ಬೆಳಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನಕ್ಕೆ ಧಾರವಾಡ ತಲುಪಿದ ವಂದೇ ಭಾರತ್... ಟ್ರೈಯಲ್ ರನ್ ಆರಂಭ
ಇಂದು ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ರೈಲು ಬೆಳಿಗ್ಗೆ 5:45 ರ ಸುಮಾರಿಗೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟಿತು. ಬೆಂಗಳೂರು-ಧಾರವಾಡ ನಡುವಿನ ಅಂತರವನ್ನು 6.55 ಗಂಟೆಗಳಲ್ಲಿ ಕ್ರಮಿಸಲು ನಿಗದಿಪಡಿಸಲಾಗಿದ್ದು, ಮಧ್ಯಾಹ್ನ 12.40ಕ್ಕೆ ಧಾರವಾಡ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು-ಧಾರವಾಡ ನಡುವಿನ ಅಂತರವನ್ನು 6.55 ಗಂಟೆಗಳಲ್ಲಿ ಕ್ರಮಿಸಲು ನಿಗದಿಪಡಿಸಲಾಗಿದ್ದು, ಬೆಳಗ್ಗೆ 5.45ಕ್ಕೆ ಬೆಂಗಳೂರಿನಿಂದ ಹೊರಟ ರೈಲು ಮಧ್ಯಾಹ್ನ 12.40ಕ್ಕೆ ಧಾರವಾಡ ತಲುಪುವ ನಿರೀಕ್ಷೆಯಿತ್ತು. ಮತ್ತೆ 1.15ಕ್ಕೆ ಧಾರವಾಡದಿಂದ ಹೊರಟು 8.10ಕ್ಕೆ ಬೆಂಗಳೂರು ತಲುಪುತ್ತದೆ. ಪ್ರಾಯೋಗಿಕ ಓಡಾಟ ಯಶಸ್ವಿಯಾದರೆ ಜೂನ್ 26 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೈಲನ್ನು ಉದ್ಘಾಟಿಸಲಿದ್ದಾರೆ.

ಜುಲೈ ತಿಂಗಳಲ್ಲಿ ರಾಜ್ಯಕ್ಕೆ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಿಗಲಿದೆ. ಈ ಕುರಿತು ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಹಿಂದೆಯೇ ಹೇಳಿದ್ದರು. ಅದರಂತೆ ಈಗ ಎರಡನೇ ರೈಲು ಲೋಕಾರ್ಪಣೆಗೆ ಸಜ್ಜಾಗಿದೆ. ರೈಲು 487.47 ಕಿ.ಮೀ ದೂರ ಕ್ರಮಿಸಲಿದೆ. ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಚಲಿಸುತ್ತದೆ.
ಬೆಂಗಳೂರಿನ ನಂತರ ಹುಬ್ಬಳ್ಳಿ- ಧಾರವಾಡ ಅತಿ ಹೆಚ್ಚು ಪ್ರಯಾಣಿಸುವ ಪ್ರದೇಶವಾಗಿದೆ. ಇದು ಬಹುಕಾಲದ ಬೇಡಿಕೆಯಾಗಿತ್ತು, ಸದ್ಯ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪಲು 7 ಗಂಟೆಗಳ ಸಮಯ ಬೇಕು. ಜುಲೈ ನಂತರ ಬರಲಿರುವ ವಂದೇ ಭಾರತ್ ರೈಲು ಕೇವಲ 5 ಗಂಟೆಗಳ ಪ್ರಯಾಣ ಸಮಯ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಈ ಹಿಂದೆ ಹೇಳಿದ್ದರು.

ಮೈಸೂರು ಮತ್ತು ಬೆಂಗಳೂರಿನಂತೆಯೇ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಿಗೆ ಬೆಂಗಳೂರಿನಿಂದ ಸಾಕಷ್ಟು ಜನರು ಹೆಚ್ಚಾಗಿ ಪ್ರಯಾಣಿಸುತ್ತಾರೆ. ಹಾಗಾಗಿ ವಂದೇ ಭಾರತ್ ರೈಲು ಈಗಿನ ಪರಿಸ್ಥಿತಿಗಳಿಗೆ ತುಂಬಾ ಅಗತ್ಯವಾಗಿದೆ. ವಿದ್ಯುದೀಕರಣ ಕಾಮಗಾರಿ ಮತ್ತು ಹಳಿಗಳ ಬಲವರ್ಧನೆ ಪೂರ್ಣಗೊಂಡಿದ್ದು, ಯೋಜನೆಯು ಅಂತಿಮ ಹಂತದ ಚರ್ಚೆಯಲ್ಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದರು.
ನವೆಂಬರ್ 2022 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಭಾರತದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಈ ಮೊದಲ ದಕ್ಷಿಣ ಭಾರತದ ರೈಲು ಮೈಸೂರು ಮತ್ತು ಚೆನ್ನೈ ನಡುವೆ ಕಾರ್ಯಾಚರಿಸುತ್ತಿದೆ. ಈ ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಬಹುತೇಕ ಕಡಿತಗೊಳಿಸಿದೆ.

ಭಾರತದಲ್ಲಿ ಈಗಾಗಲೇ ಒಂದೊಂದೇ ರಾಜ್ಯಗಳು ಈ ಅತ್ಯಾಧುನಿಕ ವಂದೇ ಭಾರತ್ ರೈಲುಗಳನ್ನು ಪಡೆಯುತ್ತಿರುವುದು ರೈಲ್ವೆ ಪ್ರಯಾಣಿಕರಿಗೆ ತುಸು ನಿರಾಳ ನೀಡುತ್ತಿದೆ. ಏಕೆಂದರೆ ಪ್ಯಾಸಿಂಜರ್ ರೈಲುಗಳಿಂದ ತುಂಬಾ ಪ್ರಯಾಣ ಸಮಯವನ್ನು ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ವಂದೇ ಭಾರತ್ ರೈಲುಗಳು ಪ್ರಯಾಣ ಸಮಯವನ್ನು ಕಡಿತಗೊಳಿಸಿ ಹೊಸ ಅನುಭವ ನೀಡುತ್ತಿವೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








