Railway: ಕೇವಲ ದಂಡಗಳಿಂದಲೇ 300 ಕೋಟಿ ರೂ. ಆದಾಯ ಗಳಿಸಿದ ಭಾರತೀಯ ರೈಲ್ವೆ

ವಿಶ್ವದ ಅತಿದೊಡ್ಡ ರೈಲ್ವೆ(Railway) ನೆಟ್‌ವರ್ಕ್‌ ಹೊಂದಿರುವ ದೇಶಗಳಲ್ಲಿ ಗುರ್ತಿಸಿಕೊಂಡಿರುವ ಭಾರತವು, ನಿತ್ಯ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ರೈಲು ಟಿಕೆಟ್ ವಿಚಾರಕ್ಕೆ ಬಂದರೆ ಉಚಿತವಾಗಿ ಪ್ರಯಾಣಿಸುವವರೇ ಹೆಚ್ಚು ಎಂಬ ಆರೋಪಗಳು ಇವೆ. ಅದಕ್ಕೆ ತಕ್ಕಂತೆ ಕೇವಲ ದಂಡಗಳಿಂದಲೇ 300 ಕೋಟಿರೂ. ಆದಾಯ ಗಳಿಸಿರುವುದಾಗಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2023 - 24ರ ಆರ್ಥಿಕ ವರ್ಷದಲ್ಲಿ ಕೇಂದ್ರ ರೈಲ್ವೆ ಇಲಾಖೆಯು, 42.63 ಲಕ್ಷ ಪ್ರಕರಣಗಳೊಂದಿಗೆ 265.97 ಕೋಟಿ ರೂ. ದಂಡದ ಆದಾಯದ ಗುರಿಯನ್ನು ಹೊಂದಿತ್ತು. ಆದರೆ ಈ ಗುರಿಯನ್ನು ಮೀರಿಸುವ ಮೂಲಕ ಇತರ ಸಾರಿಗೆ ಇಲಾಖೆಗಳನ್ನು ಹಿಂದಿಕ್ಕಿ ಅಗ್ರ ಸಾಧನೆ ತೋರಿದೆ. 2023 - 24ರ ಆರ್ಥಿಕ ವರ್ಷದಲ್ಲಿ ಟಿಕೆಟ್ ರಹಿತ ಅಥವಾ ಅನಿಯಮಿತ ಪ್ರಯಾಣ ಮತ್ತು ಕಾಯ್ದಿರಿಸದ ಲಗೇಜ್ ಪ್ರಕರಣಗಳಿಂದ 300 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ, ಇದು ರಾಷ್ಟ್ರೀಯ ಸಾರಿಗೆಯ ಎಲ್ಲಾ ವಲಯಗಳಿಗಿಂತ ಹೆಚ್ಚಿನ ಆದಾಯವನ್ನು ಸೂಚಿಸುತ್ತದೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

indian-railway-earned-300-crore-with-only-fines

ತಪಾಸಣಾ ಸಿಬ್ಬಂದಿಗೆ ಮೆಚ್ಚುಗೆ: ಇಬ್ಬರು ಮಹಿಳಾ ಟಿಕೆಟ್ ಪರೀಕ್ಷಕರು ಸೇರಿದಂತೆ 22 ಟಿಕೆಟ್ ತಪಾಸಣಾ ಸಿಬ್ಬಂದಿಯು, ಆದಾಯದಲ್ಲಿ ತಲಾ 1 ಕೋಟಿ ರೂ.ಗಿಂತ ಹೆಚ್ಚು ಕೊಡುಗೆ ನೀಡಿದ್ದಾರೆ. ಟ್ರಾವೆಲಿಂಗ್ ಟಿಕೆಟ್ ಇನ್ಸ್ಪೆಕ್ಟರ್ ಸುನಿಲ್ ನೈನಾನಿ 20,117 ಪ್ರಕರಣಗಳಿಂದ 1.92 ಕೋಟಿ ರೂ.ಗಳ ಆದಾಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಟ್ರಾವೆಲಿಂಗ್ ಟಿಕೆಟ್ ಇನ್ಸ್ಪೆಕ್ಟರ್ ಧರ್ಮೇಂದ್ರ ಕುಮಾರ್ 17,641 ಪ್ರಕರಣಗಳಿಂದ 1.52 ಕೋಟಿ ರೂ., ಮುಖ್ಯ ಟಿಕೆಟ್ ಇನ್ಸ್ಪೆಕ್ಟರ್ ಎಂ.ಎಂ.ಶಿಂಧೆ 18,223 ಪ್ರಕರಣಗಳಿಂದ 1.59 ಕೋಟಿ ರೂ., ಟ್ರಾವೆಲಿಂಗ್ ಟಿಕೆಟ್ ಇನ್ಸ್ಪೆಕ್ಟರ್ ಸುನಿಲ್ ನೈನಾನಿ 20,117 ಪ್ರಕರಣಗಳಿಂದ 1.92 ಕೋಟಿ ರೂ. ಆದಾಯವನ್ನು ತಂದುಕೊಟ್ಟಿದ್ದಾರೆ.

indian-railway-earned-300-crore-with-only-fines

ಈ ಭಾಗಗಳಿಂದ ಹೆಚ್ಚಿನ ದಂಡ ಸಂಗ್ರಹ: ಪ್ರಕರಣಗಳು ಮತ್ತು ಆದಾಯದ ವಿಷಯದಲ್ಲಿ ಕೇಂದ್ರ ರೈಲ್ವೆ ಎಲ್ಲಾ ವಲಯಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಮುಂಬೈ ವಿಭಾಗವು ಟಿಕೆಟ್ ರಹಿತ ಅಥವಾ ಅನಿಯಮಿತ ಪ್ರಯಾಣ ಮತ್ತು ಕಾಯ್ದಿರಿಸದ ಲಗೇಜ್‌ಗಳ 20.56 ಲಕ್ಷ ಪ್ರಕರಣಗಳಿಂದ ಗರಿಷ್ಠ 115.29 ಕೋಟಿ ರೂ. ಗಳನ್ನು ಗಳಿಸಿದೆ. ನಂತರದ ಸ್ಥಾನದಲ್ಲಿ ಭೂಸಾವಲ್ ವಿಭಾಗವು 8.34 ಲಕ್ಷ ಪ್ರಕರಣಗಳಿಂದ 66.33 ಕೋಟಿ ರೂ. ಗಳನ್ನು ಗಳಿಸಿದೆ. ಇವು ಅತ್ಯಧಿಕ ದಂಡವನ್ನು ಸಂಗ್ರಹಿಸಿದ ಭಾಗಗಳಾಗಿದ್ದು, ಇವುಗಳ ನಂತರ ನಾಗ್ಪುರ, ಸೋಲಾಪುರ, ಪುಣೆಯಿಂದ ಹೆಚ್ಚಿನ ದಂಡ ಸಂಗ್ರಹಿಸಲಾಗಿದೆ.

ನಾಗ್ಪುರ ವಿಭಾಗವು 5.70 ಲಕ್ಷ ಪ್ರಕರಣಗಳಿಂದ 34.52 ಕೋಟಿ ರೂ., ಸೋಲಾಪುರ ವಿಭಾಗವು 5.44 ಲಕ್ಷ ಪ್ರಕರಣಗಳಿಂದ 34.74 ಕೋಟಿ ರೂ., ಪುಣೆ ವಿಭಾಗವು 3.74 ಲಕ್ಷ ಪ್ರಕರಣಗಳಿಂದ 28.15 ಕೋಟಿ ರೂ. ಮತ್ತು ಅದರ ಕೇಂದ್ರ ಕಚೇರಿಯು 2.47 ಲಕ್ಷ ಪ್ರಕರಣಗಳಿಂದ 20.96 ಕೋಟಿ ರೂ. ದಂಡ ಸಂಗ್ರಹವಾಗಿದೆ.

indian-railway-earned-300-crore-with-only-fines

ಸಿಕ್ಕಿಬಿದ್ದವರಿಂದಲೇ ಇಷ್ಟು ದಂಡದ ಮೊತ್ತವನ್ನು ಸಂಗ್ರಹಿಸಿದರೇ, ಕಣ್ತಪ್ಪಿಸಿ ವಂಚಿಸುತ್ತಿರುವವರು ಅದೆಷ್ಟೋ ಮಂದಿಯಿದ್ದಾರೆ. ಈ ಪ್ರಕರಣಗಳು ಹಾಗೂ ದಂಡ ಸಂಗ್ರಹದ ಮೊತ್ತವನ್ನು ನೋಡಿದ್ರೆ, ರೈಲ್ವೆ ಇಲಾಖೆಗೆ ಎಷ್ಟರ ಮಟ್ಟಿಗೆ ನಷ್ಟ ಆಗುತ್ತಿದೆ ಎಂಬುದನ್ನು ಊಹಿಸಬಹುದು. ಈ ಬಗ್ಗೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, April 6, 2024, 12:22 [IST]
English summary
Indian railway earned 300 crore with only fines
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+