Auto Expo 2023: ಕಿಯಾ ಪೋಲೀಸ್ ಕಾರ್, ಆಂಬ್ಯುಲೆನ್ಸ್‌ ಪ್ರದರ್ಶನ

ದಕ್ಷಿಣ ಕೊರಿಯಾದ ಕಾರು ತಯಾರಕ ಕಿಯಾ ಮೋಟಾರ್ಸ್ ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಖ್ಯಾತಿಗಳಿಸಿದೆ. ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದು, ಕಂಪನಿಯು ಕಿಯಾ ಕ್ಯಾರೆನ್ಸ್‌ನ ಆಂಬ್ಯುಲೆನ್ಸ್ ಮತ್ತು ಪೊಲೀಸ್ ಕಾರ್ ಆವೃತ್ತಿಗಳನ್ನು ಅನಾವರಣಗೊಳಿಸಿದೆ. ಇವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಕಂಪನಿಯು ಪ್ರದರ್ಶಿಸಿರುವ ಈ ಎರಡು ವಾಹನಗಳನ್ನು ಸಂಪೂರ್ಣವಾಗಿ ಕಸ್ಟಮೈಸ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕಿಯಾ ಕ್ಯಾರೆನ್ಸ್ ಆಂಬ್ಯುಲೆನ್ಸ್‌ ಹೊರಭಾಗದಲ್ಲಿ ಯೆಲ್ಲೋ ಮತ್ತು ರೆಡ್ ಕಲರ್ ಪಟ್ಟೆಗಳನ್ನು ನೋಡಬಹುದು. ಆದರೆ, ಪೊಲೀಸ್ ಕಾರ್ ನಲ್ಲಿ ರೆಡ್ ಮತ್ತು ಬ್ಲೂ ಬಣ್ಣದ ಡೆಕಾಲ್‌ಗಳನ್ನು ಕಾಣಬಹುದು. ಲೈಟಿಂಗ್ ಸೆಟಪ್ ವಿಚಾರಕ್ಕೆ ಬಂದರೇ ಬ್ಲೂ ಮತ್ತು ರೆಡ್ ಲೈಟ್ಸ್ ಇದ್ದು, ಇವರೆಡನ್ನು ಪೋಲೀಸ್ ಕಾರ್ ಹಾಗೂ ಆಂಬ್ಯುಲೆನ್ಸ್‌ನಲ್ಲಿಯೂ ಕಾಣಬಹುದು.

Auto Expo 2023: ಕಿಯಾ ಪೋಲೀಸ್ ಕಾರ್, ಆಂಬ್ಯುಲೆನ್ಸ್‌ ಪ್ರದರ್ಶನ

ಕಿಯಾ ಕ್ಯಾರೆನ್ಸ್ ಆಂಬ್ಯುಲೆನ್ಸ್ ಹಿಂಭಾಗದಲ್ಲಿ AMBULANCE ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಅದೇರೀತಿ ಪೊಲೀಸ್ ಕಾರ್ ಹಿಂದೆ ಮತ್ತು ಸೈಡ್ ನಲ್ಲಿಯು ದೊಡ್ಡ ಅಕ್ಷರಗಳಲ್ಲಿ POLICE ಎಂದು ಬರೆಯಲಾಗಿದೆ. ಕಿಯಾ ಕ್ಯಾರೆನ್ಸ್ ಆಂಬ್ಯುಲೆನ್ಸ್ ಒಳಗೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇಲ್ಲಿರುವ ಈ ವಾಹನ 7 ಸೀಟರ್ ಕಾರು ಎಂದು ಗೊತ್ತಾಗುತ್ತಿದೆ. ಆದರೆ, ಹಿಂಬದಿಯ ಸೀಟುಗಳನ್ನು ತೆಗೆದು ಸ್ಟ್ರೆಚರ್ ಅಳವಡಿಕೆ ಮಾಡಲಾಗಿದೆ.

ಇದಲ್ಲದೇ, ರೋಗಿಯ ಪಕ್ಕದಲ್ಲಿ ಕುಳಿತುಕೊಳ್ಳಲು ಇಲ್ಲಿ ಆಸನದ ವ್ಯವಸ್ಥೆಯು ಇದ್ದು, ಈ ಆಂಬ್ಯುಲೆನ್ಸ್ ಒಳಗೆ ಆಕ್ಸಿಜನ್ ಸಿಲಿಂಡರ್ ಗಳು ಇರುವುದನ್ನು ಕಾಣಬಹುದು. ಸಾಮಾನ್ಯ ಆಂಬ್ಯುಲೆನ್ಸ್‌ನಂತೆಯೇ ಇಲ್ಲಿಯು ಎಮೆರ್ಜೆನ್ಸಿ ಲೈಟ್ಸ್ ಬಾರ್ ಹೊಂದಿದ್ದು, ಇದು ದೊಡ್ಡ ಸೈರನ್‌ನೊಂದಿಗೆ ಸಂಪರ್ಕ ಪಡೆದಿದೆ. ಒಟ್ಟಾರೆಯಾಗಿ, ಇದರ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕಿಯಾ ಕ್ಯಾರೆನ್ಸ್ ಅದ್ಭುತ ಆಂಬ್ಯುಲೆನ್ಸ್ ಆಗಿ ರೆಡಿಯಾಗಿದೆ.

Auto Expo 2023: ಕಿಯಾ ಪೋಲೀಸ್ ಕಾರ್, ಆಂಬ್ಯುಲೆನ್ಸ್‌ ಪ್ರದರ್ಶನ

ಕಿಯಾ ಕ್ಯಾರೆನ್ಸ್ ಪೊಲೀಸ್ ವಾಹನದ ಬಗ್ಗೆ ಮಾತನಾಡುವುದಾದರೆ, ಇದು ರೋಫ್ - ಮೌಂಟೆಡ್ ಲೈಟ್ ಬಾರ್ ಅನ್ನು ಪಡೆದಿದ್ದು, ಮೊದಲೇ ಹೇಳಿದಂತೆ ಇದು ಬ್ಲೂ ಮತ್ತು ರೆಡ್ ಕಲರ್ ಲೈಟ್ಸ್ ಹೊಂದಿದೆ. ಇವುಗಳಿಗೆ ಸೈರನ್ ಅನ್ನು ಕೂಡ ಸಂಪರ್ಕಿಸಲಾಗಿದೆ ಈ ಲೈಟ್ ಬಾರ್ ಸಾಮಾನ್ಯವಾಗಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಪೊಲೀಸ್ ವಾಹನಗಳಿಗಿಂತ ಹೆಚ್ಚು ಆಧುನಿಕವಾಗಿ ಕಾಣುತ್ತದೆ. ಈ ಪೊಲೀಸ್ ವಾಹನದಲ್ಲಿ ಎಮರ್ಜೆನ್ಸಿ ಕರೆಗಳನ್ನು ಸ್ವೀಕರಿಸಲು ವಾಕಿ ಟಾಕಿ ಕೂಡ ಅಳವಡಿಕೆ ಮಾಡಲಾಗಿದೆ.

ಕಿಯಾ ಕ್ಯಾರೆನ್ಸ್ ಪೊಲೀಸ್ ಕಾರ್ ಮತ್ತು ಆಂಬ್ಯುಲೆನ್ಸ್‌ನ ಒಳಭಾಗದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ, ಹೊರಭಾಗವು ಸಾಮಾನ್ಯ ಮಾದರಿಯಲ್ಲಿ ಕಂಡು ಬರುವ ಒಂದೇ ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳನ್ನು ಹೊಂದಿವೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂಬಂತೆ ತೋರುತ್ತದೆ. ಕಿಯಾ ಕ್ಯಾರೆನ್ಸ್ ಆಂಬ್ಯುಲೆನ್ಸ್ ವಾಹನಕ್ಕೆ ಹೋಲಿಸಿದರೆ, ಪೊಲೀಸ್ ವಾಹನದ ಒಳಭಾಗವು ಹೆಚ್ಚು ಬದಲಾಗಿಲ್ಲ ಎಂದು ಗೊತ್ತಾಗಲಿದೆ.

Auto Expo 2023: ಕಿಯಾ ಪೋಲೀಸ್ ಕಾರ್, ಆಂಬ್ಯುಲೆನ್ಸ್‌ ಪ್ರದರ್ಶನ

ಕಿಯಾ ಕ್ಯಾರೆನ್ಸ್, ಆಂಬ್ಯುಲೆನ್ಸ್ ಮತ್ತು ಪೊಲೀಸ್ ಕಾರ್ ವಿನ್ಯಾಸ ಮತ್ತು ಇತರೇ ವೈಶಿಷ್ಟ್ಯಗಳ ಬಗ್ಗೆ ಸ್ಪಷ್ಟ ಗೊತ್ತಾಗಲಿದೆ. ಆದರೆ, ಕಂಪನಿಯು ಅದರ ಎಂಜಿನ್ ಕಾರ್ಯಕ್ಷ್ಮತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದು ಕಿಯಾ ಕ್ಯಾರೆನ್ಸ್‌ನಲ್ಲಿ ಬಳಕೆ ಮಾಡುವ ಅದೇ ಎಂಜಿನ್ ಅನ್ನು ಹೊಂದಿರಲಿದೆ. ಕಂಪನಿಯು ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಅಂದಾಜಿಸಲಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಆಟೋ ಎಕ್ಸ್‌ಪೋದಲ್ಲಿ ಅತ್ಯಾಕರ್ಷಕ ಮತ್ತು ಸುಧಾರಿತ ಮಾದರಿಗಳನ್ನು ವಿವಿಧ ವಾಹನ ತಯಾರಕ ಕಂಪನಿಗಳು ಅನಾವರಣ ಹಾಗೂ ಬಿಡುಗಡೆ ಮಾಡಿವೆ. ಅದರಲ್ಲಿ ಭಾರತದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಹಲವು ವಾಹನಗಳನ್ನು ಪ್ರದರ್ಶಿಸಿದೆ. ಜೊತೆಗೆ ಮಾರುತಿ ಸುಜುಕಿ ಹಲವು ಮಾದರಿಗಳನ್ನು ಅನಾವರಣ ಮಾಡಿದ್ದು, ಅಲ್ಲದೆ, ಆಕರ್ಷಕ ಆಫ್-ರೋಡರ್ ಜಿಮ್ನಿ 5 ಡೋರ್ ಪ್ರದರ್ಶಿಸಿದ್ದು, ಬುಕಿಂಗ್ ಕೂಡ ಆರಂಭವಾಗಿದೆ.

Most Read Articles

Kannada
English summary
Auto expo 2023 police car ambulance showcased by Kia details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X