ವೈಟ್ ಬೋರ್ಡ್ ಕಾರು ಮಾಲೀಕರೇ ನಿಮಗೆ ದಂಡ ಫಿಕ್ಸ್! ಕ್ರಮಕ್ಕೆ ಮುಂದಾಗಿದ್ದಾರೆ, ವಿಷಯ ತಿಳಿಯಿರಿ
ವೈಟ್ ಬೋರ್ಡ್ ಹೊಂದಿರುವ ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಕಾನೂನು ಬಾಹಿರ ಎಂದು ಸಾರಿಗೆ ಇಲಾಖೆ ಹೇಳುತ್ತಿದೆ. ಕೇವಲ ಎಲ್ಲೋ ಬೋರ್ಡ್ ವಾಹನಗಳು ಮಾತ್ರ ವಾಣಿಜ್ಯ ಸೇವೆಯನ್ನು ಒದಗಿಸಲು ಅನುಮತಿ ನೀಡಲಾಗಿದೆ. ಆದರೆ ಕೆಲ ವೈಟ್ ಬೋರ್ಡ್ ಕಾರುಗಳು ಇದಕ್ಕೆ ವಿರುದ್ಧವಾಗಿವೆ ಎಂಬ ದೂರುಗಳು ಹೆಚ್ಚಾಗಿವೆ.
ಬೆಂಗಳೂರಿನಲ್ಲಿ ಈ ರೀತಿಯ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಟ್ಯಾಕ್ಸಿ ಚಾಲರಿಂದ ದೂರುಗಳನ್ನು ಸ್ವೀಕರಿಸಿದ ನಂತರ, ಬೆಂಗಳೂರಿನ ಸಾರಿಗೆ ಇಲಾಖೆಯು ಇದೀಗ ಕ್ವಿಕ್ ರೈಡ್, ಬ್ಲಾಬ್ಲಾಕಾರ್ ಮುಂತಾದ ಮೊಬೈಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಕಾರ್‌ಪೂಲಿಂಗ್ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.

ಇಂತಹ ಆ್ಯಪ್ ಗಳನ್ನು ಬಳಸಿಕೊಂಡು ಕಾರ್‌ಪೂಲಿಂಗ್‌ನಲ್ಲಿ ತೊಡಗಿರುವವರಿಗೆ ಆರು ತಿಂಗಳವರೆಗೆ ವಾಹನದ ನೋಂದಣಿ ಪ್ರಮಾಣಪತ್ರವನ್ನು (ಆರ್‌ಸಿ) ಅಮಾನತುಗೊಳಿಸಲಾಗುವುದು. ರೂ. 5,000 ರಿಂದ 10,000 ರೂ. ಗಳವರೆಗೆ ದಂಡವನ್ನು ಒಳಗೊಂಡಿರುವ ಪರಿಣಾಮಗಳನ್ನು ಎದುರಿಸಬಹುದು ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ್.ಸಿ ಎಚ್ಚರಿಕೆ ನೀಡಿದ್ದಾರೆ.
"ವಾಣಿಜ್ಯ ಉದ್ದೇಶಗಳಿಗೆ ಬಳಸಲು ನಿಷೇಧವಿರುವ ವೈಟ್‌ಬೋರ್ಡ್ ಕಾರುಗಳನ್ನು ಒಟ್ಟುಗೂಡಿಸಿ ಕಾರ್‌ಪೂಲಿಂಗ್ ಅಪ್ಲಿಕೇಶನ್‌ಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ. ಟ್ಯಾಕ್ಸಿ ಚಾಲಕರ ಸಂಘಗಳಿಂದ ದೂರುಗಳು ಹೆಚ್ಚಾಗಿವೆ. ಈ ಅಕ್ರಮ ಕಾರ್ಯಾಚರಣೆಗಳ ವಿರುದ್ಧ ಕ್ರಮ ಕೈಗೊಳ್ಳಲು RTO ಗಳಿಗೆ ಸೂಚಿಸಲಾಗಿದೆ" ಎಂದು ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ್.ಸಿ ಅವರು ಹೇಳಿದರು.

ಕಾರ್ ಪೂಲಿಂಗ್ ಎಂದರೇನು?: ಪ್ರಯಾಣಿಕರಿಗೆ ಹಣ ಉಳಿಸುವ ಹಾಗೂ ಖಾಸಗಿ ಚಾಲಕರಿಗೆ ಹಣ ಗಳಿಸುವ ಆಯ್ಕೆಯಾಗಿದೆ. ವಿವರವಾಗಿ ಹೇಳುವುದಾದ್ರೆ ಒಂದೇ ಮಾರ್ಗದಲ್ಲಿ ಹಲವರು ಪ್ರಯಾಣಿಕರು ಸಂಚರಿಸುವ ಅಗತ್ಯವಿರುತ್ತದೆ. ಆದ್ರೆ ಒಬ್ಬರಿಗೊಬ್ಬರು ತಿಳಿದಿರುವುದಿಲ್ಲ. ಆ ಸಮಯದಲ್ಲಿ ಒಂದೇ ಮಾರ್ಗದಲ್ಲಿ ಪ್ರಯಾಣಿಸುವವರನ್ನು ಒಟ್ಟುಗೂಡಿಸಿ ಅವರ ಗಮ್ಯ ಸ್ಥಳಗಳಿಗೆ ಸಾಗಿಸುವುದನ್ನು ಕಾರ್ ಪೂಲಿಂಗ್ ಎಂದು ಕರೆಯುತ್ತಾರೆ.
ಕಾರ್‌ಪೂಲಿಂಗ್ ಪ್ರತಿಯೊಬ್ಬ ವ್ಯಕ್ತಿ ವಿಭಿನ್ನ ವಾಹನಗಳನ್ನು ತೆಗೆದುಕೊಳ್ಳುವ ಬದಲು ಒಂದೇ ವಾಹನದಲ್ಲಿ ಒಂದೇ ಮಾರ್ಗವನ್ನು ತೆಗೆದುಕೊಳ್ಳುವ ಜನರನ್ನು ಸಾಗಿಸುವ ಮೂಲಕ ನಗರಗಳಲ್ಲಿ ದಟ್ಟಣೆಯನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ರೆ ಇದು ಕೇವಲ ವಾಣಿಜ್ಯ ಉದ್ದೇಶಕ್ಕಾಗಿರುವ ಎಲ್ಲೋ ಬೋರ್ಡ್ ಕಾರುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಇದೀಗ ವೈಟ್‌ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ.

ಈ ವಾರದ ಆರಂಭದಲ್ಲಿ, ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಸುಧೀರ್ಘ ದಟ್ಟಣೆಯಿಂದ ಉಸಿರುಗಟ್ಟಿಸಿತ್ತು. ಸುಮಾರು 2-3 ಕಿ.ಮೀ ದೂರ ಕ್ರಮಿಸಲು ಗಂಟೆಗಳು ಬೇಕಾಯಿತು ಎಂದು ಟ್ರಾಫಿಕ್‌ನಲ್ಲಿ ಸಿಲುಕಿದ್ದ ಜನರು ತಿಳಿಸಿದ್ದಾರೆ. ಟ್ರಾಫಿಕ್ ಜಾಮ್‌ನಿಂದಾಗಿ ಕೆಲವು ಶಾಲಾ ಮಕ್ಕಳು ರಾತ್ರಿ 8 ರಿಂದ 9 ಗಂಟೆಗೆ ಮನೆ ತಲುಪಿದರು, ಪ್ರಯಾಣಿಕರು ಪರದಾಡಿದ್ದರು.
ಕಾರ್‌ಪೂಲಿಂಗ್ ಇಂಧನ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ, ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಅದೂ ಅಲ್ಲದೇ ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ವಾಹನ ಮಾಲಿನ್ಯವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ರೆ ಎಲ್ಲೋ ಬೋರ್ಡ್‌ನವರು ತಮಗೆ ಲಾಭವಿಲ್ಲ ಎಂಬ ಕಾರಣಕ್ಕೆ ಇದನ್ನು ಮಾಡುವುದಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications