ಹೆದ್ದಾರಿಗಳಿಗೆ ಬಾಹುಬಲಿ ಬೇಲಿ: ಸಚಿವ ನಿತಿನ್ ಗಡ್ಕರಿ ಆಲೋಚನೆಗೆ ಫಿದಾ ಆಗಲೇಬೇಕು!
ಭಾರತೀಯ ಹೆದ್ದಾರಿಗಳಲ್ಲಿ ಜಾನುವಾರುಗಳ ಅಪಘಾತಗಳನ್ನು ತಡೆಯಲು ಬಾಹುಬಲಿ ಬೇಲಿಯನ್ನು ತರಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಫೆನ್ಸಿಂಗ್ ತುಂಬಾ ಉಪಯುಕ್ತವಾಗಿದ್ದು, ಭಾರತದ ಹೆದ್ದಾರಿಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಏನಿದು ಬಾಹುಬಲಿ ಬೇಲಿ: ಈ ಬಾಹುಬಲಿ ಫೆನ್ಸಿಂಗ್ ಎಂಬುದು ತುಂಬಾ ಗಟ್ಟಿಮುಟ್ಟಾದ ಉಪಕರಣಗಳೊಂದಿಗೆ ನಿರ್ಮಾಣಗೊಂಡಿದೆ. ಇದಕ್ಕೆ HDPE (ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್) ನಿಂದ ಲೇಪಿಸಲಾಗಿದೆ, ಇದು ಉಕ್ಕಿಗೆ ಬಲವಾದ ಪರ್ಯಾಯ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದು ಬಳಕೆಗೆ ಬಂದರೇ ಜಾನುವಾರುಗಳು ಬೇಲಿಯನ್ನು ದಾಟಿ ರಸ್ತೆಗೆ ಬರುವುದು ಅಸಾಧ್ಯ ಹಾಗೂ ಅವುಗಳನ್ನು ಮುರಿಯುವುದು ಕೂಡ ಅಸಂಭವ.

ಬಿದಿರನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸಿ HDPE ಯಿಂದ ಲೇಪಿಸಲಾಗುತ್ತದೆ, ಹೀಗೆ ಮಾಡುವ ಮೂಲಕ ಉಕ್ಕಿಗೆ ಬಲವಾದ ಪರ್ಯಾಯವಾಗಲಿದೆ. ಸುರಕ್ಷತೆ ಮತ್ತು ದೀರ್ಘಾಯುಷ್ಯವನ್ನು ಖಚಿತಪಡಿಸಿಕೊಳ್ಳಲು ಬೇಲಿಯು ವರ್ಗ 1 ರಷ್ಟು ಬೆಂಕಿಯ ರೇಟಿಂಗ್ ಅನ್ನು ಹೊಂದಿದೆ. ಈ ಬೇಲಿಯು ಎಲ್ಲಾ ಹೆದ್ದಾರಿಗಳನ್ನು ಸುಸ್ಥಿರವಾಗಿಸಿ ಜಾನುವಾರುಗಳಿಗೆ ಕನಿಷ್ಠ ಹಾನಿಯನ್ನುಂಟುಮಾಡುವ ಗುರಿಯನ್ನು ಹೊಂದಿದೆ ಎಂದು ಗಡ್ಕರಿ ಹೇಳಿದ್ದಾರೆ.
ಈ ಬ್ಯಾರಿಕೇಡ್‌ಗಳು 1.20 ಮೀಟರ್ ಎತ್ತರವಿದ್ದು, ಸಮಗ್ರ ಪರಿಹಾರವಾಗಿ ರಾಷ್ಟ್ರೀಯ ಹೆದ್ದಾರಿ- 30ರ ಸೆಕ್ಷನ್ 23ರಲ್ಲಿ ಅಳವಡಿಸಲಾಗುವುದು. ಈಗಾಗಲೇ ಇಂದೋರ್‌ನ ಪಿತಾಮ್‌ಪುರದಲ್ಲಿರುವ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್ಸ್ (NATRAX) ನಂತಹ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಈ ಬಾಹುಬಲಿ ಕ್ರಾಶ್ ಬ್ಯಾರಿಯರ್ ಅನ್ನು ಕಠಿಣವಾಗಿ ಪರೀಕ್ಷಿಸಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ಛತ್ತೀಸ್‌ಗಢ ಭೇಟಿಗು ಮುನ್ನ ಇದರ ಪ್ರದರ್ಶನವನ್ನು ತೋರಲಿದ್ದೇವೆ ಎಂದು ತಿಳಿಸಿದ್ದಾರೆ. ಬೇಲಿಯ ಚಿತ್ರಗಳನ್ನು ಹಂಚಿಕೊಂಡ ಗಡ್ಕರಿ, ಬಿದಿರನ್ನು ಬಳಸಿ ತಯಾರಿಸಲಾದ ಜಾನುವಾರು ಬೇಲಿಯು ಅಪಘಾತದಿಂದ ಜಾನುವಾರುಗಳನ್ನು ರಕ್ಷಿಸಲು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಪರಿಹಾರವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಮೊದಲೇ ಹೇಳಿದಂತೆ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಸಿದ ಅಗ್ನಿಶಾಮಕ ರೇಟಿಂಗ್ ಪರೀಕ್ಷೆಯಲ್ಲಿ 1 ನೇ ತರಗತಿ ಎಂದು ರೇಟ್ ಮಾಡಲಾಗಿದೆ. ಜೊತೆಗೆ, ತಡೆಗೋಡೆಯನ್ನು ಇಂಡಿಯನ್ ರೋಡ್ ಕಾಂಗ್ರೆಸ್ ಸಹ ಗುರುತಿಸಿದೆ. ಬಿದಿರಿನ ತಡೆಗೋಡೆಗಳ ಮರುಬಳಕೆ ಮೌಲ್ಯವು ಶೇಕಡಾ 50-70 ರಷ್ಟಿದ್ದರೆ, ಉಕ್ಕಿನ ತಡೆಗೋಡೆಗಳ ಮರುಬಳಕೆ ಮೌಲ್ಯವು ಶೇಕಡಾ 30-50 ರಷ್ಟಿದೆ ಎಂದು ಸಚಿವರು ಹೇಳಿದರು.
ಒಟ್ಟಾರೆ ದೇಶದಲ್ಲಿ ಹೆದ್ದಾರಿಗಳ ನಿರ್ಮಾಣವು ವೇಗಗೊಂಡಿದೆ, ಆದ್ರೆ ಜಾನುವಾರುಗಳ ಅಪಘಾತಗಳನ್ನು ತಡೆಯಲು ತುಂಬಾ ತೊಂದರೆಯಾಗಿದೆ. ಇದನ್ನು ಗಂಭಿರವಾಗಿ ಪರಿಗಣಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಾಹುಬಲಿ ಬೇಲಿಯ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇದು ಬಳಕಗೆ ಬಂದರೆ ಬಹುತೇಕ ಅವರ ಗುರಿಯನ್ನು ಸಾಧಿಸುವ ಸಾಧ್ಯತೆಗಳಿವೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ.


Click it and Unblock the Notifications