Auto Expo 2023: 605 ಕಿ.ಮೀ ರೇಂಜ್ ನೀಡುವ MG Euniq 7 ಹೈಡ್ರೋಜನ್ ಕಾರು ಪ್ರದರ್ಶನ
2023ರ ಆಟೋ ಎಕ್ಸ್‌ಪೋ (Auto Expo 2023) ಎರಡನೇ ದಿನ ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಕಂಪನಿಯು ಯುನಿಕ್ 7 (Euniq 7) ಹೈಡ್ರೋಜನ್ ಫ್ಯೂಯಲ್-ಸೆಲ್ ಕಾರ್ ಅನ್ನು ಪ್ರದರ್ಶಿಸಿದೆ. ಈ ಹೈಡ್ರೋಜನ್ ಫ್ಯೂಯಲ್-ಸೆಲ್ ಕಾರ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ Maxus G20 ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ.
ಈ ಹೊಸ ಎಂಜಿ ಯುನಿಕ್ 7 ಹೈಡ್ರೋಜನ್ ಫ್ಯೂಯಲ್-ಸೆಲ್ ಕಾರು 605 ಕಿಲೋಮೀಟರ್‌ಗಳ ರೇಂಜ್ ಅನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಯುನಿಕ್ 7 ಎಂಜಿ ಮೂಲ ಕಂಪನಿ SAIC ನ ಜಾಗತಿಕವಾಗಿ ಉತ್ಪಾದಿಸುವ ಏಕೈಕ ಹೈಡ್ರೋಜನ್ ಫ್ಯೂಯಲ್-ಸೆಲ್ ಕಾರ್ ಇದಾಗಿದೆ. ಆಯಾಮದಲ್ಲಿ, ಹೊಸ ಎಂಜಿ ಯುನಿಕ್ 7 ಹೈಡ್ರೋಜನ್ ಫ್ಯೂಯಲ್-ಸೆಲ್ ಕಾರ್ 5225 mm ಉದ್ದ, 1980 mm ಅಗಲ ಮತ್ತು 1938 mm ಎತ್ತರವನ್ನು ಹೊಂದಿದೆ. ಇನ್ನು ಈ ಕಾರು 3198 mm ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಎಂಪಿವಿ ಬ್ರ್ಯಾಂಡ್‌ನ ಸುಧಾರಿತ FCEV ತಂತ್ರಜ್ಞಾನವನ್ನು ಪೂರ್ವವೀಕ್ಷಿಸುತ್ತದೆ.

ಈ ಹೊಸ ಯುನಿಕ್ 7 ಹೈಡ್ರೋಜನ್ ಫ್ಯೂಯಲ್-ಸೆಲ್ ಕಾರಿನ ಪವರ್‌ಟ್ರೇನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 201 ಬಿಹೆಚ್‍ಪಿ ಪವರ್ ಉತ್ಪಾದಿಸುವ ಶಾಶ್ವತ ಮ್ಯಾಗ್ನೆಟ್ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾದ 92kW ಫ್ಯೂಯಲ್ ಸೆಲ್ ಅನ್ನು ಒಳಗೊಂಡಿದೆ. ಇದು 6.4 ಕೆಜಿ ಸಂಚಿತ ಸಾಮರ್ಥ್ಯದ ಮೂರು ಹೈಡ್ರೋಜನ್ ಟ್ಯಾಂಕ್‌ಗಳನ್ನು ಹೊಂದಿದೆ. ಇನ್ನು ಹೈಡ್ರೋಜನ್ ಅನ್ನು 70 ಎಂಪಿಎ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಟ್ಯಾಂಕ್‌ಗಳು 3-5 ನಿಮಿಷಗಳಲ್ಲಿ ತುಂಬುತ್ತವೆ ಎಂಬುವುದು ಒಂದು ವಿಶೇಷವಾಗಿದೆ.
ಹೊಸ ಎಂಜಿ ಹೈಡ್ರೋಜನ್ ಫ್ಯೂಯಲ್-ಸೆಲ್ ಕಾರು ಪೂರ್ಣ ಟ್ಯಾಂಕ್‌ನೊಂದಿಗೆ, 605 ಕಿ.ಮೀ ವರೆಗೆ ರೇಂಜ್ ಅನ್ನು ನೀಡುತ್ತದೆ ಎಂದು ಭರವಸೆ ನೀಡುತ್ತದೆ. ಇಂಧನ ಟ್ಯಾಂಕ್‌ಗಳು ಕಾರ್ಬನ್‌ಫೈಬರ್ ಬಲವರ್ಧನೆಗಳಿಂದ ಮಾಡಲ್ಪಟ್ಟಿದೆ, ಅದು 842 ಡಿಗ್ರಿ C ಯ ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕುತೂಹಲಕಾರಿಯಾಗಿ, ಸಿಸ್ಟಮ್ ಅತ್ಯಂತ ಕಡಿಮೆ ತಾಪಮಾನದಲ್ಲಿ (-30 ಡಿಗ್ರಿ C ಗಿಂತ ಕಡಿಮೆ) ಕೆಲಸ ಮಾಡಬಹುದು. ಕಡಿಮೆ ತಾಪಮಾನವು ಅದರ ರೇಂಜ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ಹೇಳಿದೆ.

ಹೊಸ ಎಂಜಿ ಯುನಿಕ್ 7 ಕಾರ್ 4.9 ಸೆಕೆಂಡುಗಳಲ್ಲಿ 0 ರಿಂದ 50 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಂಪಿವಿ ಮಾದರಿಯು 150 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದು ತರ ಹೈಡ್ರೋಜನ್ FCEV ಗಳಂತೆಯೇ, ಎಂಜಿಯ 7-ಸೀಟರ್ ಗಳ ಐಷಾರಾಮಿ ಎಂಪಿವಿಯು ನೀರಿನ ಆವಿಯನ್ನು ಬಿಡುಗಡೆ ಮಾಡುತ್ತದೆ, ಅದು ಮೊಬೈಲ್ ಏರ್ ಪ್ಯೂರಿಫೈಯರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಹೊಸ ಎಂಪಿವಿಯು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನ ಗಳನ್ನು ಹೊಂದಿದೆ,
ಇನ್ನು ಈ ಹೊಸ ಎಂಜಿ ಯುನಿಕ್ ಎಂಪಿವಿಯ ಒಳಭಾಗವು ದೊಡ್ಡ 12.3-ಇಂಚಿನ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಇತರ ಪೀಚರ್ಸ್ ಗಳನ್ನು ಹೊಂದಿದೆ. ಇದರೊಂದಿಗೆ ಸುರಕ್ಷತೆಗಾಗಿ ಈ ಎಂಪಿವಿಯ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS), ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ನಂತಹ ಅತ್ಯಾಧುನಿಕ ಫೀಚರ್ಸ್ ಗಳನ್ನು ನೀಡುತ್ತದೆ.

ಹೊಸ ಎಂಜಿ ಹೈಡ್ರೋಜನ್ ಫ್ಯೂಯಲ್-ಸೆಲ್ ಕಾರು 6 ಮತ್ತು 7-ಆಸನಗಳ ಕಾನ್ಫಿಗರೇಶನ್‌ಗಳಲ್ಲಿ ನೀಡಲಾಗಿದೆ. 6-ಆಸನಗಳ ಆವೃತ್ತಿಯು ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳೊಂದಿಗೆ ಬರುತ್ತದೆ. ಎಂಜಿ ಮೋಟಾರ್ ಇಂಡಿಯಾ 2023ರ ಆಟೋ ಎಕ್ಸ್‌ಪೋದಲ್ಲಿ (Auto expo 2023) ತನ್ನ ಹೊಸ MG5 ಎಲೆಕ್ಟ್ರಿಕ್ ಎಸ್ಟೇಟ್ ಅನ್ನು ಪ್ರದರ್ಶಿಸಿದೆ. ಈ MG5 ಎಲೆಕ್ಟ್ರಿಕ್ ಎಸ್ಟೇಟ್ ಕಾರನ್ನು ಯುರೋಪ್‌ನಲ್ಲಿ 2022ರ ಮಾರ್ಚ್ ತಿಂಗಳಿನಲ್ಲಿ ಪರಿಚಯಿಸಿದ್ದರು. MG5 ಎಸ್ಟೇಟ್ ಪ್ರಪಂಚದ ಮೊದಲ ಆಲ್-ಎಲೆಕ್ಟ್ರಿಕ್ ಸ್ಟೇಷನ್ ವ್ಯಾಗನ್ ಆಗಿದೆ.
ಹೊಸ MG5 ಎಲೆಕ್ಟ್ರಿಕ್ ಎಸ್ಟೇಟ್ ಕಾರು ಎರಡು ಬ್ಯಾಟರಿ ರೂಪಾಂತರಗಳೊಂದಿಗೆ ಲಭ್ಯವಿದೆ. ಎಂಜಿ5 ಜೊತೆಗೆ ಬ್ರಿಟಿಷ್ ಕಾರು ತಯಾರಕರು ಎಂಜಿ4 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮತ್ತು ಏರ್ ಇವಿ ಅನ್ನು ಪ್ರೀ-ಪ್ರೊಡಕ್ಷನ್ ರೂಪದಲ್ಲಿ ಇಂಡಿಯನ್ ಆಟೋ ಎಕ್ಸ್‌ಪೋದ 16 ನೇ ಆವೃತ್ತಿಯಲ್ಲಿ ಪ್ರದರ್ಶಿಸಿದ್ದಾರೆ. ಎಂಜಿ5 ಎಲೆಕ್ಟ್ರಿಕ್ ಸ್ಟೇಷನ್ ವ್ಯಾಗನ್ ಸಾಕಷ್ಟು ಪ್ರಾಯೋಗಿಕತೆ ಮತ್ತು ಕ್ರಿಯಾತ್ಮಕತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಕಾರು 4,600 mm ಉದ್ದ, 1,818 mm ವಿಡ್ಟ್ ಮತ್ತು 1,543 mm ಎತ್ತರವನ್ನು ಹೊಂದಿದೆ. ಇದರೊಂದಿಗೆ 2,66 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.


Click it and Unblock the Notifications








