ಜನ ಮೆಚ್ಚಿದ ಮಾರುತಿ ಸುಜುಕಿಯೇ 'ಮಹಾರಾಜ', ಧಮ್ ಅಂದ್ರೆ ಅದೇ ರೀ..!

ಭಾರತದಲ್ಲಿ ಏಪ್ರಿಲ್ ತಿಂಗಳ (2023) ಕಾರು ಮಾರಾಟದ ವರದಿ ಪ್ರಕಟವಾಗಿದ್ದು, ಬಹುತೇಕ ಕಂಪನಿಗಳು ಉತ್ತಮ ಪ್ರಗತಿಯನ್ನು ಸಾಧಿಸಿವೆ. ಅದರಲ್ಲೂ ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದಿವರಿದಿದ್ದು, ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಒಟ್ಟು 3,31,513 ಯುನಿಟ್ ಕಾರುಗಳು ಮಾರಾಟವಾಗಿವೆ. 2022ರ ಏಪ್ರಿಲ್ ಗೆ ಹೋಲಿಸಿದರೆ (2,93,438 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಶೇಕಡ 13% ಬೆಳವಣಿಗೆಯಾಗಿದೆ. ಆದರೆ, ಇದೇ ವರ್ಷದ ಮಾರ್ಚ್ ತಿಂಗಳ ಸೇಲ್ಸ್ ಅಂಕಿಅಂಶ ನೋಡುವುದಾದರೆ (3,36,046 ಯುನಿಟ್ ಕಾರುಗಳು) ಶೇಕಡ 1.3% ಕುಸಿತವಾಗಿದೆ.

ಜನ ಮೆಚ್ಚಿದ ಮಾರುತಿ ಸುಜುಕಿಯೇ ಮಹಾರಾಜ, ಧಮ್ ಅಂದ್ರೆ ಅದೇ ರೀ..!

ಭಾರತದಾದ್ಯಂತ ಏಪ್ರಿಲ್ 1 ರಿಂದ BSVI ಹಂತ 2 ಎಮಿಷನ್ ಮಾನದಂಡಗಳು ಜಾರಿಯಾದರೂ ಕಾರು ಮಾರಾಟ ಉತ್ತಮವಾಗಿಯೇ ಸಾಗಿದೆ. ಮಾರುತಿ ಸುಜುಕಿ 2023ರ ಏಪ್ರಿಲ್ ತಿಂಗಳಲ್ಲಿ 1,37,320 ಯುನಿಟ್ ಕಾರುಗಳನ್ನು ಸೇಲ್ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 12.6% ಪ್ರಗತಿ ಸಾಧಿಸಿದ್ದು, ಮೊದಲ ಸ್ಥಾನದಲ್ಲಿ ಮುಂದುವರಿದಿದೆ. 2022ರ ಏಪ್ರಿಲ್ ನಲ್ಲಿ 1,21,995 ಯುನಿಟ್ ಮಾರಾಟ ಮಾಡಿತ್ತು.

ನಂತರದ ಎರಡನೇ ಸ್ಥಾನದಲ್ಲಿ ಹುಂಡೈ ಇದ್ದು, ಕಳೆದ ಏಪ್ರಿಲ್‌ನಲ್ಲಿ 49,701 ಯುನಿಟ್ ಕಾರುಗಳನ್ನು ಮಾರಾಟ ಮಾಡಿ, 13% ಬೆಳವಣಿಗೆ ಸಾಧಿಸಿದೆ. 2022ರ ಏಪ್ರಿಲ್ ತಿಂಗಳಲ್ಲಿ 44,001 ಯುನಿಟ್ ಸೇಲ್ ಮಾಡಿತ್ತು. ಅತ್ಯಂತ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾದರೂ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಮೂರನೇ ಸ್ಥಾನದಲಿದ್ದು, ಕಳೆದ ತಿಂಗಳು (ಏಪ್ರಿಲ್‌ 2023) 47,010 ಯುನಿಟ್ ಮಾರಾಟ ಮಾಡಿ, 2022ರ ಅದೇ ತಿಂಗಳಿಗೆ (41,590) ಹೋಲಿಸಿದರೆ 13% ಬೆಳವಣಿಗೆ ಸಾಧಿಸಿದೆ.

Rank Brand April 2023 April 2022 Growth (%)
1 Maruti Suzuki 1,37,320 1,21,995 12.6
2 Hyundai 49,701 44,001 13
3 Tata 47,010 41,590 13
4 Mahindra 34,698 22,526 54
5 Kia 23,216 19,019 22.1
6 Toyota 14,162 15,085 -6.1
7 Honda 5,313 7,874 -32.5
8 MG 4,551 2,008 126.6
9 Renault 4,323 7,594 -43.1
10 Skoda 4,009 5,152 -22.2

ಕಳೆದ ಏಪ್ರಿಲ್‌ನಲ್ಲಿ ಭಾರತದ ಮಾರುಕಟ್ಟೆಗೆ ಯಾವುದೇ ವಾಹನಗಳನ್ನು ಬಿಡುಗಡೆ ಮಾಡದಿದ್ದರೂ ಮಹೀಂದ್ರಾ ಮಾತ್ರ ಉತ್ತಮ ಪ್ರಗತಿ ಸಾಧಿಸಿದ್ದು, ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. ಏಪ್ರಿಲ್‌ನಲ್ಲಿ 47,010 ಯುನಿಟ್ ಕಾರುಗಳನ್ನು ಮಾರಿದ್ದು, 2022ರ ಅದೇ ತಿಂಗಳಿಗೆ ಹೋಲಿಸಿದ್ರೆ 54% ಬೆಳವಣಿಗೆ ಸಾಧಿಸಿದೆ. ವಿಶೇಷವೆಂದರೆ ದಕ್ಷಿಣ
ಕೊರಿಯಾದ ಜನಪ್ರಿಯ ವಾಹನ ತಯಾರಕ ಕಿಯಾ ಐದನೇ ಸ್ಥಾನದಲಿದ್ದು, ಕಳೆದ ತಿಂಗಳು 23,216 ಯುನಿಟ್ ಸೇಲ್ ಮಾಡಿ, 22.1% ಪ್ರಗತಿ ಸಾಧಿಸಿದೆ.

ಇನ್ನುಳಿದಂತೆ ನಂತರದ ಸ್ಥಾನದಲ್ಲಿ ಟೊಯೊಟಾ, ಹೋಂಡಾ, ಎಂಜಿ ಮೋಟಾರ್, ರೆನಾಲ್ಟ್, ಸ್ಕೋಡಾ, ಫೋಕ್ಸ್ ವ್ಯಾಗನ್, ನಿಸ್ಸಾನ್, ಸಿಟ್ರಸ್ ಹಾಗೂ ಜೀಪ್ ಕಂಪನಿಗಳಿವೆ. ಅದರಲ್ಲೂ ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರಸ್ ಈಗಷ್ಟೇ ಭಾರತದ ಮಾರುಕಟ್ಟೆಯಲ್ಲಿ ಮುನ್ನೆಲೆಗೆ ಬರುತ್ತಿದ್ದು, 2022ರ ಏಪ್ರಿಲ್ ತಿಂಗಳಲ್ಲಿ ಕೇವಲ 51 ಯುನಿಟ್ ಕಾರು ಮಾರಾಟ ಮಾಡಿದ್ದ ಕಂಪನಿ, ಕಳೆದ ತಿಂಗಳು 1,003 ಯುನಿಟ್ ಸೇಲ್ ಮಾಡುವ ಮೂಲಕ 1866.7% ಬೆಳವಣಿಗೆ ಸಾಧಿಸಿದೆ.

ಜನ ಮೆಚ್ಚಿದ ಮಾರುತಿ ಸುಜುಕಿಯೇ ಮಹಾರಾಜ, ಧಮ್ ಅಂದ್ರೆ ಅದೇ ರೀ..!

ದೇಶೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ಕಾರುಗಳು ಜನಪ್ರಿಯತೆ ಗಳಿಸಲು ಕಾರಣ, ಅವುಗಳ ಕಾರ್ಯಕ್ಷಮತೆ, ಕೈಗೆಟುಕುವ ಬೆಲೆ ಹಾಗೂ ವೈಶಿಷ್ಟ್ಯಗಳು ಕಾರಣವಾಗಿವೆ. ಇನ್ನು, ಹುಂಡೈ ಮಾರಾಟದಲ್ಲಿ ಹುಂಡೈ ಕಂಪನಿ ಎರಡನೇ ಸ್ಥಾನದಲ್ಲಿದ್ದು, ತೀವ್ರ ಸ್ಪರ್ಧೆ ನೀಡುತ್ತಿರುವ ಟಾಟಾ ಮೋಟಾರ್ಸ್ ಮುಂಬರುವ ದಿನಗಳಲ್ಲಿ ಅದನ್ನು ಹಿಂದಿಟ್ಟರು ಅಚ್ಚರಿ ಪಡುವಂತಿಲ್ಲ. ಆದರೂ ಮಾರುತಿ ಸುಜುಕಿಯಿಂದ ನಂಬರ್ 1 ಸ್ಥಾನವನ್ನು ಕಸಿದುಕೊಳ್ಳಬೇಕೆಂದರೆ ತುಂಬಾ ಕಷ್ಟಪಡಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, May 3, 2023, 10:59 [IST]
English summary
Car sales april 2023 maruti suzuki hyundai tata details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+