Citroen C3 Aircross ನಾಳೆ ಅನಾವರಣ... ಹೊಸ ಎಸ್‌ಯುವಿ ಕುರಿತ ಟಾಪ್ ವಿಶೇಷತೆಗಳು
ಸಿಟ್ರನ್ ಕಂಪನಿಯು ತನ್ನ ಮೂರು-ಸಾಲಿನ SUV ಅನ್ನು ಜಾಗತಿಕವಾಗಿ ಅನಾವರಣಗೊಳಿಸಲು ತಯಾರಿ ನಡೆಸುತ್ತಿದೆ. ಮೂಲಗಳ ಪ್ರಕಾರ ಹೊಸ C3 Aircross SUVಯನ್ನು ಕಂಪನಿಯು ನಾಳೆ (ಏಪ್ರಿಲ್ 27) ಅನಾವರಣಗೊಳಿಸಲಿದೆ. ಅನಾವರಣಕ್ಕೂ ಮುನ್ನ ನಮಗಿರುವ ಮಾಹಿತಿಯ ಪ್ರಕಾರ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಇಲ್ಲಿ ನೋಡೋಣ.
ನಮಗಿರುವ ಮಾಹಿತಿಯ ಪ್ರಕಾರ ಹೊಸ C3 ಏರ್‌ಕ್ರಾಸ್ ಮುಂಭಾಗದಲ್ಲಿ ಆಕರ್ಷಕ ಎಸ್‌ಕ್ಯೂ ಸ್ಪ್ಲಿಟ್ ಹೆಡ್‌ಲೈಟ್‌ಗಳು ಮತ್ತು DRL ಗಳನ್ನು ಹೊಂದಿದೆ. ಈ ಡಿಸೈನ್ ಅನ್ನು C5 ಏರ್‌ಕ್ರಾಸ್ SUV ನಿಂದ ಎರವಲು ಪಡೆದಿರಬಹುದು. C3 ಏರ್‌ಕ್ರಾಸ್ ನಾಲ್ಕು ಸ್ಪ್ಲಿಟ್ ಸ್ಪೋಕ್ ಅಲಾಯ್ ವೀಲ್ ಗಳು ಮತ್ತು ಒರಟಾದ ಡಿಸೈನ್‌ಗಾಗಿ ಪ್ಲಾಸ್ಟಿಕ್ ಸೈಡ್ ಮತ್ತು ವೀಲ್ ಆರ್ಚ್ ಕ್ಲಾಡಿಂಗ್ ಅನ್ನು ಸಹ ಪಡೆದಿರುವುದು ವಿಶೇಷ.

ಅಲ್ಲದೇ ಇದು ಮೂರು-ಸಾಲಿನ SUV ಆಗಿರುವುದರಿಂದ, ಉದ್ದವಾದ ಹಿಂಬದಿ ಮತ್ತು ಜಾಗವನ್ನು ಸಾಧ್ಯವಾದಷ್ಟು ಬಳಸಿಕೊಳ್ಳಲು ಫ್ಲಾಟ್ ಟೈಲ್‌ಗೇಟ್ ಅನ್ನು ನೀಡಲಾಗಿದೆ. ಹೊಸ ಸಿಟ್ರನ್ C3 ಏರ್‌ಕ್ರಾಸ್ ಹುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ವಿರುದ್ಧ ಸ್ಪರ್ಧಿಸಲಿದೆ. C3 Aircross SUV ಜಾಗತಿಕವಾಗಿ ನಾಳೆ ಅನಾವರಣಗೊಳಲಿದ್ದು, ಅದಕ್ಕೂ ಮುಂಚೆ ಬಹುನಿರೀಕ್ಷಿತ C3 Aircross ಕುರಿತು ನಮಗಿರುವ ಮಾಹಿತಿಯಂತೆ ಯಾವೆಲ್ಲಾ ವೈಶಿಷ್ಟ್ಯಗಳು ಹಾಗೂ ಬೆಲೆ, ಎಂಜಿನ್ ಕುರಿತ ಮಾಹಿತಿಯನ್ನು ನೋಡೋಣ.
ವೈಶಿಷ್ಟ್ಯಗಳು:
ಸಿಟ್ರನ್ SUV ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು Apple CarPlay ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್, ಸಂಪರ್ಕಿತ ಕಾರ್ ಟೆಕ್, ಹಿಂಭಾಗದ ವೈಪರ್ ಮತ್ತು ಡಿಫಾಗರ್ ಅನ್ನು ಒಳಗೊಂಡಿರಲಿದೆ. ಹಾಗೆಯೇ ಟ್ಯಾಕೋಮೀಟರ್ ಮತ್ತು ರೂಫ್-ಮೌಂಟೆಡ್ ರಿಯರ್ ಎಸಿ ವೆಂಟ್‌ಗಳೊಂದಿಗೆ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಸುರಕ್ಷತೆಯ ವಿಚಾರಕ್ಕೆ ಬಂದರೆ C3 ಏರ್‌ಕ್ರಾಸ್ ಬಹು ಏರ್‌ಬ್ಯಾಗ್‌ಗಳು, ಸ್ಟೆಬಿಲಿಟಿ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಸ್ಟಾರ್ಟ್ ಅಸಿಸ್ಟ್, ರಿವರ್ಸಿಂಗ್ ಕ್ಯಾಮೆರಾ ಪಡೆಯಲಿದೆ.

ವಿಶಾಲವಾದ ಒಳಾಂಗಣ:
ಒಳಗೆ C3 ಏರ್‌ಕ್ರಾಸ್ C3 ಹ್ಯಾಚ್‌ಬ್ಯಾಕ್‌ನಂತೆ ಪರಿಚಿತ ಡ್ಯಾಶ್‌ಬೋರ್ಡ್ ಲೇಔಟ್ ಅನ್ನು ಪಡೆಯುವಂತಿದೆ. ಮೂರು-ಸಾಲಿನ SUV ಏಳು ಜನರಿಗೆ ಆಸನವನ್ನು ನೀಡುತ್ತದೆ. ಹಿಂದಿನ ಸೀಟಿನ ಪ್ರಯಾಣಿಕರು ಸೀಲಿಂಗ್-ಮೌಂಟೆಡ್ AC ವೆಂಟ್‌ಗಳನ್ನು (ಫ್ಯಾನ್ ವೇಗ ನಿಯಂತ್ರಣಗಳೊಂದಿಗೆ) ಸಹ ಪಡೆಯುತ್ತಾರೆ. ಇದಲ್ಲದೆ, SUV ಟ್ಯಾಕೋಮೀಟರ್‌ನೊಂದಿಗೆ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಪಡೆಯಬಹುದು. ಮೂರನೇ ಸಾಲು ಸ್ವಲ್ಪ ಬಿಗಿಯಾದ ಲೆಗ್ ರೂಮ್ ಅನ್ನು ಹೊಂದಿರುವಂತೆ ಕಾಣುತ್ತಿದೆ.
ನಿರೀಕ್ಷಿತ ಪವರ್‌ಟ್ರೇನ್ ಆಯ್ಕೆ:
C3 ಏರ್‌ಕ್ರಾಸ್ C3 ಟರ್ಬೊ ಹ್ಯಾಚ್‌ಬ್ಯಾಕ್‌ನಿಂದ 1.2-ಲೀಟರ್ ಪ್ಯೂರೆಟೆಕ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುವ ನಿರೀಕ್ಷೆಯಿದೆ. ಇದು ಹ್ಯಾಚ್ ಬ್ಯಾಕ್‌ನಲ್ಲಿ 110PS ಅನ್ನು ಉತ್ಪಾದಿಸುತ್ತದೆ, ಆದರೆ ಈ ಎಸ್‌ಯುವಿನಲ್ಲಿ ಹೆಚ್ಚಿನ ಟ್ಯೂನ್ ಮಾಡಿರುವ ಸಾಧ್ಯೆತಯಿದ್ದು ಸುಮಾರು 130PS ಪಡೆಯುವ ಸಾಧ್ಯತೆಯಿದೆ. ಇದು 6 ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲ್ಪಡುತ್ತದೆ, ಸ್ವಯಂಚಾಲಿತ ಪ್ರಸರಣ ಆಯ್ಕೆಯು ಸಹ ಇರಬಹುದಾಗಿದೆ.

ನಿರೀಕ್ಷಿತ ಬೆಲೆ:
ಹೊಸ ಸಿಟ್ರನ್ C3 Aircross SUV ಯ ಬಿಡುಗಡೆಯನ್ನು ನಾಳೆ ಅದರ ಅನಾವರಣದಲ್ಲಿ ಬಹಿರಂಗಪಡಿಸಬಹುದಾಗಿದೆ. ಇದು 2023 ರ ಮಧ್ಯಂತರದಲ್ಲಿ ಮಾರಾಟವಾಗಲಿದೆ ಎಂದು ಹೇಳಲಾಗುತ್ತಿದೆ. ಆರಂಭಿಕ ಬೆಲೆಯು ಸುಮಾರು 9 ಲಕ್ಷ ರೂ. (ಎಕ್ಸ್ ಶೋ ರೂಂ) ಇರಬಹುದು. C3 ಏರ್‌ಕ್ರಾಸ್ ಮೇಲೆ ತಿಳಿಸಿದಂತೆ ಕ್ರೆಟಾ ಮತ್ತು ಗ್ರ್ಯಾಂಡ್ ವಿಟಾರಾದಂತಹ ಕಾಂಪ್ಯಾಕ್ಟ್ SUV ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಜೊತೆಗೆ ಕಿಯಾ ಕ್ಯಾರೆನ್ಸ್ ಮತ್ತು ಮಾರುತಿ XL6 ನಂತಹ ಗ್ರಾಹಕರಿಗೆ ಪರ್ಯಾಯ ಆಯ್ಕೆಯಾಗಿಯು ಸಿಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








