ಕಾರು ಮಾಲೀಕರೇ ಎಚ್ಚರ: ಮೊಬೈಲ್ ಆ್ಯಪ್ ಬಳಸಿ 100ಕ್ಕೂ ಹೆಚ್ಚು ಕಾರುಗಳ ಕಳ್ಳತನ

ಕಾರು ಮಾಲೀಕರೇ ಎಚ್ಚರ ಪಕ್ಕಾ ಹೈಟೆಕ್ ಕಳ್ಳತನ, ಸಿನಿಮಾಗಳಲ್ಲೂ ಇಷ್ಟು ಪ್ಲಾನ್‌ನೊಂದಿಗೆ ನಡೆಯುವ ಕಳ್ಳತನಗಳನ್ನು ನೋಡಿರಲು ಸಾಧ್ಯಿವಿಲ್ಲ. ಸದ್ಯ ಈ ಕಳ್ಳತನಗಳು ಉತ್ತರ ಭಾರತದಲ್ಲಿ ನಡೆದಿದ್ದರೂ ದಕ್ಷಿಣ ಭಾರತಕ್ಕೂ ಎಚ್ಚರಿಕೆಯ ಘಂಟೆಯಾಗಿದೆ. ಏಕೆಂದರೆ ನಾವು ಎಷ್ಟೇ ಜಾಗರೂಕರಾಗಿ ಕಾರುಗಳನ್ನು ಪಾರ್ಕ್ ಮಾಡಿದರೂ ತುಂಬಾ ಸುಲಭವಾಗಿ ಈ ಗ್ಯಾಂಗ್ ಕದ್ದೊಯ್ಯುತ್ತದೆ.

ಕೇವಲ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿರುವ ಆ್ಪ್ ಮೂಲಕ ತುಂಬಾ ಸುಲಭವಾಗಿ ಲಾಕ್ ಅನ್ನು ಡಿಕೋಡ್ ಮಾಡಿ ಕಾರನ್ನು ಎಗರಿಸುತ್ತಾರೆ. ಈ ಕಳ್ಳತನಕ್ಕೆ ಬಳಸಿರುವ ಆ್ಪ್ ಹಾಗೂ ಟೂಲ್ಸ್ ಚೀನಾ ಮೂಲದ್ದಾಗಿವೆ. ಕಾರಣಾಂತರಗಳಿಂದ ಈ ಆ್ಪ್ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಕಳ್ಳರು ಮೊದಲಿಗೆ ಮೊಬೈಲ್ ಆಪ್ ಅನ್ನು ಸಿಸ್ಟಮ್‌ಗೆ ಕನೆಕ್ಟ್ ಮಾಡಿ ನಂತರ ಲಾಕ್ ಡಿಕೋಡ್ ಮಾಡುವ ಮೂಲಕ ಕೇವಲ ಎರಡೇ ನಿಮಿಷದಲ್ಲಿ ಕಾರನ್ನು ಕದ್ದು ಪರಾರಿಯಾಗುತ್ತಾರೆ.

ಕಾರು ಮಾಲೀಕರೇ ಎಚ್ಚರ: ಮೊಬೈಲ್ ಆ್ಯಪ್ ಬಳಸಿ 100ಕ್ಕೂ ಹೆಚ್ಚು ಕಾರುಗಳ ಕಳ್ಳತನ

ಈ ಪ್ರಕ್ರಿಯೆಯಲ್ಲಿ ಜಿಪಿಎಸ್ ಕೂಡ ನಿಷ್ಕ್ರಿಯಗೊಳ್ಳುತ್ತದೆ. ಇದಾದ ನಂತರ ಕಾರಿನ ಮೂಲ ಕೀ ಕೂಡ ಕೆಲಸ ಮಾಡುವುದಿಲ್ಲ. ಈ ಅಂತಾರಾಜ್ಯ ಗ್ಯಾಂಗ್ ದೆಹಲಿ ಎನ್‌ಸಿಆರ್‌ನಲ್ಲಿ 100 ಕ್ಕೂ ಹೆಚ್ಚು ಕಾರುಗಳನ್ನು ಕದ್ದಿರುವುದಾಗಿ ತಿಳಿದು ಬಂದಿದೆ. ಇಸಿಎಂ (ಎಂಜಿನ್ ಕಂಟ್ರೋಲ್ ಯುನಿಟ್) ಪ್ಲೇಟ್ ಹ್ಯಾಕ್ ಮಾಡಲು ಬಳಸಿದ ಇಂಟರ್ನೆಟ್ ಸಂಪರ್ಕಿತ ಸಿಸ್ಟಮ್, ಮೊಬೈಲ್, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಪ್ರತಾಪ್ ವಿಹಾರ್ ಎಂಬುವವರ ಬಲೆನೊ ಮತ್ತು ಬುಲಂದ್‌ಶಹರ್‌ನಲ್ಲಿ ಕಳುವಾಗಿದ್ದ ವ್ಯಾಗನಾರ್ ಕಾರುಗಳು ಇವೆ.

ಡೀಲ್ ಮಾಡಿಕೊಂಡು ಕಳ್ಳತನಕ್ಕೆ ಸ್ಕೆಚ್:
ಈಗ ವಶಪಡಿಸಿಕೊಂಡಿರುವ ಬಲೆನೊ ಕಾರಿಗೆ ಕೂಡ ಆರು ಲಕ್ಷದ ವಹಿವಾಟು ನಡೆದಿದೆ. ಕಾರನ್ನು ಕದ್ದ ನಂತರ ನಕಲಿ ದಾಖಲೆಗಳನ್ನು ತಯಾರಿಸಿ ಮತ್ತೊಂದು ನಂಬರ್ ಪ್ಲೇಟ್ ಹಾಕಿ ಕಾರನ್ನು ಮಾರಾಟ ಮಾಡುತ್ತಿದ್ದರು. ಲೂಧಿಯಾನ ಮತ್ತು ಬಿಹಾರದಲ್ಲಿ ಹೆಚ್ಚಿನ ಕಾರುಗಳನ್ನು ಒಂದೆಡೆ ಸೇರಿಸಲಾಗುತ್ತಿತ್ತು. ಪೊಲೀಸರ ಪ್ರಕಾರ, ಈ ಗ್ಯಾಂಗ್ ಹೆಚ್ಚಾಗಿ ಸುಜುಕಿ ಕಾರುಗಳನ್ನು ಕದಿಯುತ್ತದೆ, ಆದರೆ ಈ ಹಿಂದೆ ಥಾರ್ ಕೂಡ ಕಳವಾಗಿತ್ತು.

ಖತರ್ನಾಕ್ ಕಳ್ಳರು:
ವಿಜಯನಗರ ಎಸ್‌ಎಚ್‌ಒ ಅನಿತಾ ಚೌಹಾಣ್ ತಂಡವು, ಬಂಧಿತ ಆರೋಪಿಗಳಾದ ಗೌರವ್ ಭಾಟಿ ಅಲಿಯಾಸ್ ಅಮನ್ ಮತ್ತು ಉಮೇಶ್‌‌ರನ್ನು ಸೋಮವಾರ ಬೆಳಿಗ್ಗೆ ಹಿಡಿದಿದೆ ಎಂದು ಎಸಿಪಿ ಕೊತ್ವಾಲಿ ಸುಜಿತ್ ರೈ ತಿಳಿಸಿದ್ದಾರೆ. ಬಂಧಿತ ಆರೋಪಿ ಗೌರವ್ ಮೊದಲು ತನ್ನ ಮೊಪೆಡ್‌ನಲ್ಲಿ ಬಟ್ಟೆ ಹಾಕುವ ನೆಪದಲ್ಲಿ ಕಾಲೋನಿಗಳಲ್ಲಿ ಓಡಾಡುತ್ತಿದ್ದ. ಬಳಿಕ ಎಲ್ಲವನ್ನು ನೋಡಿಕೊಂಡು ಪಕ್ಕಾ ಪ್ಲಾನ್‌ನೊಂದಿಗೆ ತನ್ನ ತಂಡದೊಂದಿಗೆ ಏರಿಯಾಗಳಿಗೆ ನುಗ್ಗಿ ಕಾರುಗಳನ್ನು ಎಗರಿಸುತ್ತಿದ್ದರು.

ಆರೋಪಿಗಳು ದೆಹಲಿಯ ನೋಯ್ಡಾ ಸೆಕ್ಟರ್ 58 ಮತ್ತು ಜಹಾಂಗೀರ್ ಪುರಿಯಿಂದ ಕಾರುಗಳನ್ನು ಕದ್ದಿದ್ದಾರೆ. ಕಳ್ಳರ ಮೊಬೈಲ್‌ನಲ್ಲಿ ಸುಜುಕಿ ಕಾರುಗಳ ಇಸಿಎಂಗೆ ಸಂಪರ್ಕಗೊಂಡಿರುವ ಆ್ಯಪ್ ಪತ್ತೆಯಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉಪಕರಣಗಳು ಮತ್ತು ಅಪ್ಲಿಕೇಶನ್‌ಗಳು ಕಾರು ಏಜೆನ್ಸಿಗಳಲ್ಲಿ ಲಭ್ಯವಿರುವಂತೆಯೇ ಇರುತ್ತವೆ. ಟೂಲ್ ಮತ್ತು ಆ್ಯಪ್ ಎರಡೂ ಚೈನೀಸ್ ಆಗಿದ್ದು, ಇದನ್ನು ನೋಯ್ಡಾದ ವ್ಯಕ್ತಿಯೊಬ್ಬರು ನೀಡಿದ್ದಾರೆ ಎಂದು ಬಂಧಿತರು ವಿಚಾರಣೆ ವೇಳೆ ಹೇಳಿದ್ದಾರೆ.

ಲೂಧಿಯಾನದಲ್ಲೂ ಇಂಥಹದ್ದೇ ಗ್ಯಾಂಗ್ ಸಿಕ್ಕಿಬಿದ್ದಿದೆ:
ಎರಡು ವಾರಗಳ ಹಿಂದೆ, ಲೂಧಿಯಾನ ಪೊಲೀಸರು ಇಂಥಹದ್ದೇ ಮತ್ತೊಂದು ಗ್ಯಾಂಗ್ ಅನ್ನು ಭೇದಿಸಿ 12 ಕಾರುಗಳನ್ನು ವಶಪಡಿಸಿಕೊಂಡಿದ್ದರು. ಈ ಗ್ಯಾಂಗ್ ದೊಡ್ಡದಾಗಿದ್ದು, 22-25 ಜನರಿದ್ದಾರೆ ಎಂದು ಎಸಿಪಿ ತಿಳಿಸಿದ್ದಾರೆ. ಒಂದು ತಂಡವು ರೇಖಿ ಮಾಡಿ ಕದ್ದರೇ ಎರಡನೆಯ ತಂಡ ನಕಲಿ ದಾಖಲೆಗಳನ್ನು ಸಿದ್ಧಪಡಿಸುತ್ತದೆ. ಇನ್ನು ಮೂರನೇ ತಂಡವು ಕಾರುಗಳೊಂದಿಗೆ ವ್ಯವಹರಿಸಿ ಅವುಗಳನ್ನು ಖರೀದಿದಾರರಿಗೆ ತಲುಪಿಸುತ್ತದೆ ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, April 11, 2023, 13:50 [IST]
English summary
Car theft by using mobile app
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+