ಕಡಿಮೆ ಬೆಲೆಯ ಕಾರಿನ ದರ ಹೆಚ್ಚಿಸಿದ Citroen

ಫ್ರೆಂಚ್ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ 'ಸಿಟ್ರನ್' ಭಾರತದ ಮಾರುಕಟ್ಟೆಯಲ್ಲಿ ತನ್ನ ಅಗ್ಗದ ಹ್ಯಾಚ್‌ಬ್ಯಾಕ್ ದರವನ್ನು ಏರಿಸಿದೆ. ಸಿಟ್ರನ್ ಸಿ3 (Citroen C3) ಬೆಲೆ ಹೆಚ್ಚಳವಾಗಿದ್ದು, ಕಂಪನಿಯಿಂದ ಈ ವರ್ಷದಲ್ಲಿ ಇದು ಎರಡನೇ ಬಾರಿಗೆ ದರ ಏರಿಕೆಯಾಗಿದೆ ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಸಿಟ್ರನ್ ಕಂಪನಿ 'ಸಿ3' ಕಾರಿನ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮಾದರಿಗಳ ಬೆಲೆಯನ್ನು ರೂ.18,000 ವರೆಗೆ ಹೆಚ್ಚಿಸಿದೆ. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಈ ಎಂಜಿನ್ ಹೊಂದಿರುವ ಸಿಟ್ರನ್ ಸಿ3 ಹ್ಯಾಚ್‌ಬ್ಯಾಕ್, ರೂ.6.16 ಲಕ್ಷದಿಂದ ರೂ.7.38 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಆದರೆ, ಟರ್ಬೊ ಎಂಜಿನ್ ಮಾದರಿಗಳ ದರವನ್ನು ಏರಿಸಿಲ್ಲ. 2022ರ ಜುಲೈನಲ್ಲಿ ಈ ಕಾರನ್ನು ರೂ.5.71 ಲಕ್ಷ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು.

Citroen

ಸಿಟ್ರನ್ ಸಿ3 ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಕಾರು, 82hp ಪವರ್ ಹಾಗೂ 115Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರು, 110hp ಪವರ್ ಹಾಗೂ 190Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಈ ಹ್ಯಾಚ್‌ಬ್ಯಾಕ್ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಇದು ಸಿಗ್ನೇಚರ್ ಗ್ರಿಲ್, ಸ್ಪ್ಲಿಟ್ ಹೆಡ್‌ಲ್ಯಾಂಪ್ಸ್, ಎಲ್ಇಡಿ DRLs, ಫ್ರಂಟ್ ಹಾಗೂ ರೇರ್ ದೊಡ್ಡದಾದ ಸ್ಕಿಡ್ ಪ್ಲೇಟ್‌ ಹಾಗೂ 15- ಇಂಚಿನ ಸ್ಟೀಲ್ ವೀಲ್ಸ್ ಪಡೆದಿದೆ. ಜೊತೆಗೆ 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 315 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಅಲ್ಲದೆ, ಉತ್ತಮ ಇಂಧನ ದಕ್ಷತೆಯನ್ನು ಒಳಗೊಂಡಿದ್ದು,19.4 ರಿಂದ 19.8 kmpl ಮೈಲೇಜ್ ನೀಡುತ್ತದೆ.

ದೇಶೀಯ ಖರೀದಿದಾರರಿಗೆ ಇಷ್ಟವಾಗುವಂತಹ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಸಿಟ್ರನ್ ಸಿ3 ಹ್ಯಾಚ್‌ಬ್ಯಾಕ್ ಹೊಂದಿದೆ ಎಂದು ಹೇಳಿದರೇ ತಪ್ಪಾಗುವುದಿಲ್ಲ. ಇದು 10 ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, 4 ಸ್ಪೀಕರ್ಸ್, ಫ್ರಂಟ್ ಹಾಗೂ ರೇರ್ USB ಚಾರ್ಜಿಂಗ್ ಪೋರ್ಟ್‌ ವೈಶಿಷ್ಟ್ಯವನ್ನು ಹೊಂದಿದೆ.

ಸಿಟ್ರನ್ ಸಿ3 ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಹಾಗೂ ಹೈ ಸ್ಪೀಡ್ ಅಲರ್ಟ್ ಸಿಸ್ಟಮ್ ಅನ್ನು ಪಡೆದಿದೆ. ಈ ಕಾರು, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ಮಾರುತಿ ಇಗ್ನಿಸ್, ರೆನಾಲ್ಟ್ ಕಿಗರ್ ಹಾಗೂ ನಿಸ್ಸಾನ್ ಮ್ಯಾಗ್ನೈಟ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ.

ಸಿಟ್ರನ್ ಕಂಪನಿ ಕೆಲವು ದಿನಗಳ ಹಿಂದೆಯಷ್ಟೇ 'ಸಿ3' ಕಾರಿನ ಎಲೆಕ್ಟ್ರಿಕ್ ಆವೃತ್ತಿ ಸಿಟ್ರಸ್ ಇಸಿ3 (Citroen eC3) ಬಿಡುಗಡೆ ಮಾಡಿದ್ದು, ಎರಡು ರೂಪಾಂತರಗಳಲ್ಲಿ ಖರೀದಿಗೆ ದೊರೆಯಲಿದೆ. ಎಕ್ಸ್ ಶೋರೂಂ ಪ್ರಕಾರ, 'ಲೈವ್' ವೇರಿಯಂಟ್‌ ದರ ರೂ.11.50 ಲಕ್ಷವಿದ್ದು, 'ಫೀಲ್' ವೇರಿಯಂಟ್‌ ಬೆಲೆ ರೂ.12.43 ಲಕ್ಷವಿದೆ. ಇದು 29.2kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 57 hp ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 107kph ಟಾಪ್ ಸ್ವೀಡ್ ಹೊಂದಿದೆ.

ಈ ಕಾರು, ಕೇವಲ 6.8 ಸೆಕೆಂಡುಗಳಲ್ಲಿ 0-60 kph ವೇಗವನ್ನು ಪಡೆದುಕೊಳ್ಳಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 320 km ರೇಂಜ್ ನೀಡಲಿದೆ. ಇದು ಕೂಡ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. 10.2 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 4 ಸ್ಪೀಕರ್ ಆಡಿಯೋ ಹಾಗೂ ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್ ಅನ್ನು ಪಡೆದಿದೆ. ಆದರೆ, ಪೆಟ್ರೋಲ್ ಚಾಲಿತ ಸಿಟ್ರಸ್ ಸಿ3ಯಂತೆ ಈ ಕಾರಿನ ಬೆಲೆ ಏರಿಕೆಯಾಗಿಲ್ಲ.

More from DriveSpark

Article Published On: Tuesday, March 14, 2023, 10:14 [IST]
English summary
Citroen c3 is now expensive details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+