BMTC ಗೆ ಮೊದಲ ಅತ್ಯಾಧುನಿಕ ಟಾಟಾ ಎಲೆಕ್ಟ್ರಿಕ್ ಬಸ್ ಸೇರ್ಪಡೆ

ಬಿಎಂಟಿಸಿಗೆ ಎಂಟ್ರಿ ಕೊಡಲಿವೆ ಟಾಟಾ ಮೋಟಾರ್ಸ್‌ನ 921 ಎಲೆಕ್ಟ್ರಿಕ್ ಬಸ್ಸುಗಳು, ಟಾಟಾದ ಎಲೆಕ್ಟ್ರಿಕ್ ಬಸ್‌ನ ಪ್ರಥಮ ಪ್ರೊಟೊಟೈಪ್ ಮಾದರಿಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಇಂದು ಉದ್ಘಾಟಿಸಿದ್ದಾರೆ. ಈ ಮೂಲಕ ಪ್ರಯಾಣಿಕರು ಶೀಘ್ರದಲ್ಲೇ ಆರಾಮದಾಯಕ ಮತ್ತು ಪರಿಸರ ಸ್ನೇಹಿ ಪ್ರಯಾಣವನ್ನು ಆನಂದಿಸುವುದು ಖಚಿತವಾಗಿದೆ.

ಈ ಕುರಿತು ಮಾತನಾಡಿದ ಸಚಿವರಾಮಲಿಂಗಾ ರೆಡ್ಡಿ, ಕರ್ನಾಟಕ ಸರ್ಕಾರವು ಸಾರಿಗೆ ಸಂಸ್ಥೆಗಳಿಗೆ 4,000 ಹೊಸ ವಾಹನಗಳನ್ನು ಒದಗಿಸುವ ಮತ್ತು 13,000 ಸಿಬ್ಬಂದಿಗಳ ನೇಮಕಾತಿಗೆ ಅನುಮತಿ ಕೊಡುವ ಜೊತೆಗೆ ಬಜೆಟ್ ‌ನಲ್ಲಿ 500 ಕೋಟಿ ರೂ. ನಿಗಮಗಳಿಗೆ ಬಸ್ ಖರೀದಿಗಾಗಿ ವಿಸ್ತರಿಸುವುದಾಗಿ ತಿಳಿಸಿದರು. ಸದ್ಯ ಮುಂಬರುವ ದಿನಗಳಲ್ಲಿ ಬೆಂಗಳೂರಿನ ಸಾರ್ವಜನಿಕರಿಗಾಗಿ ಬಿಎಂಟಿಸಿ 921 ಟಾಟಾ ಎಲೆಕ್ಟ್ರಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸುತ್ತಿದೆ ಎಂದರು.

bmtc-launched-1st-electric-prototype-bus

ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಘಟಕ ವ್ಯವಸ್ಥಾಪಕರುಗಳಿಗೆ ನೂತನ ವಾಹನಗಳನ್ನು ಒದಗಿಸಲಾಗಿದ್ದು, ಬಸ್ ನಿಲ್ದಾಣಗಳು, ಮೋಟಾರು ವಾಹನ ಇಲಾಖೆ, ಅಪಘಾತ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದೆಂದು ತಿಳಿಸಿದರು. ಈ ನೂತನ 921 ಎಲೆಕ್ಟ್ರಕ್ ಬಸ್ಸುಗಳನ್ನು ಬಿಎಂಟಿಸಿ ವಾಹನ ಬಲಕ್ಕೆ ಈ ಆರ್ಥಿಕ ವರ್ಷದೊಳಗಾಗಿ ಹಂತ-ಹಂತವಾಗಿ ಸೇರ್ಪಡೆ ಮಾಡುವುದಾಗಿ ತಿಳಿಸಿದರು.

BMTC ಈ ಹೊಸ 921 ಟಾಟಾ ಎಲೆಕ್ಟ್ರಿಕ್ ವಾಹನಗಳನ್ನು ಭಾರತ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ ಜಿ.ಸಿ.ಸಿ ಆಧಾರದ ಮೇಲ್ ಕಾರ್ಯಾಚರಣೆ ಮಾಡಲಿದ್ದಾರೆ. ಈ ಬಸ್ಸುಗಳು 12 ಮೀಟರ್ ಉದ್ದದ low floor ಎಲೆಕ್ಟ್ರಿಕ್ ಬಸ್ಸುಗಳಾಗಿದ್ದು, ಎತ್ತರ 400 mm ಇದೆ. 35 ಪ್ರಯಾಣಿಕರಿಗೆ ಆರಾಮದಾಯಕ ಆಸನ ಮತ್ತು ಅದರ ಕೆಳ-ಮಹಡಿ ಸಂರಚನೆಯೊಂದಿಗೆ ಸುಲಭ ಪ್ರವೇಶ ಮತ್ತು ಹೊರಹೋಗುವಿಕೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

bmtc-launched-1st-electric-prototype-bus

ಬಿಎಂಟಿಸಿ 1,500 ಎಲೆಕ್ಟ್ರಿಕ್ ಬಸ್ಸುಗಳನ್ನು ತನ್ನ ವಾಹನ ಬಲಕ್ಕೆ ಸೇರ್ಪಡೆಗೊಳಿಸಲು ಗ್ರ್ಯಾಂಡ್ ಚಾಲೆಂಜ್ ನಲ್ಲಿ ಭಾಗವಹಿಸಿತ್ತು. GCC ಆಧಾರದಲ್ಲಿ ಈ ಬಸ್ಸುಗಳ ಪ್ರತಿ ಕಿ.ಮೀ ಕಾರ್ಯಾಚರಣೆಯ ದರ ರೂ.41.01 ಮೊತ್ತವಾಗಿರುತ್ತದೆ. ಭಾರಿ ಕೈಗಾರಿಕ ಸಚಿವಾಲಯ, ಕೇಂದ್ರ ಸರ್ಕಾರ ವತಿಯಿಂದ 921 ಟಾಟಾ ಎಲೆಕ್ಟ್ರಿಕ್ ಬಸ್ಸುಗಳಿಗೆ ಸಹಾಯಧನವನ್ನು ಒದಗಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ಸಹಾಯಧನದ ಅನ್ವಯ ಬಿಎಂಟಿಸಿ ಒಟ್ಟು 921 ಎಲೆಕ್ಟ್ರಿಕ್ ಬಸ್ಸುಗಳನ್ನು Gross Cost Contract (GCC) Model ಆಧಾರದ ಮೇಲೆ ಕಾರ್ಯಾಚರಣೆ ಮಾಡಬಹುದಾಗಿದೆ. ಪ್ರತಿ ಬಸ್ಸನ್ನು45 ನಿಮಿಷ Opportunity Charging ಮಾಡಲಾಗುವುದು. ಈ ಎಲೆಕ್ಟ್ರಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಶಾಂತಿನಗರ, ಜಯನಗರ, ಹೆಣ್ಣೂರು, ದೀಪಾಂಜಲಿನಗರ, ರಾಜರಾಜೇಶ್ವರಿನಗರ, ಪೀಣ್ಯ 2ನೇ ಹಂತ, ಜಿಗಣಿ, ಕೆ.ಆರ್.ಪುರಂ, ಸೀಗೇಹಳ್ಳಿ, ಹೊಸಕೋಟೆ ಸೇರಿದಂತೆ 10 ಘಟಕಗಳನ್ನು ಗುರುತಿಸಲಾಗಿದೆ.

bmtc-launched-1st-electric-prototype-bus

ಪ್ರಾಯೋಗಿಕವಾಗಿ ಕಾರ್ಯಚರಣೆ ಮಾಡುವ ಮಾರ್ಗ: 96-ಎ ಮಾರ್ಗ: ಕೆಂಪೇಗೌಡ ಬಸ್ ನಿಲ್ದಾಣ, ಸುಜಾತ ಟಾಕೀಸ್, ಇಂಡಸ್ಟ್ರಿಯಲ್ ಟೌನ್ ರಾಜಾಜಿನಗರ, ಹಾವನೂರು ವೃತ್ತ, ಮೋದಿ ಆಸ್ಪತ್ರೆ, ಹರಿಶ್ಚಂದ್ರ ಘಾಟ್, ಸೆಂಟ್ರಲ್, ಕೆಂಪೇಗೌಡ ಬಸ್ ನಿಲ್ದಾಣದ ಮೂಲಕ ಪ್ರಯೋಗಿಕ ಕಾರ್ಯಾಚರಣೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, July 28, 2023, 17:06 [IST]
English summary
Bmtc launched 1st electric prototype bus
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+