ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಈ ಎಲೆಕ್ಟ್ರಿಕ್ ಕಾರು: ಕೆಲವೇ ದಿನಗಳಲ್ಲಿ ಬಿಡುಗಡೆ!

ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರನ್, ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ತನ್ನ ಇಸಿ3 (Citroen eC3) ಕಾರನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ. ಇದು ಅಗ್ಗದ ಬೆಲೆಯ ಟಾಟಾ ಟಿಯಾಗೊ ಇವಿಗೆ ಪೈಪೋಟಿ ನೀಡಲಿದ್ದು, ಟ್ಯಾಕ್ಸಿ ಸೇವೆ ಒದಗಿಸುವ ಕಂಪನಿಗಳಿಗೆ ಸಿಟ್ರನ್ ಇಸಿ3 ಖರೀದಿಗೆ ಲಭ್ಯವಿದೆ.

ಭಾರತ ಏಷ್ಯಾ-ಪೆಸಿಫಿಕ್ ವಲಯದ ಬ್ಯುಸಿನೆಸ್ ವಿಭಾಗ ಮುಖ್ಯಸ್ಥ ಪ್ರವೀಣ್ ಸ್ವಾಮಿನಾಥನ್, ಸಿಟ್ರನ್ ಇಸಿ3 ಕಾರು ಟ್ಯಾಕ್ಸಿ ಕಂಪನಿಗಳಿಗೆ (fleet buyers) ಖರೀದಿಗೆ ಲಭ್ಯವಿದೆ ಎಂದು ತಮ್ಮ ಲಿಂಕ್ಡ್‌ಇನ್‌ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಇದು ಟಾಟಾದ Xpres-T ಇವಿಗೆ ಪ್ರತಿಸ್ಪರ್ಧಿಯಾಗಲಿದೆ. (ಟಿಗೂರ್ ಇವಿ ಆಧಾರಿತ Xpres-Tಯನ್ನು ವಾಣಿಜ್ಯ ಉದ್ದೇಶಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ). ಇತ್ತೀಚೆಗೆ ಟಾಟಾ, 25,000 Xpres-T ಕಾರುಗಳನ್ನು ಉಬರ್ ಕಂಪನಿಗೆ ಸರಬರಾಜು ಮಾಡಲು ಒಪ್ಪಂದ ಮಾಡಿಕೊಂಡಿದೆ.

ಸಿಟ್ರನ್ ಇಸಿ3 ಕೂಡ ವಾಣಿಜ್ಯ ಉದ್ದೇಶಗಳಿಗೆ ಖರೀದಿಗೆ ಲಭ್ಯವಿರುವುದರಿಂದ ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದ್ದು, ಆ ಬಳಿಕ, ಗ್ರಾಹಕರಿಗೆ ಖಾಸಗಿ ಬಳಕೆಗೆ ವಿತರಣೆಗಳು ಆರಂಭವಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಸಿಟ್ರನ್ ಇಸಿ3 (Citroen eC3) ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಆರಂಭವಾಗಿದ್ದು, ಗ್ರಾಹಕರು ರೂ.25,000 ಹಣವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದು. ಆದರೆ, ಕಂಪನಿಯು ಈ ಕಾರಿನ ಬೆಲೆಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಆದರೆ, ಅತ್ಯಂತ ಕಡಿಮೆ ದರದಲ್ಲಿ ಖರೀದಿಗೆ ಸಿಗಬಹುದು.

ಹೊಸ ಸಿಟ್ರನ್ ಇಸಿ3 ಕಾರಿನ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 29.2 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಿಂಗಲ್ ಚಾರ್ಜ್ ನಲ್ಲಿ 320 ಕಿ.ಮೀ ರೇಂಜ್ ನೀಡಲಿದೆ. ಮನೆಯ ವಿದ್ಯುತ್ (15A ಸ್ಟ್ಯಾಂಡರ್ಡ್) ಬಳಕೆಯಲ್ಲಿ ಈ ಕಾರಿನ ಬ್ಯಾಟರಿ ಪ್ಯಾಕ್ 10-100% ಚಾರ್ಜ್ ಆಗಲು ಬರೋಬ್ಬರಿ 10 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ. DC ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ 10-80% ಬ್ಯಾಟರಿ ಚಾರ್ಜ್ ಆಗಲು 57 ನಿಮಿಷಗಳು ಸಾಕು.

ಈ ಎಲೆಕ್ಟ್ರಿಕ್ ಕಾರು, ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, 57 PS ಗರಿಷ್ಠ ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಕೇವಲ 6.8 ಸೆಕೆಂಡುಗಳಲ್ಲಿ0-60 kmph ವೇಗವನ್ನು ಪಡೆಯಲಿದೆ. ಸಿಟ್ರನ್ ಇಸಿ3 ಕಾರು, 13 ಬಣ್ಣಗಳು ಹಾಗೂ ಲೈವ್ ಮತ್ತು ಫೀಲ್ ಎಂಬ ಎರಡು ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ನೋಡಲು ಅತ್ಯಾಕರ್ಷಕವಾಗಿದೆ.

ಸಿಟ್ರನ್ ಇಸಿ3 ಕಾರು, 10.25-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಎಮರ್ಜೆನ್ಸಿ ಸರ್ವಿಸ್ ಕಾಲ್, ಆಟೋ ಕ್ರ್ಯಾಶ್ ನೋಟಿಫಿಕೇಶನ್ ಸೇರಿದಂತೆ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಗ್ರಾಹಕರಿಗೆ ಈ ಕಾರಿನ ಖರೀದಿ ಮೇಲೆ 3-ವರ್ಷ/125,000 km ವಾರಂಟಿ ಇದ್ದು, ಮೋಟಾರ್ 5 ವರ್ಷ /100,000 km, ಬ್ಯಾಟರಿ ಪ್ಯಾಕ್ ಮೇಲೆ 7 ವರ್ಷ/140,000 km ವಾರಂಟಿಯನ್ನು ನೀಡಲಾಗುತ್ತದೆ.

ಈ ಸಿಟ್ರನ್ ಇಸಿ3 ಕಾರು ಕೇವಲ ಟಾಟಾ ಟಿಯಾಗೊ ಇವಿ ಮಾತ್ರವಲ್ಲ, ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿರುವ ಎಂಜಿ ಏರ್ ಇವಿ (MG Air EV) 2-ಡೋರ್ ಪುಟ್ಟ ಎಲೆಕ್ಟ್ರಿಕ್ ಕಾರಿಗೂ ಭಾರೀ ಪೈಪೋಟಿ ನೀಡಬಹುದು ಎಂದು ಹೇಳಲಾಗಿದೆ. ಎಂಜಿ ಏರ್ ಇವಿಯಲ್ಲಿ ಅಳವಡಿಸಿರುವ ಮೋಟಾರ್ 40 hp ಪವರ್ ಉತ್ಪಾದಿಸಲಿದ್ದು, 150 km ರೇಂಜ್ ನೀಡಬಹುದು ಎಂದು ಅಂದಾಜಿಸಲಗಿದೆ.

ಆದರೆ, ಇಲ್ಲಿ ಮುಖ್ಯವಾಗುವಾಗುವುದು ಬೆಲೆ ವಿಚಾರ. ಎಂಜಿ ಏರ್ ಇವಿ ರೂ.8 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ದೊರೆಯಬಹುದು. ಅದಕ್ಕಿಂತ ಹೆಚ್ಚಿನ ರೇಂಜ್ ನೀಡುವ ಸಿಟ್ರಸ್ ಸಿಟ್ರನ್ ರೂ.9 ಲಕ್ಷ ಆರಂಭಿಕ ಬೆಲೆ ಹೊಂದಿರಬಹುದು ಎಂದು ಹೇಳಲಾಗಿದೆ. ಮುಂಬರುವ ದಿನಗಳಲ್ಲಿ ಸಿಟ್ರನ್ ಎಲೆಕ್ಟ್ರಿಕ್ ಕಾರಿನ ನಿಜವಾದ ಬೆಲೆ ಎಷ್ಟಿರಲಿದೆ ಎಂಬುದು ಗೊತ್ತಾಗಲಿದೆ. ಇದು ದೇಶಿಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನವನ್ನು ಸೃಷ್ಟಿಸಿಕೊಳ್ಳುವುದು ಖಚಿತ.

More from DriveSpark

Article Published On: Friday, February 24, 2023, 13:10 [IST]
English summary
Citroen ec3 ev to be available for fleet buyers details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+