Citroen C3 Turbo ರೂಪಾಂತರಗಳ ಬಿಡುಗಡೆ... ಉನ್ನತ ಶೈನ್ ವೇರಿಯಂಟ್‌ನಲ್ಲಿ 13 ಹೊಸ ವೈಶಿಷ್ಟ್ಯಗಳು
ಸಿಟ್ರನ್ C3 ನ ಟರ್ಬೊ ರೂಪಾಂತರಗಳು ಅಡ್ವಾನ್ಸ್‌ಡ್ ಸೇಫ್ಟಿ ಸೂಟ್ ಸೇರಿದಂತೆ ಉನ್ನತ ಶೈನ್ ರೂಪಾಂತರದಲ್ಲಿ 13 ಹೊಸ ವೈಶಿಷ್ಟ್ಯಗಳೊಂದಿಗೆ ಇತ್ತೀಚಿನ ಜೆನ್ III ಪ್ಯೂರ್‌ಟೆಕ್ 110 ಟರ್ಬೊ ಎಂಜಿನ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಹೊಸ ಟರ್ಬೊ ರೂಪಾಂತರಗಳ ವಿಶೇಷಗಳನ್ನು ಇಲ್ಲಿ ನೋಡೋಣ.
ಸಿಟ್ರನ್ ಇಂಡಿಯಾ ತನ್ನ ಇತ್ತೀಚಿನ ಉನ್ನತ ಶೈನ್ ರೂಪಾಂತರದ ಜೆನ್ III ಪ್ಯೂರ್‌ಟೆಕ್ 110 ಟರ್ಬೊ ಎಂಜಿನ್ ಮಾದರಿಯಲ್ಲಿ ಇಎಸ್‌ಪಿ, ಹಿಲ್-ಹೋಲ್ಡ್, ಟಿಪಿಎಂಎಸ್ ಮತ್ತು ಎಂಜಿನ್ ಆಟೋ ಸ್ಟಾರ್ಟ್/ಸ್ಟಾಪ್ ಒಳಗೊಂಡಿರುವ ಅಡ್ವಾನ್ಸ್‌ಡ್ ಸೇಫ್ಟಿ ಸೂಟ್ ಸೇರಿದಂತೆ 13 ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು, C3 ಟರ್ಬೊಗಾಗಿ ಕಾಯುತ್ತಿರುವ ಗ್ರಾಹಕರಿಗೆ ಇದು ಉತ್ತಮ ಕೊಡುಗೆಯಾಗಿದೆ.

ಶೈನ್ ರೂಪಾಂತರದ ವೈಶಿಷ್ಟ್ಯಗಳ ಕುರಿತು ವಿವರವಾಗಿ ತಿಳಿಯುವುದಾದರೆ, ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ORVM, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಡೇ/ನೈಟ್ IRVM, 15-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಫಾಗ್ ಲ್ಯಾಂಪ್‌ಗಳು, ರಿಯರ್ ಸ್ಕಿಡ್ ಪ್ಲೇಟ್, ರಿಯರ್ ವೈಪರ್ ಮತ್ತು ವಾಷರ್, ರಿಯರ್ ಡಿಫಾಗರ್ ಅನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.
Citroën ನ ಕನೆಕ್ಟಿವಿಟಿ 1.0 ಯೋಜನೆಯ ಭಾಗವಾಗಿ 35 ಸ್ಮಾರ್ಟ್ ಕನೆಕ್ಟಿವಿಟಿ ವೈಶಿಷ್ಟ್ಯಗಳೊಂದಿಗೆ B-ಹ್ಯಾಚ್ MY CITROEN ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಕೂಡ ಬರುತ್ತದೆ. ಸದ್ಯ C3 ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಗಳನ್ನು ನೀಡುತ್ತಿದ್ದು, 1.2-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ (82PS/ 115Nm) 5- ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಜೋಡಿಸಲಾಗಿದೆ.

ಇನ್ನೊಂದು ಎಂಜಿನ್ ಆಯ್ಕೆಯು 1.2-ಲೀಟರ್ ಟರ್ಬೋಚಾರ್ಜ್ಡ್ (110PS/ 190Nm) 6- ಸ್ಪೀಡ್ ಮ್ಯಾನ್ಯುವಲ್‌ಗೆ ಜೋಡಿಸಲಾಗಿದೆ. ಸಿಟ್ರನ್ ಶೀಘ್ರದಲ್ಲೇ C3 ಅನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ನೀಡುವ ನಿರೀಕ್ಷೆಯಿದೆ. ಸದ್ಯ ಗ್ರಾಹಕರು ಅತ್ಯಾಕರ್ಷಕ ಚಾಲನಾ ಅನುಭವ ಹಾಗೂ ಹೆಚ್ಚಿನ ಪರ್ಫಾಮೆನ್ಸ್ ಅನ್ನು ಸ್ಪಂದಿಸುವ ಮೋಟರ್ ಅನ್ನು ಆನಂದಿಸಬಹುದು ಎಂದು ಕಂಪನಿ ಹೇಳಿದೆ.
ಸಿಟ್ರನ್ ಇಂಡಿಯಾದ ಬ್ರ್ಯಾಂಡ್ ಹೆಡ್ ಸೌರಭ್ ವತ್ಸಾ ಮಾತನಾಡಿ, "ನಾವು ಈಗ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಹೊಸ Gen III Puretech 110 Turbo ಎಂಜಿನ್ ಅನ್ನು ಪ್ರಾರಂಭಿಸಲು ಪಣತೊಟ್ಟಿದ್ದೇವೆ. ಇದು ನಗರ ಮತ್ತು ಹೆದ್ದಾರಿ ಪ್ರಯಾಣಕ್ಕಾಗಿ ಹೇಳಿ ಮಾಡಿಸಿದ್ದು, ಅದರ ಪ್ರಾಯೋಗಿಕತೆ ಮತ್ತು ಕಾರ್ಯಕ್ಷಮತೆಯೊಂದಿಗೆ ಮಾಲೀಕರನ್ನು ಸಂತೋಷಪಡಿಸುತ್ತದೆ ಎಂದರು.

ಹೊಸ ಶೈನ್ ರೂಪಾಂತರ ಮತ್ತು ಮೈ ಸಿಟ್ರನ್ ಕನೆಕ್ಟ್‌ನೊಂದಿಗೆ ಬೋರ್ಡ್‌ನಲ್ಲಿ ಅಪ್ಲಿಕೇಶನ್ ನೊಂದಿಗೆ ಈ ಹ್ಯಾಚ್‌ಬ್ಯಾಕ್ ಅತ್ಯಂತ ಆಕರ್ಷಕ ಮತ್ತು ಬಲವಾದ ಪ್ಯಾಕೇಜ್ ಆಗಲಿದೆ. C3 ಟರ್ಬೊಗಾಗಿ ಕಾಯುತ್ತಿರುವ ಗ್ರಾಹಕರಿಗೆ ನಾವು ಧನ್ಯವಾದ ತಿಳಿಸುತ್ತೇವೆ, ವಾಹನ ವಿತರಣೆಗಳು ಮೇ ಮಧ್ಯದಿಂದ ಪ್ರಾರಂಭವಾಗಲಿವೆ ಎಂದು ಸಿಟ್ರನ್ ಇಂಡಿಯಾದ ಬ್ರ್ಯಾಂಡ್ ಹೆಡ್ ಸೌರಭ್ ವತ್ಸಾ ಭರವಸೆ ನೀಡಿದರು.
ಸಿಟ್ರನ್ C3 ನ ಟರ್ಬೊ ವೇರಿಯೆಂಟ್ ವಾರು ಬೆಲೆಗಳನ್ನು ನೋಡುವುದಾದರೆ, 1.2P ಟರ್ಬೋ ಫೀಲ್ ಡುಯಲ್ ಟೋನ್ 8,28,000 ರೂ., 1.2P ಟರ್ಬೋ ಫೀಲ್ ಡುಯಲ್ ಟೋನ್ ವೈಬ್ ಪ್ಯಾಕ್ 8,43,000 ರೂ., 1.2P ಟರ್ಬೋ ಶೈನ್ ಡುಯಲ್ ಟೋನ್ 8,80,000 ರೂ., 1.2P ಟರ್ಬೋ ಶೈನ್ ಡುಯಲ್ ಟೋನ್ 8,92,000 ರೂ. ಇದೆ. ಇವೆಲ್ಲವು ಎಕ್ಸ್ ಶೋ ರೂಂ ದೆಹಲಿ ಬೆಲೆಗಳಾಗಿವೆ.


Click it and Unblock the Notifications








