ಮಹೀಂದ್ರಾ XUV700 ನಲ್ಲಿ ಮತ್ತೊಮ್ಮೆ ADAS ದುರ್ಬಳಕೆ... ವಾಹನ ಕೈಕೊಟ್ರೆ ಪಕ್ಕಾ ಪರಲೋಕ!

ಭಾರತ ಸೇರಿದಂತೆ ವಿಶ್ವದಾದ್ಯಂತ ADAS (ಅಡ್ವಾನ್ಸ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್) ತಂತ್ರಜ್ಞಾನ ಭಾರೀ ಜನಪ್ರಿಯತೆ ಪಡೆಯುತ್ತಿದೆ. ಬೇಡಿಕೆಗೆ ಅನುಗುಣವಾಗಿ ಕಾರು ತಯಾರಕರು ತಮ್ಮ ಹೆಚ್ಚಿನ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನು ನೀಡುತ್ತಿದ್ದಾರೆ. ಆದರೆ ಭಾರತದಲ್ಲಿ ಈ ವೈಶಿಷ್ಟ್ಯವನ್ನು ದುರ್ಬಳಕೆ ಮಾಡುತ್ತಿರುವವರೇ ಹೆಚ್ಚು. ಇದೀಗ ಭಾರತೀಯರಿಗೆ ಈ ವೈಶಿಷ್ಟ್ಯದ ಅವಸರವಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ವಿಡಿಯೋ ADAS ತಂತ್ರಜ್ಞಾನವನ್ನು ಹೇಗೆಲ್ಲಾ ದುರ್ಬಳಕೆ ಮಾಡಲಾಗುತ್ತಿದೆ ಎಂಬುದನ್ನು ತೋರಿಸಿದೆ. ಭಾರತದಲ್ಲಿ ಇತರ ಕಾರು ತಯಾರಕರಿಗೆ ಹೋಲಿಸಿದರೆ ADAS ತಂತ್ರಜ್ಞಾನವನ್ನು ಕೈಗೆಟುಕುವ ಬೆಲೆಗೆ ನೀಡುತ್ತಿರುವುದು ಮಹೀಂದ್ರಾ ಕಂಪನಿ, ತನ್ನ XUV700 ಎಸ್‌ಯುವಿ ನಲ್ಲಿ ಈ ಫೀಚರ್ ಅನ್ನು ಒದಗಿಸುತ್ತಿದೆ. ಅಂತೆಯೇ ಈ ಹಿಂದೆಯೂ XUV700 ನಲ್ಲಿ ADAS ತಂತ್ರಜ್ಞಾನವನ್ನು ದುರ್ಬಳಕೆ ಮಾಡಿದ ಸುಮಾರು ಉದಾಹರಣೆಗಳಿವೆ.

ಮಹೀಂದ್ರಾ XUV700 ನಲ್ಲಿ ಮತ್ತೊಮ್ಮೆ ADAS ದುರ್ಬಳಕೆ... ವಾಹನ ಕೈಕೊಟ್ರೆ ಪಕ್ಕಾ ಪರಲೋಕ!

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಕೆಲ ವಾರಗಳ ಹಿಂದೆ ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ವ್ಯಕ್ತಿಯು ಡ್ರೈವರ್ ಸೀಟ್ ಬಿಟ್ಟು ಪ್ಯಾಸಿಂಜರ್ ಸೀಟಿನಲ್ಲಿ ಹಿಂದಕ್ಕೆ ತಿರುಗಿ ಕುಳಿತು ಮೊಬೈಲ್ ನೊಡುತ್ತಿದ್ದಾನೆ. ಒಂದೆಡೆ ಕಾರು ಚಾಲನೆಯಲ್ಲಿದೆ, ಮತ್ತೊಂದೆಡೆ ಡ್ರೈವರ್ ಸೀಟಿನಲ್ಲಿ ಯಾರೂ ಇಲ್ಲ, ಇತ್ತ ಈತ ಕಾಲು ನೀಡಿಕೊಂಡು ಹಿಂದಕ್ಕೆ ತಿರುಗಿ ಕುಳಿತ್ತಿದ್ದಾನೆ. ಇಲ್ಲಿ ಇನ್ನೂ ವಿಚಿತ್ರವೆಂದರೆ ಹಿಂಬದಿ ಕುಳಿತಿರುವ ಪ್ರಯಾಣಿಕ ಇದನ್ನೆಲ್ಲಾ ವಿಡಿಯೋ ಮಾಡಿದ್ದಾನೆ.

ಈ ವಿಡಿಯೋದಲ್ಲಿ XUV700 ಮಾಲೀಕ ADAS ತಂತ್ರಜ್ಞಾನವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿರುವುದು ಸ್ಪಷ್ಟವಾಗಿದೆ. ಅವರು ತಮ್ಮ ಸುರಕ್ಷತೆಯನ್ನು ನೋಡಿಕೊಳ್ಳುವುದು ಬಿಡಿ, ಸುತ್ತಮುತ್ತಲಿನ ವಾಹನಗಳ ಸುರಕ್ಷತೆ ಬಗ್ಗೆಯೂ ಯೋಚಿಸಿಲ್ಲ. ಏಕೆಂದರೆ ADAS ತಂತ್ರಜ್ಞಾನ ಉತ್ತಮ ರಸ್ತೆಗಳು ಹಾಗೂ ರಸ್ತೆ ಮೇಲಿನ ಪಟ್ಟಿಗಳು, ರಸ್ತೆ ಚಿಹ್ನೆಗಳನ್ನು ಆಧರಿಸಿ ಚಲಿಸುತ್ತದೆ. ಒಂದು ವೇಳೆ ಪಟ್ಟಿಗಳು, ಚಿಹ್ನೆಗಳು ಇಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ. ಈ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ಟೆಸ್ಲಾ ಕೂಡ ಈ ಹಿಂದೆ ಹಲವು ಬಾರಿ ಅಪಘಾತಕ್ಕೀಡಾಗಿದೆ.

ಮಹೀಂದ್ರಾ XUV700 ನಲ್ಲಿ ಮತ್ತೊಮ್ಮೆ ADAS ದುರ್ಬಳಕೆ... ವಾಹನ ಕೈಕೊಟ್ರೆ ಪಕ್ಕಾ ಪರಲೋಕ!

ADAS ತಂತ್ರಜ್ಞಾನ ದುರ್ಬಳಕೆ ಇದೇ ಮೊದಲಲ್ಲ, ಈ ಹಿಂದೆ ಇದಕ್ಕಿಂತ ಕೆಟ್ಟದಾಗಿ ಈ ತಂತ್ರಜ್ಞಾನವನ್ನು ದುರ್ಬಳಕೆ ಮಾಡಲಾಗಿದೆ. ಚಾಲಕ ಕಾರು ಚಾಲನೆಯಲ್ಲಿದ್ದಾಗ ಡ್ರೈವರ್ ಸೀಟನ್ನು ಬಿಟ್ಟು ಪ್ರಯಾಣಿಕ ಸೀಟಿನಲ್ಲಿ ಕುಳಿತು ಇಸ್ಪೀಟ್ ಆಡಿದ್ದ. ಈ ವೇಳೆ XUV700 ಏಕ-ಪಥದ ರಸ್ತೆಯಲ್ಲಿ ಸುಮಾರು 60 ಕಿ.ಮೀ ವೇಗದಲ್ಲಿ ಪ್ರಯಾಣಿಸುತ್ತಿತ್ತು. ಅಡೆತಡೆಗಳನ್ನು ಗ್ರಹಿಸಿ ವಾಹನವು ತನ್ನನ್ನು ತಾನೇ ಸಂಪೂರ್ಣವಾಗಿ ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಡ್ರೈವರ್ ಸೀಟಿನಲ್ಲಿ ಚಾಲಕನಿಲ್ಲದೇ ಈ ವೈಶಿಷ್ಟ್ಯವನ್ನು ಬಳಸಬಹುದು ಎಂದು ಯಾವುದೇ ಕಂಪನಿ ಹೇಳಿಲ್ಲ.

XUV700 ADAS ವೈಶಿಷ್ಟ್ಯ:
XUV 700 SUV ಮಹೀಂದ್ರಾ ಮಾರಾಟ ಮಾಡುವ ಅತ್ಯಂತ ಐಷಾರಾಮಿ ಕಾರು ಮಾದರಿಗಳಲ್ಲಿ ಒಂದಾಗಿದೆ. ಈ ಕಾರು ಪ್ರಯಾಣಿಕರಿಗೆ ಸುರಕ್ಷತೆಯನ್ನು ಒದಗಿಸಲು ವ್ಯಾಪಕ ಶ್ರೇಣಿಯ ಸುರಕ್ಷತಾ ಸಾಧನಗಳು ಮತ್ತು ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ ಕಂಪನಿ ಒದಗಿಸುವ ಪ್ರಮುಖ ವೈಶಿಷ್ಟ್ಯಗಳಲ್ಲಿ ಅಡ್ವಾನ್ಸ್ಡ್ ಲೆವೆಲ್-2 ADAS ಕೂಡ ಒಂದಾಗಿದೆ. ಮಹೀಂದ್ರಾ XUV 700 ಲೆವೆಲ್ 2 ಸ್ವಾಯತ್ತ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಕಾರನ್ನು ಲೇನ್‌ನಲ್ಲಿ ಇರಿಸಲು ಸಹಾಯ ಮಾಡುತ್ತದೆ.

ಜೊತೆಗೆ ಮುಂಭಾಗದಲ್ಲಿರುವ ವಾಹನವನ್ನು ಪತ್ತೆ ಮಾಡಿ ವೇಗವನ್ನು ಕಡಿಮೆ ಮಾಡಲು ಸ್ವಯಂಚಾಲಿತವಾಗಿ ಬ್ರೇಕ್ ಅನ್ನು ಅನ್ವಯಿಸುತ್ತದೆ. ಮಹೀಂದ್ರಾ XUV 700 ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ವಾಹನವು ಚಲಿಸುತ್ತಿರುವಾಗ ಚಾಲಕನು ಸ್ಟೀರಿಂಗ್ ಚಕ್ರದಿಂದ ಕೈಗಳನ್ನು ತೆಗೆದರೆ, ತಕ್ಷಣವೇ ಎಚ್ಚರಿಸುತ್ತದೆ. ಅಲ್ಲದೆ ಸ್ಟೀರಿಂಗ್ ವೀಲ್ ಕಂಪಿಸುವ ಮೂಲಕ ADAS ಸಿಸ್ಟಮ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ಬಳಿಕ ಕಾರು ರಸ್ತೆಯ ಮೇಲಿನ ಬಿಳಿ ರೇಖೆಯನ್ನು (ಲೇನ್) ಅನುಸರಿಸುತ್ತದೆ.

ಒಂದು ವೇಳೆ ರಸ್ತೆಯಲ್ಲಿ ಸರಿಯಾದ ಬಿಳಿ ಗೆರೆಗಳು ಇಲ್ಲದಿದ್ದರೇ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಇದಕ್ಕಾಗಿಯೇ ಕಾರಿನ ಸ್ವಾಯತ್ತ ವೈಶಿಷ್ಟ್ಯವನ್ನು ಅನಗತ್ಯವಾಗಿ ಪರೀಕ್ಷಿಸಬೇಡಿ ಎಂದು ಕಂಪನಿಗಳು ಸಹ ಹೇಳುತ್ತವೆ. ನಮ್ಮ ರಕ್ಷಣೆಗಾಗಿ ADAS ಇದೆಯೆಂಬ ಧೈರ್ಯದಿಂದ ಇಂತಹ ಫೀಚರ್ ಬಳಸಿಕೊಂಡು ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುತ್ತಿರುವ ಕ್ರಮಕ್ಕೆ ನಾನಾ ಕಡೆಯಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಕೆಲವು ಅನಪೇಕ್ಷಿತ ಚಟುವಟಿಕೆಗಳಿಗೆ ತಾಂತ್ರಿಕ ಸೌಲಭ್ಯಗಳನ್ನು ಬಳಸುವುದು ಉದ್ಧಟತನವೆಂದು ಕಮೆಂಟ್ ಮಾಡುತ್ತಿದ್ದಾರೆ.

Article Published On: Friday, March 17, 2023, 9:39 [IST]
English summary
Again adas feature misuse in mahindra xuv 700
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+