ಕಡಿಮೆ ಬೆಲೆಯ ಸಿಟ್ರನ್ eC3 vs ಟಾಟಾ ಟಿಯಾಗೊ ಇವಿ: ಯಾವುದು ಉತ್ತಮ ನೀವೇ ಹೇಳಿ?

ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಸಿಟ್ರನ್ eC3 ಕಾರನ್ನು ಅನಾವರಣ ಮಾಡಲಾಗಿದೆ. ಇದು ಪೆಟ್ರೋಲ್ ಚಾಲಿತ C3 ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿದ್ದು, ಮುಂಬರುವ ದಿನಗಳಲ್ಲಿ ಬೆಲೆ ಘೋಷಣೆಯಾಗಲಿದೆ. ಫ್ರೆಂಚ್ ತಯಾರಕ ಕಂಪನಿ 'ಸಿಟ್ರನ್' ಈ eC3 ಕಾರನ್ನು ಭಾರತದಿಂದ ವಿದೇಶಗಳಿಗೂ ರಫ್ತು ಮಾಡಲು ಯೋಜಿಸುತ್ತಿದೆ.

ನೂತನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಸಿಟ್ರನ್ eC3ಯ ಬುಕಿಂಗ್ ಜನವರಿ 22 ರಿಂದ ಪ್ರಾರಂಭವಾಗಲಿದೆ. ಆ ನಂತರ, ಶೀಘ್ರದಲ್ಲೇ ಶೋ ರೂಂಗಳನ್ನು ಈ ಕಾರು ತಲುಪಲಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಟಾಟಾ ಟಿಯೊಗೊ ಇವಿಗೆ ದೇಶೀಯ ಮಾರುಕಟ್ಟೆಯಲ್ಲಿ ಸಿಟ್ರನ್ eC3 ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದ್ದು, ಈ ಎರಡು ಕಾರುಗಳ ವೈಶಿಷ್ಟ್ಯ, ಬೆಲೆ ಹಾಗೂ ಕಾರ್ಯಕ್ಜಮತೆಯ ಕುರಿತಂತೆ ಇಲ್ಲಿ ಹೋಲಿಕೆ ಮಾಡಲಾಗಿದೆ. ಬನ್ನಿ ತಿಳಿಯೋಣ.

ಸಿಟ್ರನ್ eC3, ಟಾಟಾ ಟಿಯಾಗೊ ಇವಿ - ಬ್ಯಾಟರಿ & ಪವರ್:
ಸಿಟ್ರನ್ eC3 ಕಾರಿನ ದೊಡ್ಡ ಬ್ಯಾಟರಿ ಪ್ಯಾಕ್‌, ಟಾಟಾ ಟಿಯಾಗೊ ಇವಿಗಿಂತ 5 ಕಿಮೀ ಹೆಚ್ಚು ರೇಂಜ್ ನೀಡುತ್ತದೆ. ಹೊಸ ಸಿಟ್ರನ್ eC3, 29.2kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 57 hp ಗರಿಷ್ಠ ಪವರ್ ಮತ್ತು 143 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಗರಿಷ್ಠ ವೇಗವು 107 kmph ಇದ್ದು, ಈ ಕಾರು, 320 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಎರಡು ಡ್ರೈವಿಂಗ್ ಮೋಡ್‌ಗಳಿವೆ. ಅವುಗಳೆಂದರೇ ಇಕೋ ಮತ್ತು ಸ್ಟ್ಯಾಂಡರ್ಡ್.

ಸಿಟ್ರನ್ eC3, 6.8 ಸೆಕೆಂಡುಗಳಲ್ಲಿ 0 - 60kph ವೇಗವನ್ನು ಪಡೆಯಲಿದೆ. ಆದರೆ, ಟಾಟಾ ಟಿಯಾಗೊ ಇವಿಯ ದೊಡ್ಡ 24kW ಬ್ಯಾಟರಿ ಪ್ಯಾಕ್ ಬಳಸಿರುವ ಕಾರು, 5.7 ಸೆಕೆಂಡುಗಳಲ್ಲಿ ಮತ್ತು ಚಿಕ್ಕದಾದ 19.2kWh ಬ್ಯಾಟರಿ ಹೊಂದಿರುವ ಕಾರು 6.2 ಸೆಕೆಂಡುಗಳಲ್ಲಿ 0 - 60kph ವೇಗವನ್ನು ಪಡೆಯಲಿದೆ. ಟಾಟಾ ಟಿಯಾಗೊ ಇವಿ ಎರಡು ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಅವುಗಳೆಂದರೆ, 19.2kWh ಮತ್ತು 24kWh ಬ್ಯಾಟರಿ ಪ್ಯಾಕ್. ಇವು ಕ್ರಮವಾಗಿ 250 km ಮತ್ತು 315 km ರೇಂಜ್ ನೀಡುವ ಸಾಮರ್ಥ್ಯ ಹೊಂದಿವೆ. ಟಿಯಾಗೊ ಇವಿ, ಟಾಟಾದ Ziptron ಹೈ-ವೋಲ್ಟೇಜ್ ಆರ್ಕಿಟೆಕ್ಚರ್ ಹೊಂದಿದೆ. 24kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 74 hp ಗರಿಷ್ಠ ಪವರ್ ಮತ್ತು 114 Nm ಪೀಕ್ ಟಾರ್ಕ್ ಉತ್ಪಾದಿಸುವ ಮ್ಯಾಗ್ನೆಟ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟರ್ ನಿಂದ ಚಾಲಿತವಾಗಲಿದೆ. ಆದರೆ, ಚಿಕ್ಕದಾದ 19.2kWh ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 61 hp ಪವರ್ ಮತ್ತು 110 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಸಿಟ್ರನ್ eC3, ಟಾಟಾ ಟಿಯಾಗೊ ಇವಿ ಚಾರ್ಜರ್:
ಸಿಟ್ರನ್ eC3 ಕಾರಿನ ಬ್ಯಾಟರಿಯು DC ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು 57 ನಿಮಿಷಗಳಲ್ಲಿ ಶೇಕಡ 10 - 80% ಚಾರ್ಜ್ ಆಗಲಿದೆ. ಹೋಮ್ ಚಾರ್ಜರ್‌ನಲ್ಲಿ, ಬ್ಯಾಟರಿಯು ಶೇಕಡ 10 - 100% ಹೋಗಲು 10.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ. ಟಾಟಾ ಟಿಯಾಗೊ ಇವಿಯು ಸಹ ವೇಗದ ಚಾರ್ಜಿಂಗ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಟಿಯಾಗೊ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು 50kW DC ಫಾಸ್ಟ್ ಚಾರ್ಜರ್ ಬಳಸಿಕೊಂಡು 57 ನಿಮಿಷಗಳಲ್ಲಿ 10 - 80% ಚಾರ್ಜ್ ಮಾಡಬಹುದು ಎಂದು ಟಾಟಾ ಹೇಳಿದೆ. ಸ್ಟ್ಯಾಂಡರ್ಡ್ 3.3kW ಹೋಮ್ ಚಾರ್ಜರ್ ಚಿಕ್ಕದಾದ 19.2kWh ಬ್ಯಾಟರಿಯನ್ನು 5 ಗಂಟೆಗಳಲ್ಲಿ 10 -100% ಮತ್ತು 6 ಗಂಟೆ 20 ನಿಮಿಷಗಳಲ್ಲಿ 24kWh ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. 7.2kW AC ಫಾಸ್ಟ್ ಚಾರ್ಜರ್ ಅನ್ನು ಬಳಸುವುದರಿಂದ, ಸಣ್ಣ ಬ್ಯಾಟರಿ, 2 ಗಂಟೆ 35 ನಿಮಿಷಗಳು ಮತ್ತು ದೊಡ್ಡ ಬ್ಯಾಟರಿ 3 ಗಂಟೆ 35 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗಲಿದೆ.

ಸಿಟ್ರನ್ eC3, ಟಾಟಾ ಟಿಯಾಗೊ ಇವಿ ವೈಶಿಷ್ಟ್ಯಗಳು:
ಸಿಟ್ರನ್ eC3 ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ನ್ನು ಹೊಂದಿದೆ. ಅಲ್ಲದೆ, 'MyCitroen' ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಕನೆಕ್ಟ್ಡ್ ಕಾರ್ ತಂತ್ರಜ್ಞಾನವನ್ನು ಪಡೆಡಿದ್ದು, ಇದು ಕಾರಿನ ಚಾರ್ಜಿಂಗ್ ಸ್ಟೇಟಸ್, ಹತ್ತಿರದ ಚಾರ್ಜಿಂಗ್ ಸ್ಟೇಷನ್‌ ಬಗ್ಗೆ ಮಾಹಿತಿ ನೀಡುತ್ತದೆ. ಸುರಕ್ಷತೆ ದೃಷ್ಟಿಯಿಂದ ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು EBD ಜೊತೆಗೆ ABS ಅನ್ನು ಹೊಂದಿದೆ.

ಟಾಟಾ ಟಿಯಾಗೊ ಇವಿ 7-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 8-ಸ್ಪೀಕರ್ ಹಮನ್ ಮ್ಯೂಸಿಕ್ ಸಿಸ್ಟಂ ಹೊಂದಿದೆ. ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಪಡೆದಿದೆ. ಅಲ್ಲದೆ, ಕನೆಕ್ಟ್ ಕಾರ್ ಟೆಕ್, ಕ್ಲೈಮೇಟ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್‌ಗಳು, ರೈನ್ ಸೆನ್ಸಿಂಗ್ ವೈಪರ್‌ಗಳ ಜೊತೆಗೆ ಮಲ್ಟಿ-ಮೋಡ್ ರೀಜನರೇಟಿವ್ ಬ್ರೇಕಿಂಗ್ ಅನ್ನು ಹೊಂದಿದ್ದು, ಟಾಪ್ ಎಂಡ್ ರೂಪಾಂತರದಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ ಎಂದು ಹೇಳಬಹುದು.

ಬೆಲೆ:
ಟಾಟಾ ಟಿಯಾಗೊ ಇವಿ ಬೆಲೆ ರೂ.8.49 ಲಕ್ಷದಿಂದ ಆರಂಭವಾಗಲಿದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.11.79 ಲಕ್ಷ ಇದೆ. ಇನ್ನು, ಭಾರತದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸಿಟ್ರನ್ eC3 ಬೆಲೆ ರೂ.10-12 ಲಕ್ಷ (ಎಕ್ಸ್ ಶೋ ರೂಂ) ಇರಬಹುದು ಎಂದು ಅಂದಾಜಿಸಲಾಗಿದೆ. ಈ ಎರಡು ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಮಧ್ಯಮ ವರ್ಗದ ಜನರ ಕೈಗೆಟುಕಲಿದ್ದು, ಅವುಗಳನ್ನು ಖರೀದಿಸಲು ಮನಸ್ಸು ಮಾಡಬಹುದು. ಇವುಗಲ್ಲಿ ಯಾವುದು ಉತ್ತಮವೆಂದು ಕಾಮೆಂಟ್ ಮಾಡಿರಿ.

Most Read Articles

Kannada
English summary
Citroen ec3 vs tata tiago ev which is better
Story first published: Wednesday, January 18, 2023, 15:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X