ವೀಕ್ಷಿಸಿ: ರಸ್ತೆಯಲ್ಲಿ ಊಸರವಳ್ಳಿಯಂತೆ ಬಣ್ಣ ಬದಲಿಸುತ್ತೆ BMW ಕಾರು.. ತಲೆ ತಿರುಗುವಂತಹ ವೈಶಿಷ್ಟ್ಯ

ಐಷಾರಾಮಿ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯೂ (BMW) ಹೊಸ ವೈಶಿಷ್ಟ್ಯವನ್ನು ಪರಿಚಯಿಸುವ ಮೂಲಕ ಅಂತರ ರಾಷ್ಟ್ರೀಯ ಕಾರು ಮಾರುಕಟ್ಟೆಯಲ್ಲಿ ಆಗಾಗ ತೀವ್ರ ಸಂಚಲನ ಸೃಷ್ಟಿಸುತ್ತಿರುತ್ತದೆ. ಸದ್ಯ, ಕ್ಷಣಕೊಂದು ಬಣ್ಣ ಬದಲಾಯಿಸುವ ಬಿಎಂಡಬ್ಲ್ಯೂ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಬಿಎಂಡಬ್ಲ್ಯೂ ಕಂಪನಿ ಐಎಕ್ಸ್ ಫ್ಲೋ (iX Flow) ಎಂಬ ಫೀಚರ್ ಅನ್ನು ಬಹಳ ಹಿಂದೆಯೇ ಪರಿಚಯಿಸಿತ್ತು. ಆ ಚಮತ್ಕಾರಿ ವೈಶಿಷ್ಟ್ಯವನ್ನು ರಸ್ತೆಯಲ್ಲಿ ಕಣ್ತುಂಬಿಕೊಳ್ಳುವ ಭಾಗ್ಯ ಜನರಿಗೆ ಕೆಲವೇ ದಿನಗಳ ಹಿಂದೆಯಷ್ಟೇ ದೊರೆತಿದೆ. ಈ ಫೀಚರ್ ಪಡೆದಿರುವ ಕಾರು, ಕ್ಷಣಾರ್ಧದಲ್ಲಿ ಬಿಳಿ ಬಣ್ಣದಿಂದ ಬೂದು ಬಣ್ಣಕ್ಕೆ ಬದಲಾಗುತ್ತದೆ. ಆದರೆ, ಈ ದೃಶ್ಯಗಳು ಸೆರೆಯಾಗಿರುವ ನಿಖರವಾದ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ವೀಕ್ಷಿಸಿ: ರಸ್ತೆಯಲ್ಲಿ ಊಸರವಳ್ಳಿಯಂತೆ ಬಣ್ಣ ಬದಲಿಸುತ್ತೆ BMW ಕಾರು.. ತಲೆ ತಿರುಗುವಂತಹ ವೈಶಿಷ್ಟ್ಯ

ಬಿಎಂಡಬ್ಲ್ಯೂ ಅಧಿಕೃತ ವೆಬ್‌ಸೈಟ್ ಮಾಹಿತಿ ಪ್ರಕಾರ, ಐಎಕ್ಸ್ ಫ್ಲೋ ಫೀಚರ್ ಮೂಲಕ ಆಟೋಮೊಬೈಲ್ ಉದ್ಯಮದಲ್ಲಿ ದೊಡ್ಡ ಬದಲಾವಣೆಯನ್ನು ತರುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ. ಇದು, ಕಾರುಗಳಿಗೆ ಹೊಸ ಹೊಚ್ಚ ಲುಕ್ ನೀಡುತ್ತದೆ. ವಾಹನಗಳು 'ಎಲೆಕ್ಟ್ರೋಫೋರೆಟಿಕ್ ಫಿಲ್ಮ್‌'ನಿಂದ ಲೇಪಿತವಾದಾಗ ಮಾತ್ರ ಬಣ್ಣ ಬದಲಾಯಿಸಲು (ಸಾಮಾನ್ಯ ಭಾಷೆಯಲ್ಲಿ ಹೇಳಬೇಕಾದರೆ ಊಸರವಳ್ಳಿಯಂತೆ) ಸಾಧ್ಯವಾಗುತ್ತದೆ.

ಸೊಷಿಯಲ್ ಮೀಡಿಯಾದಲ್ಲಿ ತೀವ್ರ ಸಂಚಲನ ಮೂಡಿಸಿರುವ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರನೊಬ್ಬ, 'ಈ ವೈಶಿಷ್ಟ್ಯ ಪ್ರತಿಯೊಂದು ಕಾರಿನಲ್ಲೂ ಬರಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ, 'ಈ ಫೀಚರ್ ನಲ್ಲಿ ಮತ್ತಷ್ಟು ಹೆಚ್ಚಿನ ಬಣ್ಣವನ್ನು ಸೇರಿಸಬೇಕು ಎಂದು ಬಿಎಂಡಬ್ಲ್ಯೂ ಕಂಪನಿಯನ್ನು ಕೇಳಿಕೊಂಡಿದ್ದಾರೆ.

ಇನ್ನೊಬ್ಬ ಬಳಕೆದಾರ, 'ಕಾರುಗಳಲ್ಲಿ ಈ ರೀತಿಯ ತಂತ್ರಜ್ಞಾನವನ್ನು ಬಳಕೆ ಮಾಡಿದರೆ, ಹೆಚ್ಚು ಅಪರಾಧಗಳು ನಡೆಯಬಹುದು' ಎಂದು ಹೇಳಿದ್ದಾರೆ. ಅದೇ ತರಹ ಮತ್ತೊಬ್ಬರು, 'ಆಸಕ್ತಿದಾಯಕ ವೈಶಿಷ್ಟ್ಯವಾಗಿದೆ. ಆದರೆ, ಕ್ರಿಮಿನಲ್ ಚಟುವಟಿಕೆಗಳಲ್ಲಿ ವಾಹನಗಳನ್ನು ಗುರುತಿಸುವಲ್ಲಿ ಇದರಿಂದ ಸಮಸ್ಯೆಯಾಗುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗ, 'ಒಂದೊಮ್ಮೆ ಈ ಕಾರಿನಲ್ಲಿ ಸಣ್ಣ ಅಪಘಾತವಾದರೇ ರಿಪೇರಿಗೆ ಎಷ್ಟು ಖರ್ಚು ಮಾಡಬೇಕು?' ಎಂದು ಪ್ರಶ್ನೆ ಮಾಡಿದ್ದಾರೆ.

ಬಿಎಂಡಬ್ಲ್ಯೂ ಐಎಕ್ಸ್ ಫ್ಲೋ ವೈಶಿಷ್ಟ್ಯದ ಬಣ್ಣ ಬದಲಾಯಿಸುವ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಲ್ ಚಲ್ ಸೃಷ್ಟಿಸಿದೆ. ಬಹುತೇಕರು, ಇದೊಂದು ಅದ್ಬುತ ವೈಶಿಷ್ಟ್ಯ ಎಂದು ಮೆಚ್ಚಿದ್ದಾರೆ. ಮತ್ತಷ್ಟು ಮಂದಿ, ಈ ಫೀಚರ್ ಬಳಕೆಯಿಂದ ಅಪರಾಧ ಪ್ರಕರಣಗಳು ಹೆಚ್ಚಾಗಬಹುದು ಎಂದು ಆಂತಕ ವ್ಯಕ್ತಪಡಿಸಿದ್ದಾರೆ. ಏನೇ ಆಗಲಿ.. ರಸ್ತೆಯಲ್ಲಿ ಬಣ್ಣ ಬದಲಾದ ಕಾರಿನ ವಿಡಿಯೋ ನೋಡಿದ ಜನ ಕ್ಷಣ ಕಾಲ ಮಂತ್ರಮುಗ್ದರಾಗಿದ್ದು ಸುಳ್ಳಲ್ಲ.

ಇನ್ನು, ಬಿಎಂಡಬ್ಲ್ಯೂ ಮಾರಾಟ ಮಾಡುವ ಕಾರುಗಳ ಒಂದಷ್ಟು ವಿವರವನ್ನು ನೋಡುವುದಾದರೆ, ದೇಶೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ XM ರೂ.2.60 ಕೋಟಿ, ಬಿಎಂಡಬ್ಲ್ಯೂ X1 ರೂ.45.90 ಲಕ್ಷದಿಂದ ರೂ.50.90 ಲಕ್ಷ, ಬಿಎಂಡಬ್ಲ್ಯೂ X7 ರೂ.1.22 - ರೂ.1.25 ಕೋಟಿ, ಬಿಎಂಡಬ್ಲ್ಯೂ Z4 ರೂ.89.30 ಲಕ್ಷ, ಬಿಎಂಡಬ್ಲ್ಯೂ X3 ರೂ.67.50 - 86.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, July 13, 2023, 11:10 [IST]
English summary
Bmw car changing colour on road viral video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+