Chinese jimny: ಮಾರುತಿ ಜಿಮ್ನಿಯನ್ನು ನಕಲು ಮಾಡಿ ಭಾರತಕ್ಕೂ ಮುನ್ನ ಇಳಿಸಿಬಿಟ್ರು ನೋಡಿ ಚೀನಾದವ್ರು!
ಕಳಪೆ ಗುಣಮಟ್ಟ, ಇತರ ದೇಶಗಳ ಉತ್ಪನ್ನಗಳನ್ನು ನಕಲು ಮಾಡುವುದರಲ್ಲಿ ಚೀನಾ ದೇಶವು ಜನಪ್ರಿಯತೆ ಪಡೆದಿದೆ. ನಮ್ಮ ಭಾರತದಲ್ಲಂತೂ ಚೀನಾ ವಸ್ತುಗಳಂದ್ರೆ ಛೀಮಾರಿ ಹಾಕುತ್ತಾರೆ. ಇದಕ್ಕೆ ಪ್ರಮುಖ ಕಾರಣ ಅಂತರಾಷ್ಟ್ರೀಯವಾಗಿ ನಮ್ಮೊಂದಿಗಿನ ಭಾಂಧವ್ಯ ಉತ್ತಮವಾಗಿಲ್ಲದಿರುವುದು ಹಾಗೂ ಅವರ ಕಳಪೆ ಗುಣಮಟ್ಟದ ಉತ್ಪನ್ನಗಳಾಗಿವೆ. ಎಷ್ಟೇ ಕೀಳಾಗಿ ಕಂಡರು ಅಲ್ಲಿನ ಕಂಪನಿಗಳು ಮತ್ತದೇ ಕಾರ್ಯಗಳಲ್ಲಿ ನಿರತವಾಗಿವೆ.
ಈಗ ಮಾರುತಿ ಜಿಮ್ನಿಯನ್ನು ಹೋಲುವ ಥೇಟ್ ಅದೇ ವಿನ್ಯಾಸದ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ತರಲು ಚೀನಾದ ಪ್ರಮುಖ ಕಂಪನಿ ಸಿದ್ಧತೆ ಮಾಡಿಕೊಂಡಿದೆ. ಈಗ ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ತನ್ನ ಅಧಿಕೃತ ಚೊಚ್ಚಲ 2023 ಶಾಂಘೈ ಆಟೋ ಶೋನಲ್ಲಿ ತೋರಿಸಲು ಸಜ್ಜಾಗಿದೆ. ಈ ಕಾರನ್ನು ಸೂಕ್ಷ್ಮವಾಗಿ ಗನಿಸಿದರೆ ಮಾರುತಿ ಜಿಮ್ನಿ ಮೂರು ಬಾಗಿಲಿನ ಆವೃತ್ತಿ ಮಾತ್ರವಲ್ಲದೇ ಫೋರ್ಡ್ ಕಂಪನಿಯ ಬ್ರಾಂಕೋ ಮಾದರಿಯನ್ನು ಕೂಡ ಕಾಪಿ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಮಾರುತಿ ಜಿಮ್ನಿ ಹಾಗೂ ಫೋರ್ಡ್ ಬ್ರಾಂಕೋ ಮಾದರಿಗಳು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿವೆ. ನಿಮಗೆ ಸಂದೇಹವಿದ್ದರೇ ಚೀನಾದವರ ಈ ಕಾರನ್ನು ಆ ಎರಡೂ ಮಾದರಿಗಳಿಗೆ ಹೋಲಿಕೆ ಮಾಡಿ ನೋಡಬಹುದು. ಇನ್ನು ವಿಷಯಕ್ಕೆ ಬಂದರೆ ಚೀನಾದ SIAC ಕಂಪನಿಯ ಒಡೆತನದಲ್ಲಿ ಈ ಕಾರನ್ನು ನಿರ್ಮಿಸಿಲಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಗೆ ಬೌಜನ್ ಯೆಪ್ ಎಂದು ಹೆಸರಿಡಲಾಗಿದೆ. ಕಾರು ಯಾವುದೇ ಮರೆಮಾಚುವಿಕೆ ಇಲ್ಲದೇ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದೆ.
ವಿಶ್ವದ ದುಬಾರಿ ಕಾರುಗಳನ್ನು ಕಾಪಿ:
ಚೀನಾದವರು ಮೊದಲಿನಿಂದಲೂ ಆಟೋಮೊಬೈಲ್ ರಂಗದಲ್ಲಿ ಹಲವು ಭಾರತೀಯ ಕಾರುಗಳು ಸೇರಿದಂತೆ ವಿಶ್ವದ ದುಬಾರಿ ಬ್ರಾಂಡ್‌ಗಳನ್ನು ನಕಲು ಮಾಡಿದ್ದಾರೆ. ಆದರೆ ಈ ಎಲ್ಲಾ ಕಾರುಗಳು ಕೇವಲ ಅವರ ದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟಗೆ ಬಿಡುಗಡೆ ಮಾಡುವುದಿಲ್ಲ. ಹಾಗೆಯೇ ಕಾರುಗಳ ಶಕ್ತಿ, ಸಾಮರ್ಥ್ಯಗಳನ್ನು ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಿಸಲಾಗುತ್ತದೆ. ಅಂತೆಯೇ ಚೀನಾ ಜಿಮ್ನಿಯಾದ ಬೌಜನ್ ಯೆಪ್ ಅನ್ನು ಭಾರತದ ಜಿಮ್ನಿಗೆ ಹೋಲಿಸಿದರೆ ಪವರ್‌ಟ್ರೇನ್‌ನಲ್ಲಿ ಗಮನಾರ್ಹ ವ್ಯತ್ಯಾಸವಿದೆ.

ಮೊದಲೇ ಹೇಳಿದಂತೆ ಭಾರತದ ಮಾರುತಿ ಜಿಮ್ನಿ ಇಂಧನ ಚಾಲಿತ ವಾಹನವಾಗಿದೆ. ಬೌಜನ್ ಯೆಪ್ ಎಲೆಕ್ಟ್ರಿಕ್ ಆಗಿದ್ದು, ಇದು ಸಿಂಗಲ್ ಚಾರ್ಜ್‌ನಲ್ಲಿ 303 ಕಿ.ಮೀಗಳ ಪ್ರಮಾಣೀಕೃತ ಶ್ರೇಣಿಯನ್ನು ಹೊಂದಿದೆ. ಆದರೆ ಕಾರಿನ ಕುರಿತ ತಾಂತ್ರಿಕ ವಿಶೇಷಣಗಳು ಅವರ ವೆಬ್‌ಸೈಟ್‌ಗಳಲ್ಲಿ ಬಹಿರಂಗಪಡಿಸಿಲ್ಲ. ಬೌಜನ್ ಯೆಪ್ ಕೇವಲ 3,381mm ಉದ್ದ, 1,685mm ಅಗಲ ಮತ್ತು 1,721mm ಎತ್ತರವನ್ನು ಹೊಂದಿದೆ. ವೀಲ್‌ಬೇಸ್ 2,110 ಎಂಎಂ ಆಗಿದ್ದು, ತೂಕವು ಕೇವಲ 1,006 ಕೆ.ಜಿ ಇದೆ ಎಂದು ಹೇಳಲಾಗಿದೆ.
ಇದರ ಪವರ್ ಸಾಮರ್ಥ್ಯಗಳ ಕುರಿತು ಮಾತನಾಡುವುದಾದರೆ, ಈ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಲಿಥಿಯಂ ಐಯಾನ್ ಫಾಸ್ಫೇಟ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಹಿಂಬದಿಯಲ್ಲಿ ಸಿಂಗಲ್ ಮೋಟಾರ್ ಅನ್ನು ನೀಡಲಾಗಿದ್ದು, 68 PS ಪವರ್ ಹಾಗೂ 140 Nm ನಷ್ಟು ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಇದು SAIC ಒಡೆತನದ ವಾಹನವಾಗಿರುವುದು, ಇದನ್ನು ಜೆನೆಲ್ ಮೋಟಾರ್ಸ್ ಮತ್ತು ವುಲಿಂಗ್ ಅಭಿವೃದ್ಧಿಪಡಿಸಿದೆ ಎಂದು ಹೇಳಲಾಗಿದೆ.

SAIC ಹೆಕ್ಟರ್, ಗ್ಲೋಸ್ಟರ್, ಆಸ್ಟರ್ ಮತ್ತು ZS EV ಯಂತಹ ಕಾರುಗಳನ್ನು ಮಾರಾಟ ಮಾಡುವ MG ಮೋಟಾರ್ಸ್‌ನ ಮೂಲ ಕಂಪನಿಯಾಗಿದೆ. ಹೀಗೆ ಚೀನೀ ತಯಾರಕರು ತಮ್ಮ ಗಡಿಯೊಳಗೆ ಜನಪ್ರಿಯ ಕಾರುಗಳ ನಕಲು ಆವೃತ್ತಿಗಳನ್ನು ಪರಿಚಯಿಸಲು ಕುಖ್ಯಾತರಾಗಿದ್ದಾರೆ. ಆದರೆ ಇವರ ಮೇಲೆ ಪ್ರಕರಣ ದಾಖಲಾಗುವುದಿಲ್ಲವೇ ಎಂಬ ಅನುಮಾನ ನಿಮಗಿರಬಹುದು, ಇಂತಹ ನೂರಾರು ಪ್ರಕರಣಗಳನ್ನು ಎದುರಿಸುತ್ತಲೇ ಚೀನಾದವರು ಇನ್ನೂ ಹಲವು ಕಾರುಗಳನ್ನು ನಕಲು ಮಾಡುತ್ತಲೇ ಇದ್ದಾರೆ.
2016 ರಲ್ಲಿ ದಾಖಲಿಸಿದ ಇಂತಹದೇ ಪ್ರಕರಣಕ್ಕೆ 2019 ರಲ್ಲಿ ನ್ಯಾಯ ದೊರಕಿತ್ತು. ಟಾಟಾ ಮೋಟಾರ್ಸ್ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್ ಲ್ಯಾಂಡ್‌ವಿಂಡ್ X7 ಅನ್ನು ಕಾಪಿ ಮಾಡಿದ್ದಕ್ಕಾಗಿ ಜಿಯಾಂಗ್ಲಿಂಗ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. 2019 ರಲ್ಲಿ ಚೀನಾದ ನ್ಯಾಯಾಲಯ ಇದನ್ನು ನಕಲು ಮಾಡಿದ್ದಕ್ಕಾಗಿ ಜಿಯಾಂಗ್ಲಿಂಗ್ ಕಂಪನಿಯ ಮಾರಾಟವನ್ನು ತಕ್ಷಣವೇ ನಿಲ್ಲಿಸಿ ಜಾಗ್ವಾರ್ ಲ್ಯಾಂಡ್ ರೋವರ್‌ಗೆ ಪರಿಹಾರವನ್ನು ಪಾವತಿಸುವಂತೆ ತಯಾರಕರಿಗೆ ಆದೇಶಿಸಿತ್ತು. ಇನ್ನು ಬೈಕ್‌ಗಳ ವಿಷಯಕ್ಕೆ ಬಂದರೆ KTM ಡ್ಯೂಕ್, ಬಜಾಜ್ ಪಲ್ಸರ್, ಯಮಹಾ R3, ಕವಾಸಕಿ ನಿಂಜಾಗಳನ್ನು ನಕಲು ಮಾಡಿದ್ದಾರೆ.


Click it and Unblock the Notifications