ಕಡೆಗೂ ಶೋರೂಂಗೆ ಬಂದೇಬಿಡ್ತು ಕೈಗೆಟುಕುವ ಬೆಲೆಯ ಸಿಟ್ರನ್ ಇಸಿ3 ಎಲೆಕ್ಟ್ರಿಕ್ ಕಾರು: ಅಬ್ಬರ ಶುರು
ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (ಇವಿ) ಭಾರೀ ವೇಗದಲ್ಲಿ ಮುನ್ನುತ್ತಿವೆ. ವಿವಿಧ ಕಂಪನಿಗಳು ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಇವಿಗಳನ್ನು ಲಾಂಚ್ ಮಾಡುತ್ತಿವೆ. ಈಗಾಗಲೇ ಟಾಟಾದ ಎಂಟ್ರಿ ಲೆವೆಲ್ ಟಿಯಾಗೊ ಇವಿ ತುಂಬಾ ಜನಪ್ರಿಯತೆಯನ್ನು ಗಳಿಸಿದೆ. ಅದಕ್ಕೆ ಪ್ರತಿಸ್ಪರ್ಧಿಯಾಗಿ ಸಿಟ್ರನ್ ಇಸಿ3 (Citroen eC3) ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಫ್ರೆಂಚ್ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಸಿಟ್ರನ್, ತನ್ನ ಮೊದಲ ಎಲೆಕ್ಟ್ರಿಕ್ ಕಾರು ಇಸಿ3ಯನ್ನು ಡೀಲರ್‌ಶಿಪ್‌ಗಳಿಗೆ ತಲುಪಿಸುವುದನ್ನು ಆರಂಭಿಸಿದ್ದು, ಆಸಕ್ತ ಗ್ರಾಹಕರು, ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಟೆಸ್ಟ್ ಡ್ರೈವ್‌ನ್ನು ಸಹ ತೆಗೆದುಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ. ಈ ಕಾರಿನ ಬೆಲೆಯನ್ನು ಈವರೆಗೆ ಘೋಷಿಸಿಲ್ಲ. ಆದರೆ, ಮುಂಗಡ ಬುಕಿಂಗ್ ಪ್ರಾರಂಭಿಸಿದ್ದು, ರೂ.25,000 ಟೋಕನ್ ಮೊತ್ತ ಪಾವತಿಸಿ ಬುಕ್ ಮಾಡಬಹುದು. ಬಹುತೇಕ ರೂ.11 ಲಕ್ಷ ಬೆಲೆಗೆ ಖರೀದಿಗೆ ಸಿಗಬಹುದು.

ಸಿಟ್ರನ್ ಇಸಿ3 ಕಾರಿನ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಇಕೋ ಮತ್ತು ಸ್ಟ್ಯಾಂಡರ್ಡ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಕಾರು, 29.2kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 56.2 bhp ಗರಿಷ್ಠ ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 320km ರೇಂಜ್ ನೀಡಲಿದ್ದು, 107kmph ಟಾಪ್ ಸ್ವೀಡ್ ಹೊಂದಿದೆ. ಅಲ್ಲದೆ, 13 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.
ಭಾರತದ ಖರೀದಿದಾರರಿಗೆ ಈ ಕಾರು ಎರಡು ರೂಪಾಂತರಗಳಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ಲೈವ್ ಮತ್ತು ಫೀಲ್. ಈ ಕಾರಿನ ಚಾರ್ಜಿಂಗ್ ಆಯ್ಕೆ ಬಗ್ಗೆ ಹೇಳುವುದಾದರೆ, ಹೋಮ್ ಚಾರ್ಜರ್ ಬಳಕೆಯಲ್ಲಿ ಸಂಪೂರ್ಣ ಬ್ಯಾಟರಿ ಚಾರ್ಜ್ ಆಗಲು 10.5 ಗಂಟೆ ಬೇಕು. ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ 57 ನಿಮಿಷಗಳಲ್ಲಿ 10%-80% ಚಾರ್ಜ್ ಆಗುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಸಿಟ್ರನ್ ಇಸಿ3 ಕಾರು ಟ್ಯಾಕ್ಸಿ ಕಂಪನಿಗಳಿಗೆ (fleet buyers) ಖರೀದಿಗೆ ದೊರೆಯಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಕೆಲವೇ ದಿನಗಳ ಹಿಂದೆ ಮಾಹಿತಿ ನೀಡಿದ್ದರು. ಈ ಸಿಟ್ರಸ್ ಸಿಟ್ರನ್ ಕಾರು, ಟಾಟಾದ Xpres-T ಇವಿಗೆ ಪ್ರತಿಸ್ಪರ್ಧಿಯಾಗಲಿದೆ. ಟಿಗೂರ್ ಇವಿ ಆಧಾರಿತ Xpres-Tಯನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ ಟಾಟಾ ಮೋಟಾರ್ಸ್, ಬರೋಬ್ಬರಿ 25,000 Xpres-T ಕಾರುಗಳನ್ನು ಉಬರ್ ಗೆ ಸರಬರಾಜು ಮಾಡಲು ಒಪ್ಪಂದ ಮಾಡಿಕೊಂಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಟಿಯಾಗೊ ಇವಿ ರೂ.8.69 ಲಕ್ಷದಿಂದ ರೂ.11.99 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಇದು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಅವುಗಳೆಂದರೆ, 24kWh (75 PS ಪವರ್, 114 Nm ಪೀಕ್ ಟಾರ್ಕ್), 19.2kWh (61 PS ಪವರ್, 105 Nm ಟಾರ್ಕ್) ದೊಡ್ಡ ಬ್ಯಾಟರಿ ಹೊಂದಿರುವ ಕಾರು, 315km ರೇಂಜ್ ನೀಡಿದರೆ, ಚಿಕ್ಕ ಬ್ಯಾಟರಿ ಪ್ಯಾಕ್ ಕಾರು, 250km ಕೊಡಲಿದೆ.
ಟಾಟಾ ಟಿಯಾಗೊ ಇವಿ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೈಮೇಟ್ ಕಂಟ್ರೋಲ್ 8 ಸ್ಪೀಕರ್ ಸೌಂಡ್ ಸಿಸ್ಟಮ್ ಹಾಗೂ ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಏರ್‌ಬ್ಯಾಗ್ಸ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ (EBD) ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಹೊಂದಿದ್ದು, ಬಹುತೇಕ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.
ಮೊದಲಿನಿಂದಲೂ ಟಾಟಾ ಟಿಯಾಗೊ ಇವಿಗೆ ಸಿಟ್ರನ್ ಇಸಿ3 ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ. ಇದರ ಬೆಲೆಯು ಬಹುತೇಕ ಟಿಯಾಗೊ ಇವಿಯ ಆಸುಪಾಸಿನಲ್ಲಿರಲಿದ್ದು, ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಎಂದು ಹೇಳಲಾಗಿದೆ. ಜೊತೆಗೆ ಡೀಲರ್‌ಶಿಪ್‌ಗಳಿಗೆ ತಲುಪಿರುವುದರಿಂದ ಆಸಕ್ತ ಖರೀದಿದಾರರು ಟೆಸ್ಟ್ ಡ್ರೈವ್ ನಡೆಸುವ ಮೂಲಕ ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಕಾರ್ಯಕ್ಷಮತೆಯನ್ನು ತಿಳಿಯಬಹುದು. ಇದನ್ನು ಗಮನಿಸಿದಾಗ ಈ ಕಾರು ಕೆಲವೇ ದಿನಗಳಲ್ಲಿ ರಸ್ತೆಗೆ ಬರಲಿದೆ.


Click it and Unblock the Notifications








