ಅತಿ ಕಡಿಮೆ ಬೆಲೆಗೆ ದೊರೆಯುವ ಬೆಸ್ಟ್ ಸೆಕೆಂಡ್ ಹ್ಯಾಂಡ್ ಕಾರುಗಳು

ಭಾರತದಲ್ಲಿ ಸಣ್ಣ ಕಾರುಗಳು ಯಾವಾಗಲೂ ಉತ್ತಮ ಬೇಡಿಕೆಯನ್ನು ಹೊಂದಿವೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲೂ ಇಂತಹ ಕಾರಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಸಣ್ಣ ಕಾರುಗಳಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಇರುವುದಿಲ್ಲ. ಜೊತೆಗೆ ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ತುಂಬಾ ಸುಲಭವಾಗಿ ಓಡಿಸಬಹುದು.

ಸಣ್ಣ ಹ್ಯಾಚ್‌ಬ್ಯಾಕ್ ಗಳ ಮೈಲೇಜ್‌ ಅತ್ಯುತ್ತಮವಾಗಿರುತ್ತದೆ. ವಿಶೇಷವಾಗಿ, ಮಧ್ಯಮ ವರ್ಗದ ಜನರು ಕೈಗೆಟುಕುವ ಬೆಲೆಯಲ್ಲಿ ಹೊಸ ಕಾರನ್ನು ಖರೀದಿಸಬಹುದು. ಅಲ್ಲದೆ, ಇವುಗಳನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ತುಂಬಾ ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದು. ಐದು ಪ್ರಮುಖ ಸಣ್ಣ ಕಾರುಗಳು ಭಾರತದ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯನ್ನು ಆಳುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನೀವು ಸಣ್ಣ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದೀರಾ? ಆ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗಿದೆ.

ಅತಿ ಕಡಿಮೆ ಬೆಲೆಗೆ ದೊರೆಯುವ ಬೆಸ್ಟ್ ಸೆಕೆಂಡ್ ಹ್ಯಾಂಡ್ ಕಾರುಗಳು

ಮಾರುತಿ ಸುಜುಕಿ ಸ್ವಿಫ್ಟ್ ಎಲ್‌ಎಕ್ಸ್‌ಐ:
ಸ್ವಿಫ್ಟ್ ಸಣ್ಣ ಹ್ಯಾಚ್‌ಬ್ಯಾಕ್ ಆಗಿದೆ. ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿಉತ್ತಮ ಗ್ರಾಹಕರನ್ನು ಹೊಂದಿದ್ದು, ಇದರ ಎಲ್‌ಎಕ್ಸ್‌ಐ ವೆರಿಯಂಟ್‌ಗೆ ಬೇಡಿಕೆಯು ಕೊಂಚ ಹೆಚ್ಚೇ ಎಂದು ಹೇಳಬಹುದು. ಈ ಕಾರಿನ ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯ ಹಾಗೂ ಪ್ರೀಮಿಯಂ ಫೀಚರ್ ಗಳನ್ನೂ ಖರೀದಿದಾದರು ಇಷ್ಟಪಡುತ್ತಾರೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಎಲ್‌ಎಕ್ಸ್‌ಐ ಆರಂಭಿಕ ಬೆಲೆ 5.91 ಲಕ್ಷ ರೂ. (ಎಕ್ಸ್ ಶೋರೂಂ) ಇದೆ.

ಸ್ವಿಫ್ಟ್ ಕಾರು ಏರ್‌ಬ್ಯಾಗ್‌ಗಳು, ದೊಡ್ಡದಾದ ಬೂಟ್ ಸ್ಪೇಸ್ ಅನ್ನು ಹೊಂದಿದ್ದು, ನಿರ್ವಹಣೆ ದೃಷ್ಟಿಯಿಂದಲೂ ಉತ್ತಮವಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಬ ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ನೀಡುತ್ತದೆ. ಪೆಟ್ರೋಲ್ ಆವೃತ್ತಿಯು 22.38 kmpl ಮೈಲೇಜ್ ನೀಡುತ್ತದೆ. CNG ಆವೃತ್ತಿಯು 30.9 kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಪಡೆದಿದ್ದು, ಆರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಆಲ್ಟೊ 800:
ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿಆಲ್ಟೊ 800 ಕಾರು ಉತ್ತಮ ಬೇಡಿಕೆಯನ್ನು ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ಆಲ್ಟೊ 800 ಹೊಸ ಕಾರಿನ ಬೆಲೆ ರೂ.4 ಲಕ್ಷಕ್ಕಿಂತ ಕಡಿಮೆ ಇದ್ದು, ಸೆಕೆಂಡ್ ಹ್ಯಾಂಡ್ ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಆಲ್ಟೊ 800 ಚಿಕ್ಕ ಕುಟುಂಬಗಳಿಗೆ ಸೂಕ್ತವಾದ ಹ್ಯಾಚ್‌ಬ್ಯಾಕ್ ಎಂದು ಹೇಳಬಹುದು. ಇದರ ಪೆಟ್ರೋಲ್ ಆವೃತ್ತಿಯು 22 kmpl ಮೈಲೇಜ್ ನೀಡಲಿದ್ದು, CNG ಆವೃತ್ತಿಯು 31.5 kmplವರೆಗೆ ಮೈಲೇಜ್ ಕೊಡುವ ಸಾಮರ್ಥ್ಯ ಹೊಂದಿದೆ.

ಹುಂಡೈ ಗ್ರಾಂಡ್ ಐ10 ನಿಯೋಸ್:
ದೇಶದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹುಂಡೈ ಗ್ರಾಂಡ್ ಐ10 ನಿಯೋಸ್ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾಗಿದೆ. ಈ ಗ್ರ್ಯಾಂಡ್ i10 ನಿಯಾಸ್ ಕಡಿಮೆ ತೂಕ, ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಈ ಕಾರಿನಲ್ಲಿ ಪವರ್ ಸ್ಟೀರಿಂಗ್, ಎಬಿಎಸ್, ಏರ್ ಬ್ಯಾಗ್ ನಂತಹ ಇತರೆ ವೈಶಿಷ್ಟ್ಯಗಳು ಇವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಬ ಎರಡು ಆಯ್ಕೆಗಳಲ್ಲಿ ಹುಂಡೈ ಗ್ರಾಂಡ್ ಐ10 ನಿಯೋಸ್ ಲಭ್ಯವಿದ್ದು, ರೂ.5.43 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.

ಮಾರುತಿ ಸುಜುಕಿ ವ್ಯಾಗನ್ ಆರ್:
ವಿಶ್ವಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಸಣ್ಣ ಕಾರು ಮಾದರಿಗಳಲ್ಲಿ ವ್ಯಾಗನ್ ಆರ್ ಕೂಡ ಮೊದಲ ಸ್ಥಾನದಲ್ಲಿ ಇರುತ್ತದೆ. ಹೆಚ್ಚು ಸ್ಥಳಾವಕಾಶ, ಕೈಗೆಟಕುವ ಬೆಲೆ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು ಭಾರತದಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಪೆಟ್ರೋಲ್ ಆವೃತ್ತಿಯು ಗರಿಷ್ಠ 23.5 kmpl ಮೈಲೇಜ್ ನೀಡುವ ಸಾಮರ್ಥ ಹೊಂದಿದ್ದು, CNG ಆವೃತ್ತಿಯು ಗರಿಷ್ಠ 34 kmpl ಮೈಲೇಜ್ ನೀಡಲಿದೆ. ಈ ಹೊಸ ಕಾರಿನ ಬೆಲೆ ರೂ.5.47 ಲಕ್ಷದಿಂದ ಆರಂಭವಾಗಲಿದೆ.

ರೆನಾಲ್ಟ್ ಕ್ವಿಡ್:
ಈ ಹ್ಯಾಚ್‌ಬ್ಯಾಕ್ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲೂ ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಇದು ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಅಂದರೆ ರೂ.4.70 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ರೆನಾಲ್ಟ್ ಕ್ವಿಡ್ 799 ಯಿಂದ 999 ಸಿಸಿ ಎಂಜಿನ್ ಹೊಂದಿದ್ದು, 20.7 ರಿಂದ 22 kmpl (ಪೆಟ್ರೋಲ್) ಮೈಲೇಜ್ ನೀಡಲಿದೆ. ಐದು ಜನರು ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಸೆಕೆಂಡ್ ಹ್ಯಾಂಡ್ ನಲ್ಲಿ ಈ ಹ್ಯಾಚ್‌ಬ್ಯಾಕ್ ಅನ್ನು ಖರೀದಿಸಿದರೆ ಮತ್ತಷ್ಟು ಕಡಿಮೆ ಬೆಲೆಗೆ ದೊರೆಯಲಿದೆ.

Most Read Articles

Kannada
English summary
Best second hand cars available lowest price
Story first published: Friday, January 20, 2023, 12:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X