ಅಪಾಯವನ್ನು ಮೊದಲೇ ಪತ್ತೆ ಹಚ್ಚುವ ರಾಡಾರ್ ವ್ಯವಸ್ಥೆ... ಈ 5 ಕಾರುಗಳಲ್ಲಿ ADAS ವೈಶಿಷ್ಟ್ಯ!

ಭಾರತದಲ್ಲಿ ಅಪಘಾತಗಳನ್ನು ತಗ್ಗಿಸಲು ಕೇಂದ್ರ ಸರ್ಕಾರ ಹೆಚ್ಚು ಗಮನಹರಿಸಿ ಅಂತರಾಷ್ಟ್ರೀಯ ಮಟ್ಟದ ಹೆದ್ದಾರಿಗಳನ್ನು ನಿರ್ಮಿಸುತ್ತಿದೆ. ಮತ್ತೊಂದೆಡೆ ಕಾರುಗಳಲ್ಲಿ ಗರಿಷ್ಟ ಸುರಕ್ಷತೆಯನ್ನು ಒದಗಿಸುವಂತೆ ಸೂಚಿಸಿದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಕಾರುಗಳು ಅನೇಕ ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತಿವೆ. ಅದರಲ್ಲಿ ಪ್ರಮುಖವಾದದ್ದು ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ).

ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಈ ADAS (Advanced driver-assistance system) ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಆಧುನಿಕ ಕಾರುಗಳಲ್ಲಿ ಕಂಡುಬರುವ ವಿಶೇಷ ವೈಶಿಷ್ಟ್ಯವಾಗಿ ADAS ಅನ್ನು ಪರಿಗಣಿಸಲಾಗುತ್ತಿದೆ. ಅಪಘಾತಗಳಿಂದ ಕಾರನ್ನು ರಕ್ಷಿಸಲು ಈ ವೈಶಿಷ್ಟ್ಯವು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರಸ್ತೆಯಲ್ಲಿ ಕಾಣದ ಅಪಾಯಗಳ ಬಗ್ಗೆ ಚಾಲಕನಿಗೆ ಮೊದಲೇ ಎಚ್ಚರಿಕೆ ನೀಡುತ್ತದೆ.

cars-with-adas-tata-safari-mahindra-xuv700-mg-hector-honda-city

ಮೂಲಭೂತವಾಗಿ, ADAS ರಾಡಾರ್-ಆಧಾರಿತ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ರಸ್ತೆಯ ಅಪಾಯಗಳ ಬಗ್ಗೆ ಕಾರಿನೊಳಗೆ ಚಾಲಕನಿಗೆ ತಿಳಿಸುತ್ತದೆ. ಈ ಅಪಾಯಗಳನ್ನು ಗ್ರಹಿಸಿ, ಕಾರು ಸ್ವಯಂಚಾಲಿತವಾಗಿ ತುರ್ತು ಬ್ರೇಕಿಂಗ್, ಅಲಾರಂಗಳು ಮತ್ತು ಎಚ್ಚರಿಕೆಗಳನ್ನು ಸಕ್ರಿಯಗೊಳಿಸುತ್ತದೆ. ಆದ್ದರಿಂದಲೇ ಇದು ಜನಪ್ರಿಯತೆ ಪಡೆಯುತ್ತಿದೆ, ಈಗ ಭಾರತದಲ್ಲಿ ಯಾವೆಲ್ಲಾ ಕಾರುಗಳು ADAS ಹೊಂದಿವೆ ಎಂಬುದನ್ನು ನೋಡೋಣ.

ಮಹೀಂದ್ರಾ: ಭಾರತದ ಪ್ರಮುಖ ಎಸ್‌ಯುವಿ ತಯಾರಕಾ ಕಂಪನಿಯಾಗಿ ಗುರ್ತಿಸಿಕೊಂಡಿರುವ ಮಹೀಂದ್ರಾ, ತನ್ನ ಪ್ರಮುಖ SUV XUV700 ನಲ್ಲಿ ADAS ಅನ್ನು ನೀಡುತ್ತಿದೆ. XUV700 ಬೆಲೆ ರೂ. 14.03 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಈ 7 ಆಸನಗಳ SUV 2-ಲೀಟರ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

cars-with-adas-tata-safari-mahindra-xuv700-mg-hector-honda-city

ಟಾಟಾ ಮೋಟಾರ್ಸ್: ಟಾಟಾ ತನ್ನ ಕಾರುಗಳಲ್ಲಿ ಸುಧಾರಿತ ವೈಶಿಷ್ಟ್ಯಗಳನ್ನು ಒದಗಿಸುವಲ್ಲಿ ಹಿಂದೆ ಬಿದ್ದಿಲ್ಲ. ADAS ಟಾಟಾ ಮೋಟಾರ್ಸ್‌ನ ಸಫಾರಿ ಎಸ್‌ಯುವಿಯಲ್ಲಿ ಲಭ್ಯವಿದೆ. ಟಾಟಾ ಸಫಾರಿಯ ಬೆಲೆ ರೂ. 16.19 ಲಕ್ಷದಿಂದ ಪ್ರಾರಂಭವಾಗಿ ರೂ. 27.34 ಲಕ್ಷ (ಎಕ್ಸ್ ಶೋ ರೂಂ) ವೆರೆಗೆ ಇದೆ. ಈ SUV 2.0 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ.

MG ಮೋಟಾರ್ಸ್: ಭಾರತದಲ್ಲಿನ ಕಾರುಗಳಲ್ಲಿ ADAS ವೈಶಿಷ್ಟ್ಯವು MG ಹೆಕ್ಟರ್ SUV ಯೊಂದಿಗೆ ಪ್ರಾರಂಭವಾಯಿತು. ಈ ಎಂಜಿ ಹೆಕ್ಟರ್ 5 ಮತ್ತು 7 ಸೀಟುಗಳಲ್ಲಿ ಲಭ್ಯವಿದ್ದು, ಬೆಲೆಯು ರೂ. 15 ಲಕ್ಷದಿಂದ ರೂ. 22 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇದೆ. ಕಂಪನಿಯು ಈ ಕಾರಿನಲ್ಲಿ 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತಿದೆ.

cars-with-adas-tata-safari-mahindra-xuv700-mg-hector-honda-city

ಹೋಂಡಾ: ಹೊಸ ತಲೆಮಾರಿನ ಹೋಂಡಾ ಸಿಟಿ ಹೈಬ್ರಿಡ್ ಕೂಡ ADAS ಅನ್ನು ಹೊಂದಿದೆ. ಹೈಬ್ರಿಡ್ ಎಂಜಿನ್ ಜೊತೆಗೆ, ಕಂಪನಿಯು ಕಾರಿನ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಹೋಂಡಾ ಸಿಟಿ 4 ಸ್ಟಾರ್ ರೇಟಿಂಗ್ ಪಡೆದ ಕಾರಾಗಿದೆ. ಹೋಂಡಾ ಸಿಟಿ ಹೈಬ್ರಿಡ್ ಬೆಲೆ ರೂ. 18.89 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ).

ಹ್ಯುಂಡೈ: ಹ್ಯುಂಡೈ ತನ್ನ ಹೊಸ ವರ್ನಾ ಸೆಡಾನ್ ಅನ್ನು ADAS ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಿದೆ. ಹೊಸ ತಲೆಮಾರಿನ ವರ್ನಾ ಸೆಡಾನ್ ಈಗ ನೋಟದಲ್ಲಿ ಮಾತ್ರವಲ್ಲದೆ ಸುರಕ್ಷತೆಯಲ್ಲೂ ಉತ್ತಮವಾಗಿದೆ. ಕಾರು ಈಗ 5-ಸ್ಟಾರ್ ಜಾಗತಿಕ NCAP ಸುರಕ್ಷತಾ ರೇಟಿಂಗ್‌ನೊಂದಿಗೆ ಬರುತ್ತದೆ. ಹೊಸ ವರ್ನಾ ಬೆಲೆ ರೂ. 10.96 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

cars-with-adas-tata-safari-mahindra-xuv700-mg-hector-honda-city

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 23, 2023, 11:57 [IST]
English summary
Cars with adas tata safari mahindra xuv700 mg hector honda city
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+