ಲ್ಯಾಟಿನ್ NCAP ಸುರಕ್ಷತಾ ಪರೀಕ್ಷೆ: ಸಿಟ್ರಸ್ ಸಿ3 ಕಾರಿಗೆ '0' ಸ್ಟಾರ್ ರೇಟಿಂಗ್
ಫ್ರೆಂಚ್ ವಾಹನ ತಯಾರಕ ಸಿಟ್ರಸ್ (Citroen) ಭಾರತ ಹಾಗೂ ದಕ್ಷಿಣ ಅಮೆರಿಕ ಮಾರುಕಟ್ಟೆಯಲ್ಲಿ ಸಿ3 (C3) ಹ್ಯಾಚ್‌ಬ್ಯಾಕ್ ಅನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಸದ್ಯದ ವರದಿ ಪ್ರಕಾರ, ಲ್ಯಾಟಿನ್ NCAP ಸುರಕ್ಷತೆಯ ದೃಷ್ಟಿಯಿಂದ ನಡೆಸುವ ಕ್ರ್ಯಾಶ್ ಟೆಸ್ಟ್‌ನಲ್ಲಿ '0' ಸ್ಟಾರ್ ರೇಟಿಂಗ್ ಪಡೆದಿದೆ.
ಸಿಟ್ರಸ್ ಕಂಪನಿ, ಸಿ3 ಹ್ಯಾಚ್‌ಬ್ಯಾಕ್ ಅನ್ನು ಭಾರತ ಹಾಗೂ ಬ್ರೆಜಿಲ್ ದೇಶದಲ್ಲಿ ಉತ್ಪಾದಿಸುತ್ತದೆ. ಲ್ಯಾಟಿನ್ NCAPಯಿಂದ ಬ್ರೆಜಿಲ್‌ನಲ್ಲಿ ತಯಾರಿಸಿದ ಸಿಟ್ರಸ್ ಸಿ3 ಕಾರಿನ ಪರೀಕ್ಷೆ ನಡೆಸಿದ್ದು, ಅಲ್ಲಿನ ಸುರಕ್ಷತಾ ಮಾನದಂಡಗಳಿಗೆ ಅನ್ವಯ ವಯಸ್ಕರ ರಕ್ಷಣೆ ವಿಭಾಗದಲ್ಲಿ ಶೇಕಡ 31% ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ ಶೇಕಡ 12% ಗಳಿಸಿದೆ. ಈ ಕಾರು, ಡ್ಯುಯಲ್ ಏರ್ ಬಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಅನೇಕ ಸೇಫ್ಟಿ ಫೀಚರ್ಸ್ ಹೊಂದಿದೆ.

ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿ ಮಾರಾಟವಾಗುವ ಸಿಟ್ರಸ್ ಸಿ3 ಕಾರಿಗೆ ಈ ಫಲಿತಾಂಶಗಳು ಅನ್ವಯವಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಗ್ಲೋಬಲ್ NCAP ಈ ಕಾರಿನ ಸುರಕ್ಷತೆಯ ಪರೀಕ್ಷೆ ನಡೆಸಿದರೆ, ಬೇರೆ ರಿಸಲ್ಟ್ ಬರಬಹುದು. ಇದಿಷ್ಟೇ ಅಲ್ಲದೆ, ಸರ್ಕಾರ ನಿಗದಿಪಡಿಸಿರುವ ಒಂದಷ್ಟು ಮಾನದಂಡಗಳನ್ನು ಪೂರೈಸಿದ ಬಳಿಕವೇ ಯಾವುದೇ ಕಾರುಗಳನ್ನು ದೇಶದಲ್ಲಿ ಸೇಲ್ ಮಾಡಲು ಅವಕಾಶ ನೀಡಲಾಗುತ್ತದೆ.
ಭಾರತದಲ್ಲಿ ಖರೀದಿಗೆ ದೊರೆಯುವ ಸಿಟ್ರಸ್ ಸಿ3 ಹ್ಯಾಚ್‌ಬ್ಯಾಕ್ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಡ್ಯುಯಲ್ ಏರ್ ಬಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ಸ್, ರಿವರ್ಸಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್-ಹೋಲ್ಡ್ ಅಸಿಸ್ಟ್ ಹಾಗೂ TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಅನೇಕ ಫೀಚರ್ಸ್ ಪಡೆದಿದೆ.

ದೇಶದಲ್ಲಿ ಸಿಗುವ ಸಿಟ್ರಸ್ ಸಿ3 ಕಾರು, ಲೈವ್, ಫೀಲ್ ಹಾಗೂ ಶೈನ್ ಎಂಬ ಮೂರು ರೂಪಾಂತರಗಳಲ್ಲಿ ರೂ.6.16 ರಿಂದ 8.80 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದು, ಎರಡು ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ. 1.2 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಎಂಜಿನ್ 82 PS ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಮತ್ತೊಂದು, 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್, 110 PS ಪವರ್ ಹಾಗೂ 190 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದಿದೆ. ಈ ಸಿಟ್ರಸ್ ಸಿ3 ಕಾರು 19.3 kmpl ಮೈಲೇಜ್ ನೀಡುತ್ತದೆ. 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಭಾರತದಲ್ಲಿ ಸಿಟ್ರಸ್ ಸಿ3 ಎಲೆಕ್ಟ್ರಿಕ್ ಅವತಾರದಲ್ಲಿ 'ಇಸಿ3' ಹೆಸರಿನಲ್ಲಿ ಖರೀದಿಗೆ ಲಭ್ಯವಿದೆ. ಇದು, ರೂ.11.50 ಲಕ್ಷದಿಂದ ರೂ.12.43 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 29.2 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿರುವ ಕಾರು, ಸಂಪೂರ್ಣ ಚಾರ್ಜಿನಲ್ಲಿ 320 km ರೇಂಜ್ ನೀಡುತ್ತದೆ. ಬಹುತೇಕ ಮನೆಯ ವಿದ್ಯುತ್ ಬಳಕೆಯಲ್ಲಿ ಸಂಪೂರ್ಣ ಚಾರ್ಜ್ ಆಗಲು 10 ಗಂಟೆಬೇಕು.
ಇನ್ನು, ಲ್ಯಾಟಿನ್ NCAP ಸುರಕ್ಷತೆಯ ದೃಷ್ಟಿಯಿಂದ ನಡೆಸುವ ಕ್ರ್ಯಾಶ್ ಟೆಸ್ಟ್‌ನಲ್ಲಿ ಸಿಟ್ರಸ್ ಸಿ3 '0' ಸ್ಟಾರ್ ರೇಟಿಂಗ್ ಪಡೆದಿದೆ. ಆದರೆ, ಭಾರತದಲ್ಲಿ ಮಾರಾಟವಾಗುವ ಸಿಟ್ರಸ್ ಸಿ3 ಕಾರಿಗೆ ಈ ಫಲಿತಾಂಶಗಳು ಕೊಂಚವು ಅನ್ವಯವಾಗುವುದಿಲ್ಲ. ದೇಶದಲ್ಲಿ ಯಾವುದೇ ಕಾರನ್ನು ಮಾರಾಟ ಮಾಡಬೇಕೆಂದರೆ, ಅದು, ಸರ್ಕಾರ ನಿಗದಿಪಡಿಸಿರುವ ಕೆಲವೊಂದು ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಬೇಕಾಗಿದೆ.


Click it and Unblock the Notifications








