದಿಂದ ರೂ.9.98 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಾಮೆಟ್ ಇವಿ 17.3 KWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 230 km ರೇಂಜ್ ನೀಡುತ್ತದೆ.

Affordable Electric Cars: ತಿಂಗಳೊಳಗೆ ಸಿಗುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳು

ಇದರಲ್ಲಿ ಬಳಸಿರುವ ಮೋಟಾರ್, 41.4 hp ಪವರ್ ಮತ್ತು 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಬ್ಯಾಟರಿ ಪ್ಯಾಕ್, 7 ಗಂಟೆಯಲ್ಲಿ ಫುಲ್ ಚಾರ್ಜ್ ಆಗುತ್ತದೆ. ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, ಎಂಜಿ ಕಾಮೆಟ್ ಇವಿ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಾಗಿ ಡುಯೆಲ್ 10.25 ಇಂಚಿನ ಸ್ಕ್ರೀನ್, ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದೆ.

ಫ್ರೆಂಚ್ ವಾಹನ ತಯಾರಕ 'ಸಿಟ್ರಸ್' ಕಂಪನಿಯ ಎಲೆಕ್ಟ್ರಿಕ್ ಕಾರಾಗಿರುವ 'eC3' ಭಾರತದಲ್ಲಿ ಸಾಕಷ್ಟು ಖ್ಯಾತಿಗಳಿಸುತ್ತಿದೆ. ಈ ಕಾರು, ಸುಮಾರು ಎರಡು ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿದ್ದು, ಟಾಪ್ ಎಂಡ್ ರೂಪಾಂತರವನ್ನು ಆಗಲೇ ವಿತರಣೆ ಮಾಡಲಾಗುತ್ತದೆ. ಸಿಟ್ರಸ್ ಇಸಿ3, ರೂ.11.50 ಲಕ್ಷದಿಂದ 12.76 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಕಾರು, 29.2 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದರ ಮೋಟಾರ್ 57 PS ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜಿನಲ್ಲಿ 320 km ರೇಂಜ್ ನೀಡುತ್ತದೆ. ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಬ್ಯಾಟರಿ ಪ್ಯಾಕ್ 10 ರಿಂದ 80 ಚಾರ್ಜ್ ಆಗಲು 57 ನಿಮಿಷ ಬೇಕಾಗುತ್ತದೆ. 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು, ಟಾಟಾ ಟಿಯಾಗೊ ಇವಿ, ಎಂಜಿ ಕಾಮೆಟ್ ಇವಿ ಹಾಗೂ ಸಿಟ್ರಸ್ ಇಸಿ3 ಕಾರುಗಳು ಒಂದಕ್ಕಿಂತ ಒಂದು ಭರಪೂರ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಆಕರ್ಷಕವಾಗಿವೆ. ಇವುಗಳಲ್ಲಿ ನಿಮ್ಮ ಬಜೆಟ್ ಗೆ ಸರಿ ಹೊಂದುವ ನಿಮಿಷ್ಟದ ಎಲೆಕ್ಟ್ರಿಕ್ ಕಾರು ಯಾವುದೆಂದು ನೀವೇ ಆಯ್ಕೆ ಮಾಡಿಕೊಳ್ಳಿ. ಇತರೆ ಇಂಧನ ಚಾಲಿತ ಕಾರುಗಳಿಗೆ ಹೋಲಿಸಿದರೆ, ಇವು ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿವೆ.

Article Published On: Saturday, June 24, 2023, 13:19 [IST]
English summary
Affordable electric cars shortest waiting period india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+