ಚೀನಾದ ಈ ಕಾರಿಗೆ ಭೀಕರ ಬೇಡಿಕೆ: ವಿಶ್ವದಾದ್ಯಂತ 5 ಲಕ್ಷ ಕಾರುಗಳ ಮಾರಾಟ: ಭಾರತದಲ್ಲಿ ಭರ್ಜರಿ ಡೆಲಿವರಿ
ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರು ತಯಾರಕರಾದ BYD ಭಾರತದಲ್ಲೂ ಉತ್ತಮ ಮಾರಾಟ ಕಾಣುತ್ತಿದ್ದು, ವಿಶ್ವದಾದ್ಯಂತ ಗಮನಾರ್ಹ ಮಾರಾಟ ಮೈಲಿಗಲನ್ನು ಸಾಧಿಸಿವೆ. ಅದರಲ್ಲೂ BYD ATTO-3 ಕಾರು ಬಿಡುಗಡೆಯಾದ ಕೇವಲ 19 ತಿಂಗಳಲ್ಲಿ 5,00,000 ನೇ ಕಾರು ಮಾರಾಟವಾಗಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ.
ಜಾಗತಿಕ ಮಾರುಕಟ್ಟೆಗೆ ಮೊದಲ ಮಾದರಿಯಾಗಿ BYD ATTO 3 ಭಾರತ, ಸಿಂಗಾಪುರ್, ನ್ಯೂಜಿಲ್ಯಾಂಡ್, ಬ್ರೆಜಿಲ್, ಥೈಲ್ಯಾಂಡ್, ಇಸ್ರೇಲ್ ಮತ್ತು ಸ್ವೀಡನ್ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚು ಮಾರಾಟವಾಗುವ EV ಆಗಿ ಗುರ್ತಿಸಿಕೊಂಡಿದೆ. ಇಲ್ಲಿಯವರೆಗೆ, BYD ಯ ಪ್ರಯಾಣಿಕ ವಾಹನಗಳು 50 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿವೆ.

ಗಮನಾರ್ಹವಾಗಿ, BYD ATTO 3 ಸತತವಾಗಿ ಒಂಬತ್ತು ತಿಂಗಳುಗಳ ಕಾಲ ಇಸ್ರೇಲ್‌ನ NEV ಮಾರಾಟದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಪ್ರಸ್ತುತ ಜುಲೈ 2023 ರಂತೆ ಥೈಲ್ಯಾಂಡ್‌ನ ಉತ್ತಮ-ಮಾರಾಟದ ಎಲೆಕ್ಟ್ರಿಕ್ ವಾಹನವಾಗಿದೆ. ಈ ಸಾಧನೆಗಳು ಜಾಗತಿಕ ವಾಹನ ಮಾರುಕಟ್ಟೆಯಲ್ಲಿ BYD ಯ ಬೆಳೆಯುತ್ತಿರುವ ಪ್ರಭಾವ ಮತ್ತು ಯಶಸ್ಸನ್ನು ಒತ್ತಿಹೇಳುತ್ತಿವೆ.
ಅಟ್ಟೊ-3 ಮಾದರಿಯು BYD ಯ ಅತ್ಯಾಧುನಿಕ ತಂತ್ರಜ್ಞಾನ ಇ-ಪ್ಲಾಟ್‌ಫಾರ್ಮ್ 3.0 ಅನ್ನು ಆಧರಿಸಿದೆ. ಬುದ್ಧಿವಂತಿಕೆ, ದಕ್ಷತೆ, ಸುರಕ್ಷತೆ ಮತ್ತು ಡಿಸೈನ್ ವಿಷಯದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಮಾದರಿಯು BYD ಬ್ಲೇಡ್ ಬ್ಯಾಟರಿಯೊಂದಿಗೆ ಸುಸಜ್ಜಿತವಾಗಿದ್ದು, ಇದು ಭದ್ರತೆ ಮತ್ತು ಶ್ರೇಣಿಯ ಉತ್ತಮ ಮಿಶ್ರಣವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

BYD ATTO-3 ಜಾಗತಿಕ ಮೆಚ್ಚುಗೆಯನ್ನು ಗಳಿಸಿದೆ, ಅದರ ಅತ್ಯುತ್ತಮ ಕಾರ್ಯಕ್ಷಮತೆ, ಅಸಾಧಾರಣ ಚಾಲನಾ ಅನುಭವ ಮತ್ತು ವಿಶಿಷ್ಟ ವಿನ್ಯಾಸವು ಅಂತರಾಷ್ಟ್ರಿಯ ಮಟ್ಟದಲ್ಲಿ ಸದ್ದು ಮಾಡಿದೆ. ಇದು ಸುರಕ್ಷತೆಯ ವಿಷಯದಲ್ಲಿ 5-ಸ್ಟಾರ್ ಯುರೋ NCAP ಸ್ಕೋರ್ ಅನ್ನು ಸಾಧಿಸಿದೆ. "2022 ನ್ಯೂಜಿಲೆಂಡ್ ವರ್ಷದ ಕಾರು" ಮತ್ತು "VAB ಎಲೆಕ್ಟ್ರಿಕ್ ಫ್ಯಾಮಿಲಿ ಕಾರ್ ಆಫ್ ದಿ ಇಯರ್ ಆಫ್ ಬೆಲ್ಜಿಯಂ" ನಂತಹ ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಗೌರವಿಸಲ್ಪಟ್ಟಿದೆ.
2022 ರಲ್ಲಿ ಬಿವೈಡಿ ಕಂಪನಿಯು, ಕೇವಲ BEV ಗಳು ಮತ್ತು PHEV ವಾಹನಗಳ ಮೇಲೆ ಕೇಂದ್ರೀಕರಿಸಲು ICE ವಾಹನಗಳ ಉತ್ಪಾದನೆಯನ್ನು ನಿಲ್ಲಿಸಿತು. ಇದರ ಪರಿಣಾಮವಾಗಿ 1.86 ಮಿಲಿಯನ್ ಹೂಡಿಕೆಯೊಂದಿಗೆ ಪ್ರಯಾಣಿಕ ವಾಹನಗಳ ಮಾರಾಟ ಮತ್ತು NEV ಗಳಲ್ಲಿ ವಿಶ್ವದ ಅತಿ ಹೆಚ್ಚು ಮಾರಾಟವಾಗುವ ವಾಹನ ತಯಾರಕರಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ: BYD ATTO-3 ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನಗಳ ಬ್ಯಾಚ್ ಅನ್ನು ಇದೇ ಸೆಪ್ಟೆಂಬರ್ 17 ರಂದು ಆರು ಪ್ರಮುಖ ಭಾರತೀಯ ನಗರಗಳಲ್ಲಿ ಕಂಪನಿ ಡೆಲಿವರಿ ನೀಡಿದೆ. ಈ ಆರು ನಗರಗಳಲ್ಲಿ ಒಂದೇ ದಿನ ಕಾರ್ಯಕ್ರಮ ನಡೆಸಿ 200 ಗ್ರಾಹಕರಿಗೆ ಕಾರುಗಳನ್ನು ವಿತರಿಸಲಾಗಿದೆ.
ದೆಹಲಿ NCR , ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿ ನಗರಗಳಲ್ಲಿ ಕಾರ್ಯಕ್ರಮಗಳ ಮೂಲಕ ವಿತರಿಸಲಾಗಿದೆ. BYD ATTO-3 ಗ್ರಾಹಕರು ಡೆಲಿವರಿ ಪಡೆದ ದಿನವನ್ನು ಸ್ಮರಿಸಲು ಮತ್ತು ಗ್ರಾಹಕರಲ್ಲಿ ಸಂತೋಷವನ್ನು ಹರಡಲು ಈ ನಗರಗಳಲ್ಲಿ ಸಾಂಪ್ರದಾಯಿಕ ನೃತ್ಯಗಳು, ಆಟಗಳು, ಸ್ಪರ್ಧೆಗಳನ್ನು ನಡೆಸಿ ಏಕಕಾಲದಲ್ಲಿ ಡೆಲಿವರಿ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಹೊಸ BYD ATT0-3 ಎಲೆಕ್ಟ್ರಿಕ್ ಎಸ್‌ಯುವಿ ಬಗ್ಗೆ ಹೇಳುವುದಾದ್ರೆ, ಶೂನ್ಯ ಕಾರ್ಬನ್ ಹೊರಸೂಸುವಿಕೆ ಮತ್ತು ಆಕರ್ಷಕ ವಿನ್ಯಾಸವು ಗ್ರಾಹಕರಲ್ಲಿ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ. ಈ ಕಾರು ಅಲ್ಟ್ರಾ-ಸೇಫ್ಟಿ ಬ್ಲೇಡ್ ಬ್ಯಾಟರಿ ಮತ್ತು ಬಾರ್ನ್ EV ಪ್ಲಾಟ್‌ಫಾರ್ಮ್ (e-ಪ್ಲಾಟ್‌ಫಾರ್ಮ್ 3.0) ನೊಂದಿಗೆ ಸುಸಜ್ಜಿತವಾಗಿದೆ. BYD-ATTO-3 ಕೇವಲ 50 ನಿಮಿಷಗಳಲ್ಲಿ ಶೇ80 ರಷ್ಟು ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.


Click it and Unblock the Notifications








