Citroen eC3: ಕೈಗೆಟುಕುವ ಬೆಲೆಯ 320 Km ಕ್ರಮಿಸುವ ಸಿಟ್ರಸ್ ಇಸಿ3 ಖರೀದಿಸಬೇಕೇ.. ಇಲ್ಲಿದೆ ಉಪಯುಕ್ತ ಮಾಹಿತಿ
ಭಾರತದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಕಾರುಗಳು ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಪ್ರಮುಖ ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರಸ್, 'ಇಸಿ3' (Citroen eC3) ಕಾರನ್ನು ಈಗಾಲೇ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಉತ್ತಮ ರೇಂಜ್ ನೀಡುವುದರೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಸಿಟ್ರಸ್ ಇಸಿ3 ಎರಡು ರೂಪಾಂತರಗಳಲ್ಲಿ ಭಾರತದ ಗ್ರಾಹಕರಿಗೆ ಸಿಗಲಿದೆ. ಅವುಗಳಲ್ಲಿ ಲೈವ್ ರೂಪಾಂತರ ರೂ.12.42 ಲಕ್ಷ ಹಾಗೂ ಫೀಲ್ ರೂಪಾಂತರ ರೂ.13.40 ಲಕ್ಷ (ಆನ್-ರೋಡ್ ದೆಹಲಿ) ಬೆಲೆಯನ್ನು ಹೊಂದಿದೆ. ನೀವು ಈ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದರೆ, ಅದರ ಡೌನ್ ಪೇಮೆಂಟ್, ಇಎಂಐ, ಬಡ್ಡಿದರ ಹಾಗೂ ಸಾಲದ ಅವಧಿ ಕುರಿತು ಇಲ್ಲಿ ಹೆಚ್ಚಿನ ಮಾಹಿತಿ ತಿಳಿಯೋಣ.

ಮೊದಲಿಗೆ ಸಿಟ್ರಸ್ ಇಸಿ3 ಕಾರಿನ 'ಲೈವ್' ರೂಪಾಂತರದ ಬಗ್ಗೆ ಮಾತನಾಡೋಣ. ಇದು ರೂ.12.42 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದ್ದು, ನೀವು 1.20 ಲಕ್ಷ ಡೌನ್ ಪೇಮೆಂಟ್ ಪಾವತಿಸುವ ಮೂಲಕ ಈ ಕಾರನ್ನು ಖರೀದಿಸಬಹುದು. ಆಗ, ಐದು ವರ್ಷಗಳ ಅವಧಿಗೆ ಶೇಕಡ 10% ಬಡ್ಡಿ ದರದಲ್ಲಿ ಮಾಸಿಕ ರೂ.23,836 ಇಎಂಐ ಪಾವತಿಸಬೇಕು.
ಸಿಟ್ರಸ್ ಇಸಿ3 ಎಲೆಕ್ಟ್ರಿಕ್ ಕಾರಿನ ಮತ್ತೊಂದು ರೂಪಾಂತರವಾದ 'ಫೀಲ್' ಬಗ್ಗೆ ಹೇಳುವುದಾದರೆ, ಇದು ರೂ.13.40 ಲಕ್ಷ ಆನ್-ರೋಡ್ ದರದಲ್ಲಿ ಖರೀದಿಗೆ ಲಭ್ಯವಿದ್ದು, 1.34 ಲಕ್ಷ ಮುಂಗಡ ಹಣ ಪಾವತಿಸುವ ಮೂಲಕ ಈ ಕಾರನ್ನು ಖರೀದಿಸಬಹುದು. ಐದು ವರ್ಷದ ಅವಧಿಗೆ ಶೇಕಡ 10% ಬಡ್ಡಿ ದರದಲ್ಲಿ ತಿಂಗಳಿಗೆ ರೂ.25,619 ಇಎಂಐ ಕಟ್ಟಬೇಕು.
ಸಿಟ್ರಸ್ ಇಸಿ3 ಎಲೆಕ್ಟ್ರಿಕ್ ಕಾರಿನ ಕಾರ್ಯಕ್ಷಮತೆ ಬಗ್ಗೆ ತಿಳಿಸುವುದಾದರೆ, ಇದು 29.2 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, 57 PS ಗರಿಷ್ಠ ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 320 km (ARAI) ರೇಂಜ್ ನೀಡಲಿದ್ದು, ಬೆಲೆಗೆ ತಕ್ಕಂತೆಯೇ ಈ ಕಾರು ಉತ್ತಮವಾಗಿದೆ.
ಇದರ ಚಾರ್ಜಿಂಗ್ ಆಯ್ಕೆಯನ್ನು ನೋಡುವುದಾದರೆ, 15ಎ ಪ್ಲಗ್ ಪಾಯಿಂಟ್ ಚಾರ್ಜರ್ ಬಳಕೆಯಲ್ಲಿ ಇದರ ಬ್ಯಾಟರಿ, 10 ಗಂಟೆ, 30 ನಿಮಿಷದಲ್ಲಿ ಫುಲ್ ಚಾರ್ಜ್ ಆಗಲಿದೆ. ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ 10 ರಿಂದ 80% ಬ್ಯಾಟರಿ, 57 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ಸ್ಟೀಲ್ ಗ್ರೇ, ಝೆಸ್ಟಿ ಆರೆಂಜ್, ಪ್ಲಾಟಿನಂ ಗ್ರೇ ವಿಥ್ ಪೋಲಾರ್ ವೈಟ್ ರೂಫ್ ಸೇರಿದಂತೆ 9 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಈ ಕಾರು ಖರೀದಿಗೆ ಲಭ್ಯವಿದೆ.
ಈ ಕಾರು, 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮ್ಯಾನುವಲ್ ಎಸಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್
ಸೆನ್ಸರ್ಸ್ ಅನ್ನು ಹೊಂದಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಸಿಟ್ರಸ್ ಇಸಿ3ಗೆ ನೇರ ಪ್ರತಿಸ್ಪರ್ಧಿಯಾಗಿ ಟಾಟಾ ಟಿಯಾಗೊ ಇವಿ ಇದ್ದು, ಅದು ಕೂಡ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸಿಟ್ರಸ್ ಇಸಿ3 ಬೆಲೆಗೆ ತಕ್ಕಂತೆ ಉತ್ತಮ ರೇಂಜ್ ನೀಡಲಿದೆ. ಜೊತೆಗೆ ಡೌನ್ ಪೇಮೆಂಟ್ ಕೂಡ ಕಡಿಮೆ ಇದ್ದು, ನೀವು ಈ ಕಾರನ್ನು ಕೊಂಡುಕೊಳ್ಳುವ ಯೋಚನೆಯಲ್ಲಿದ್ದರೆ ಖರೀದಿಸಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ಸಿಟ್ರಸ್ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು.


Click it and Unblock the Notifications








