ಭಾರತದಲ್ಲಿ ಹೊಸ ಕ್ರಾಂತಿ ಮಾಡಿದ ಎಂಜಿ ಕಾಮೆಟ್ ಆಧಾರಿತ ಪುಟ್ಟ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಾಗಿ ಪ್ರಾಮುಖ್ಯಯತೆಯನ್ನು ನೀಡುತ್ತಿದೆ. ಈ ನಡುವೆ ಜಾಗತಿಕ ಬೆಸ್ಟ್ ಸೆಲ್ಲರ್ ಆಗಿ ಸುಜುಕಿ ಜಿಮ್ನಿ ಮಾರಾಟವಾಗುತ್ತಿದೆ. ಇದಕ್ಕೆ ಪೈಪೋಟಿಯಾಗಿ ಎಂಜಿ ಮೋಟಾರ್ ಕಂಪನಿಯು ಹೊಸ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಎಂಜಿ ಮೋಟಾರ್ ಕಂಪನಿಯು SAIC-GM-Wuling Baojun Yep ಮಿನಿ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. ಇದು 2023ರ ಶಾಂಘೈ ಆಟೋ ಶೋನಲ್ಲಿ ಪಾದಾರ್ಪಣೆ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು, ಆದರೆ ಅದು ಸಂಭವಿಸಲಿಲ್ಲ. ಈ ಹೊಸ ಎಲೆಕ್ಟ್ರಿಕ್ ಮಿನಿ ಎಸ್‍ಯುವಿಯು ಚೀನಾದಲ್ಲಿ ಬಾಜುನ್ ಡೀಲರ್‌ಶಿಪ್‌ಗಳನ್ನು ತಲುಪಲು ಪ್ರಾರಂಭಿಸಿರುವುದರಿಂದ ಶೀಘ್ರದಲ್ಲೇ ಬಿಡುಗಡೆಯನ್ನು ನಿರೀಕ್ಷಿಸುತ್ತೇವೆ.

YEP Electric SUV

Baojun Yep 3-ಡೋರಿನ ಮಿನಿ ಕಾರ್ ಆಗಿದ್ದು, ನಾಲ್ಕು ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ದೈನಂದಿನ ಪ್ರಯಾಣದ ಅಗತ್ಯಗಳಿಗೆ ಸೂಕ್ತವೆಂದು ತೋರುತ್ತದೆ ಮತ್ತು ಮೈಲ್ಡ್ ಆಫ್-ರೋಡ್ ಸಹ ನಿಭಾಯಿಸಬಲ್ಲದು. ಇದರ ಆಫ್-ರೋಡ್ ಸಾಮರ್ಥ್ಯಗಳ ಬಗ್ಗೆ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಬಾಜುನ್ ಯೆಪ್ ಮಿನಿ-ಇವಿ ಮತ್ತು 3-ಡೋರ್ ಜಿಮ್ನಿಯ ನಡುವಿನ ವಿವಿಧ ಹೋಲಿಕೆಗಳನ್ನು ನೋಡುವುದು ಸುಲಭ .

ಜಿಮ್ನಿ-ಪ್ರೇರಿತ ಶೈಲಿಯು ಮುಂಭಾಗದ ಗ್ರಿಲ್ ವಿಭಾಗ, ಮುಂಭಾಗದ ಬಂಪರ್ ಮತ್ತು ಚೌಕಾಕಾರದ ವ್ಹಿಲ್ ಅರ್ಚಾರ್ ಗಳನ್ನು ಸ್ಪಷ್ಟವಾಗಿ ಕಂಡುಬರುತ್ತದೆ. ಜಿಮ್ನಿಯ ಬಾಡಿಯ ಹೋಲಿಸಿದರೆ Baojun Yep ಎಲೆಕ್ಟ್ರಿಕ್ ಎಸ್‍ಯುವಿಯ ಬಾಡಿ ರಚನೆಯು ಕರ್ವಿಯರ್ ಮತ್ತು ಏರೋಡೈನಾಮಿಕ್ ಆಗಿ ಕಾಣುತ್ತದೆ. ಜಿಮ್ನಿಯ ರೌಂಡ್ ಹೆಡ್‌ಲ್ಯಾಂಪ್‌ಗಳಿಗೆ ಹೋಲಿಸಿದರೆ Baojun Yep ಫ್ಯೂಚರಿಸ್ಟಿಕ್-ಲುಕಿಂಗ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

YEP Electric SUV

ರೂಫ್ ವಿಭಾಗವು ಎರಡೂ ಕಾರುಗಳಿಗೆ ವಿಶಿಷ್ಟವಾಗಿದೆ, Baojun Yep ರೂಫ್ ರೈಲ್‌ಗಳೊಂದಿಗೆ ಹೆಚ್ಚು ಸಾಂಪ್ರದಾಯಿಕ ಫ್ಲಾಟ್ ರೂಫ್ ಅನ್ನು ಪಡೆಯುತ್ತಿದೆ. ಆಯಾಮದಲ್ಲಿ Baojun Yep ಎಲೆಕ್ಟ್ರಿಕ್ ಎಸ್‍ಯುವಿಯು ,3,381 ಮಿಮೀ ಉದ್ದ, 1,685 ಎಂಎಂ ಅಗಲ ಮತ್ತು 1,721 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು 2,110 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. Baojun Yep ವಿಶಿಷ್ಟವಾದ ಹಿಂಬದಿಯ ಪ್ರೊಫೈಲ್ ಅನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಎಸ್‍ಯುವಿಯು ಟಾಪ್-ಸ್ಪೆಕ್ ರೂಪಾಂತರಗಳು ಹಿಂಭಾಗದಲ್ಲಿ 'ಕಾರ್-ವಾಚ್' ಅನ್ನು ಹೊಂದಿದ್ದು, ಇದು 300 x 256 mm ಡಿಜಿಟಲ್ ಡಿಸ್ ಪ್ಲೇಯನ್ನು ಹೊಂದಿದೆ. ಕಾರ್-ವಾಚ್ ಒಂದು ಪಟ್ಟಿಯೊಂದಿಗೆ ಗಡಿಯಾರದ ಆಕಾರದಲ್ಲಿದೆ ಮತ್ತು ಡಿಜಿಟಲ್ ಪರದೆಯನ್ನು ಎಡಭಾಗದಲ್ಲಿ ಇರಿಸಲಾಗುತ್ತದೆ. Baojun Yep ಐದು ಅತ್ಯಾಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ Baojun Yep ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಇನ್ಫೋಟೈನ್‌ಮೆಂಟ್ ವಿಭಾಗದೊಂದಿಗೆ ದೊಡ್ಡ ಡಿಸ್ ಪ್ಲೇಯನ್ನು ಹೊಂದಿದೆ.

YEP Electric SUV

ಮಧ್ಯದಲ್ಲಿ, ಡಿಜಿಟಲ್ ಸಹಾಯಕನಾಗಿ ಕೆಲಸ ಮಾಡುವ ಕಾರ್ಟೂನ್ ಪಾತ್ರವಿದೆ. ಕಾರು ದೊಡ್ಡದಾದ, ಸುತ್ತಿನ ಸ್ಟೀರಿಂಗ್ ಚಕ್ರವನ್ನು ಹೊಂದಿದೆ, ಚೀನಾದಲ್ಲಿ ಕಾರುಗಳೊಂದಿಗೆ ಕಂಡುಬರುವ ಸಾಮಾನ್ಯ ಫ್ಲಾಟ್-ಬಾಟಮ್ ಅಥವಾ ಚದರ-ಆಕಾರದ ಸ್ಟೀರಿಂಗ್ ಚಕ್ರಗಳಿಗಿಂತ ಭಿನ್ನವಾಗಿದೆ. Baojun Yep ಎಲೆಕ್ಟ್ರಿಕ್ ಎಸ್‍ಯುವಿಯು 28.1 kWh LFP ಬ್ಯಾಟರಿಯನ್ನು ಹೊಂದಿದೆ. ಇದು 68 hp ಪವರ್ ಮತ್ತು 140 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದು ಸಿಂಗಲ್ ಮೋಟರ್‌ಗೆ ಕನೆಕ್ಟ್ ಆಗಿರುತ್ತದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯು ಟಾಪ್ ಸ್ಪೀಡ್ 100 ಕಿ.ಮೀ ಆಗಿರುತ್ತದೆ. Baojun Yep ಸಂಪೂರ್ಣ 303 ಕಿ.ಮೀ ಕಿಲೋಮೀಟರ್ ಪ್ರಯಾಣಿಸಬಹುದು . Baojun Yep ಎಲೆಕ್ಟ್ರಿಕ್ ಎಸ್‍ಯುವಿಯು 90,000 ಯುವಾನ್‌ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ, ಇದು ಅಂದಾಜು 10.64 ಲಕ್ಷ ರೂ. ಭಾರತದಲ್ಲಿ ಬಿಡುಗಡೆಗೆ ಸಂಬಂಧಿಸಿದಂತೆ, ಇಲ್ಲಿವರೆಗೂ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

More from DriveSpark

Article Published On: Monday, May 8, 2023, 15:07 [IST]
English summary
Baojun yep mini electric suv unveiled based on mg comet design powertrain
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+