Citroen C3 Aircross: ಇತಿಹಾಸ ಸೃಷ್ಟಿಸಲಿದೆ ಮುಂಬರಲಿರುವ ಸಿಟ್ರಸ್ ಸಿ3 ಏರ್‌ಕ್ರಾಸ್ ಎಸ್‌ಯುವಿ

ಪ್ರಮುಖ ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರಸ್ (CItroen) ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಕೈಗೆಟುಕುವ ಬೆಲೆಯ 'ಇಸಿ3' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಬಿಡುಗಡೆಗಳಿಸುವ ಮೂಲಕ ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಇದೀಗ, ವರ್ಷಾಂತ್ಯದೊಳಗೆ ತನ್ನ ಬಹುನಿರೀಕ್ಷಿತ ಮಿಡ್ ಸೈಜ್ ಎಸ್‌ಯುವಿ 'ಸಿ3 ಏರ್‌ಕ್ರಾಸ್' ಲಾಂಚ್ ಮಾಡಲು ಸಿದ್ಧತೆ ನಡೆಸಿದೆ.

ಮುಂಬರಲಿರುವ ಸಿಟ್ರಸ್ ಸಿ3 ಏರ್‌ಕ್ರಾಸ್ ಎಸ್‌ಯುವಿ, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಹಾಗೂ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಇದರ ಡಿಸೈನ್, ಬಹುತೇಕ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸಿಟ್ರಸ್ ಸಿ5 ಏರ್‌ಕ್ರಾಸ್ ಎಸ್‌ಯುವಿ ಮತ್ತು ಸಿ3 ಹ್ಯಾಚ್‌ಬ್ಯಾಕ್ ಅನ್ನು ಹೋಲಿಕೆಯಾಗಲಿದೆ. ಅಲ್ಲದೆ, ನೂತನ ಸಿಟ್ರಸ್ ಸಿ3 ಏರ್‌ಕ್ರಾಸ್ 5-7 ಆಸನ ವ್ಯವಸ್ಥೆಯನ್ನು ಪಡೆದಿರಲಿದೆ.

CItroen C3 Aircross: ಇತಿಹಾಸ ಸೃಷ್ಟಿಸಲಿದೆ ಮುಂಬರಲಿರುವ ಸಿಟ್ರಸ್ ಸಿ3 ಏರ್‌ಕ್ರಾಸ್ ಎಸ್‌ಯುವಿ

ನೂತನ ಸಿ3 ಏರ್‌ಕ್ರಾಸ್ ಎಸ್‌ಯುವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು ಸಿ3 ಹ್ಯಾಚ್‌ಬ್ಯಾಕ್ ಹೊಂದಿರುವಂತೆ 1.2 ಲೀಟರ್, 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿರಲಿದ್ದು, 110 HP ಗರಿಷ್ಠ ಪವರ್ ಹಾಗೂ 190 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಆದರೆ, ಗೇರ್ ಬಾಕ್ಸ್ ಆಯ್ಕೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಎಸ್‌ಯುವಿ, ಎಲೆಕ್ಟ್ರಿಕ್ ಆವೃತ್ತಿಯಾಗಿಯೂ ಮಾರುಕಟ್ಟೆಗೆ ಬಿಡುಗಡೆಯಾಗಬಹುದು.

ಈ ಕಾರಿನ ಹೊರಭಾಗದ ಡಿಸೈನ್ ಬಗ್ಗೆ ಮಾತನಾಡುವುದಾದರೆ, ಇದರ ಸೈಜ್ ಹುಂಡೈ ಕ್ರೆಟಾದಂತೆ ಇರಲಿದ್ದು, 4.3 ಮೀಟರ್ ಉದ್ದವಿದೆ. ಎಸ್‌ಯುವಿ ಮುಂಭಾಗದಲ್ಲಿ ಸಿಗ್ನೇಚರ್ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ಸ್, ಎಲ್ಇಡಿ DRLs ಹೊಂದಿದೆ. ಜೊತೆಗೆ 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ ಹೊಂದಿದ್ದು, ಅದು ಸಿ3ಗಿಂತ 10 ರಿಂದ 20 ಎಂಎಂ ಹೆಚ್ಚಾಗಿದೆ. ಇವಷ್ಟೇ ಅಲ್ಲದೆ, ಮತ್ತಷ್ಟು ಅತ್ಯಾಧುನಿಕ ಡಿಸೈನ್ ಅನ್ನು ಸಿಟ್ರಸ್ ಸಿ3 ಏರ್‌ಕ್ರಾಸ್ ಎಸ್‌ಯುವಿ ಹೊಂದುವುದರಿಂದ ಗ್ರಾಹಕರಿಗೆ ಇಷ್ಟವಾಗಬಹುದು.

CItroen C3 Aircross: ಇತಿಹಾಸ ಸೃಷ್ಟಿಸಲಿದೆ ಮುಂಬರಲಿರುವ ಸಿಟ್ರಸ್ ಸಿ3 ಏರ್‌ಕ್ರಾಸ್ ಎಸ್‌ಯುವಿ

ಸಿಟ್ರಸ್ ಸಿ3 ಏರ್‌ಕ್ರಾಸ್ ಎಸ್‌ಯುವಿಯ ಒಳಭಾಗವು ಸಿ3 ಹ್ಯಾಚ್‌ಬ್ಯಾಕ್ ಅನ್ನೇ ಹೋಲುತ್ತದೆ. ಇದು 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 4 ಸ್ಪೀಕರ್ಸ್, ರಿಮೋಟ್ ಲಾಕಿಂಗ್ ಹೊಂದಿರಲಿದೆ. ಟಾಪ್ ಎಂಡ್ ಮಾದರಿಯು, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋ ORVMಗಳನ್ನು ಪಡೆದಿರಬಹುದು.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್, ರೂ.6.16 ಲಕ್ಷದಿಂದ ರೂ.8.25 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.2-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್. ಜೊತೆಗೆ 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ ಹಾಗೂ ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್ ವೈಶಿಷ್ಟ್ಯಗಳನ್ನು ಹೊಂದಿದೆ.

CItroen C3 Aircross: ಇತಿಹಾಸ ಸೃಷ್ಟಿಸಲಿದೆ ಮುಂಬರಲಿರುವ ಸಿಟ್ರಸ್ ಸಿ3 ಏರ್‌ಕ್ರಾಸ್ ಎಸ್‌ಯುವಿ

ಸಿಟ್ರಸ್ ಸಿ5 ಏರ್‌ಕ್ರಾಸ್ ಬೆಲೆ ಕೊಂಚ ದುಬಾರಿಯಾಗಿದ್ದು, ರೂ.37.17 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಇದು 2-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 177 PS ಗರಿಷ್ಠ ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 8 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದ್ದು, 17.5 kmpl ಇಂಧನ ದಕ್ಷತೆಯನ್ನು ಪಡೆದಿದೆ.

ಒಟ್ಟಾರೆಯಾಗಿ, ವರ್ಷಾಂತ್ಯದೊಳಗೆ ದೇಶೀಯ ಮಾರುಕಟ್ಟೆಯಲ್ಲಿ 'ಸಿ3 ಏರ್‌ಕ್ರಾಸ್' ಎಸ್‌ಯುವಿಯನ್ನು ಲಾಂಚ್ ಮಾಡಲು ಸಿಟ್ರಸ್ ಕಂಪನಿ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಆದರೆ, ಬೆಲೆ ಸಂಬಂಧಿಸಿದ ಯಾವುದೇ ವಿವರಗಳು ಲಭ್ಯವಾಗಿಲ್ಲ. ಮಿಡ್ ಸೈಜ್ ಎಸ್‌ಯುವಿಯಾಗಿರುವುದರಿಂದ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ನೀರಿಕ್ಷೆ ಇದ್ದು, ಕ್ರೆಟಾ, ಸೆಲ್ಟೋಸ್ ಹಾಗೂ ಗ್ರ್ಯಾಂಡ್ ವಿಟಾರಾಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

More from DriveSpark

Article Published On: Monday, March 27, 2023, 16:02 [IST]
English summary
Citroen c3 aircross midsize suv launch late 2023 india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+