ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಳಪೆ ಗುಣಮಟ್ಟದ ಕಾರುಗಳು!

ಸ್ವಂತವಾಗಿ ಒಂದು ಕಾರು ಖರೀದಿಸಬೇಕೆಂದು ಎಲ್ಲಾರ ಕನಸು. ಹೊಸ ಕಾರು ಖರೀದಿಸುವಾಗ ಹೆಚ್ಚು ಜನರು ಅದರ ಬೆಲೆ ಮತ್ತು ಮೈಲೇಜ್ ಬಗ್ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಳು (Cars) ಅತಿ ಹೆಚ್ಚು ಮಾರಾಟವಾಗುತ್ತಿದೆ. ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಹಲವು ದಶಕಗಳಿಂದ ನಂ.1 ಸ್ಥಾನದಲ್ಲಿದೆ.

ಭಾರತದಲ್ಲಿ ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ XUV300 ನಂತಹ ವಾಹನಗಳು ಪ್ರಯಾಣಿಕರ ಸುರಕ್ಷತೆಯಲ್ಲಿ ಮಾನದಂಡಗಳನ್ನು ಹೊಂದಿದ್ದು, ಈ ಎಸ್‍ಯುವಿಗಳು ಕ್ರ್ಯಾಶ್ ಟೆಸ್ಟ್ ನಲ್ಲಿ 5-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಈ ಕಾರುಗಳ ಜೊತೆ ಕ್ರ್ಯಾಶ್ ಟೆಸ್ಟ್ ನಲ್ಲಿ ಶೂನ್ಯ ಅಂಕ ಪಡೆದ ಮಾರುತಿ ಸುಜುಕಿ ಕಾರುಗಳ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಕಡಿಮೆ ಸುರಕ್ಷತಾ ವೈಶಿಷ್ಟ್ಯಗಳ ಹೊರತಾಗಿಯೂ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

Cars

ಮಾರುತಿ ಸುಜುಕಿ ವ್ಯಾಗನ್‌ಆರ್ ಭಾರತದ ಹೆಚ್ಚು ಬೇಡಿಕೆಯಿರುವ ವಾಹನಗಳಲ್ಲಿ ಮುಂಚೂಣಿಯಲ್ಲಿದೆ. ಅದರ ಕೈಗೆಟುಕುವ ಬೆಲೆ ಮತ್ತು ವಿಶಾಲವಾದ ಹೆಡ್‌ರೂಮ್‌ಗಾಗಿ ಈ ಟಾಲ್ ಬಾಯ್ ಎಂದು ಕರೆಯುವ ವ್ಯಾಗನ್‌ಆರ್ ಹೆಚು ಜನಪ್ರಿಯವಾಗಿದೆ. ಇದು ಹಿಂದಿನ ನವೆಂಬರ್‌ನಲ್ಲಿ 16,567 ಯುನಿಟ್‌ಗಳ ಮಾರಾಟದೊಂದಿಗೆ ಅತಿಹೆಚ್ಚು ಮಾರಾಟವಾದ ಕಾರುಗಳ ಪಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ.

ಈ ಕಾರಿನ ಪ್ರಾರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.55 ಲಕ್ಷವಾಗಿದೆ. ಈ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳ ಹೊರತಾಗಿಯೂ, ಸಂಪೂರ್ಣ ಒನ್-ಸ್ಟಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಮತ್ತು ಮಕ್ಕಳ ಸುರಕ್ಷತೆಯ ಮೇಲೆ ಯಾವುದೇ ಸ್ಕೋರ್ ಗಳಿಸದ ವ್ಯಾಗನ್‌ಆರ್‌ನ ಸುರಕ್ಷತಾ ಕ್ರಮಗಳು ಪರಿಶೀಲನೆಗೆ ಒಳಪಡಿಸಬೇಕಿದೆ.

Cars

ಭಾರತೀಯ ವಾಹನ ಆದ್ಯತೆಯ ಮತ್ತೊಂದು ಜನಪ್ರಿಯ ಕಾರು ಮಾರುತಿ ಸುಜುಕಿ ಸ್ವಿಫ್ಟ್. ಈ ಮಾದರಿಯು ಮಾಸಿಕ ಮಾರಾಟವು 10,000 ಯುನಿಟ್‌ಗಳನ್ನು ದಾಟುವುದರೊಂದಿಗೆ ರಾಷ್ಟ್ರದ ಸೂಪರ್‌ಸ್ಟಾರ್ ಮಾಡೆಲ್ ಎಂದು ನಾಮಕರಣಗೊಂಡ ಕಾರ್ ಆಗಿದೆ. ನವೆಂಬರ್‌ ತಿಂಗಳಿನಲ್ಲಿ 15,311 ಸ್ವಿಫ್ಟ್‌ಗಳು ಮಾರಾಟವಾಗಿದೆ. ವ್ಯಾಗನ್‌ಆರ್‌ಗೆ ಹೋಲುವ ಸ್ವಿಫ್ಟ್ ಸುರಕ್ಷತಾ ವಿಭಾಗದಲ್ಲಿ ವಯಸ್ಕ ಮತ್ತು ಮಕ್ಕಳ ಪ್ರಯಾಣಿಕರಿಗೆ ಒಂದು-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಮಾತ್ರ ಪಡೆದುಕೊಂಡಿದೆ.

ಇನ್ನು ಭಾರತದಲ್ಲಿ ಕೈಗೆಟುಕುವ ಕಾರುಗಳಲ್ಲಿ ಒಂದಾದ, ಮಾರುತಿ ಸುಜುಕಿ ಆಲ್ಟೊ K10 ದೀರ್ಘಕಾಲಿಕ ಬೆಸ್ಟ್ ಸೆಲ್ಲರ್ ಆಗಿದೆ. ನವೆಂಬರ್ 2023 ರಲ್ಲಿ ಕೊನೆಯ ಬಾರಿಗೆ 8076 ಯುನಿಟ್‌ಗಳು ಮಾರಾಟವಾಗಿತ್ತು. ಇದರ ಸುರಕ್ಷತಾ ರೇಟಿಂಗ್‌ಗಳು, ವಯಸ್ಕರ ಸುರಕ್ಷತೆಗಾಗಿ 2 2 ಸ್ಟಾರ್ ಗಳು ಆದರೆ ಮಕ್ಕಳ ಸುರಕ್ಷತೆಗೆ ತೊಂದರೆದಾಯಕ ಶೂನ್ಯ ಅಂಕ ಪಡೆದುಕೊಂಡಿದೆ.

Cars

ಇತರ ಮಾರುತಿ ಕಾರುಗಳೊಂದಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಉತ್ತಮವಾಗಿದ್ದರೂ, Alto K10 ವೆಚ್ಚ-ಪರಿಣಾಮಕಾರಿತ್ವವು ಗ್ರಾಹಕರ ಆದ್ಯತೆಗಳಲ್ಲಿ ಅತ್ಯುತ್ತಮವಾದ ಸುರಕ್ಷತಾ ಕ್ರಮಗಳನ್ನು ಹೊಂದಿದೆ. ಗ್ರಾಹಕರು ಕಾರುಗಳನ್ನು ಖರಿದಿಸುವಾಗ ಸುರಕ್ಷತೆಗೂ ಹೆಚ್ಚಿನ ಪ್ರಾಮುಖ್ಯಯನ್ನು ನೀಡಬೇಕಾಗುತ್ತದೆ. ಹೆಚ್ಚು ಸುರಕ್ಷತೆ ಕಾರುಗಳು ತುಸು ದುಬಾರಿಯಾಗಿರುವುದರಿಂದ ಹಲವರು ಬಜೆಟ್ ಬೆಲೆಯ ಕಾರುಗಳನ್ನು ಆಯ್ಕೆಮಾಡಿಕೊಳ್ಳುತ್ಟಾರೆ.

ಇನ್ನು ಸುಜುಕಿ ನ್ಯೂ ಜನರೇಷನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ತಾಯಿನಾಡು ಜಪಾನ್ ನಲ್ಲಿ ಪರಿಚಯಿಸಿದೆ. ಹೊಸ ಸುಜುಕಿ ಸ್ವಿಫ್ಟ್ ಕಾರುಪರಿಷ್ಕೃತ ಸ್ಟೈಲಿಂಗ್ ಮತ್ತು ಹೊಸ ಇಂಜಿನ್ ಆಯ್ಕೆಗಳೊಂದಿಗೆ ನವೀಕರಿಸಿದ ಇಂಟಿಯರ್ ಗಳೊಂದಿಗೆ ಬರುತ್ತಿದೆ. 2024ರ ಮಾರುತಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ.ಈ ಮಾರುತಿ ಸುಜುಕಿ ಸ್ವಿಫ್ಟ್ ದೀರ್ಘಕಾಲದಿಂದಲೇ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Wednesday, December 13, 2023, 8:30 [IST]
English summary
Best selling cars india minimal safety details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+