ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯ ಮೇಲೆ ರೂ.1 ಲಕ್ಷ ಡಿಸ್ಕೌಂಟ್

ಜನಪ್ರಿಯ ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ ತನ್ನ ಬಹುನಿರೀಕ್ಷಿತ ಸಿ3 ಏರ್‌ಕ್ರಾಸ್ ಎಸ್‍ಯುವಿಯನ್ನು ಭಾರತದಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ ಸಿಟ್ರನ್ ಸಿ3 ಏರ್‌ಕ್ರಾಸ್ (Citroen C3 Aircross) ಫ್ರೆಂಚ್ ವಾಹನ ತಯಾರಕರಿಂದ ಇದು ನಾಲ್ಕನೇ ಕಾರು ಮಾದರಿಯಾಗಿದೆ. ಈ ಎಸ್‍ಯುವಿಯನ್ನು ಭಾರತದಲ್ಲಿ ಆರಂಭಿಕ ಬೆಲೆ ರೂ. 9.99 ಲಕ್ಷದಲ್ಲಿ ಬಿಡುಗಡೆಗೊಳಿಸಿತು.

ಸಿಟ್ರನ್ ಕಂಪನಿಯು ಈ ತಿಂಗಳು ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯ ಮೇಲೆ 1 ಲಕ್ಷ ರೂ. ರಿಯಾಯಿತಿಗಳನ್ನು ಘೋಷಿಸಿದೆ. ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಗೆ ಒಟ್ಟು ಪ್ರಯೋಜನಗಳಲ್ಲಿ ರೂ. 30,000 ನಗದು ರಿಯಾಯಿತಿ, ರೂ 25,000 ಮೌಲ್ಯದ 5-ವರ್ಷ / 60,000 ಕಿಮೀ ವಿಸ್ತೃತ ವಾರಂಟಿ ಮತ್ತು 5 ವರ್ಷಗಳವರೆಗೆ / 50,000 ಕಿಮೀ ವೆಚ್ಚದ ರೂ 45,000 ವೆಚ್ಚದ ವಾರ್ಷಿಕ ನಿರ್ವಹಣೆ ಪ್ಯಾಕೇಜ್ ಸೇರಿವೆ.

Citroen C3 Aircross

ಗ್ರಾಹಕರು ರೂ 90,000 ನಗದು ರಿಯಾಯಿತಿಯನ್ನು ಸಹ ಆಯ್ಕೆ ಮಾಡಬಹುದು. ಸಿಟ್ರನ್ ಸಿ3 ಏರ್‌ಕ್ರಾಸ್ ಹ್ಯಾಚ್‌ಬ್ಯಾಕ್ ಆಧಾರಿತ 3-ಸಾಲಿನ ಎಸ್‍ಯುವಿಯಾಗಿದೆ. ಸಿಟ್ರನ್ ಸಿ3 ಏರ್‌ಕ್ರಾಸ್ ಹ್ಯಾಚ್‌ಬ್ಯಾಕ್ ಲೈವ್, ಫೀಲ್ ಮತ್ತು ಶೈನ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಸಿಟ್ರನ್ ಸಿ3 ಏರ್‌ಕ್ರಾಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಹೆಚ್ಚಿನವುಗಳಿಗಿಂತ ವಿಶಿಷ್ಟ ಪ್ರಯೋಜನವನ್ನು ಹೊಂದಿದೆ.

ಈ ಹೊಸ ಹೊಸ ಸಿಟ್ರನ್ ಎಸ್‍ಯುವಿ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ, ಇದು ಪಿಯಾನೋ ಬ್ಲ್ಯಾಕ್ ಬಣ್ಣದೊಂದಿಗೆ ಕ್ರೋಮ್ ಗ್ರಿಲ್ ಮತ್ತು ಸ್ಪ್ಲಿಟ್ ಸೆಟಪ್ ಮತ್ತು ವೈ-ಆಕಾರದ DRL ಗಳೊಂದಿಗೆ ಹೆಡ್‌ಲ್ಯಾಂಪ್ ಕ್ಲಸ್ಟರ್‌ಗಳನ್ನು ಹೊಂದಿದೆ. ಈ ಎಸ್‍ಯುವಿಯ ಅಲಾಯ್ ವ್ಹೀಲ್ ಗಳು ಎಕ್ಸ್-ಆಕಾರದ ವಿನ್ಯಾಸವನ್ನು ಹೊಂದಿವೆ. ಆದರೆ ಸಿ-ಪಿಲ್ಲರ್‌ನ ನಂತರದ ವಿನ್ಯಾಸವು ಅದರ ಹ್ಯಾಚ್ ಸಿಬ್ಲಿಂಗ್‌ಗಿಂತ ಭಿನ್ನವಾಗಿದೆ.

Citroen C3 Aircross

ಈ ಮಾದರಿಯು ಅಲ್ಯೂಮಿನಿಯಂ ಫಿನಿಶ್ ಹೊಂದಿರುವ ಮುಂಭಾಗದ ಬಂಪರ್, ವೃತ್ತಾಕಾರದ ಫಾಗ್ ಲ್ಯಾಂಪ್ ಕ್ಲಸ್ಟರ್‌ಗಳಿಂದ ಸುತ್ತುವರಿದ ಮೀಸಲಾದ ಏರ್ ಇನ್ಟೇಕ್ ವೆಂಟ್ ಅನ್ನು ಒಳಗೊಂಡಿದೆ. ಈ ಎಸ್‍ಯುವಿಯು ರೌಂಡ್ ವೀಲ್ ಅರ್ಚಾರ್ ಮತ್ತು ಡೋರುಗಳ ಕೆಳಗೆ ಬ್ಲ್ಯಾಕ್ ಹೊದಿಕೆಯನ್ನು ನೀವು ಗಮನಿಸಬಹುದು. ಈ ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯ ಹಿಂಭಾಗದಲ್ಲಿ, ಇದು ಸ್ಕ್ವಾರಿಶ್ ಟೈಲ್‌ಲ್ಯಾಂಪ್‌ಗಳು, ಎತ್ತರದ ಬಂಪರ್ ಮತ್ತು ದೊಡ್ಡದಾದ ಟೈಲ್‌ಗೇಟ್ ಅನ್ನು ಹೊಂದಿದೆ.

ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯಲ್ಲಿ ಸುಮಾರು 4.3 ಮೀಟರ್ ಉದ್ದವನ್ನು ಅಳೆಯುತ್ತದೆ, ಹೀಗಾಗಿ ಇದು ಹ್ಯುಂಡೈ ಕ್ರೆಟಾದಷ್ಟು ಉದ್ದವಾಗಿದೆ. ಈ ಎಸ್‍ಯುವಿಯು 200mm ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಸಿಟ್ರನ್ ಎಸ್‍ಯುವಿಯ ಒಳಬಾಗದಲ್ಲಿ, ಟ್ಯಾಕೋಮೀಟರ್‌ನೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡುತ್ತದೆ. ಈ ಎಸ್‍ಯುವಿಯಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಒಳಗೊಂಡಿದೆ.

Citroen C3 Aircross

ಇದರೊಂದಿಗೆ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಈ ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‍ಯುವಿಯ 7-ಸೀಟರ್ ಆವೃತ್ತಿಯು ಬ್ಲೋವರ್ ಕಂಟ್ರೋಲ್ ನೊಂದಿಗೆ ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕರಿಗೆ ರೂಫ್-ಮೌಂಟೆಡ್ ಎಸಿ ವೆಂಟ್‌ಗಳನ್ನು ಹೊಂದಿರುತ್ತದೆ. ಈ ಸಿಟ್ರನ್ ಸಿ3 ಏರ್‌ಕ್ರಾ ಎಸ್‍ಯುವಿ ಮೂರನೇ ಸಾಲಿನ ಪ್ರಯಾಣಿಕರಿಗೆ USB ಚಾರ್ಜಿಂಗ್ ಪೋರ್ಟ್‌ಗಳನ್ನು ಹೊಂದಿದೆ.

ಇದು ಹಗಲು ರಾತ್ರಿ IRVM ಮತ್ತು ಕ್ರೂಸ್ ಕಂಟ್ರೋಲ್ ಗಳನ್ನು ಬರಬಹುದು. ಆದರ 5-ಸೀಟರ್ ಆವೃತಿಯು 444 ಲೀಟರ್‌ಗಳ ಬೂಟ್ ಸಾಮರ್ಥ್ಯದೊಂದಿಗೆ ಬಂದರೆ, 7-ಸೀಟ್ ಗಳ ಆವೃತ್ತಿಯು ಮೂರನೇ ಸಾಲಿನ ಸೀಟ್ ಗಳೊಂದಿಗೆ 511-ಲೀಟರ್‌ಗಳ ಲಗೇಜ್ ಸ್ಪೇಸ್ ಸಿಗುತ್ತದೆ. ಹೊಸ ಸಿಟ್ರನ್ ಎಸ್‍ಯುವಿಯು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಮ್, ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ರಿಯರ್ ವ್ಯೂ ಕ್ಯಾಮೆರಾ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಹೊಂದಿರುತ್ತದೆ.

Citroen C3 Aircross

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, October 31, 2023, 19:02 [IST]
English summary
Citroen c3 aircross offered discounts up to rs 1 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+