10 ಕೋಟಿ ರೂ. ಕಾರು ಇವರದ್ದೇ?... ಹಿಂಬಾಲಿಸಿ ಕ್ಯಾಮರಾಗಳಲ್ಲಿ ಸೆರೆ ಹಿಡಿದ ಯುವಕರು
ದೇಶದಲ್ಲಿ ಅಂಬಾನಿ ಕುಟುಂಬ ಯಾರಿಗೆ ಗೊತ್ತಿಲ್ಲ ಹೇಳಿ, ಪ್ರತಿ ಬಾರಿ ಶ್ರೀಮಂತಿಕೆಯನ್ನು ಉದಾಹರಣೆಯಾಗಿ ಕೊಟ್ಟಾಗ ಅವರ ಹೆಸರನ್ನೇ ಹೆಚ್ಚಾಗಿ ಕೇಳುತ್ತೇವೆ. ವಿಶ್ವದ ಟಾಪ್ ಶ್ರೀಮಂತರಲ್ಲಿ ಅವರೂ ಒಬ್ಬರು ಹಾಗೂ ವಿಶ್ವದ ಅತ್ಯಂತ ದುಬಾರಿ ಮನೆಯಾದ ಆಂಟಿಲಿಯಾ ಕೂಡ ಅವರದ್ದೇ ಹೆಸರಿನಲ್ಲಿದೆ.
ವಿಷಯಕ್ಕೆ ಬಂದರೆ ಈ ಲೇಖನವು ಅಂಬಾನಿಯವರ ಹೊಸ ಕಾರಿನ ಕುರಿತಾಗಿದೆ. ವಿಶ್ವದಲ್ಲೇ ಅತ್ಯಂತ ಐಷಾರಾಮಿ ಬ್ರಾಂಡ್ ಆಗಿ ಜನಪ್ರಿಯತೆ ಪಡೆದಿರುವ ರೋಲ್ಸ್ ರಾಯ್ಸ್ ಅನ್ನು ನಾವೆಲ್ಲರು ನೋಡಿದ್ದೇವೆ. ಅದನ್ನು ಒಮ್ಮೆ ಮುಟ್ಟಿ ಆನಂದಿಸಿರುವವರು ನಮ್ಮಲ್ಲಿ ಹಲವರು ಇರುತ್ತಾರೆ. ಆದರೆ ಈ ಕಾರುಗಳು ಅಂಬಾನಿ ಕುಟುಂಬಕ್ಕೆ ಆಟಿಕೆಗಳಿದ್ದಂತೆ ಎಂದರೆ ತಪ್ಪಾಗುವುದಿಲ್ಲ.

ಈಗಾಗಲೇ ರೋಲ್ಸ್ ರಾಯ್ಸ್ ಕಾರುಗಳ ಒಂದಷ್ಟು ಕಲೆಕ್ಷನ್ ಹೊಂದಿರುವ ಅಂಬಾನಿ ಕುಟುಂಬ ಅದೇ ಬ್ರಾಂಡ್‌ನ ಮತ್ತೊಂದು ಹೊಸ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಖರೀದಿಸಿರುವುದಾಗಿ ಇತ್ತೀಚೆಗೆ ವರದಿಯಾಗಿತ್ತು. ಆದರೆ ಇದೀಗ ರಸ್ತೆಗಳಲ್ಲಿ ದರ್ಶನ ಕೊಟ್ಟಿದ್ದು, ಯುವಕರು ಬೆಂಬಿದ್ದು ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಹಾಗೆಯೇ ಈ ಕುರಿತ ವೀಡಿಯೊವನ್ನು CS 12 Vlogs ತಮ್ಮ YouTube ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಎರಡನೇ ತಲೆಮಾರಿನ ಮಾದರಿಯು ವಿಡಿಯೋದಲ್ಲಿ ಸೆರೆಯಾಗಿದೆ. ಪೆಟ್ರಾ ಗೋಲ್ಡ್‌ನ ಬಣ್ಣದಲ್ಲಿರುವ ಹೊಸ ರೋಲ್ಸ್ ರಾಯ್ಸ್ ಘೋಸ್ಟ್, ಟ್ರಾಫಿಕ್ ಸಿಗ್ನಲ್ ಮೂಲಕ ದಾಟುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತ್ತೊಂದು ಕ್ಲಿಪ್ ನಲ್ಲಿ ರಾತ್ರಿಯಲ್ಲಿ ಕಾರು ಕಟ್ಟಡದಿಂದ ಹೊರಡುವುದನ್ನು ನೋಡಬಹುದು, ಹಾಗೆಯೇ ಪೆಟ್ರೋಲ್ ಬಂಕ್ ಒಂದರಲ್ಲಿ ಕಂಡುಬಂದಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಅನ್ನು ಭಾರತದಲ್ಲಿ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಮೊದಲನೆಯದು ಸ್ಟ್ಯಾಂಡರ್ಡ್ V12 ರೂಪಾಂತರವಾಗಿದ್ದರೇ, ಇನ್ನೊಂದು ಎಕ್ಸ್‌ಟೆಂಡೆಡ್ ವ್ಹೀಲ್‌ಬೇಸ್ ರೂಪಾಂತರ ಎಂದು ಕರೆಯಲ್ಪಡುವ ಉನ್ನತ ರೂಪಾಂತರವಾಗಿದೆ. ಕ್ರಮವಾಗಿ ರೋಲ್ಸ್ ರಾಯ್ಸ್ ಘೋಸ್ಟ್ ಎರಡು ರೂಪಾಂತರಗಳ ಬೆಲೆಯು ರೂ. 6.95 ಕೋಟಿ ಮತ್ತು ರೂ. 7.95 ಕೋಟಿ (ಎಕ್ಸ್ ಶೋರೂಂ ಬೆಲೆಗಳು) ಇದೆ.
ವಿಡಿಯೋದಲ್ಲಿ ಕಂಡುಬರುವ ಅಂಬಾನಿ ಕುಟುಂಬದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಸೂಕ್ಷ್ಮವಾಗಿ ಗಮನಿಸಿದರೆ ಟಾಪ್ ಸ್ಪೆಕ್ EWB ರೂಪಾಂತರವನ್ನು ಖರೀದಿಸಿದ್ದಾರೆ ಎಂದು ತೋರುತ್ತಿದೆ. ಈ ಮಾದರಿಯು 2020 ರಲ್ಲಿ ಬಿಡುಗಡೆಯಾದ ರೋಲ್ಸ್ ರಾಯ್ಸ್ ಘೋಸ್ಟ್‌ನ ನ್ಯೂ ಜೆನ್ ಮಾದರಿಯಾಗಿದ್ದು, ಇದರ ಬೆಲಯು ರೂ. 7.95 ಕೋಟಿ ಇದೆ.
ಈ ಐಷಾರಾಮಿ ದೈತ್ಯ ಆನ್‌ರೋಡ್ ಬರುವಷ್ಟರಲ್ಲಿ ಬೆಲೆಯು ಸುಮಾರು 9 ರಿಂದ 10 ಕೋಟಿ ರೂ. ಆಗಬಹುದು. ಒಂದು ವೇಳೆ ಅವರು ಕಸ್ಟಮೈಸೇಷನ್ ಭಾಗವಾಗಿ ಹೆಚ್ಚುವರಿ ಅಕ್ಸೆಸೊರಿಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಬೆಲೆ ಇನ್ನೂ ಹೆಚ್ಚಾಗಬಹುದು. ಘೋಸ್ಟ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಅದರ "ಸೈಲೆಂಟ್ ಸೀಲ್" ತಂತ್ರಜ್ಞಾನ. ಎಷ್ಟೇ ವೇಗದಲ್ಲಿದ್ದರೂ ಶಾಂತವಾದ ಒಳಾಂಗಣವನ್ನು ನೀಡುತ್ತದೆ.
ಈ ಕಾರಿನ ವಿಶೇಷತೆಗಳು: ರೋಲ್ಸ್ ರಾಯ್ಸ್ ಘೋಸ್ಟ್ 6.75 ಲೀಟರ್ V12 ಎಂಜಿನ್‌ನಿಂದ ಚಾಲಿತವಾಗಿದ್ದು, 563 ಹೆಚ್‌ಪಿ ಪವರ್ ಮತ್ತು 820 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‌ನೊಂದಿಗೆ ಬರುತ್ತದೆ. ಕಾರು ಕೇವಲ 4.6 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುತ್ತದೆ.
ಎರಡನೇ ತಲೆಮಾರಿನ ಘೋಸ್ಟ್ ಹೆಡ್-ಅಪ್ ಡಿಸ್ಪ್ಲೇ, ಲೇನ್ ಡಿಪಾರ್ಚರ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಕಾರು ವಿಶಿಷ್ಟವಾದ "ಫ್ಲ್ಯಾಗ್‌ಬೇರರ್" ವ್ಯವಸ್ಥೆಯನ್ನು ಸಹ ಹೊಂದಿದ್ದು, ಇದು ರಸ್ತೆಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಸ್ಪೆನ್ಷನ್ ಹೊಂದಿಸುತ್ತದೆ.


Click it and Unblock the Notifications








