ದಸರಾ-ದೀಪಾವಳಿ ಡಿಸ್ಕೌಂಟ್ ಎಂದುಕೊಂಡು ಆಟೋ ಉದ್ಯಮಗಳಿಗೆ ನೀವು ಕೊಟ್ಟ ಲಾಭವೆಷ್ಟು ಗೊತ್ತಾ?
ಭಾರತದಲ್ಲಿ ಹಬ್ಬಗಳ ಸಂದರ್ಭದಲ್ಲಿ ಜನರು ಮನೆಗೆ ಹೊಸ ವಸ್ತುಗಳನ್ನು ಖರೀದಿಸುವುದು ಸಾಂಪ್ರದಾಯವಾಗಿಬಿಟ್ಟಿದೆ. ಅಂದರೆ ಹಬ್ಬಗಳಲ್ಲಿ ಹೊಸ ಕಾರು, ಬೈಕ್, ಮೊಬೈಲ್‌ನಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಗೆ ತರುವುದು ಶುಭ ಸೂಚಕವಾಗಿ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಮಾರುಕಟ್ಟೆಗಳಲ್ಲಿ ಹಲವು ಕಂಪನಿಗಳು ಡಿಸ್ಕೌಂಟ್ ನೀಡಿ ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಾರೆ.
ಯಾವ ಮಟ್ಟಿಗೆ ಅಂದರೆ ವರ್ಷವೆಲ್ಲಾ ಸಿಗದ ಮಾರಾಟ ಲಾಭವು ಕೇವಲ ದಸರಾ, ದೀಪಾವಳಿ, ಉಗಾದಿಯಂತಹ ಹಬ್ಬಗಳು ತಂದುಕೊಡುತ್ತವೆ. ಇದೀಗ ಭಾರತೀಯ ಆಟೋ ಉದ್ಯಮವು 2023 ರ ಹಬ್ಬದ ಅವಧಿಯಲ್ಲಿ ಶೇ19 ರಷ್ಟು ಪ್ರಭಾವಶಾಲಿ ಒಟ್ಟಾರೆ ಮಾರಾಟ ಬೆಳವಣಿಗೆಯನ್ನು ಕಂಡಿದೆ. ವಾಹನ ಮಾರಾಟವು ಒಟ್ಟು 3.793 (37,93,584 ವಾಹನಗಳ ಮಾರಾಟ) ಮಿಲಿಯನ್ ಯುನಿಟ್‌ಗಳನ್ನು ತಲುಪಿದೆ.

ಕಳೆದ ವರ್ಷದಲ್ಲಿ ಭಾರತೀಯ ವಾಹನ ಮಾರಾಟವು ಒಟ್ಟು 3.19 (31,95,213 ವಾಹನಗಳ ಮಾರಾಟ) ಮಿಲಿಯನ್ ಯುನಿಟ್ ಆಗಿತ್ತು. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FADA) ಇತ್ತೀಚೆಗೆ 42 ದಿನಗಳ ಹಬ್ಬದ ಅವಧಿಯಲ್ಲಿ ಮಾರಾಟವಾದ (ನವರಾತ್ರಿಯ ಮೊದಲ ದಿನದಿಂದ ಪ್ರಾರಂಭಿಸಿ 15 ದಿನಗಳ ನಂತರದ ಧಂತೇರಸ್ ವೆರೆಗೆ) ವಾಹನಗಳ ಡೇಟಾವನ್ನು ಬಿಡುಗಡೆ ಮಾಡಿದೆ.
FADA ಪ್ರಕಾರ ಈ ಹಬ್ಬದ ಸೀಸನ್‌ನಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ 21 ರಷ್ಟು, ತ್ರಿಚಕ್ರ ವಾಹನ ಮಾರಾಟದಲ್ಲಿ ಶೇ 41 ರಷ್ಟು, ವಾಣಿಜ್ಯ ವಾಹನ ಮಾರಾಟದಲ್ಲಿ ಶೇ 8 ರಷ್ಟು ಮತ್ತು ಪ್ರಯಾಣಿಕ ವಾಹನ ಮಾರಾಟದಲ್ಲಿ ಶೇ 10 ರಷ್ಟು ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಮತ್ತೊಂದೆಡೆ, ಟ್ರಾಕ್ಟರ್ ವಿಭಾಗವು ಶೇ 0.5 ರಷ್ಟು ಮಾರಾಟ ಕುಸಿತವನ್ನು ಕಂಡಿದೆ ಎಂದು ವರದಿ ಹೇಳಿದೆ.

ಇದಲ್ಲದೆ ನವರಾತ್ರಿ ಸಮಯದಲ್ಲಿ ಶೇ 8.3 ರಷ್ಟು ಮಾರಾಟವನ್ನು ಕಂಡ ಟ್ರ್ಯಾಕ್ಟರ್‌ಗಳು ಗಮನಾರ್ಹವಾದ ಚೇತರಿಕೆಯನ್ನು ಕಂಡಿದ್ದವು, ಆದರೆ ಹಬ್ಬದ ಅವಧಿಗೆ ಬರುವಷ್ಟರಲ್ಲಿ ಕೇವಲ 0.5% ರಷ್ಟು ಇಳಿಕೆಯೊಂದಿಗೆ ಕೊನೆಗೊಂಡಿದೆ. ಈ ತಿರುವು ಗ್ರಾಮೀಣ ಭಾರತದಲ್ಲಿ ದೃಢವಾದ ಖರೀದಿ ಶಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಅಧ್ಯಕ್ಷ ಮನೀಶ್ ರಾಜ್ ಸಿಂಘಾನಿಯಾ ಹೇಳಿದರು.
ಗ್ರಾಮೀಣ ಪ್ರದೇಶಗಳು ವಿಶೇಷವಾಗಿ ದ್ವಿಚಕ್ರ ವಾಹನಗಳ ಖರೀದಿಯಲ್ಲಿ ಹೆಚ್ಚಳಕ್ಕೆ ಕೊಡುಗೆ ನೀಡುವುದರೊಂದಿಗೆ ಹಲವಾರು ವಿಭಾಗಗಳಲ್ಲಿ ದಾಖಲೆಯ ಮಾರಾಟ ವರದಿಯಾಗಿದೆ. ನವರಾತ್ರಿಯ ಸಮಯದಲ್ಲಿ ಆರಂಭಿಕ ಕಳಪೆ ಪ್ರದರ್ಶನದ ಹೊರತಾಗಿಯೂ, ವಿಶೇಷವಾಗಿ ಪ್ರಯಾಣಿಕ ವಾಹನ ವಲಯದಲ್ಲಿ, ಪರಿಸ್ಥಿತಿಯು ಸುಧಾರಿಸಿದೆ ಎಂದು ಸಿಂಘಾನಿಯಾ ಹೇಳಿದರು.

ದೀಪಾವಳಿಯು ಶೇ 10 ರಷ್ಟು ಬೆಳವಣಿಗೆಯ ದರದೊಂದಿಗೆ ಕೊನೆಗೊಂಡಿದೆ. SUV ಗಳು ಅತಿ ಹೆಚ್ಚು ಬೇಡಿಕೆಯಿರುವ ವಾಹನಗಳಾಗಿದ್ದರೂ, ಕಂಪನಿಗಳು ಮತ್ತಷ್ಟು ರವಾನೆಯನ್ನು ಮುಂದುವರಿಸುವುದರಿಂದ ಪ್ರಯಾಣಿಕರ ವಾಹನಗಳಿಗೆ ದಾಸ್ತಾನು ಮಟ್ಟವು ಗಮನಾರ್ಹ ಕಾಳಜಿಯಾಗಿ ಉಳಿದಿದೆ, ಹೀಗಾಗಿ ದಾಸ್ತಾನು ದರವನ್ನು ಸಾರ್ವಕಾಲಿಕ ಉನ್ನತ ಮಟ್ಟದಲ್ಲಿ ಇರಿಸುತ್ತದೆ ಎಂದು ಸಿಂಘಾನಿಯಾ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications