Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್‌ಗೆ ಫಿದಾ ಆಗ್ತೀರ!

ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಮೇಲೆ ಭಾರತೀಯ ರೈಲ್ವೆಯು ಕೆಲಸ ಮಾಡುತ್ತಿದೆ. ರಾತ್ರಿ ಪ್ರಯಾಣಕ್ಕಾಗಿ ಪ್ರೀಮಿಯಂ ಸೇವೆ ಒದಗಿಸಲು ಇವುಗಳನ್ನು ನಿರ್ಮಿಸಲಾಗುತ್ತಿದೆ. ಸದ್ಯ ಈ ಸ್ಲೀಪರ್ ಕೋಚ್‌ಗಳ ಮೂಲ ಮಾದರಿಯನ್ನು BEML ತೈಯಾರಿಸುತ್ತಿದ್ದು, ಶೀಘ್ರದಲ್ಲೇ ಪ್ರಾಯೋಗಿಕವಾಗಿ ಹೊರತರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಹೊಸ ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಮೂಲಮಾದರಿಯನ್ನು ಗಂಟೆಗೆ 180 ಕಿ.ಮೀ ವೇಗದಲ್ಲಿ ಪರೀಕ್ಷಿಸಲಾಗುವುದು. ಜೊತೆಗೆ ಈ ಸ್ಲೀಪರ್ ಕೋಚ್, ವಂದೇ ಭಾರತ್ ಚೇರ್ ಕಾರ್ ರೈಲುಗಳಂತೆಯೇ ಬೋಗಿಗಳ ನಡುವೆ ಸುಗಮ ಸಂಚಾರ, ಉತ್ತಮ ಹವಾನಿಯಂತ್ರಣ ಮತ್ತು ಧೂಳು ಮುಕ್ತ ವಾತಾವರಣಕ್ಕಾಗಿ ಸಂಪೂರ್ಣವಾಗಿ ಮುಚ್ಚಿದ ಗ್ಯಾಂಗ್ವೇಗಳನ್ನು ಹೊಂದಿರುತ್ತವೆ.

Vande Bharat

ವಂದೇ ಭಾರತ್ ವಿನ್ಯಾಸ: ಹೊಸ ವಂದೇ ಭಾರತ್ ಸ್ಲೀಪರ್ ರೈಲಿನ ಮುಂಭಾಗವು ಏರೋಡೈನಮಿಕ್ ವಿನ್ಯಾಸದೊಂದಿಗೆ ಚೂಪಾದ ಮುಂಭಾಗವನ್ನು ಹೊಂದಿದೆ. ಹದ್ದಿನ ಪರಾಕ್ರಮದಿಂದ ಸ್ಪೂರ್ತಿ ಪಡೆದು ವಿನ್ಯಾಸಗೊಳಿಸಲಾಗಿದ್ದು, ಮಸ್ಕುಲರ್ ಡಿಸೈನ್‌ನೊಂದಿಗೆ ಹೆಚ್ಚಿನ ರಗಡ್ ಲುಕ್ ಅನ್ನು ಪಡೆದುಕೊಂಡಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ವಿಶೇಷವಾಗಿ ವರದಿ ಮಾಡಲಾಗಿದೆ.

ಇಂಟೀರಿಯರ್: ವಂದೇ ಭಾರತ್ ಸ್ಲೀಪರ್ ಎಸಿ 3 ಟೈರ್ ಕೋಚ್‌ನಲ್ಲಿ, ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳಿಗಿಂತಲೂ ಉತ್ತಮವಾದ ಕುಶನ್ ಒದಗಿಸಲು ನೋಡುತ್ತಿದೆ. ಹಾಗಾಗಿ ಪ್ರತಿ ಬೆರ್ತ್‌ನ ಬದಿಯಲ್ಲಿ ಹೆಚ್ಚುವರಿ ಕುಶನ್ ಒದಗಿಸಲಿದೆ. ಒಂದು ಎಸಿ 1ನೇ ಬೋಗಿ, 4 ಎಸಿ 2 ಟೈರ್ ಬೋಗಿಗಳು, 11 ಎಸಿ 3 ಟೈರ್ ಬೋಗಿಗಳನ್ನು ಹೊಂದಿರುತ್ತದೆ. (ಕಾನ್ಸೆಪ್ಟ್ ಚಿತ್ರ)

Vande Bharat

16 ಬೋಗಿಗಳನ್ನು ಒಳಗೊಂಡಿರಲಿರುವ ವಂದೇ ಭಾರತ್ ಸ್ಲೀಪರ್ ಮೂಲಮಾದರಿಯು, ಒಟ್ಟು 823 ಪ್ರಯಾಣಿಕರನ್ನು ಸಾಗಿಸಲು ಅನುಕೂಲವಾಗುವಂತೆ ಆಸನಗಳು/ಬೆರ್ತ್ ಸಾಮರ್ಥ್ಯವನ್ನು ಹೊಂದಿರುತ್ತದೆ. ಎಸಿ 3 ಶ್ರೇಣಿಯಲ್ಲಿ 611 ಬೆರ್ತ್ಗಳು, ಎಸಿ 2 ಶ್ರೇಣಿಯಲ್ಲಿ 188 ಬೆರ್ತ್‌ಗಳು ಮತ್ತು ಎಸಿ 1ನೇ ಶ್ರೇಣಿಯಲ್ಲಿ 24 ಬೆರ್ತ್‌ಗಳು ಇರಲಿವೆ.

ಉತ್ತಮ ಶೌಚಾಲಯ: ವಾಶ್ ಬೇಸಿನ್‌ಗಳನ್ನು ಸೋರಿಕೆ ವಿರೋಧಿ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗುತ್ತಿದೆ. 1ನೇ ಎಸಿ ಕಾರ್‌ನಲ್ಲಿ ಬಿಸಿ ನೀರಿನ ಶವರ್ ಸೌಲಭ್ಯವಿರುತ್ತದೆ. ವಿಮಾನ ಶೈಲಿಯ ಜೈವಿಕ ನಿರ್ವಾತ (Biological vacuum) ಶೌಚಾಲಯವು ಮಾಡ್ಯುಲರ್ ಫಿಟ್ಟಿಂಗ್‌ಗಳನ್ನು ಹೊಂದಿರುತ್ತದೆ. ಒಟ್ಟಾರೆ ಈ ರೈಲು ದುರ್ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆಯನ್ನು ಹೊಂದಿರುತ್ತದೆ.

Vande Bharat

ವೈಶಿಷ್ಟ್ಯಗಳು: ವಂದೇ ಭಾರತ್ ಸ್ಲೀಪರ್ ರೈಲು ಸೆನ್ಸಾರ್‌ಗಳನ್ನು ಒಳಗೊಂಡಿರುವ ಅಂತರ ಸಂವಹನ ಬಾಗಿಲುಗಳು, ವಿಶೇಷ ಬೆರ್ತ್‌ಗಳು ಮತ್ತು ವಿಕಲಚೇತನರಿಗೆ ಶೌಚಾಲಯಗಳು, ಸೈಲೆಂಟ್ ಸಲೂನ್ ಸ್ಥಳಕ್ಕಾಗಿ ಸೌಂಡ್ ಇನ್ಸುಲೇಷನ್ ಮತ್ತು ತಗ್ಗಿಸುವ ಕ್ರಮಗಳು, ಸ್ವಯಂಚಾಲಿತ ಬಾಹ್ಯ ಪ್ರಯಾಣಿಕರ ಬಾಗಿಲುಗಳು ಸೇರಿದಂತೆ ಇತರ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. (ಕಾನ್ಸೆಪ್ಟ್ ಚಿತ್ರ)

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: TOI

More from DriveSpark

Article Published On: Friday, March 29, 2024, 11:21 [IST]
English summary
Vande bharat sleeper interior exterior features details
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+