ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ BMW ಎಕ್ಸ್3 20d ಎಂ ಸ್ಪೋರ್ಟ್: ಇಲ್ಲಿದೆ ಮಾಹಿತಿ

ದುಬಾರಿ ಹಾಗೂ ಐಷಾರಾಮಿ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಬಿಎಂಡಬ್ಲ್ಯೂ ಮತ್ತೊಂದು ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನೂತನ 'ಬಿಎಂಡಬ್ಲ್ಯೂ ಎಕ್ಸ್3 20d ಎಂ ಸ್ಪೋರ್ಟ್' ರೂ.69.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಎಕ್ಸ್3 ಎಸ್‍ಯುವಿಯ ಎಲ್ಲ ಪೆಟ್ರೋಲ್ ರೂಪಾಂತರಗಳನ್ನು ಮಾರಾಟದಿಂದ ಸ್ಥಗಿತಗೊಳಿಸಿದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಹೊಚ್ಚ ಹೊಸ 'ಬಿಎಂಡಬ್ಲ್ಯೂ ಎಕ್ಸ್3 20d ಎಂ ಸ್ಪೋರ್ಟ್' ಕಾರಿನ ಹೊರಭಾಗ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು, ಫ್ರಂಟ್ ಹಾಗೂ ರೇರ್ ಮರುವಿನ್ಯಾಸಗೊಳಿಸಿದ ಬಂಪರ್‌, ಬ್ಲ್ಯಾಕ್ ಔಟ್ ವಿಂಡೋ ಫ್ರೇಮ್, ರೂಫ್ ರೈಲ್ ಹಾಗೂ ಡಿಫ್ಯೂಸರ್‌ನ್ನು ಪಡೆದುಕೊಂಡಿದೆ. ಅಲ್ಲದೆ, 20-ಇಂಚಿನ ಅಲಾಯ್ ವೀಲ್ಸ್, ಬ್ಲೂ ಕಲರ್ ಬ್ರೇಕ್ ಕ್ಯಾಲಿಪರ್‌ಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ BMW ಎಕ್ಸ್3 20d ಎಂ ಸ್ಪೋರ್ಟ್: ಇಲ್ಲಿದೆ ಮಾಹಿತಿ

ಬಿಎಂಡಬ್ಲ್ಯೂ ಎಕ್ಸ್3 20d ಎಂ ಒಳಭಾಗ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಲೆದರ್ ಸುತ್ತಿರುವ ಸ್ಟೀರಿಂಗ್ ವೀಲ್, ಆಕರ್ಷಕ ಗ್ಲಾಸ್ ರೂಫ್, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, 360 ಡಿಗ್ರಿ ಕ್ಯಾಮೆರಾ, ಹೆಡ್ ಅಪ್ ಡಿಸ್ಪ್ಲೇ, ಆಂಬಿಯೆಂಟ್ ಲೈಟಿಂಗ್ ಹಾಗೂ 16 ಸ್ಪೀಕರ್‌ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ, 550 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದಿದೆ. ಅದನ್ನು 1600 ಲೀ.ವರೆಗೆ ವಿಸ್ತರಿಸಬಹುದು.

ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ನೂತನ ಬಿಎಂಡಬ್ಲ್ಯೂ ಎಕ್ಸ್3 20d ಎಂ ಸ್ಪೋರ್ಟ್, ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಪವರ್ ಫುಲ್ ಎಂಜಿನ್ ಹೊಂದಿದ್ದು, 2.0-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 190 bhp ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 8-ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಇನ್ನು, ಬಿಎಂಡಬ್ಲ್ಯೂ ಕಂಪನಿ ಮಾರಾಟದಿಂದ ಸ್ಥಗಿತಗೊಳಿಸಿದ ಎಕ್ಸ್3 ಎಸ್‍ಯುವಿಯ ಪೆಟ್ರೋಲ್ ರೂಪಾಂತರದ ಎಂಜಿನ್ ಕಾರ್ಯಕ್ಷಮತೆಯನ್ನು ನೋಡುವುದಾದರೆ, ಇದರ 2.0-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 252 bhp ಗರಿಷ್ಠ ಪವರ್ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿತ್ತು. ಜೊತೆಗೆ 8-ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದ ಈ ಕಾರಿನ ಎಂಜಿನ್, ಎಲ್ಲ ನಾಲ್ಕು ವೀಲ್ಸ್ ಗೆ ಪವರ್ ವರ್ಗಾಯಿಸುತ್ತಿತ್ತು.

ಇವತ್ತಿನ ದಿನದಲ್ಲಿ ಪ್ರತಿಯೊಬ್ಬ ಕಾರು ಖರೀದಿದಾರರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದಕ್ಕೆ ತಕ್ಕಂತೆ ನೂತನ ಬಿಎಂಡಬ್ಲ್ಯೂ ಎಕ್ಸ್3 20d ಎಂ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಮಲ್ಟಿ ಏರ್‌ಬ್ಯಾಗ್ಸ್, DSC (ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್), CBC (ಕಾರ್ನರಿಂಗ್ ಬ್ರೇಕ್ ಕಂಟ್ರೋಲ್), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹೋಲ್ಡ್, ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬಿಲೈಜರ್‌ ಹಾಗೂ ಕ್ರ್ಯಾಶ್ ಸೆನ್ಸರ್ ಅನ್ನು ಹೊಂದಿದೆ.

ಬಿಎಂಡಬ್ಲ್ಯೂ ಹಲವು ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಅದರಲ್ಲಿ ಬಿಎಂಡಬ್ಲ್ಯೂ XM ಅತ್ಯಂತ ದುಬಾರಿ ಬೆಲೆಯ ಕಾರು ಎಂದು ಹೇಳಬಹುದು. ಇದು ರೂ.2.60 ಕೋಟಿ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. 4395 ಸಿಸಿ, ಪ್ಲಗ್-ಇನ್ ಹೈಬ್ರಿಡ್ ಎಂಜಿನ್ ಹೊಂದಿದ್ದು, 483 bhp ಪವರ್ ಹಾಗೂ 650 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, 249 kmph ಟಾಪ್ ಸ್ವೀಡ್ ಹೊಂದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಬಿಎಂಡಬ್ಲ್ಯೂ ಎಕ್ಸ್3 20d ಎಂ ಸ್ಪೋರ್ಟ್ ಅದರ ಬೆಲೆಗೆ ತಕ್ಕಂತೆಯೇ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ ನೋಡಲು ಆಕರ್ಷಕವಾಗಿದ್ದು, ಹೆಚ್ಚಿನ ಮಂದಿ ಈ ಕಾರನ್ನು ಖರೀದಿಸಬಹುದು ಎಂದು ಕಂಪನಿ ನಂಬಿದೆ. ಡೀಸೆಲ್ ಎಂಜಿನ್ ಪಡೆದಿರುವುದರಿಂದ ಹೆಚ್ಚಿನ ಮೈಲೇಜ್ ನೀಡಲಿದೆ ಎಂದು ಅಂದಾಜಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಈ ಕಾರಿನ ಕಾರ್ಯಕ್ಷಮತೆ ಬಗ್ಗೆ ತಿಳಿಯಲಿದೆ.

More from DriveSpark

Article Published On: Wednesday, March 8, 2023, 16:22 [IST]
English summary
Bmw x3 20d m sport launched in india rs 69 lakh details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+