Bharat NCAP: ಇನ್ಮುಂದೆ ಭಾರತದಲ್ಲೇ ನಡೆಯಲಿದೆ ಕಾರು ಸುರಕ್ಷತೆ ಟೆಸ್ಟ್: ನಿತಿನ್‌ ಗಡ್ಕರಿ ಚಾಲನೆ

ಭಾರತದ ಕಾರು ಉತ್ಪಾದನಾ ಕಂಪನಿಗಳು ಇನ್ನು ಮುಂದೆ ತಮ್ಮ ಕಾರುಗಳನ್ನು ಸುರಕ್ಷತೆಯ ರೇಟಿಂಗ್‌ಗಾಗಿ ಗ್ಲೋಬಲ್‌ ಎನ್‌ಸಿಎಪಿಗೆ ಕಳುಹಿಸುವ ಅಗತ್ಯವಿಲ್ಲ. ಏಕೆಂದರೆ, ಭಾರತದಲ್ಲೇ ಕಾರುಗಳ ಸುರಕ್ಷತೆಯನ್ನು ಅಳೆಯುವ ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಮ್‌ಗೆ (Bharat New Car Assessment Programme or Bharat NCAP) ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Nitin Gadkari) ಚಾಲನೆ ನೀಡಿದ್ದಾರೆ.

ಸ್ವಂತ ಎನ್‌ಸಿಪಿ ಹೊಂದಿದ ರಾಷ್ಟ್ರಗಳಾದ ಜಪಾನ್‌, ಆಸ್ಟ್ರೇಲಿಯಾ, ಅಮೆರಿಕ, ಲ್ಯಾಟಿನ್‌ ಅಮೆರಿಕದಂತಹ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಬಹು ನಿರೀಕ್ಷೆಯ 'ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಮ್‌ಗೆ (NCAP) ಇಂದು (ಆ. 22ರಂದು) ದೆಹಲಿದೆಯಲ್ಲಿ ಉದ್ಘಾಟಿಸಿದರು. ಭಾರತದ ರಸ್ತೆ ಸುರಕ್ಷತೆ ಹಾಗೂ ಕಾರುಗಳ ಸುರಕ್ಷತೆಯನ್ನು ಅಳೆಯುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

NCAP

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಅಡಿಯಲ್ಲಿ ಭಾರತ್‌ ಎನ್‌ಸಿಎಪಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು 3.5 ಟನ್‌ ತೂಕದ ಹೆಚ್ಚಿಸುವ ಮೂಲಕ ಭಾರತದಲ್ಲಿ ಕಾರು ಸುರಕ್ಷತೆಯನ್ನು ಸುಧಾರಿಸುತ್ತದೆ. ಅಮೆರಿಕ, ಜಪಾನ್‌ನಂತಹ ಶ್ರೇಣಿಯಲ್ಲಿಯೇ ಭಾರತದ ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಭಾರತ್‌ ಎನ್‌ಸಿಎಪಿಯನ್ನು ಜಾರಿಗೆ ತರಲಾಗಿದೆ. ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಮೊದಲು ಕಾರಿನ ಮುಂಭಾಗ (Frontal), ಬದಿ (Side), ಪೋಲ್‌ ಸೈಡ್‌ನಲ್ಲಿ ಕ್ರ್ಯಾಶ್‌ ಮಾಡಿಸಿ, ದಕ್ಷತೆ ಆಧಾರದ ಮೇಲೆ ರೇಟಿಂಗ್‌ ನೀಡಲಾಗುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮುನ್ನ ಕಾರಿನ ಮುಂಭಾಗ , ಕಾರಿನ ಸೈಡ್ ಪ್ರೊಪೈಲ್, ಪೋಲ್‌ ಸೈಡ್‌ನಲ್ಲಿ ಕ್ರ್ಯಾಶ್‌ ಮಾಡುತ್ತಾರೆ. ಭಾರತ್ ಎನ್‌ಸಿಎಪಿ ಪರೀಕ್ಷಾ ನಿಯಮಗಳು ಬಹುತೇಕ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಪ್ರೋಟೋಕಾಲ್‌ಗಳಿಗೆ ಹೋಲಿಕೆಯಾಗಲಿವೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆಯೇ 1 - 5 ಸ್ಟಾರ್ ರೇಟಿಂಗ್ ನೀಡಲಾಗುತ್ತದೆ.

2016ರಲ್ಲಿಯೇ ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಮ್‌ ಅನ್ನು ಪ್ರಕಟಿಸಲಾಗಿತ್ತು. 2023ರ ಜೂನ್‌ನಲ್ಲಿಯೇ ಇದಕ್ಕೆ ಅನುಮೋದನೆ ಸಿಕ್ಕಿದೆ. ಇದೀಗ ಇದು ಕೊನೆಗೂ ಅಧಿಕೃತವಾಗಿ ಜಾರಿಗೆ ಬಂದಿದೆ. ಎನ್‌ಸಿಎಪಿಗೆ ಚಾಲನೆ ನೀಡಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಮಾತನಾಡೀ, ಮಾರುಕಟ್ಟೆಯು ವೆಚ್ಚ-ಕೇಂದ್ರಿತವಾಗಿಲ್ಲ, ಮಾರುಕಟ್ಟೆಯು ಗುಣಮಟ್ಟ ಕೇಂದ್ರಿತವಾಗಿದೆ ಎಂದಿದ್ದಾರೆ.

ವೆಚ್ಚ ಬಹಳ ಮುಖ್ಯವೆಂದು ಅರ್ಥಮಾಡಿಕೊಂಡಿದ್ದೆ, ಆದರೆ, ಇದೇ ವೇಳೆ ಜನರು ಗುಣಮಟ್ಟ, ಮಾದರಿಯ ಬಗ್ಗೆ, ವಿನ್ಯಾಸದ ಬಗ್ಗೆ ಗ್ರಾಹಕರು ಮುಂಜಾಗ್ರತೆ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಉತ್ತಮ ವಿನ್ಯಾಸಗಳನ್ನು, ಉತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಮಾದರಿಗಳನ್ನು ತಯಾರಿಸುವ ಕಂಪನಿಗಳ ಪಾಲು ಹೆಚ್ಚುತ್ತಿದೆ. ಭಾರತವನ್ನು ವಿಶ್ವದ ನಂಬರ್ 1 ಆಟೋಮೊಬೈಲ್ ಹಬ್ ಮಾಡುವ ಧ್ಯೇಯದಲ್ಲಿ, ನಮ್ಮ ಆಟೋಮೊಬೈಲ್ ಉದ್ಯಮವನ್ನು ಆತ್ಮನಿರ್ಭರ್ ಮಾಡುವಲ್ಲಿ ಭಾರತ್ ಎನ್‌ಸಿಎಪಿ ನಿರ್ಣಾಯಕವಾಗಿದೆ ಎಂದು ಹೇಳಿದರು.

BNCAP ಅಡಿಯಲ್ಲಿ, ಮೋಟಾರು ವಾಹನಗಳ ತಯಾರಕರು ಅಥವಾ ಆಮದುದಾರರು ಕೇಂದ್ರ ಸರ್ಕಾರದ ಏಜೆನ್ಸಿಗೆ ಫಾರ್ಮ್ 70-A ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಜನಪ್ರಿಯ ಕಾರು ತಯಾರಕರಾದ ಟೊಯೋಟಾ, ಮಾರುತಿ ಸುಜುಕಿ ಮತ್ತು ಮಹೀಂದ್ರಾ ಈ ಕಾರುಗಳ ಸುರಕ್ಷತೆಯನ್ನು ಅಳೆಯುವ ಎನ್‌ಸಿಎಪಿ ದೇಶೀಯ ಉದ್ಯಮಕ್ಕೆ ಒಂದು ದಿಟ್ಟ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

ವಿಶ್ವದಲ್ಲಿ ಅತಿಹೆಚ್ಚು ರಸ್ತೆ ಅಪಘಾತವಾಗುವ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಭಾರತದಲ್ಲಿ, ಈ ಪರೀಕ್ಷೆಯು ಗ್ರಾಹಕರಿಗೆ ಸೇಫ್ಟಿ ಸಲುವಾಗಿ ಅವರ ಇಷ್ಟದ ಕಾರನ್ನು ಆಯ್ದುಕೊಳ್ಳಲು ನೆರವಾಗುತ್ತದೆ. ದೇಶ - ವಿದೇಶ ಪ್ರಮುಖ ಕಂಪನಿಗಳು ತಮ್ಮ ಕಾರುಗಳ ಬಗ್ಗೆ ಖರೀದಿದಾರರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಿ, ಮಾರಾಟ ಪ್ರಮಾಣವನ್ನು ದ್ವಿಗುಣಗೊಳಿಸಿಕೊಳ್ಳಲು ಸ್ವಯಂಪ್ರೇರಿತವಾಗಿ ಭಾರತ್ ಎನ್‌ಸಿಎಪಿ ಪರೀಕ್ಷೆಗೆ ಒಳಗಾಗಬಹುದು. ಇನ್ನೂ ಅನೇಕ ತಯಾರಕರು, ಈ ಟೆಸ್ಟ್ ಕಡ್ಡಾಯಗೊಳಿಸುವವರೆಗೂ ಇದರಿಂದ ಹಿಂದೆ ಕೂಡ ಸರಿಯಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, August 22, 2023, 16:34 [IST]
English summary
Bharat ncap indias own crash safety test launched details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+